ಪ್ರಶ್ನೋತ್ತರ
ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್ |
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್
1. ವಾದಿರಾಜರ ಜನ್ಮಸ್ಥಳ ಯಾವುದು?
ಅ. ಹೂವಿನ ಕೆರೆ. ಆ. ಹೂವಿನ ಹಡಗಲಿ .ಇ.ಸೋಂದಾ
2. ವಾದಿರಾಜರು ಜನಿಸಿದ ಭೂಮಿಗೆ ಏನು ಹೆಸರು?
ಅ. ಲಕ್ಷ್ಮೀ ಗದ್ದೆ. ಆ. ವಾದಿರಾಜ ಗದ್ದೆ
ಇ. ಗೌರೀ ಗದ್ದೆ. ಈ. ಮಂಗಳಗದ್ದೆ
3. ವಾದಿರಾಜರ ಜನ್ಮನಾಮ ಏನು?
ಅ. ಹಯವದನ. ಆ. ಹಯಗ್ರೀವ.
ಇ. ಭೂವರಾಹ. ಈ. ಯತಿರಾಜ
4. ವಾದಿರಾಜರು ಯಾರಿಂದ ಆಶ್ರಮ ಸ್ವೀಕರಿಸಿದರು?
ಅ. ವಾದೀಂದ್ರತೀರ್ಥರು ಆ. ವೇದವ್ಯಾಸತೀರ್ಥರು
ಇ. ಯೋಗೀಶತೀರ್ಥರು ಈ. ವಾಗೀಶತೀರ್ಥರು
5. ವಾದಿರಾಜರ ಆಶ್ರಮ ಶಿಷ್ಯರು ಯಾರು?
ಅ.ವೇದವೇದ್ಯತೀರ್ಥರು. ಆ. ವಾದೀಂದ್ರತೀರ್ಥರು
ಇ. ಯೋಗೀಂದ್ರತೀರ್ಥರು. ಈ. ವಾಸುದೇವತೀರ್ಥರು
6. ಸೋದೆ ಮಠಕ್ಕೆ ನಿಯುಕ್ತರಾದ ಮೊದಲ ಸನ್ಯಾಸೀ ಯಾರು?
ಅ. ಅಕ್ಷೋಭ್ಯತೀರ್ಥರು. ಆ. ವಾದಿರಾಜರು. ಇ ವಿಷ್ಣುತೀರ್ಥರು.
ಈ. ರಾಮಚಂದ್ರ ತೀರ್ಥರು
೭. ವಾದಿರಾಜರಿಗೆ ” ಪ್ರಸಂಗಾಭರಣ ತೀರ್ಥ”ರೆಂದವರು ಯಾರು?
ಅ. ಅರಸಪ್ಪನಾಯಕ ಆ. ಕೃಷ್ಣದೇವರಾಯ
ಇ. ವ್ಯಾಸರಾಯರು. ಈ. ವಾಗೀಶತೀರ್ಥರು
೮. ತೀರ್ಥ ಪ್ರಭಂದ ಕರ್ತೃಗಳು ಯಾರು?
ಅ. ಶ್ರೀ ವ್ಯಾಸರಾಯರು. ಆ. ವಾದಿರಾಜರು
ಇ. ಜಯತೀರ್ಥರು. ಈ. ಧೀರೇಂದ್ರ ತೀರ್ಥರು
9. ರುಕ್ಮಿಣೀಶವಿಜಯ ಗ್ರಂಥ ರಚಿತ ಸ್ಥಳ ಯಾವುದು?
ಅ. ಹಂಪಿ. ಆ. ಪುಣೆ. ಇ. ಮಥುರಾ
೧೦. ಬಸವ ಘಂಟೆ ಯಾವ ಮಠದಲ್ಲಿ ಉಪಯೋಗಿಸುತ್ತಾರೆ?
ಅ. ಸೋಂದಾ ವಾದಿರಾಜ ಮಠ. ಆ. ವ್ಯಾಸರಾಜಮಠ
ಇ ಅಬ್ಬೂರು ವ್ಯಾಸರಾಜ ಮಠ ಈ. ಶ್ರೀಪಾದರಾಜ ಮಠ
೧೧. ರಮಾತ್ರಿವಿಕ್ರಮ ದೇವಸ್ಥಾನ ಕಟ್ಟಿಸಿದವರಾರು?
ಅ. ಅರಸಪ್ಪನಾಯಕ. ಆ. ಕೃಷ್ಣ ದೇವರಾಯ
ಇ. ದೇವರಾಯನಾಯಕ. ಈ. ವಾದಿರಾಜರು
೧೨. ರಮಾತ್ರಿವಿಕ್ರಮ ರಥಕ್ಕೆ ಎಷ್ಟು ಚಕ್ರಗಳಿವೆ ?
