ಸತ್ಯಬೋಧರು – Satyabodha Tirtharu

sri-satyabodha-teertharu-savanur1 Satyabodharu Savanur

 

ಶ್ರೀ ಸತ್ಯಬೋಧತೀರ್ಥರು (ಸವಣೂರು)
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |

नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।

நைவேத்யகவிஷம் ராமே வீக்ஷ்ய தத்புக்திபாக் குரு: |
யோதர்ஶயத்ரவிம் ராத்ரௌ ஸத்யபோதோஸ்து மே முதே |

నైవేద్యగవిషం రామే వీక్ష్య తద్భుక్తిభాగ్ గురు: |
యోదర్శయద్రవిం రాత్రౌ సత్యబోధోస్తు మే ముదే |

 

*ಶ್ರೀ ಸತ್ಯಬೋಧ ತೀರ್ಥರು*

*ಜನನ‌* – 1710
*ಜನ್ಮನಾಮ* – ರಾಮಾಚಾರ್ಯ
*ತಂದೆಯ* – ಹರಿಯಾಚಾರ್ಯ
*ತಾಯಿ* – ಅರಳಬಾಯಿ.

ಸನ್ಯಾಸ ಕಾಲ – 1744 -1783

*ಆಶ್ರಮ ಗುರುಗಳು : ಶ್ರೀ ಸತ್ಯಪ್ರಿಯತೀರ್ಥರು*
*ಆಶ್ರಮ ಶಿಷ್ಯರು : ಶ್ರೀ ಸತ್ಯಸಂಧತೀರ್ಥರು

*ಸಮಕಾಲೀನರು* – ಶ್ರೀ ಧೀರೇಂದ್ರ ತೀರ್ಥರು,
ಶ್ರೀ ಜಗನ್ನಾಥದಾಸರು, ಶ್ರೀ ವಿಜಯದಾಸರು,
ಶ್ರೀ ಗೋಪಾಲದಾಸರು

*ಇವರ ನಾಲ್ವರು ಶಿಷ್ಯರು ಉತ್ತರಾಧಿಮಠದ ಪೀಠ ಅಲಂಕರಿಸಿದರು* – ಶ್ರೀ ಸತ್ಯಸಂಧರು, ಶ್ರೀ ಸತ್ಯವರರು, ಶ್ರೀ ಸತ್ಯಧರ್ಮರು, ಶ್ರೀ ಸತ್ಯಸಂಕಲ್ಪರು.

ಆರಾಧನೆ – ಫಾಲ್ಗುಣ ಕೃಷ್ಣ ಪ್ರತಿಪತ್

SRI SATYABODHA TIRTHARU – click here

Ashrama Sweekara     –   1744

Ashrama GurugaLu – Sri Satyapriya Tirtharu

Ashrama Shishyaru – Sri Satya Sandha Tirtharu

Vrundavana pravesha – Mar 9, 1783

Vrundavana Pravesha – Phalguna Krishna paaDya

sri-sathyabodha-theertha  sri-sathyabodha-theertharu-6

 

ಶ್ರೀ ಸತ್ಯಬೋಧತೀರ್ಥರ ಪುಣ್ಯ ದಿನ ಎಂದು ?

– ಫಾಲ್ಗುಣ ಕೃಷ್ಣ ಪ್ರತಿಪತ್

ಶ್ರೀ ಸತ್ಯಬೋಧತೀರ್ಥರ ವೃಂದಾವನ ಎಲ್ಲಿದೆ?

– ಸವಣೂರು

ಶ್ರೀ ಸತ್ಯಬೋಧತೀರ್ಥರ ಗುರುಗಳು ಯಾರು?

– ಶ್ರೀ ಸತ್ಯಪ್ರಿಯತೀರ್ಥರು

ಶ್ರೀ ಸತ್ಯಬೋಧತೀರ್ಥರ ಶಿಷ್ಯರು ಯಾರು?

– ಶ್ರೀ ಸತ್ಯಸಂಧತೀರ್ಥರು

 

*ಮಧ್ಯರಾತ್ರಿ ಸೂರ್ಯನ ತೋರಿದ ಮಹಾನುಭಾವರು*

ಸತ್ಯಬೋಧ ತೀರ್ಥರು ಒಮ್ಮೆ ತಮ್ಮ ವಿದ್ಯಾರ್ಥಿಗಳ ಪಾಠ  ಮಧ್ಯರಾತ್ರಿಯವರೆಗೂ ಮುಂದುವರಿಸಿದರು. ಕಡೆಗೆ ವಿದ್ಯಾರ್ಥಿಗಳು ಸಾಯಂ ಸಂಧ್ಯಾಕಾಲ ಮೀರಿ ಹೋಯಿತು ಎಂದಾಗ ಮಧ್ಯರಾತ್ರಿ ಸೂರ್ಯನನ್ನು ತೋರಿಸಿ, ಆಗ ಅವರೂ ಸಂಜೆ ಪೂಜೆಯನ್ನು ಮಾಡಿ, ವಿದ್ಯಾರ್ಥಿಗಳಿಗೂ ಆಹ್ನೀಕ ಮಾಡಲು ಹೇಳಿದರು

  1. Sri Satyabodharu showed Surya in the midnight to his students –  Once he was continuing the paata till midnight.  Saayam Sandhya vandana time of shishyas and evening pooja time of the swamiji got delayed.  Some shishyas whispered about the same. At the same time Swamiji showed “sun”, that too in the midnight and said that they can do the ahnika, swamiji also did the evening pooja.

