Satyadhyana Tirtharu

Sri Satyadhyana Tirtharu (Pandarapura)

ಅಸೇತೋರಾತುಷಾರಾದ್ರೇ ಯೋ ದಿಶೋ ಜಿತವಾನ್ ಮುಹು: |
ಸತ್ಯಧ್ಯಾನಗುರು: ಪಾತು ಯತೀಂದ್ರೈರಪಿ ಪೂಜಿತ: |

असेतोरातुषाराद्रे यो दिशो जितवान् मुहु: ।
सत्यध्यानगुरु: पातु यतींद्रैरपि पूजित: ।

அஸேதோராதுஷாராத்ரே யோ திஶோ ஜிதவாந் முஹு: |
ஸத்யத்யாநகுரு: பாது யதீம்த்ரைரபி பூஜித: |

అసేతోరాతుషారాద్రే యో దిశో జితవాన్ ముహు: |
సత్యధ్యానగురు: పాతు యతీంద్రైరపి పూజిత: |

asEtOraatuShaaraadrE yO dishO jitavaan muhu: |
satyadhyaanaguru: paatu yatIMdrairapi pUjita: |

Sri Uttaradimutt – Pandarapura, where we can find the vrundavana of Sri Satyadhyanaru

to the left, in the middle Sri Vedanidhi Tirtharu, and mruttika Vrundavana of Sri Raghottamaru

ಒಬ್ಬ ಮಾಧ್ವ ಯತಿಗೆ ಬೇಕಾದ ಮುಖ್ಯ ಲಕ್ಷಣವೆಂದರೆ ಪರಮತ ನಿರಾಕರಣ ಪೂರ್ವಕ ಸ್ವಮತ ಸ್ಥಾಪನ.  ಅದರಲ್ಲಿ ಭಾದಕ ಸದ್ಭಾವವನ್ನು, ಸಾಧಕ ಅಭಾವವನ್ನು, ಸಾಧಕ ಸದ್ಭಾವವನ್ನು ಮತ್ತು ಬಾಧಕ ಅಭಾವವನ್ನೂ ಸಾಧಿಸಿ ಮಧ್ವ ಮತವನ್ನು ಬೆಳೆಸಿದ ಮಹಾ ಚೇತನ ನಮ್ಮ ಪ್ರಾತ: ಸ್ಮರಣೀಯ ಶ್ರೀ ಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರು.  
ಮಧ್ವ ಮತ ಸ್ಥಾಪನೆಗೆ ಕಂಕಣಬದ್ಧರಾಗಿ ನಿಂತು, ಅನವರತ ಪ್ರತಿವಾದಿಗಳನ್ನು ಹುಡುಕಿಕೊಂಡು ಅವರಿದ್ದಲ್ಲಿಗೇ ಹೋಗಿ, ಅವರನ್ನು ಸೋಲಿಸಿ ವಿಜಯ ಪತಾಕೆಯನ್ನು ಸಾಧಿಸಿದವರು ನಮ್ಮ ಶ್ರೀ ಸತ್ಯಧ್ಯಾನತೀರ್ಥ ಶ್ರೀಪಾದಂಗಳವರು.  ಆದ್ದರಿಂದಲೇ ಇವರನ್ನು “ರಾಕ್ಷಸ ದ್ವೈತ ಪಂಡಿತ” ಎಂದು ಪರಕೀಯರು ಉದ್ಘಾರ ಮಾಡಿದ್ದಾರೆ.

ಕೊರ್ಲಹಳ್ಳಿ ಘರಾನಾದಿಂದ ಬಂದ ಜಯರಾಮಾಚಾರ್ಯರು (ಶ್ರೀ ಸತ್ಯಧೀರ ತೀರ್ಥರು) ಅವರ ಸುಪುತ್ರರಾಗಿ ಜನಿಸಿ, ತಂದೆಯಿಂದಲೇ ಪ್ರಾರಂಭಿಕ ವಿದ್ಯೆಯನ್ನು ಮತ್ತು ಶ್ರೀಮನ್ನ್ಯಾಯಸುಧೆಯನ್ನು ಕಲಿತು, ನ್ಯಾಯಾಮೃತ. ಚಂದ್ರಿಕಗಳನ್ನು ಶ್ರೀಧರಾಚಾರ್ಯ ತಲವಾಲ್ಕರ್ ಅವರಲ್ಲಿ ಕಲಿತು,  ನ್ಯಾಯ ಶಾಸ್ತ್ರವನ್ನು ರಾಮಾಚಾರ್ಯರಲ್ಲಿ ಕಲಿತು, ಸಕಲ ವಿದ್ಯಾ ಪಾರಂಗತರಾಗಿದ್ದರು.  ನಂತರದಲ್ಲಿ ಶ್ರೀಮದುತ್ತರಾಧಿಮಠದ ದಿವಾನರಾಗಿ ಕಾರ್ಯ ನಿರ್ವಹಿಸಿ, ತಮ್ಮ ದೈನಂದಿನ ಆಡಳಿತದೊಂದಿಗೆ ಹಲವಾರು ವಿದ್ಯಾರ್ಥಿಗಳಿಗೆ ಮತ್ತು ಸನ್ಯಾಸಿಗಳಿಗೂ ಕೂಡ ಶಾಸ್ತ್ರ ಪಾಠವನ್ನು ನಿರಂತರ ನಡೆಸಿಕೊಂಡು ಬಂದಿದ್ದರು.  

ಇವರು ಬರೆದ ಗ್ರಂಥಗಳು ಹಲವಾರು – ಅ)ಸಿವಿಲ್ ಸ್ಯೂಟ್, ಆ)ಸಭಾಸಾರ ಸಂಗ್ರಹ, ಇ)ಗೀತಾ ಪ್ರತಿಪದಾರ್ಥ ಚಂದ್ರಿಕ, ಈ)ಗೀತಾ ಸಾರ ಸಂಗ್ರಹ, ಉ)ಗೀತಾ ಲೇಖನ ಮಾಲ, ಊ)ಭಸ್ಮಧಾರಣ ನಿಷೇದ ತಥಾ ಊರ್ಧ್ವಪುಂಡ್ರ ಧಾರಣಂ, ಋ)ಸುದರ್ಶನ ಮಹಾತ್ಯಂ, ೠ)ಅದ್ವೈತಮತ ವಿಮರ್ಶಮಾಲ, ಎ)ಚಂದ್ರಿಕಾ ಮಂಡನಂ, ಈ ರೀತಿ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ.   ಇಷ್ಟಲ್ಲದೇ, ತಮ್ಮ ವಿದ್ಯಾರ್ಥಿಗಳಿಂದ ತಾವೇ ನಿಂತು ಹಲವಾರು ಗ್ರಂಥಗಳನ್ನು ಬರಿಸಿದರು. ಅವುಗಳೆಂದರೆ ದ್ವೈತ ದರ್ಶನ, ಅದ್ವೈತ ಭ್ರಾಂತಿ ಪ್ರಕಾಶ, ಅದ್ವೈತ ಕಪೋಲ ಚ ಪೇಟಿಕ, ಸಾಂಬಗಳ ಹಸ್ತಿಕ, ಸಾಂಬ ಭಂಜನ, ದ್ವೈತ ವಿಜಯ ದುಂದುಭಿ, ಇತ್ಯಾದಿ.

