Aradhana – Margashira Hunnime
Vrundavana @ Sosale in 1969
ವ್ಯಾಸರಾಜ ಮಠದ ಪರಂಪರೆಯ 37ನೇ ಯತಿಗಳು
ಜನನ – 17.11.1889
ಪೂರ್ವಾಶ್ರಮ ನಾಮ: ತೆಕ್ಕಲೂರು ವೆಂಕಟನರಸಿಂಹಾಚಾರ್ಯ
ಆಶ್ರಮ ಗುರುಗಳು: ಶ್ರೀ ವಿದ್ಯಾ ವಾರಿಧಿ ತೀರ್ಥರು
ಆಶ್ರಮ ಶಿಷ್ಯರು. : ಶ್ರೀ ವಿದ್ಯಾ ಪಯೋನಿಧಿ ತೀರ್ಥರು
ಜನ್ಮದಾತರು – ಶ್ರೀ ತೆಕ್ಕಲೂರು ಅಹೋಬಲಾಚಾರ್ಯರು
(ವಿದ್ಯಾ ರತ್ನಾಕರ ತೀರ್ಥರು)
ಸನ್ಯಾಸಪೂರ್ವದಲ್ಲಿ ವಕೀಲ ವೃತ್ತಿಯನ್ನು ಅವಲಂಬಿಸಿದ್ದರು.
ಶ್ರೀಮತ್ಕೃಷ್ಣಪದಾಂಭೋಜಮಾನಸಂ ಕವಿಪುಂಗವಂ |
ಶ್ರೀಮದ್ವಿದ್ಯಾಪ್ರಸನ್ನಾಬ್ಧಿಂ ಗುರುಂ ವಂದೇ ನಿರಂತರಂ |
श्रीमत्कृष्णपदांभोजमानसं कविपुंगवं ।
श्रीमद्विद्याप्रसन्नाब्धिं गुरुं वंदे निरंतरं ।
shrImatkRuShNapadaaMbhOjamaanasaM kavipuMgavaM |
shrImadvidyaaprasannaabdhiM guruM vaMdE niraMtaraM |
ಶ್ರೀ ವಿದ್ಯಾಪ್ರಸನ್ನ ತೀರ್ಥರ ಕೃತಿಗಳ ಬಗ್ಗೆ ಉಪನ್ಯಾಸ
ಶ್ರೀ ಹೊಳಲಗುಂದ ಜಯತೀರ್ಥಾಚಾರ್ಯರು ;
ಕೆಲವು ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಕೃತಿಗಳು :
೧. ಹನುಮಾನ್ ಕೀ ಜೈ :
೩. ಶ್ರೀ ವಿಶ್ವೇಶತೀರ್ಥರು ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಬಗ್ಗೆ
4. ಮುರಳಿಯ ನಾದವ ಕೇಳಿ – ಗುರುಪ್ರಸಾದ್
5. ಮುರಳಿಯ ನಾದವ ಕೇಳಿ – ರಶ್ಮಿ ಮಧುಸೂದನ್
6. ಗಾನಕೆ ಸುಲಭವು ರಾಮ ನಾಮ – ಪವನ್ ಗೌತಮ್
7. ಗಾನಕೆ ಸುಲಭವು ರಾಮನಾಮ – ಫಣೀಂದ್ರ ಗೌತಮ್
DEVARANAMAGALU BY PRASANNA TIRTHARU – Click
Ashrama Gurugalu – Sri Vidya Varidhi Tirtharu
Ashrama Shishyaru – Sri Vidya Payonidhi Tirtharu
Poorvashrama Name – Narasimhacharya
His father – Sri Ahobalacharyaru (Sri Vidyaratnakara Tirtharu)
His mother – Satyabhamamma
Profession before Sanyasa – Advocate @ Mysore
He got sanyasashrama in 1935.
Sri Vidyavaridhi Tirtharu entered Vrundavana in 1940.
Sri Vidya Prasanna Tirtharu entered Vrundavana in 1969.
He lead the Mutt for 29 years (Total 34 years Sanyasashrama)
He has composed more than 300 devaranamas
His ankita – “Prasanna”
One of his famous songs on Mukya Pranadevaru –
ಹನುಮನ ಮನೆಯವರು ನಾವೆಲ್ಲರು
ಹನುಮನ ಮನೆಯವರು || ಪ ||
ಅನುಮಾನ ಪಡದೆಲೆ ಸ್ಥಳವ ಕೊಡಿರಿ ಎಮಗೆ ||ಅಪ||
ಊರ್ಧ್ವಪುಂಡ್ರವ ನೋಡಿ ಶ್ರದ್ಧೆ ಬಕುತಿ ನೋಡಿ |
ಹೃದ್ಗತವಾದೆಮ್ಮ ತತ್ವಗಳನೆ ನೋಡಿ |
ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲ ನೋಡಿ |
ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ||೧||
ಸತ್ಯ ಮಿತ್ಯಗಳಿಗೆ ಅಂತರ ಬಲ್ಲೆವು |
ಉತ್ತಮನೀಚರೆಂಬುವ ಭೇದ ಬಲ್ಲೆವು |
ಸುತ್ತಲು ಕಂಡು ಕಾಣದೆ ಇಹ ಎಲ್ಲಕ್ಕು |
ಉತ್ತಮನೊಬ್ಬನೆ ಹರಿಯೆಂದು ಬಲ್ಲೆವು ||೨||
ಹಲವು ಲೋಕಗಳುಂಟೆಂಬುದ ಬಲ್ಲೆವು |
ಹಲವು ಯೋನಿಗಳಲ್ಲಿ ಜನ್ಮಗಳೊಲ್ಲೆವು |
ಅಲವ ಬೋಧರು ನಮ್ಮ ಕಳುಹಿದರಿಲ್ಲಿಗೆ |
ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ ||೩ ||