  2. A Grantha written titled “Sri SatyabodhaVijaya” containing 21 sargas by Sri Kanchi Acharyaru.

*ನೈವೇದ್ಯಗವಿಷಂ* –  ಒಮ್ಮೆ ಸ್ವಾಮಿಗಳ ಪೂಜೆ ನೈವೇದ್ಯ ಸಿದ್ಧವಾದ ಆಹಾರಕ್ಕೆ ಕೆಲವರು ವಿಷ ಸೇರಿಸಿದ್ದರು.  ಅದನ್ನೇ ನಿವೇದಿಸಲು ಶ್ರೀ ಮೂಲರಾಮಚಂದ್ರ ದೇವರ ವಿಗ್ರಹ ಮುಖದಲ್ಲಿ ಕಪ್ಪಾಯಿತು. ಸ್ವಾಮಿಗಳಿಗೆ ಏನೂ ತೊಂದರೆಯಾಗಲಿಲ್ಲ. ಎಲ್ಲವನ್ನೂ ರಾಮಚಂದ್ರ ದೇವರೇ ಪರಿಹರಿಸಿದರು.    ಅದಕ್ಕೇ ಅವರ ಚರಮಶ್ಲೋಕದಲ್ಲೇ ನೈವೇದ್ಯಗವಿಷಂ ಎಂದು ಬಂದಿದೆ.

  1. “Naivedyagavisham” in his charamashloka – Once in the naivedya paramanna, poison was mixed by some people.    The effect was reflected in the face of Sri Moola Ramachandra Devaru, as it turned black.  Some shishyas requested not to take the naivedya.  But the seer took it and nothing happened with the grace of Sri Ramachandra Devaru.  As such, the charamashloka contained the words  “Naivedyagavisham”
  2.   Sri-Satyabodharu
  3. Anugraha to a Muslim Nawaab –  Once a Nawaab named Bhairam Khan of Savanoor, built an house for him.  But a snake was preventing to enter the house.  So, Bhairam Khan approached Sri Satyabodharu who did the pooja of Sri Ramachandra Devaru for three days in that house.  On the third day, the snake came in the disguise of a brahmin and told about the wealth in that house and instructed the Nawaab to retain only 1/4th portion and to handover the remaining 3/4th portion to Sree Mutt and disappeared.  The Nawaab did so and all his problems were solved.
  4. He had four disciples – all of them became sanyasees of UM parampare – They are Sri Satyasandharu, Sri Satyavararu, Sri Satyadharmaru, and Sri Satyasankalparu.
  5. When he noticed that his Ashrama Shishya Sri Satyasandharu, has alpayushya (shortened life span), with his tapashyakthi, he made it to increase by 10 years.

  6. Contemporaries – Sri Dheerendra Tirtharu, Sri Vijayadasaru, Gopaladasaru, Sri Jagannathadasaru, etc..

  7. Mutt Address : Shri Satyabhoda Brindavana,  Post: Savanur- 518118,  Haveri District  Karnataka   Phone: 08378 – 241544

Single kruti by trio daasaru i.e.,  tande – varada – guru gopalavittala dasaru on Satyabodha Tirtharu :

 

ಶ್ರೀ ಸತ್ಯಬೋಧರ ಬಗ್ಗೆ ಗೋಪಾಲದಾಸರ ಮೂವರು ಸೋದರರು ಸೇರಿ – ಗುರುಗೋಪಾಲದಾಸರು (ಸೀನಪ್ಪ), ವರದ ಗೋಪಾಲದಾಸರು (ದಾಸಪ್ಪ), ಮತ್ತು ತಂದೆ ಗೋಪಾಲದಾಸರು (ರಂಗಪ್ಪ) –  ಮೂವರೂ ಪ್ರತ್ಯೇಕ ಪ್ರತ್ಯೇಕ ನುಡಿಗಳನ್ನು ರಚಿಸಿ ಒಂದೇ ಕೃತಿಯಾಗಿ ರಚಿಸಿದರು – ಆ ದೇವರನಾಮವೇ – “ಮಾರಮದಘನ್ನಸಮ್ಮೀರ ಮಧ್ವಮತೋ”

Sri Gopaladasaru had three brothers.  Sri Gopaladasaru was called as Bhaganna, his brothers Seenappa, Daasappa and Rangappa.    All the three were given daasatva by Sri Gopaladasaru as per the orders of Sri Vijaya dasaru.   They were called as Guru gopaladasaru (Seenappa), Varada Gopala Dasaru (Dasappa). and Tande Gopala Dasaru (Rangappa). The Daasa chatustaya (gopaladaasa chatustaya) had a very good name throughout the state.  Some miscreants who could not tolerate their growth, went to Sri Satyabodha Tirtharu and tried to give misleading informations about the four brothers. 