ಶ್ರೀ ಸತ್ಯಧ್ಯಾನರು ಮಧ್ವ ಮತಕ್ಕೆ ನೀಡಿದ ಕಾಣಿಕೆ ಬರೀ ಗ್ರಂಥದಲ್ಲಷ್ಟೇ ಅಲ್ಲ, ನೂರಾರು ಗೃಹಸ್ತ ಶಿಷ್ಯರನ್ನೂ, ಸನ್ಯಾಸಿ ಶಿಷ್ಯರನ್ನೂ ಮಾಧ್ವ ಮತಕ್ಕೆ ಸಮರ್ಪಿಸಿದ ದಿವ್ಯ ಚೇತನ ಇವರು.  ಅವರಲ್ಲಿ ಪ್ರಖ್ಯಾತರಾದವರೆಂದರೆ ಶ್ರೀ ವಿದ್ಯಾಮಾನ್ಯ ತೀರ್ಥರು, ಶ್ರೀ ಲಕ್ಷ್ಮೀಶ ತೀರ್ಥರು, ಶ್ರೀ ವಿದ್ಯಾಸಿಂಧು ತೀರ್ಥರು, ಶ್ರೀ ಲಕ್ಷ್ಮೀಂದ್ರ ತೀರ್ಥರು, ಶ್ರೀ ಸತ್ಯಪ್ರಜ್ಞತೀರ್ಥರು, ಶ್ರೀ ಸತ್ಯಾಭಿಜ್ಞತೀರ್ಥರು, ಇತ್ಯಾದಿ ಸನ್ಯಾಸಿ ಶಿಷ್ಯರು.  ಅಲ್ಲದೆ ಶ್ರೀ ಜಾಲೀಹಾಳ್ ಶ್ರೀನಿವಾಸಾಚಾರ್ಯರು, ಶ್ರೀ ಮಾಹುಲಿ ಗೋಪಾಲಾಚಾರ್ಯರು, ಶ್ರೀ ಪಾಂಡುರಂಗೀ ಜಯಾಚಾರ್ಯ, ಶ್ರೀ ವರಖೇಡಿ ನರಸಿಂಹಾಚಾರ್ಯ, ಡಾ: ಬಿ.ಎನ್.ಕೆ.ಶರ್ಮ, ಶ್ರೀ ಚತುರ್ವೇದಿ ರಾಮಚಂದ್ರಾಚಾರ್ಯ, ಶ್ರೀ ಯಲಮೇಲಿ ವಾಸುದೇವಾಚಾರ್ಯ, ಇತ್ಯಾದಿ ಗೃಹಸ್ಥ ಶಿಷ್ಯರಿದ್ದಾರೆ.

ಆ ಪರಂಪರೆಯಲ್ಲೇ ಬಂದಂತಹ ಮಹಾ ಜ್ಞಾನಿಗಳಾದ ಶ್ರೀ ಜಾಲೀಹಾಳ್ ಶ್ರೀನಿವಾಸಾಚಾರ್ಯರ ಪರಂಪರೆಯಲ್ಲಿ ಅಧ್ಯಯನ ಮಾಡಿದ ಶ್ರೀ ದ್ವಾರಕಾನಾಥಾಚಾರ್ಯರು ಮತ್ತು ಅವರ ನೇರ ಶಿಷ್ಯರಾದ ಶ್ರೀ ಹೊಳವನಹಳ್ಳಿ ಶ್ರೀನಿವಾಸಾಚಾರ್ಯರ ಶಿಷ್ಯನಾಗಿರುವುದೇ ನಮ್ಮ ಸೌಭಾಗ್ಯವಷ್ಟೇ.  ಅದೇ ಪರಂಪರೆಯ ನಮ್ಮ ಪರಿಮಳ ವಿದ್ಯಾಪೀಠದಲ್ಲಿ, ಹಲವಾರು ಹಂತಗಳಲ್ಲಿ ಅಧ್ಯಯನ ನಡೆಸುತ್ತಿರುವ ಸುಮಾರು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಅಂದ ಮೇಲೆ, ಬಹುಶ: ಸತ್ಯಧ್ಯಾನರ ಶಿಷ್ಯ ಪರಂಪರೆಯಲ್ಲಿರುವ ಶಿಷ್ಯರ ಸಂಖ್ಯೆ ಸಾವಿರಾರು.  ಇಷ್ಟೇ ಅಲ್ಲ, ಈ ಪರಂಪರೆ ಶಿಷ್ಯರುಗಳಿಂದ ಬಂದ ಮಧ್ವ ಸಂತತಿಯನ್ನು ಬಹುಶ: ಲೆಕ್ಕ ಮಾಡುವುದೇ ಬಹಳ ಕಷ್ಟ.  ಅಷ್ಟೊಂದು ಮಂದಿ ಇದ್ದಾರೆ.

click for Powerpoint presentation of

vrundavana photo of Satyadhyanaru

Sri Satyadhyaana Tirtharu – Kannada PDF

Sri Satyadhyana Tirtharu – English PDF

Sri Satyadhyanaru (by Kale Balakrishna)

Sri Satyadhyanastakam

sri-satyadhyanana-teertharu-pandarapura1

Period 1911 – 1942

 

  1. Birth Place  :  Chikkodi
  2. Poorvashrama name : Sri Sethuramacharya Korlahalli
  3. Birth – 24.12.1872
  4. Ashrama Sweekara – 1911
  5. Vrundavana Pravesha – 24.03.1942
  6. Vrundavana – Pandarapura
  7. Aradhana – Chaitra Shudda Astami
  8. Father – Sri Jayaramacharya (Sri Satyadheera Tirtharu)
  9. Mother – Smt Krishnabai
  10. Wife – Savitri Bai
  11. Ashrama gurugalu – Sri Satyajnaana Tirtharu
  12. Ashrama Shishyaru – Sri Satyaprajna Tirtharu

