ಶ್ರೀ ಸ್ವರ್ಣವರ್ಣತೀರ್ಥರು
ಆಶ್ರಮನಾಮ – ಶ್ರೀ ಪರಶುರಾಮ ತೀರ್ಥರು
ಆರಾಧನೆ – ಜ್ಯೇಷ್ಠ ಬಹುಳ ಪಂಚಮಿ
ವೃಂದಾವನ – ಶ್ರೀರಂಗಂ
ಆಶ್ರಮ ಕಾಲ – 1400 – 1420 AD
ಆಶ್ರಮ ಗುರುಗಳು – ಶ್ರೀ ಸತ್ಯವ್ರತತೀರ್ಥರು
ಆಶ್ರಮ ಶಿಷ್ಯರು – ಶ್ರೀಪಾದರಾಜರು
ವಸುಧಾತಲ ವಿಖ್ಯಾತಂ | ವೇದಾಂತಾದಿ ಗುಣಾರ್ಣವಂ* |
*ವೇದವೇದಾಂಗ ಚತುರಂ ಸ್ವರ್ಣವರ್ಣ ಗುರುಂಭಜೇ* ||
Sri Parashurama Tirtharu
Aradhana – Jyesta Bahula Chouthi
Vrundavana – Srirangam (TN)
Ashrama Period – 1400 – 1420 AD
Ashrama Gurugalu – Sri Satyavratha Theertharu
Ashrama Shishyaru – Sri Sripadarajaru
वसुधातल विख्यातं वैराग्यादि गुणार्णवं ।
वेदवेदांग चतुरं स्वर्णवर्णगुरुं भजे ॥
*ಶ್ರೀ ಸ್ವರ್ಣವರ್ಣ ತೀರ್ಥರು*
|| *ವಸುಧಾತಲ ವಿಖ್ಯಾತಂ | ವೇದಾಂತಾದಿ ಗುಣಾರ್ಣವಂ* |
*ವೇದವೇದಾಂಗ ಚತುರಂ ಸ್ವರ್ಣವರ್ಣ ಗುರುಂಭಜೇ* ||
ಶ್ರೀ ಪದ್ಮನಾಭತೀರ್ಥರ ಮೂಲ ಪರಂಪರೆಯಲ್ಲಿ ಬರುವ, ಆರನೇ ಪೀಠಾಧಿಪತಿಗಳು, ಶ್ರೀಮದಾಚಾರ್ಯರಿಂದ ಏಳನೇ ಯತಿಗಳು, ತಮ್ಮ ದೇಹದ ತೇಜಸ್ಸಿನಿಂದಲೇ ವೈಶಿಷ್ಟ್ಯವಾದ ಪ್ರಕಾಶಮಾನರಾಗಿ ಸ್ವರ್ಣವರ್ಣದಿಂದ ಗೋಚರಿಸಿದಂತ, ಮತ್ತು ಮಾಧ್ವ ಪರಂಪರೆಗೆ ಶ್ರೀಪಾದರಿಗೆಲ್ಲ ರಾಜರಾದ ಶ್ರೀಪಾದರಾಜರನ್ನು ಕೊಟ್ಟಂತಹ ಮಹನೀಯರಾದ ಶ್ರೀಸ್ವರ್ಣ ವರ್ಣತೀರ್ಥರು. ಸದಾ ಹರಿಚಿಂತನೆ, ಜಪ, ತಪ ಇವರ ದೇಹ ಸ್ವರ್ಣ ಅಂದರೆ ಬಂಗಾರದ ಬಣ್ಣಕ್ಕೆ ತಿರುಗಿತ್ತು. ಆದರಿಂದ ಸ್ವರ್ಣವರ್ಣ ತೀರ್ಥರು ಎಂದೇ ಪ್ರಸಿದ್ಧರಾಗಿದ್ದರು. ಇವರ ಸಮಕಾಲೀನರು ಶ್ರೀ ಬ್ರಹ್ಮಣ್ಯತೀರ್ಥರ ಗುರುಗಳಾದ ಶ್ರೀ ಪುರುಷೋತ್ತಮ ತೀರ್ಥರು.