Mahajnaani Sri Satyabodha Tirtharu knows better about the brothers.    Sri Satyabodha Tirtharu instructed the trio Tande, Varada and Guru Gopala Vittala to do a kruti on the same subject, sitting in different places.  All the three agreed.  They composed a kruti, on Satyabodha Tirtharu himself.  The kruti is “maaramada GannasammIra madhvamatOddhaara”. 

ರಾಗ – ಅಸಾವೇರಿ    ತಾಳ – ಝುಂಪೆತಾಳ

ಮಾರಮದಘನ್ನಸಮ್ಮೀರ ಮಧ್ವಮತೋ-
ದ್ಧಾರ ಶುಭಗುಣಸಾಗರ ಧೀರ | ಪ |

ಗುರುಸತ್ಯಬೋಧಾರ್ಯ ಹರಿಕರುಣದಲಿ
ಪರವರ್ಗದ ಗೆಲಿದು ಧಾರಿಣಿಯೊಳು ಮೆರೆದೆ | ಅ.ಪ |

ಮುನಿ ನಿಮ್ಮ ಮಹಿಮೆಯನು ತಿಳಿಯದಲೆ ದಂಡೆತ್ತಿ
ಮನಸಿಜನು ಬರಲು ಕೇಳಿ ತಾಳಿ
ಘನಮಹಿಮ ಸತ್ಯಪ್ರಿಯ ಗುರುಕರುಣ ದೃಡಕವಚ-
ವನು ಧರಿಸಿ ಧೀರರಾಗಿ ಸಾಗಿ
ಮನೋಜಯಾದೃಷ್ಟಾಂಗ ಯೋಗ ಸಾಧನ ಬಲದಿ
ಮಣಿಯದಲೆ ಮಾರ್ಮಲೆತು ಕಲೆತು
ಪ್ರಣವಾದಿ ಮಂತ್ರ ಪ್ರತಿಪಾದ್ಯ ಮೂರ್ತಿಗಳ ಚ-
ಮ್ಮೊನೆ ಮಾಡಿ ಅರಿಷ್ಟತನ ಹಣಿದು ಓಡಿಸಿದೆ     | ೧ |

ಕುಸುಮಾಸ್ತ್ರಾನಂಗನಾಗಲು ಉಡುಸಹಿತ ಹಿಮಗು-
ನಸಿಗಿ ನಭಕೈದಿ ನಿಂದ ಮಂದ
ಶ್ವಸನ ಮೆಲ್ಲನೆ ಜರಿಯೆ ವನಕೆ ಪೋದ ವಸಂತ
ಝುಷಮಕರ ಜಲದೊಳಡಗೆ ನಡುಗೆ
ಎಸೆವ ಶುಕ ಪಿಕ ಸಮೂಹಗಳು ಭಯಪಟ್ಟು ಬಲು
ದಶದಿಶೆಗೆ ಓಡಿಪೋಗೇ ಕೂಗೇ
ಪೊಸಮಲ್ಲಿಕಾದಿ ಕುಟ್ಮಲವಂಜಿ ಬಾಯ್ಬಿಡಲು
ಯಶೋನಿಧಿಯೆ ತವಕೀರ್ತಿ ಪಸರಿಸಿತು ಭುವನದಲಿ | ೨ |

ಮಾರನಪಜಯ ಕಂಡು ಕ್ರೋಧಾದಿ ವೈರಿಗಳು
ದೂರದಲಿ ನಿಂದು ನಮಿಸೀ ಗಮಿಸೀ
ವೀರಕರ್ಣನು ತನ್ನ ಮೀರಿ ತ್ಯಾಗವ ಕಂಡು
ಸಾರೆ ರವಿಮಂಡಲವನೂ ಅವನೂ
ಧೀರ ನಿಮ್ಮ ಪಾಂಡಿತ್ಯಕಂ ಫಣಿಪ ಬಾಗಿ ಶಿರ
ಧಾರುಣಿಯ ಕೆಳಗೆ ನಡೆದ ವಿಬುಧ
ಶ್ರೀ ರಾಮ ವ್ಯಾಸ ಗೋಪಾಲವಿಠಲಾಂಘ್ರಿ
ಆರಾಧಕರೆ ನಿಮ್ಮ ಚಾರುಚರಣಕೆ ನಮಿಪೆ      | ೩|

1 Comment

Add a Comment
  1. sanjeevacharya yajurvedi

    all information are very good

Leave a Reply

Your email address will not be published.

Sumadhwa Seva © 2022