Parampare :

Sri Satyaveera Tirtharu
|
Sri Satyadheera Tirtharu
|
Sri Satyajnaana Tirtharu
|
Sri Satyadhyana Tirtharu
|
Sri Satyaprajna Tirtharu

He was the Vidyagurugalu for his ashrama gurugalu –   Sri Sethuramacharya (in his poorvashrama) was the vidya gurugalu for Sri Kinhal Gangur Jayacharya, who later took ashrama from Sri Satyadheera Tirtharu.  Sri Satyajnana Tirtharu in turn gave ashrama to Sri Sethuramacharya as Sri Satyadhyana Tirtharu.  So, he was the vidyagurugalu for his ashrama gurugalu

His Vidyagurugalu –

He learnt various subjects under various gurugalu :

Sri Ramacharya Rangampet @ Surpur – Nyayashastra

Sri Satyadheera Thirtharu – Srimanyayasudha

Sridharacharya Talwalkar – Nyayamruta, Tarangini, Chandrika, etc

Profession – He was made the Diwan of Uttaradimutt.  After taking charge as Diwan, he was also doing paata/pravachana on various subjects.  He took care of the Vidwan’s stay/food/education, etc.  After taking sanyashrama  Sri Satyadhyana Teertha donated all his estate estimated around Rupees Three Lakhs (valuation prevailing at that period) to Sri Uttaradhimatha.

Notable Sanyasi Shishyaas –

  1. Sri Vidyamanya Tirtharu of Bandarakeri Mutt
  2. Sri Lakshmeesha Tirtharu of Kundapura Vyasaraja Mutt
  3. Sri Vidyasindhu Tirtharu of Subramanya Mutt
  4. Sri Lakshmeendra Tirtharu of Shiroor Mutt
  5. Sri Pradyumna Tirtharu of Sagarakatte Mutt
  6. Sri Satyaprajna Tirtharu
  7. Sri Satyabhijna Tirtharu
  8. Sri Raghukantha Tirtharu of Akshobhya Tirtha Mutt
  9. SriGoswami Gokulnathaji Maharajaru(Jagadguru Vallabhacharya Peeta)
  10. Sri Raghudaanta Tirtharu of Tankaswali Mutt
  11. Sri Raghuveera Tirtharu

Notable Gruhasta Shishyaas :

  1. Sri  Jalihal Srinivasachar
  2. Sri Mahuli Gopalacharya
  3. Sri Kinhal Gangur Jayacharya
  4. Sri Pandurangi Jayacharya
  5. Sri Varkhedi Narasimhacharya
  6. Sri Doddaballapura Vasudevacharya
  7. Dr BNK Sharma
  8. Sri Chaturvedi Ramachandracharya
  9. Sri Yelemeli Vasudevacharya
  10. Sri Adya Tatacharya

List of Shishyas of Sri Sathyadhyana Tirtharu

  1. Kinhal Gangur Jayacharya (Who later became Sri Satyajnana Teertha the ashrama guru of Sri Satyadhyana Teertha Sripadangalavaru)
  2. Pandurangi Krishnacharya
  3. Pandurangi Jayacharya (Who later took over ashram from Sri Satyadhyana Teertha and was named as Sri Satyapragnya Teertha)
  4. Malagi Vedavyasacharya
  5. Yagna Vitthalacharya
  6. Chincholi Krishnacharya
  7. Varkhedi Pradumnacharya
  8. Varkhedi Narasimhacharya
  9. Subbannacharya Galgali
  10. Kurmacharya Galagali
  11. Ramacharya Galagali
  12. Muddacharya Galagali
  13. Venkannacharya Galagali
  14. Hulagi Hucchacharya
  15. Mahuli Gopalacharya (Who established Sri Satyadhyana Teertha Vidyapeetha – Mumbai). He is Poorvashrama maternal grandfather of present Peethadhipati of UM Sri 1008 Satyatma Teertha Sripadangalavaru)
  16. Valkonda Narasimhacharya
  17. Kolhapur Rangacharya
  18. Rangacharya Korlahalli
  19. Munji Lakshmanacharya
  20. Katte Srinivasacharya Udupi
  21. Inna Krishnacharya
  22. Seetharamacharya Udupi
  23. Kashi Krishnacharya Guntur
  24. Markapuram Padmanabhacharya
  25. Markapuram Srinivasacharya
  26. Malagi Venkannacharya
  27. Malagi Krishnacharya
  28. Bojji Srinivasacharya
  29. Galagali Madhavacharya
  30. Agnihotri Srinivasacharya
  31. Agnihotri Hanumanthacharya
  32. Praktooru Bhimacharya
  33. Katti Gururajacharya Koppal
  34. Doddaballapur Vasudevacharya
  35. Hosahalli Narayanacharya
  36. Pandurangi Gururajacharya
  37. Gangur Gopalacharya
  38. Gangur Jalihal Ramacharya
  39. Alampalli Narayanacharya
  40. Gangur Seetharamacharya
  41. Veeracholapuram Krishnacharya
  42. Vattangadu Ramacharya
  43. Vattangadu Ranganathacharya
  44. Kumpanipuram Ramacharya
  45. V.N.Desikacharya (Later took Vaishnava Diksha and was known as Akshobhyacharya)
  46. H.Subba Rao (was earlier adwaita professor)
  47. Dr. B.N.K.Sharma (famous Dwaita writer)
  48. Dr.R.Nagaraja Sarma
  49. Raghavacharya Javali
  50. Yalameli Vitthalacharya
  51. Karpur Srinivasacharya
  52. Galagali Annayyacharya
  53. Jalihal Srinivasacharya (Grandfather of Sri Jalihal Sukeshacharya – Malkajgiri Hyderabad)
  54. Galagali Narayanacharya
  55. Galagali Shukacharya
  56. Kolli Ramacharya
  57. Bhimsenacharya Korlahalli
  58. Dambal Anantashayanacharya
  59. Umapuram Venjatagiri Acharya
  60. Chaturvedi Ramachandracharya
  61. Dadacharya Kale
  62. Venjannacharya Chincholi
  63. Yelmeli Vasudevacharya
  64. Dharapuram Krishnamurthyacharya
  65. Korlahalli Krishnacharya
  66. Gangur Hanumanthacharya (Kinhal Sripadaputra)
  67. Raddi Rangacharya
  68. Belubbi Annayyacharya
  69. Shivanagi Vittalacharya
  70. Belagundi Padmanabhacharya
  71. Sriranga Madhavacharya
  72. P.P Lakshmi Narayana Upadhyaya
  73. Bojji Krishnacharya
  74. Harti Venkobacharya
  75. Kapusubbaraya Puranik
  76. Adya Tatacharya
  77. Panghri Tatacharya
  78. Toravi Krishnamurthyacharya
  79. Sheeranahalli Bhodharajacharya
  80. Kashi Sripadacharya
  81. Hunasigi Ramacharya
  82. Umarji Narasimhacharya
  83. Galgali Krishnacharya
  84. Sonni Krishnacharya
  85. Guttal Rangacharya
  86. Dwaipayana Srinivasacharya
  87. Katti Keshavacharya

