ಧನುರ್ಮಾಸ
17.12.2024 ರಿಂದ 13.1.2025ರವರೆಗೆ
ಸೂರ್ಯನು ಧನುರಾಶಿಗೆ ಪ್ರವೇಶಿಸುವ ಕಾಲವನ್ನು ಧನುರ್ಮಾಸ ಎನ್ನುತ್ತಾರೆ. ಒಟ್ಟು ರಾಶಿಗಳ ಸಂಖ್ಯೆ 12. ಧನುರಾಶಿಯು 9ನೇಯದು. ಸೂರ್ಯನು ಧನುರಾಶಿಯನ್ನು ಪ್ರವೇಶಿಸಿ, ಅಲ್ಲಿದ ಬಿಡುವವರೆಗೆ ಅಂದರೆ ಮಕರ ರಾಶಿಯನ್ನು ಸೇರುವವರೆಗೂ ಧನುರ್ಮಾಸ ಆಚರಿಸಲಾಗುತ್ತದೆ. ಯಾವ ಸಮಯದಲ್ಲಿ ಸೂರ್ಯನು ಧನುರಾಶಿಯನ್ನು ಪ್ರವೇಶಿಸುತ್ತಾನೋ ನಂತರವೇ ಧನುರ್ಮಾಸ ಆಚರಣೆ ಮಾಡಬೇಕಾಗುತ್ತದೆ. ಉದಾಹರಣೆಗೆ ಸೂರ್ಯನು ಬೆಳಿಗ್ಗೆಯಿಂದಲೇ ಧನುರಾಶಿಯನ್ನು ಪ್ರವೇಶಿಸಿದರೆ, ಅಂದೇ ಧನುರ್ಮಾಸ ಆರಂಭವಾಗುತ್ತದೆ. ಆದರೆ ಕೆಲವು ಸಮಯ ಸೂರ್ಯನು ಮಧ್ಯಾಹ್ನದ ನಂತರ ಪ್ರವೇಶಿಸುತ್ತಾನೆ ಅಂತಹ ಸಂದರ್ಭದಲ್ಲಿ ಮಾರನೇ ದಿನ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಈ ಕಾಲವು ಡಿಸೆಂಬರ್ ಮಾಹೆಯ 16 ಅಥವ 17ರಂದು ಕಂಡು ಜನವರಿ ಮಾಹೆಯ 14 ಅಥವಾ 15ರಂದು ಉತ್ತರಾಯಣ ಆರಂಭದೊಂದಿಗೆ ಸಮಾಪ್ತವಾಗುತ್ತದೆ.
ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ. ಉತ್ತರಾಯಣವು ಹಗಲಾಗಿದೆ. ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವೆನಿಸಿದೆ. ಶ್ರೀಹರಿಯ ಪೂಜೆಗೆ ವಿಶೇಷ ಕಾಲವೆನಿಸಿದೆ.
ಧನುರ್ಮಾಸದ ನಿಯಮಗಳು :
ತಸ್ಮಾತ್ ಸರ್ವಪ್ರಯತ್ನೇನ ಚಾಪಮಾಸೇ ದಿನೆ ದಿನೆ |
ಉಷ:ಕಲೆ ತು ಸಂಪ್ರಾಪ್ತೇ ಅರ್ಚಯಿತ್ವಾ ಜನಾರ್ಧನಂ|
ಉಪಚಾರೈ: ಷೋಡಶೀಭಿರ್ಮುದ್ಗಾನ್ನಂ ಚ ನಿವೇದಯೇತ್ |
ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇಲ್ಪದ್ವಾದಶೀದಿನೇ |
ತಥಾ ಪ್ರಾತರ್ಧನುರ್ಮಾಸೇ ತ್ಯಕ್ತಾ ವ ಕರ್ಮಾಣ್ಯರ್ಚಯೇಚ್ಚಮಾಮ್ |
ಅ. ಉಷ:ಕಾಲದಲ್ಲೇ ಏಳಬೇಕು.
