Quiz on Hanumajjayanti
ಬ್ರಹ್ಮಣಿಪುರದಲ್ಲಿ ಬ್ರಹ್ಮಣ್ಯತೀರ್ಥ ಪ್ರತಿಷ್ಠಿತ ಪ್ರಾಣದೇವರು
1. ಹನುಮಂತ ದೇವರ ಅವತಾರದಲ್ಲಿ ಅವರ ತಂದೆ ಯಾರು ?
ಅ. ಕೇಸರಿ. ಆ. ರಾಮ. ಇ. ಶಿವ
2. ಹನುಮಂತ ಶಬ್ದಾರ್ಥವೇನು?
ಅ. ಕೋತಿ. ಆ. ಹಾರಾಡುವವ. ಇ. ಜ್ಞಾನ
3. ಹನುಮಂತನನ್ನು ರಾಮ ಕಂಡಿದ್ದು ಎಲ್ಲಿ?
ಅ. ಋಷ್ಯಶೃಂಗ. ಆ. ಋಷ್ಯಮೂಕ. ಇ. ಕಿಂಪುರುಷ
4. ಹನುಮಂತನ ತಾಯಿ ಯಾರು?
ಅ. ಅಂಜಲಿ. ಆ. ಅಂಜನಾ. ಇ. ಕೇಸರಿ
5. ಹನುಮಂತನು ಯಾರ ಅವತಾರ ?
ಅ. ಇಂದ್ರ. ಆ. ಶಿವ. ಇ. ವಾಯು
6. ವಾಯುದೇವರ ಅವತಾರ ಕಾಲದಲ್ಲಿ ಅವರ ಮೂಲ ರೂಪದ ಶಕ್ತಿ ಎಷ್ಟಿರುತ್ತದೆ?
ಅ. 37ರಷ್ಟು. ಆ. 72ರಷ್ಟು. ಇ, 100ರಷ್ಟು
7. ಜನಿಸಿದ ಸ್ವಲ್ಪ ದಿನಗಳಲ್ಲೇ ಹನುಮಂತನು ಎಲ್ಲಿಗೆ ಹಾರಿದ?
ಅ. ನದಿಗೆ. ಆ. ಆಕಾಶಕ್ಕೆ. ಇ. ಮರಕ್ಕೆ
8. ಹನುಮಂತನ ಅವತಾರ ದಿನ ಯಾವುದು?
ಅ. ಮಾರ್ಗಶಿರ ಶುದ್ಧ ತ್ರಯೋದಶಿ. ಆ. ಚೈತ್ರ ಹುಣ್ಣಿಮೆ
ಇ. ಚೈತ್ರ ಅಮಾವಾಸ್ಯೆ.
9. ರಾಹುವನ್ನು ಹಿಡಿಯ ಹೊರಟ ಹನುಮಂತನಿಗೆ ಇಂದ್ರ ಯಾವ ಆಯುಧ ಪ್ರಯೋಗಿಸಿದ.?
ಅ. ಹಲಾಯುಧ. ಆ. ಶಕ್ತ್ಯಾಯುಧ ಇ. ವಜ್ರಾಯುಧ
10. ಹನುಮಂತ ಯಾರು ಬಳಿ ವ್ಯಾಕರಣ ಕಲಿತ?
ಅ. ಸೂರ್ಯ. ಆ. ವಾಯು. ಇ. ಸರಸ್ವತಿ
11. ಹನುಮಂತನ ಪಡೆಯಲು ಅವನ ತಾಯಿ ಎಷ್ಟು ವರ್ಷ ತಪಸ್ಸು ಮಾಡಿದಳು.
ಅ. 12. ಆ. 21. ಇ . 6
12. ಅಂಜನೆಯು ಯಾರ ಆದೇಶದಂತೆ ಪುತ್ರಪ್ರಾಪ್ತಿಗಾಗಿ ತಪಸ್ಸು ಮಾಡಿದಳು.?
ಅ. ವಾಲ್ಮೀಕಿ. ಆ. ಅಗಸ್ತ್ಯರು. ಇ. ಮತಂಗರು
13. ರಾಮನು ಹನುಮಂತನ ಬಗ್ಗೆ ಪ್ರಶಂಸೆ ಮಾಡಿದ್ದು ಯಾವುದರ ಕುರಿತು?
ಅ. ರೂಪ. ಆ. ಭಕ್ತಿ. ಇ. ಅಪಶಬ್ದರಹಿತ ಮಾತು
14. ಹನುಮಂತನು ಸುಗ್ರೀವನ ಬಳಿ ರಾಮಲಕ್ಷ್ಮಣರನ್ನು ಹೇಗೆ ಕರೆದೊಯ್ದನು?
ಅ. ರಥರಲ್ಲಿ. ಆ. ತನ್ನ ಭುಜದಲ್ಲಿ. ಇ. ವಿಮಾನದಲ್ಲಿ
15. ಸೀತೆಯು ಎಸೆದಿದ್ದ ಆಭರಣ ಯಾರ ಬಳಿ ಇತ್ತು?
ಅ ಹನುಮಂತ. ಆ ವಾಲಿ. ಇ. ಸುಗ್ರೀವ
16. ಹನುಮಾವತಾರ ವರ್ಣನೆ ಯಾವ ಕಾಂಡದಲ್ಲಿದೆ?