ಅ.4 ಆ.3 ಇ. 6 ಈ. 8
೧3. ಧವಳಗಂಗೆ ಎಲ್ಲಿದೆ?
ಅ. ಹಂಪೀ. ಆ. ಸವಣೂರು. ಇ. ಸೋಂದಾ. ಈ.ಆನೆಗೊಂದಿ
1೪.. ರುಕ್ಮಿಣೀ ವಿಜಯ ಗ್ರಂಥ ರಚನೆಗೆ ವಾದಿರಾಜರು ತೆಗೆದುಕೊಂಡ ಸಮಯ ಎಷ್ಟು ?
ಅ. 7 ದಿನ ಆ. 18 ದಿನ ಇ.19 ದಿನ ಈ.21 ದಿನ
೧೫. . ರುಕ್ಮಿಣೀಶವಿಜಯಕ್ಕಿಂತ ಮುಂಚೆ ಮಹಾಕಾವ್ಯವೆಂದು ಕರೆಯಲ್ಪಟ್ಟಿದ್ದ ಗ್ರಂಥ ಯಾವುದು?
ಅ. ಚಂಪೂ ರಾಮಾಯಣ ಆ. ಅಭಿಜ್ಞಾನ ಶಾಕುಂತಲ
ಇ. ಶಿಶುಪಾಲ ವಧ. ಈ. ಕುಮಾರಸಂಭವ
೧೬. ಎಲ್ಲಾ ಮದುವೆ ಶುಭಕಾರ್ಯ ಗಳಲ್ಲಿಯೂ ಪಾರಾಯಣವಾಗುವ ವಾದಿರಾಜರ ಕೃತಿ ಯಾವುದು?
ಅ. ತೀರ್ಥಪ್ರಬಂಧ ಆ. ಲಕ್ಷ್ಮೀ ಶೋಭಾನೆ
ಇ. ದಶಾವತಾರ ಸ್ತುತಿ. ಈ.ರುಕ್ಮಿಣೀಶವಿಜಯ
೧೭. ವಾದಿರಾಜರ ದಶಾವತಾರ ಸ್ತುತಿ ಯಾವ ಧಾಟಿಯಲ್ಲಿದೆ? ”
ಅ. ಹಂಸಧಾಟೀ. ಆ. ಅಶ್ವಧಾಟೀ
ಇ ಗಜಧಾಟಿ. ಈ. ಸರ್ಪಧಾಟೀ
೧೮. ವಾದಿರಾಜರು ಸನ್ಯಾಸ ಸ್ವೀಕರಿಸಿದ ಮೇಲೆ ಎಷ್ಟು ವರ್ಷವಿದ್ದರು.
ಅ. 108 ಆ.100 ಇ.92 ಈ.112
೧೯. ಪಲಮಾತ್ಮ ವಾದಿರಾಜರ ನೈವೇದ್ಯ ಸ್ವೀಕರೀಸಲು ಯಾವ ವೇಷದಲ್ಲಿ ಬರುತ್ತಿದ್ದನು ?
ಅ. ಹಂಸ. ಆ. ಹಯವದನ ಇ. ಸರ್ಪ
೨೦. ತನ್ನ ತಾಯಿಯ ಹರಕೆ ನೆರವೇರಿಸಲು ವಾದಿರಾಜರು ರಚಿಸಿದ ಗ್ರಂಥವಾವುದು?
ಅ. ಲಕ್ಷ್ಮೀ ಶೋಭಾನ ಆ. ಮಹಾಭಾರತ ಲಕ್ಷಾಲಂಕಾರ
ಇ. ತೀರ್ಥಪ್ರಬಂಧ ಈ. ರುಕ್ಮಿಣೀಶ ವಿಜಯ
೨೧. ವಾದಿರಾಜರ ಅಂಕಿತವೇನು?
ಅ. ಮತ್ಸ್ಯವಿಠಲ ಆ . ಹಯವದನ
ಇ. ವಾದಿರಾಜ ವಿಠಲ ಈ. ಹಯಗ್ರೀವ.
೨೨. ವಾದಿರಾಜರನ್ನು …….ಎಂದು ಗುರುತಿಸಲಾಗಿದೆ.
ಅ. ಸಾರೂಪ್ಯರು. ಆ. ಲಾತವ್ಯರು
ಇ. ಕಿಂಕರರು. ಈ. ಶೇಷರು