ಒಮ್ಮೆ ತಮ್ಮ ಸಂಚಾರ ಕ್ರಮದಲ್ಲಿ ಶ್ರೀ ರುಷೋತ್ತಮತೀರ್ಥರ ಭೇಟಿಯಾಗಲು, ಮೇನೆಯಲ್ಲಿ ಕುಳಿತು ಶ್ರೀರಂಗಪಟ್ಟಣದಿಂದ ಅಬ್ಬೂರಿಗೆ ಬರುತ್ತಿದ್ದರು. ಬರುವಾಗ ಸಂಜೆಯಾಗಿತ್ತು. ಅಬ್ಬೂರು ಸಮೀಪವಿತ್ತು. ಅಬ್ಬೂರು ಇನ್ನು ಎಷ್ಟು ದೂರ ಎಂಬುದನ್ನು ತಿಳಿಯಲು, ಸುತ್ತಮುತ್ತ ನೋಡಿದಾಗ ಅಲ್ಲಿ ದನಗಳ ಹಿಂಡನ್ನು, ದನಕಾಯುವ ಹುಡುಗರನ್ನು ನೋಡಿದರು ಮೇನೆಯನ್ನು ನಿಲ್ಲಿಸಿ ಗೋಪಾಲಕರನ್ನು ಕರೆದರು. ಅಗ ಲಕ್ಷ್ಮೀನಾರಾಯಣ ಎನ್ನುವ ಹುಡುಗ ಸ್ವಾಮಿಗಳನ್ನು ನೋಡಿ ಹತ್ತಿರ ಬಂದು ಗುರುಗಳಿಗೆ ನಮಸ್ಕರಿಸಿದರು.ಇನ್ನೂ ಅಬ್ಬೂರು ಎಷ್ಟು ದೂರವಿದೆ ಎನ್ನಲು, ಆ ಹುಡುಗ ಹೇಳುತ್ತಾನೆ “ಸೂರ್ಯ ಮುಳುಗುತಿದ್ದಾನೆ, ಗೋವುಗಳು ಹಿಂತಿರುಗುತ್ತಿವೆ, ಎಂದರೆ ಊರು ಸನಿಹದಲ್ಲೇ ಇದೆ ಅಲ್ಲವೇ ಎಂದು ಕಾವ್ಯಾತ್ಮಕ ಹಾಗು ಚುರುಕುತನದಿಂದ ಉತ್ತರಿಸಿದ. ಆಶ್ಚರ್ಯಗೊಂಡ, ಶ್ರೀ ಸ್ವರ್ಣವರ್ಣತೀರ್ಥರು, ನೀನು ನಮ್ಮೊಂದಿಗೆ ಬರುವೆಯಾ, ಎನಲು, “ನಮ್ಮ ಅಣ್ಣನು ( ಶ್ರೀ ಬ್ರಹ್ಮಣ್ಯ ತೀರ್ಥರು) ಹೀಗೆ ಒಬ್ಬ ಯತಿಗಳಿಂದ ಸನ್ಯಾಸಶ್ರಮ ತೆಗೆದುಕೊಂಡ” ಎಂದು ಹೇಳಿ, ಮನೆಗೆ ಹೋದ. ಗುರುಗಳು ಲಕ್ಷ್ಮೀನಾರಾಯಣನ ವರ್ಚಸ್ಸನ್ನು ಕಂಡು ಇವನೇ ನಮ್ಮ ಉತ್ತರಾಧಿಕಾರಿ ಎಂದು ತಿಳಿದು, ಶ್ರೀಪುರುಷೋತ್ತಮ ತೀರ್ಥರಲ್ಲಿ ವಿಚಾರಿಸಲು, ಶ್ರೀ ಶೇಷಗಿರಿಯಪ್ಪ ಮತ್ತು ಶ್ರೀಮತಿ ಗಿರಿಯಮ್ಮ (ಶ್ರೀಪಾದರಾಜರ ಪೂರ್ವಾಶ್ರಮದ ತಂದೆ ತಾಯಿಗಳು) ಅವರನ್ನು ಕರೆಸಿ, ಅವರಲ್ಲಿ ಸನ್ಯಾಸಾಶ್ರಮದ ಬಗ್ಗೆ ತಿಳಿಸಲು, ದೈವವಶಾತ್ ಅವರು ಒಪ್ಪಿಗೆ ಸೂಚಿಸಿದರು, ಮುಂದೆ ಶ್ರೀ ಸ್ವರ್ಣವರ್ಣ ತೀರ್ಥರು ಲಕ್ಷ್ಮೀನಾರಾಯಣನಿಗೆ ಆಶ್ರಮ ಕೊಟ್ಟು ಶ್ರೀ “ಲಕ್ಷ್ಮೀ ನಾರಾಯಣ ತೀರ್ಥರು” ಎಂಬ ನಾಮಕರಣ ಮಾಡಿದರು.
ಇವರ ವೃಂದಾವನದಲ್ಲಿ ಪಟ್ಟದ ದೇವರಾದ ಶ್ರೀ ಗೋಪಿನಾಥ ದೇವರು, ಗಜಲಕ್ಷ್ಮಿ ಮತ್ತು ತುಳಸಿಮಣಿ ಹಿಡಿದಿರುವ ಶ್ರೀ ಸ್ವರ್ಣವರ್ಣತೀರ್ಥರ ವಿಗ್ರಹ ಕೆತ್ತಿದ್ದಾರೆ. ಮುಂದೆ ಶ್ರೀ ವ್ಯಾಸರಾಜರು ನರಸಿಂಹತೀರ್ಥದಲ್ಲಿರುವ ಶ್ರೀ ಮುಖ್ಯಪ್ರಾಣ ದೇವರ ವಿಗ್ರಹದ ಪ್ರತಿಕೃತಿಯನ್ನು ಇಲ್ಲಿ ಪ್ರತಿಷ್ಟಿಸಿದ್ದಾರೆ.
Click for PDF file on Sri Swarnavarna Tirtharu
His real name is Parashurama Tirtharu. He was regularly doing Srihari Chintane and was busy with japa tapa. As such, his body was shining like gold. That is why he was called as Swarnavarna Tirtharu.
He helped the kings in solving the problems faced by them
Once he went to see Sri Purushottama Tirtharu, the mathadipathi of Abboor Matha in a pallakki. On his way, he saw a 8 years old boy who was grazing the cows. Swrnavarna Tirtharu asked the boy as to “How long is the distance to Abboor”. The boy replied “See the western side, see sun, see us, the cows are returning home. You can know how long is the distance.” Even though boy didn’t tell the exact distance to Abbur, the way the boy answered impressed the swamiji. The reply was an indication that the Abbur was not far way.
Swamiji met Sri Purushottama Tirtharu and enquired the swamiji about the boy. The boy was none other than Sri Lakshminarayana Muni who subsequently, took ashrama from Swarnavarna Tirtharu and later got the title “Sripadarajaru”
He is the seventh pontiff after Sri Acharya Madhwa.
Address of Mutt : Sri Sripadaraja Mutt, Srirangam Branch Sri Swarnavarna Tirtha Vrundavana Sannidhi No.48, South Chittirai Street Srirangam (TN) Ph – 0431 2431344