ಇದಲ್ಲದೆ ಇವರ ಕಾಲದಲ್ಲಿ ಬೇರೆ ಮತದ ಹಲವಾರು ಪ್ರಮುಖ ವಿದ್ವಾಂಸರು ಮಧ್ವಮತಕ್ಕೆ ಪರಿವರ್ತನಗೊಂಡಿದ್ದರೆ, ಅವರಲ್ಲಿ ಮುಖ್ಯರು ಹೆಚ್. ಸುಬ್ಬರಾವ, ದೇಶಿಕಾಚಾರ್ಯ, ಎಂ.ಆರ್.ಶರ್ಮ, ಸಾವ್ಕಾರ್ ರಾಮಣ್ಣ, ಇತ್ಯಾದಿ.  

ಸತ್ಯಧ್ಯಾನರಿಂದ ಪರಾಜಿತರಾದ ಪ್ರಮುಖರು – ಕಾಶಿಯಲ್ಲಿ ಶ್ರೀ ಚಂದ್ರಶೇಖರ ಭಟ್ಟ, ಮದ್ರಾಸಿನಲ್ಲಿ ಮಹಾಮಹೋಪಾಧ್ಯಾಯ ಹರಿಶಾಸ್ತ್ರಿ, ಕುಂಭಕೋಣದಲ್ಲಿ ವಿಶಿಷ್ಟಾದ್ವೈತ ಪಂಡಿತರಾದ ಶ್ರೀ ಶೇಷಾಚಾರ್ಯ, ಇತ್ಯಾದಿ.

ಬಾಲಗಂಗಾಧರ ತಿಲಕರಿಂದ ಅಂಗಾರ ಅಕ್ಷತೆ ಧಾರಣೆ – ಸ್ವತಂತ್ರಪೂರ್ವದಲ್ಲಿ ಒಮ್ಮೆ ಬಾಲಗಂಗಾಧರ ತಿಲಕರು ಜೈಲಿನಲ್ಲಿದ್ದಾಗ, ಒಂದು “ಗೀತಾರಹಸ್ಯ”ವೆಂಬ ಪುಸ್ತಕವನ್ನು ಬರೆದಿದ್ದರು. ಅದರಲ್ಲಿ ಆಚಾರ್ಯ ಮಧ್ವರ ಭಾಷ್ಯದ ಬಗ್ಯೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.  ಆ ಲೇಖನವನ್ನು ಗಮನಿಸಿದ ಶ್ರೀ ಸತ್ಯಧ್ಯಾನರು ತಿಲಕರನ್ನು ಭೇಟಿ ಮಾಡಲು ಇಚ್ಚಿಸಿ, ಹೇಳಿ ಕಳಿಸಿದಾಗ, ಇಬ್ಬರೂ ಚಿಕ್ಕೋಡಿಯಲ್ಲಿ ಭೇಟಿಯಾದರು. ಈ ಭೇಟಿಗೆ ದಿವಂಗತ ಆಲೂರು ಅಲ್ಲೇವೆಂಕಟರಾಯರು ಮಧ್ಯಸ್ಥಿಕೆ ವಹಿಸಿದ್ಧರು .  ಸುಮಾರು ೩-೪ ದಿನ ಪರ್ಯಂತ ವಾಗ್ವಾದ ನಡೆದು, ಕಡೆಗೆ ತಿಲಕರು ಆಚಾರ್ಯರ ಮಧ್ವ ಮತವೇ ಶ್ರೇಷ್ಟವೆಂದು ಘೋಷಿಸಿದರು.  ಅಷ್ಟೇ ಅಲ್ಲ, ತಮ್ಮ “ಕೇಸರಿ” ಎಂಬ ೧೭.೪.೧೯೧೭ರ ಪತ್ರಿಕೆಯಲ್ಲಿ ಚಿಕ್ಕೋಡಿ ಭೇಟಿಯ ಬಗ್ಯೆಯೂ, ಆಚಾರ್ಯ ಮಧ್ವರ ಶ್ರೇಷ್ಟತೆ ಬಗ್ಯೆಯೂ ಬರೆದಿದ್ದಾರೆ.  ಮುಂದೆ ಪೂನಾದಲ್ಲಿ ಶ್ರೀ ಸತ್ಯಧ್ಯಾನರಿಗೆ ಭಿಕ್ಷೆಯನ್ನು ಏರ್ಪಡಿಸಿ, ಆ ಕಾರ್ಯಕ್ರಮದಲ್ಲಿ ಮಧ್ವ ಚಿನ್ಹೆಯಾದ ಅಂಗಾರ-ಅಕ್ಷತೆಯನ್ನು ಧರಿಸಿದರು.  

ಚಂದ್ರಿಕಾಮಂಡನಂ – ಒಮ್ಮೆ ಕುಂಭಕೋಣದ ರಾಮಸುಬ್ಬಾಶಾಸ್ತ್ರಿ ಎನ್ನುವವರು ಶ್ರೀ ವ್ಯಾಸರಾಜರ ತಾತ್ಪರ್ಯ ಚಂದ್ರಿಕಾ ಗ್ರಂಥಕ್ಕೆ ಖಂಡನವನ್ನು ಬರೆದು ಅದರ ಪ್ರತಿಯನ್ನು ಶ್ರೀ ಸತ್ಯಧ್ಯಾನರಿಗೆ ಕಳಿಸಿದ್ದರು.  ಅದನ್ನು ನೋಡಿದ ಶ್ರೀಗಳವರಿಗೆ ಬಹಳ ದು:ಖವಾಯಿತು.  ಕೂಡಲೇ ಅದಕ್ಕೆ ಉತ್ತರವನ್ನು “ಚಂದ್ರಿಕಾ ಮಂಡನಂ” ಎಂಬ ಗ್ರಂಥವನ್ನು ಬರೆದು ಕಳಿಸಿ ಭೇಟಿಯಾಗಲು ಹೇಳಿದಾಗ, ಅದಕ್ಕೆ ರಾಮಸುಬ್ಬಾಶಾಸ್ತ್ರಿಗಳು ಬರಲಿಲ್ಲ.  ಆಗ ತಾವೇ ತಿರುಚಾನೂರಿನಲ್ಲಿ ಒಂದು ದೊಡ್ಡ ಸಭೆಯನ್ನು ಕರೆದು ಅಲ್ಲಿ ನಾಡಿನ ಎಲ್ಲ ಅದ್ವೈತ-ವಿಶಿಷ್ಟಾದ್ವೈತ ಪಂಡಿತರನ್ನೂ ಕರೆಸಿ, ಅಲ್ಲಿ ಸಾವಿರಾರು ವಿದ್ವಾಂಸರ ಸಮ್ಮುಖದಲ್ಲಿ ಅದ್ವೈತಕ್ಕೆ ಶೃತಿ ಸ್ಮೃತಿಗಳ ಪ್ರಮಾಣವಿಲ್ಲ, ಎಂದು ಘಂಟಾಘೋಷವಾಗಿ ಹೇಳಿದರು. ಯಾರು ಬೇಕಾದರೂ ತಮ್ಮ ಜೊತೆ ವಾಗ್ವಾದಕ್ಕೆ ಬರಬಹುದೆಂದು ಆಹ್ವಾನಿಸಿದರು.  