ಅ. ಅರಣ್ಯಕಾಂಡ. ಆ. ಕಿಷ್ಕಿಂಧಾಕಾಂಡ. ಇ ಸುಂದರಕಾಂಡ
17. ಹನುಮಂತನ ಹೆಚ್ಚು ವರ್ಣನೆ ಯಾವ ಕಾಂಡದಲ್ಲಿದೆ?
ಅ . ಕಿಷ್ಕಿಂಧಾಕಾಂಡ. ಆ. ಸುಂದರಕಾಂಡ ಇ. ಯುದ್ಧ ಕಾಂಡ
18. ಸುಗ್ರೀವ ವಾಲಿ ಯುದ್ಧದಲ್ಲಿ ಸುಗ್ರೀವನಿಗೆ ಹನುಮನು ಹಾಕಿದ ಹಾರ ಯಾವುದು?
ಅ. ಗಜಪುಷ್ಪ. ಆ. ಮಲ್ಲಿಗೆ. ಇ. ಸಂಪಿಗೆ
19. ಹನುಮಂತನನ್ನು ಸುಗ್ರೀವನು ಯಾವ ದಿಕ್ಕಿಗೆ ಹೋಗಲು ಹೇಳಿದನು?
ಅ. ಪೂರ್ವ. ಆ. ಪಶ್ಚಿಮ. ಇ. ದಕ್ಷಿಣ
20. ಹನುಮಂತನಿಗೆ ರಾಮನು ಸೀತೆಗೆ ಕೊಡಲು ಏನನ್ನು ಕೊಟ್ಟನು?
ಅ. ಚೂಡಾಮಣಿ. ಆ. ಅಂಗುಲೀಯಕ ಇ. ಉಡ್ಯಾಣ
21. ಹನುಮಂತನಿಂದ ಮುಷ್ಠಿ ಪ್ರಹಾರ ಯಾರಿಗಾಯಿತು?
ಅ. ವಾಲಿ ಆ ರಾವಣ. ಇ. ಅಕ್ಷಯಕುಮಾರ
22. ಲಂಕೆಯ ಯುದ್ಧದಲ್ಲಿ ಅಧ್ವರ್ಯು ಯಾರು?
ಅ. ಹನುಮಾನ್. ಆ. ಸುಗ್ರೀವ. ಇ. ರಾಮ
23. ರಾಮಚಂದ್ರನ ಪೂಜೆಗೆ ತರುವ ಪುಷ್ಪಕ್ಕಿಂತ ಸಂಜೀವನ ಪರ್ವತ ತರುವುದು ಸುಲಭವೆಂದಿನಿಸಿದ್ದೇಕೆ?
ಅ. ಪುಷ್ಪದ ವಾಸನೆ ಆಘ್ರಾಣ , ಮೈಗೆ ಸೋಕಿಸದೆ ತರುವುದು ಕಠಿಣ
ಆ. ಪರ್ವತ ಬಹಳ ದೂರವಿತ್ತು. ಇ. ಹೂವು ಬಾಡಿರುತ್ತಿತ್ತು
24. ಸಂಜೀವನ ಪರ್ವತದ ಎತ್ತರವೆಷ್ಟು?
ಅ.1007 ಯೋಜನೆ. ಆ. 100 ಯೋಜನೆ. ಇ. 58 ಯೋಜನ
25.. ಹನುಮಂತನು ಸಂಜೀವನ ಪರ್ವತವನ್ನು ಮತ್ತೆ ಇಟ್ಟ ಪರಿ ಹೇಗಿತ್ತು?
ಅ. ಅಲ್ಲಿಗೇ ಹೋಗಿ ಇಟ್ಟು ಬಂದರು
ಆ. ನಿಂತ ಸ್ಥಳದಿಂದಲೇ ಅದನ್ನು ಅಲ್ಲಿಗೇ ಎಸೆದರು
ಇ. ಬೇರೆ ಮಂಗಗಳ ಸಹಾಯದಿಂದ ಅದನ್ನು ಅಲ್ಲಿ ಕಳುಹಿಸಿದ
26. .ರಾಮನು ರಾವಣನ ಸಂಹಾರ ನಂತರ ಹನುಮನಿಗೆ ಕೊಟ್ಟಿದ್ದೇನು ಅ. ಮೋಕ್ಷ. ಆ. ಸಾಯುಜ್ಯ. ಇ. ಸಹಭೋಗ
27. ಹನುಮಂತನು ರಾಮನಲ್ಲಿ ಏನನ್ನು ಅಪೇಕ್ಷಿಸಿದನು ?
ಅ. ವಿರಕ್ತಿ. ಆ. ಭಕ್ತಿ. ಇ. ಮದುವೆ
28.. ಶ್ರೀ ರಾಮನು ಮೂಲರೂಪಕ್ಕೆ ಹೋದ ಮೇಲೆ ಹನುಮಂತ ಎಲ್ಲಿಗೆ ಹೋದನು?
ಆ. ಕಿಂಪುರುಷ ಖಂಡದಲ್ಲಿರುವನು. ಆ. ರಾಮನೊಂದಿಗೆ ಹೊರಟನು. ಇ. ಬದರೀಕಾಶ್ರಮದಲ್ಲಿರುವನು