ಆ. ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಹೊತ್ತಿಗೆ ಮಾಡಿದ ಪೂಜೆ ಶ್ರೇಷ್ಠ. ನಂತರ ಮಧ್ಯಮ. ಸೂರ್ಯೋದಯಾನಂತರ ಅಧಮ, ನಿಷ್ಫಲ. (ಕೃಷ್ಣಾಚಾರ್ಯ ಸ್ಮೃತಿಮುಕ್ತಾವಲಿ)
ಇ. ಪ್ರತಿನಿತ್ಯ ದೇವರಿಗೆ ಮುದ್ಗಾನ್ನ ನೈವೇದ್ಯ ಸಮರ್ಪಿಸಬೇಕು.
ಈ. ಪಾರಾಯಣಾದಿಗಳನ್ನು ನೈವೇದ್ಯ ನಂತರ ಕೂಡ ಮಾಡಬಹುದು.
ಉ. ಎಲ್ಲಾ ಅಡುಗೆ ನೈವೇದ್ಯಕ್ಕೆ ಸಿದ್ಧ ಮಾಡಲಾಗದಿದ್ದರೂ ಕನಿಷ್ಠ ಮುದ್ಗಾನ್ನ ನೈವೇದ್ಯವನ್ನಾದರೂ ಮಾಡಬೇಕು. ಉಳಿದದ್ದನ್ನು ನಂತರ ನೈವೇದ್ಯ ಮಾಡಬಹುದು
ಊ. ಸಂಧ್ಯಾವಂದನ, ನಿತ್ಯಾಹ್ನಿಕವನ್ನು ಪೂಜಾನಂತರ ಮಾಡಿದರೂ ದೋಷವಿಲ್ಲ
ಋ. ಧನುರ್ಮಾಸದಲ್ಲಿ ಬ್ರಹ್ಮಯಜ್ಞ, ಶ್ರಾದ್ಧಾದಿ ಪಿತೃಕಾರ್ಯಗಳನ್ನೂ ಸೂರ್ಯೋದಯ ನಂತರ ಕೂಡ
ಪೂರೈಸಬಹುದು.
ಎ. ಸೂರ್ಯೋದಯಕ್ಕಿಂತ ಮುನ್ನ ಯಾವ ಕಾಲದಲ್ಲೂ ಭೋಜನ ನಿಷಿದ್ಧ. ಆದ್ದರಿಂದ ಧನುರ್ಮಾಸದಲ್ಲೂ ನಿಷಿದ್ಧವಾಗಿದೆ.
ಧನುರ್ಮಾಸ ಆಚರಣೆಯಿಂದ ಪ್ರಾಪ್ತಿ :
ದಧ್ಯಾರ್ದಕಂ ಚ ಮುದ್ಗಾನ್ನಂ ದದ್ಯಾಚ್ಚೈಲಾಗುಡೋಜ್ಜ್ವಲಂ |
ಸುಸುಖೋಷ್ಣಂ ಸಕಂದಂ ಚ ವಿಷ್ಣವೇ ಯ: ಸಮರ್ಪಯೇತ್|
ದೃಷ್ಟ್ವಾ ತಚ್ಚುಭಮುದ್ಗಾನ್ನಂ ಸಂತುಷ್ಟೋ ಭಕ್ತವತ್ಸಲ: |
ದದಾತಿ ಸಕಲಾನ್ ಭೋಗಾನ್ ಮೋಕ್ಷಂ ಚ ಜಗದೀಶ್ವರ: |
ಧನುರ್ಮಾಸದಲ್ಲಿನ ಮುದ್ಗಾನ್ನ ನಿವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಪಾತ್ರ ವಾದುದು, ಇದರಿಂದ ಶತ್ರುಗಳು ನಶಿಸುವರು, ದೀರ್ಘಾಯಸ್ಸು ಪಡೆಯುವರು. ಧನಧಾನ್ಯ ಸಂಪತ್ತು ಭರಿತವಾಗುವುದು. ವೇದಶಾಸ್ತ್ರಾಭ್ಯಾಸ, ಎಲ್ಲಕ್ಕೂ ಸಾಧನವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಪ್ರತಿಜನ್ಮದಲ್ಲೂ ವೈಷ್ಣವನಾಗಿಯೇ ಜನಿಸುವ ಮಹಾಭಾಗ್ಯ ಲಭ್ಯವಾಗುವುದು.