ಶಿಷ್ಯವಾತ್ಸಲ್ಯ – ಶ್ರೀಗಳು ತಮ್ಮ ಶಿಷ್ಯರಿಗೆ ಪಾಠ-ಪ್ರವಚನಗಳನ್ನು ಮಾಡುವುದಲ್ಲದೆ, ಅವರಿಗೆ ಬೇಕಾದ ಎಲ್ಲ ಸವಲತ್ತುಗಳನ್ನೂ ನೀಡುತ್ತಿದ್ದರು. ತಮ್ಮ ಶಿಷ್ಯರಿಗೆ ಅವರಿಗಿಷ್ಟವಾದ ಸಿಹಿತಿಂಡಿಗಳನ್ನು ಮಾಡಿಸಿಕೊಡುತ್ತಿದ್ದರು, ಹಣ್ಣು ಹಂಪಲುಗಳನ್ನು ತರಿಸಿಕೊಡುತ್ತಿದ್ದರು.  ದೇವರ ಮುಂದೆ ದೀಪ ಹಚ್ಚುವುದಕ್ಕಿಂತ, ಶಿಷ್ಯರಿಗೆ ತುಪ್ಪವನ್ನು ಹಾಕಿದರೆ, ನಿರಂತರವಾಗಿ ಶಿಷ್ಯ ಸಂಪತ್ತು ಬೆಳೆಯುತ್ತದೆ ಎನ್ನುತ್ತಿದ್ದರು.  

ಸತ್ಯಧ್ಯಾನರ ಬಗ್ಯೆ ಗ್ರಂಥಗಳು – ಶ್ರೀ ಸತ್ಯಧ್ಯಾನರ ಬಗ್ಯೆ ಹಲವಾರು ಗ್ರಂಥಗಳನ್ನು ಕಾಣಬಹುದು – ಅವುಗಳಲ್ಲಿ ಮುಖ್ಯವಾಗಿ ಶ್ರೀ ಸತ್ಯಧ್ಯಾನ ಚರಿತಂ, ಸತ್ಯಧ್ಯಾನ ವೈಭವಂ, ಸತ್ಯಧ್ಯಾನ ದಿಗ್ವಿಜಯ ಮಹಾಕಾವ್ಯಂ, ಸತ್ಯಧ್ಯಾನ ತೀರ್ಥ ಚರಿತೆ, ಅಭಿನವ ಆನಂದತೀರ್ಥ, ಗುರುವೈಭವ ಮಹಾಕಾವ್ಯಂ, ಸತ್ಯಧ್ಯಾನ ಸುಪ್ರಭಾತಂ, ಶ್ರೀ ಸತ್ಯಧ್ಯಾನ ಶತಕಂ, ಶ್ರೀ ಸತ್ಯಧ್ಯಾನರು, ಶ್ರೀ ಸತ್ಯಧ್ಯಾನರ ನುಡಿಮುತ್ತಿಗಳು, ಶ್ರೀ ಸತ್ಯಧ್ಯಾನ ಜೀವನರಶ್ಮಿ, ಸತ್ಯಧ್ಯಾನರ ಸಂದೇಶ, ಮೈ ಮಾಸ್ಟರ್, ಇತ್ಯಾದಿ ಕನ್ನಡ, ಆಂಗ್ಲ, ಸಂಸ್ಕೃತ ಭಾಷೆಯಲ್ಲಿ ಲಭ್ಯವಿದೆ.

ಅಂತಹ ಮಹಾಚೇತನರು ಮಹಾರಾಷ್ಟ್ರದ ಪಂಡರಾಪುರದಲ್ಲಿ ಚೈತ್ರ ಶುಕ್ಲ ಅಷ್ಟಮಿಯಂದು 24.3.1943ರಂದು ವೃಂದಾವನ ಪ್ರವೇಶಿಸಿದರು.  

Notable conversions from other mathaas –

  1. Sri M R Sharma
  2. Sri Sowkar Ramanna
  3. Sri H Subbarao
  4. Sri V N Deshikacharya

CHANDRIKA MANDANAM –  An advaitee scholar Ramasubbashastry of Kumbakonam wrote a book condemning “Chandrika” of Sri Vyasaraja Tirtharu with the title “Chandrika Khandanam”.  That advaitee managed to send that Chandrika Mandanam book to Sri Satyadhyana Tirtharu.   As soon as he received that book, he gone through the book, with each and every aspect and started writing the Khandanam for that Grantha.  He started replying immediately postponing his bath and pooja.  Sanyasashrama dharma says if any Khandana Grantha is written for Acharya Siddantha, the same should be condemned immediately lest the sanyasa dharma itself is in vain. After snaana, pooja and theerthaprasada, he again continued the book and within a short period he completed the book and gave the title “Chandrika Mandanam”.    He also sent a copy of the book to Ramasubbashastry who was in Kumbakonam.

But he did not replied for the “Mandanam” by Sri Satyadhyana Tirtharu.  Then Swamiji sent an advocate from Madras High Court to the place of Ramasubbashastry and invited him to meet the swamiji at  Padmasarovara where Swamiji was staying at that time.  But the Shastry avoided by replying, that he does not like to debate with a sanyasi and did not go with him.    Then swamiji called for a great Sabha at Tiruchanoor and invited all the religious sectors from Advaita and Vishistadvaita apart from Dwaitha pundits.   The sabha was attended by more than 1000 pandits, people from all over the country.    Swamiji inaugurated the book titled “Chandrika Mandanam”,   The Chandrika Mandanam has three parts, in the first part he has described that the Advaita has no base in Shruti and smriti.    In the second part, he has condemned the comments on Chandrika.  In the third part, he has explained as to how Sri Vyasaraja’s Tatparya Chandrika is superior to any other.

“Advaita matha is avaidhika.” – an open statement by Sri Satyadhyanaru @ Mysore

–          Sri Satyadhyana Tirtharu declared that the Advaitha Matha is an avaidhika matha and not supported by any Vedaas.  This statement made the advaitees very angry and they called a sabha of all the advaithees all over the country.  They further gave a press statement in all leading news papers, that the statement by the swamiji will be condemned.  But no one did came to Swamiji for a debate on his statement.    After 6 months, many advaitees came to Swamiji for Mudradharane and accepted the dwaitha matha upadesha.

– He was termed as “RAKSHASA DWAITA PANDITA” – He was seen as a lion to all those who came for an argument with him.  He used to look like demon for them who could not sustain his in depth knowledge about all shastras, including their own Advaita shastra

Some of the achievements of Sri Satyadhyana Tirtharu –

  1. He defeated Chandrashekara Bhatta, an advaita pandita on his way to Kaashi
  2. He went to Madras and defeated Mahamahopadyaya Harishastri
  3. In Kumbakonam, he argued with Sri Sheshacharya, an Vishishastadvaita pandit on “Whether there is taaratamya in Mukthi also” and proved that there is taaratamya in Mukthi.

  4. Discussion with Balagangadhara Tilak over “Geetha Bhashya” –  Once When Balagangadhar Tilak, a famous freedom fighter was in Jail, he had written a book titled “Geetha Rahasyam”, wherein he had expressed his displeasure over Acharya Madhwa’s Geetha Bhashya.  When Sri Satyadhyanaru noticed this, he immediately called for Vagvada, which Tilak happily agreed to meet at Chickodi. Late Sri Aloor Venkatarao took the responsibility of meeting of Bslagangadhara Tilak and Sri Swamiji.  There after a lengthy discussion between Sri Satyadhyanaru and Sri Balagangadhara Tilak, for more than 3-4 days. The entire doubts raised by Tilak over Srimadacharya’s Geetha Rahasya were cleared to everybody’s satisfaction and Tilak was fully convinced and accepted that Madhwa Siddantha is great.   Tilak asked swamiji as to what was the necessity for Krishna to preach Arjuna the “Geetha”in the Kurukshetra.   Swamiji told Tilak that Lord has been always with the Dharma and he has punished those who are against it. The battlefield was the right place for Arjuna to preach the same and win over the Kauravas who were totally against the Dharma. To this he asked Tilak who was the fortunate person to listen this live? Tilak was surprised and was  quite for some point of time. To this Swamiji again informed him it was Kapiraja Lord Vayu in the form of Mukhyaprana Devaru who was on the flag (dhwaja)  of Sri Krishna and Arjuna’s chariot who has listened all what has been preached by Lord Krishna to Arjuna directly.  The swamiji also gave proofs that our Srimadacharya was the incarnation of the Mukhyaprana.   The 17th April 1917 issue of ”Kesari” newspaper, published by Balagangadhar Tilak, carried a detailed report of this historic meet at Chikkodi.
  5. Angara – Akshate Dharane by Tilak –After getting convinced fully about Madhwa Siddantha, Sri Balgangadhar Tilak was very happy and once he arranged a bhiksha for the swamiji @ Tulasi Bagh in Pune.   That day Lokmanya Tilak applied Angara Akshata and this was widely published in next day’s edition of Bhopatkar’s Bhala Newspaper.
  6. “TILAKANI KALIREKHA ANGARA AKSHATA ODHALI” were the headlines.Which means Tilak has applied a black line called Angara and Akshata.

Granthas by Sri Satyadhyana Tirtharu –

  1. Civil Suit – Here the grantha is in the form of conversation – argument between two layers.    The argument topic consisted of Veda, shastra, and Upanishat.   This grantha, even though the name looks like an English book, it is completely in Devanagari language.
  2. Sabhasara Sangraha – Here swamiji has answered some of the questions raised by the people in various cities over Daivika and dharmika topics.
  3. Geetha Pratipadartha Chandrika – Here Swamiji has given the meaning of each and every word of Bhagavadgeetha and summary as per Madhwa Philosophy.
  4. Geetha Saara Sangraha – Here Swamiji has explained about the tathvaas –  Jeeva, Jagath and Jaganniyamaka Srihari as per Geetha.
  5. Geetha Lekhana Maala –  Here he has answered the queries/objections raised by Balagangadhara  Tilak in “Geetha Rahasya” against Srimadacharya’s Geetha Bhashya.  This book contains the articles by Satyadhyanaru in “Sri Madhwa Siddaantha Sudhakara”, a Marathi News Paper.
  6. Bhasma Dharana Nisheda tathaa UrdvapuNdra DharanaM –  In this book Swamiji has clarified that Bhasma Dharana is void and Urdhvapundra Dharana is shastreeya.
  7. Sudarshana Mahatmya –  Here swamiji has explained about Mudradharana and tapta shanka tathaa chakra Dharana.
  8. Advaita Mata vimarshamaala
  9. Bedha paraaNyEna Kalu brahma Sutraani –  Here  he has explained that “Bedha Tathva” is the moolabhoota tatva and he has proved that every soothra has proof from Shankara Bhashya.  That is Shankara Advaitha vaada itself proves that “bedha Tathva” is supreme.
  10. Chandrika Mandanam –  This is a grantha written for the Khandana of a grantha by an advaitee “Chandrika Khandana”.    Ramasubba shastry of Kumbakonam wrote a book condemning the Tatparya Chandrika of Sri Vyasarajaru.  As soon as he got the copy of the Khandanam by an advaitee on Vyasaraja’s Tatparya Chandrika, he studied the entire writings of the advaitee vidwan and Sri Vyasaraja’s original Tatparya Chandrika.  He has condemned each and every objection by Ramasubbashastry and published the greantha “Chandrika Mandanam” in support of Tatparya Chandrika.

Apart from the above, Sri Satyadhyana Tirtharu got the following books written from some of his shishyas during his period.

  1. Dwaita Darshana – by Sri Varakhedi Narasimhacharya
  2. Advaita Bhranti prakasha – by Sri Varakhedi Narasimhacharya
  3. Advaita kapola cha petika – by Sri Varakhedi Narasimhacharya
  4. Sambagala Hastika – by Sri H Subbarayaru
  5. Sambha Bhanjana – by Sri H Subbarayaru
  6. Dwaita Vijaya Dundubhi
  7. Dwaita Philosophy

Granthas on Sri Satyadhyana Tirtharu :-

  1. Sri Satteesudhaa – by Adya Anantacharyaru in Kannada in 1936
  2. Sri satyadhyaanara dakshiNa dEshada digvijaya athavaa dvaita vijayaa dundubhi – by Bheemacharya Kanchi in Kannada in 1948
  3. Sri Satyadhyana Vijaya – by Sri Katti Keshavacharya – in Kannada – in 1947 – in Shatpadi mahakavya
  4. Guruvaarada haadu – by Katti Keshavacharya
  5. Sri Satyadhyana Vijayam – by Katti Keshavacharya – in Sanskrit
  6. Sri Satyadhyana Digvijaya Mahakavyam – by Kashi Krishnacharya – in 1949 – in Sanskrit
  7. Sri Satyadhyanara charitre by Chikkerooru Govindacharya in 1961 in Kannada
  8. Sri Satyadhyana Tirtha Charitre by Ramacharya Avadhani in 1968 in Marati
  9. My Master – by Mahuli Gopalacharya in English
  10. Abhinava Anandatirtha – a souvenir
  11. Sage Sathyadhyana Tirtha
  12. Guruvaibhava Mahakavyam by Jalihal Srinivasacharya in 1971 in Sanskrit
  13. Sri Satyadhyana Suprabhata shataka by Galagali Ramacharya in Sanskrit
  14. Sri Satyadhyana Shatakam by Pandarinatacharya Galagali in 1971 in Sanskrit
  15. Sri Satyadhyanaru – by Malagi Jayatirthacharyaru in 1970 in Kannada
  16. Sri Satyadhyanara nudimuttugalu by Malagi Jayatirthacharya in 1979 in Kannada
  17. Sri Satyadhyana Jeevanarashmi by Malagi Jayatirthacharya in 1990 in Kannada
  18. Sri Satyadhyanara sandesha by Hanumeshacharya in kannada in 1975
  19. Sri Satyadhyanaru by Sri Aravatti in 1974 in Marati

Satyadhyanaru – His Special characters –

  1. Once in Kolhapura, his disciples were attracted in the market for the “Garam Chooda”.   But they could not buy the items being sold in shops.  Satyadhyanaru on noticing this,  after reaching Dharwad, got prepared Garamchooda exclusively for his students by bringing Grapes, anjura, avalakki, godambi and made his students to have the taste of Garam chooda in the mutt itself
  2. If any body gives fruits to the swamiji, he used to distribute amongst his disciples.
  3. He used to respect the pundits of other mathaas also.  He was vidyapakshapathi.
  4. Once when he was doing the pooja in a king’s place.  The king could not come in time before the pooja.  Swamiji finished the pooja and packed the idols.  After that the king turned, but it was all over.  The king repented for having come late.  Swamiji told “ We can wait for the king, but Sriramachandra devaru, can’t wait for you”.  The king agreed and repented.  Next day, the king was very much in time to see the entire pooja and got the devata darshana and theerthaprasada.
  5. Once in Bagalkot, a lady had gone with her neighbour with her mother-in-law’s permission.  Because of heavy rush, she lost a bag wherein she carried the sarry given by her mother-in-law. She was worried that her in law would scold her and was searching.  Somehow, Sreegalu came to know about the incident, asked his disciples to bring two good sarees and give it to her.
  6. Once he was giving “dakshine” during bhojana to all the people in the pankthi.  His shishya was carrying the plate which carried the dakshine. But somehow the entire dakshine in the plate fell on a plantain leave of a lady inadvertently.  Swamiji did not even scold the shishya and asked that lady to retain the entire dakshine.  Actually that lady was a very poor lady and this dakshine helped her a lot for family maintenance.

 

ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆ
ಸತ್ಯವಾದ ಜ್ಞಾನ ಹುಟ್ಟುವುದು | ಪ |
ಶಕ್ತಿ ಭಕ್ತಿ ಯುಕ್ತಿ ಸೌಭಾಗ್ಯ ಸಂಪತ್ತು
ಧೈರ್ಯ ಔದಾರ್ಯ ಉತ್ಸಾಹ ಮೂರುತಿಯಾದ  | ಅ.ಪ |
ಹರಿಯೆ ಸರ್ವೋತ್ತಮ ಸರ್ವಗುಣ ಪರಿಪೂರ್ಣ
ಸರ್ವದೋಷ ವರ್ಜಿತನೆಂದು
ವರ ಮಧ್ವಮತವೆ ವೇದ್ಯವೆಂದು
ಧರೆಯೊಳು ಜಯಭೇರಿ ಹೊಡಿಸಿದ ಧೀರಾ | ೧ |
ಪರವಾದಿ ವಾಕ್ಯಾರ್ಥ ಪರರ ಕೊರಳಿಗೆ ಕಟ್ಟಿ
ದುರ್ವಾದಿಗಳ ಸದ್ದು ಆದಗಿಸುತಾ
ಸರ್ವ ಸಾಮಾನ್ಯರಿಗೆ ಸುಲಭ ತಿಳಿಯುವಂತ
ಪ್ರಶ್ನಾರ್ಹ ರೂಪಗಳ ಗ್ರಂಥ ರಹಿಸಿದಂಥಾ | ೨ |
ದಾನದಲಿ ಕರ್ಣ ಜ್ಞಾನದಿ ಶುಕಮುನಿ
ಮೌನಿ ಕುಲಕೆ ಸನ್ಮಾನ್ಯರಾಗಿ
ಧರ್ಮ ಸಾಮ್ರಾಜ್ಯಕೆ ಸಾರ್ವಭೌಮನಾದ
ಶ್ರೀನಿಧಿ ಭೂಪತಿವಿಠಲನ ದಾಸ |
               – ಶ್ರೀ ಭೂಪತಿ ವಿಟಲ ದಾಸರು
————————————————-

ಸತ್ಯಧ್ಯಾನರ ನಿತ್ಯ ಸ್ಮರಿಸಿ
ಕೃತಕೃತ್ಯನು ನೀನಾಗೋ | ಪ |

ಮರ್ತ್ಯನೆ ಶ್ರೀಗುರು ಸತ್ಯಜ್ಞಾನ |
ಸುತೀರ್ಥರಕರಕಂಜೋತ್ಥರಾದ ಗುರು | ಅ.ಪ |
ಸುತ್ತಲ್ ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳ ಚರಿಸಿ
ಮತ್ತಮಾಜಿಯಜ ಹಸ್ತಿಗಣಕೆ ಪಂಚವಕ್ತ್ರರೆಂದು ಕರೆಸಿ
ಛಾತ್ರವರ್ಗ ಸಂಯುಕ್ತರಾಗಿ ಸುಖ
ತೀರ್ಥರ ಸುಮತಕೆ ಸಂಸ್ಥಾಪಕ ಗುರು | ೧ |
ಏನು ಕರುಣವೋ ಜ್ಞನಿಗಳನು ಧನದಾನದಿ ದಣಿಸುತಲಿ
ಕ್ಷೋಣಿವಿಬುಧರಿಗೆ ನ್ಯಾಯ ಸುಧಾರಸಪಾನ ಮಾಡಿಸುತಲಿ
ದೀನ ಜನಗೆ ಸುರಧೇನು ಎನಿಸಿದ ಮ-
ಹಾನುಭಾವರೆಂದು ಸಾನುರಾಗದಲಿ | ೨ |
ಹೇಮವಜ್ರಮಯ ಮಂಟಪದಲಿ ಶ್ರೀರಾಮನ ಪದಪದುಮ
ನೇಮದಿ ಪೂಜಿಸುವಾ ಮಹವೈಭವ ನೋಳ್ಪಜನರ ಜನುಮ
ಈ ಮಹಿಯೊಳು ಸಾರ್ಥಕವೆನಿಸಿತು ಬಹು
ಧೀಮಜ್ಜನರಿಗೆ ಕಾಮಿತ ಗರೆಯುವ | ೩ |
ಹರಿಪದಪೊಂದಲು ಮರುತಶಾಸ್ತ್ರವೆಂಬೋ ತರಣಿಯೋಳ್ಪಗಲಿರಳು
ಹರುಷದಿ ಕುಳಿತಿಹ ಧರೆಸುರರನು ಭವಶರಧಿ ದಾಟಿಸಲು
ಕರದೊಳು ದಂಡವ ಧರಿಸಿ ನಿಂದಿರುವರ
ರುಣವಸನದಲಿ ಪರಿಶೋಭಿತತನು | ೪ |
ಶರಣ ಜನರ ಬಹುದುರಿತ ತಮಕೆ ದಿನಕರ
ಸಮರೆನಿಸುತಲಿ ಸಿರಿ ಕಾರ್ಪರ ನರಹರಿಯ ಚರಣಯುಗ್ಮ
ಸ್ಮರಿಸುತ ಹರುಷದಲಿ ಧರೆಯೊಳು ಪಂಡರಪುರ ಸುಕ್ಷೇತ್ರದಿ
ವರತನುವಿರಿಸಿದ ಪರಮ ಮಹಿಮ ಗುರು | ೫ |
            – ಕಾರ್ಪರ ನರಹರಿ ದಾಸರು
———————————-

ಆನಮಿಪೆ ಶ್ರೀ ಸತ್ಯಧ್ಯಾನಯತಿಗಳಿಗೆ | ಪ |
ಹೀನೈಕ್ಯಕಾನನ ತನೂನಪಾತನಿಗೆ | ಅ.ಪ |

ಆಸೇತು ಹಿಮಗಿರಿ ಪ್ರವಾಸ ಕೈಕೊಂಡಖಿಳ
ವ್ಯಾಸಸೂತ್ರಾದಿ ಪ್ರಸ್ಥಾನತ್ರಯದಲೀ
ದೇಶಿಕರ ವಿದ್ವದ್ಸಭಾಸಮ್ಮೇಳಾದೊಳನಿಲ
ಭಾಷ್ಯಾರ್ಥಗಳ ಪ್ರತಿಷ್ಟಾಪಿಸಿದನೆಂದೊ | ೧ |
ಸತ್ಯಜ್ಞಾನಾರ್ಣವ ಮಹತ್ತರೋಡುವ ಭಕ್ತ
ಹೃತ್ತಮಾಂತಕ ಭಾನು ಪ್ರತ್ಯರ್ಥಿಹ
ಮಿಥ್ಯವಿದ್ರಾವಣ ವಿಚಾರಸಾರಾದ್ಯಮಿತ
ತತ್ತ್ವಪ್ರಮೇಯ ಸರ್ವತ್ರ ಮೆರೆಸಿದನೆಂದು | ೨ |
ಜ್ಞಾನಾಯು ಭಕ್ತಿ ವೈರಾಗ್ಯಾನುಕೂಲದಲಿ
ದಾನಾನುಕಂಪ ವಿದ್ವತ್ಪ್ರಭೆಯಲಿ
ಜಾನಕೀಪತಿವಿಠಲ ಕೃಷ್ಣ ವ್ಯಾಸಾರ್ಚನೆ ವ್-
ಚಾನದೊಳಗಭಿನವಾನಂದ ಮುನಿಯೆಂದು | ೩ |
ಈ ವಿಧ ಮಹಾ ಮಹಿಮರೀಭುವಿಲಿ ಜನಿಸುವುದೇ
ಪಾವಮಾನಿಗರ ಸದ್ಭಾಗ್ಯವೆನುತ |
ಭಾವದೊಳು ಇವರಂಘ್ರಿರೇಣಿನವರವನಾಗಿ
ಸೇವಿಸಲು ದುರ್ಮೋಹ ವ್ಯಾವರ್ತವೆಂದು | ೪ |
ಭೌಮವಾದ ವಸಂತ ಚೈತಾದಿ ಅಷ್ಟಮಿಯ
ಯಾಮ್ಯಯಾಮದೆ ಚಿತ್ರಭಾನುವಿನಲಿ
ಭೀಮತಥೀತೀರ ತಂದೆ ವೆಂಕಟೇಶವಿಠಲನ
ಧಾಮವೈದಿದ ಕರ್ಮದೇವರಿವರೆಂದು | ೫ |
         – ತಂದೆ ವೆಂಕಟೇಶವಿಠಲ ದಾಸರು

LOCATION OF THE MUTT @ PANDARAPUR –
DATTARGHAT, PANDARAPURA-413304
 

(Source – Uttaradimutt, Kale Balakrishna and several other articles)

1 Comment

Add a Comment
  1. This is very nice Uttaradhi muth on the bank of Chandrabhaga river , we feel very pleasant with darshana of Mool vrundawana WE request sri Satyama Teerth swamiji to have Chaturmasa at Pandharpura and on one of the Eakadashi either Ashadhi or Kartiki Our dream to have Tapt Mudra Dharana At uttaraddhi muth Pandharpua.

Leave a Reply

Your email address will not be published.

Sumadhwa Seva © 2022