ಸೂರ್ಯೋದಯಕ್ಕಿಂತ ಮುಂಚಿತವಾಗಿ ಮುದ್ಗಾನ್ನ ನಿವೇದಿಸಬೇಕು. ಆದರೆ ನಾವು ಭೋಜನವನ್ನು ಸೂರ್ಯೋದಯ ನಂತರವೇ ಮಾಡಬೇಕು. ಯಾವುದೇ ಸಂದರ್ಭದಲ್ಲೂ ಸೂರ್ಯೋದಯಕ್ಕಿಂತ ಮುಂಚಿತ ಭೋಜನ ಕೂಡದು.
ನಿಷೇಧ – ಉಪನಯನ, ಗೃಹಪ್ರವೇಶ, ಮದುವೆ ಮುಂತಾದವು ನಿಷೇಧ ಈ ಕಾಲದಲ್ಲಿ. ಆದರೆ ನಾಮಕರಣ (ಹುಟ್ಟಿದ ಹನ್ನೊಂದನೇ ದಿನ, ಹದಿನಾರನೇ ದಿನ ಬಂದರೆ ಮಾಡಬಹುದು)
ಧನುರ್ಮಾಸ ಆಚರಿಸದಿದ್ದರೆ ಹಾನಿ : ದಾರಿದ್ರ್ಯಬುದ್ಧಿಯಿಂದಾಗಿ ಅವನಿಗೆ ಮುಂದಿನ ಏಳು ಜನುಮಗಳಲ್ಲೂ ದಾರಿದ್ರ್ಯ, ಕ್ಷಯರೋಗಗಳೂ ಮಂದಬುದ್ಧಿಯೂ ಬರುತ್ತದೆ. (ಆಗ್ನೇಯ ಪುರಾಣ ವಾಕ್ಯ)
ಮುದ್ಗಾನ್ನದಲ್ಲಿ ಅಕ್ಕಿ ಹೆಸರುಬೇಳೆಗಳ ಪ್ರಮಾಣ –
ಮುದ್ಗಂ ತಂಡುಲಮಾನಂ ಸ್ಯಾದ್ಯುತ್ತಮೋತ್ತಮಮುಚ್ಯತೇ |
ಮಧ್ಯಮಂ ತಂಡುಲಾದರ್ಧಂ ತದರ್ಧಮಧಮಂ ಭವೇತ್|
ಮುದ್ಗಂ ತು ದ್ವಿಗುಣಂ ಕೇಚಿತ್ ಪ್ರಶಂಸಂತಿ ಮುನೀಶ್ವರಾ: |
ಯಥಾಬಲಂ ಪ್ರಕುರ್ವೀತ ನ ಹೀಯೇತ್ತಂಡುಲಾರ್ಧತ: |
ಅಕ್ಕಿ ಮತ್ತು ಹೆಸರುಬೇಳೆ ಸಮ ಪ್ರಮಾಣದಲ್ಲಿ ಸೇರಿಸಿ ಮಾಡುವುದು ಅತ್ಯುತ್ತಮ.
ಅಕ್ಕಿಯ ಪ್ರಮಾಣದ ಅರ್ಧದಷ್ಟು ಹೆಸರು ಬೇಳೆ ಸೇರಿಸಿ ಮಾಡುವುದು ಮಧ್ಯಮ.
ಅಕ್ಕಿಯ ಪ್ರಮಾಣಕ್ಕಿಂತ ಕಾಲುಭಾಗ ಹೆಸರುಬೇಳೆ ಸೇರಿಸಿ ಮಾಡುವುದು ಅಧಮ.
ಹುಗ್ಗಿಯಲ್ಲಿ ಉಪಯೋಗಿಸಬೇಕಾದ ವಸ್ತುಗಳು –
ಹೆಸರುಬೇಳೆ, ಅಕ್ಕಿ, ಬೆಲ್ಲ, ಶುಂಠಿ, ಏಲಕ್ಕಿ, ತುಪ್ಪ,
ಹುಗ್ಗಿಯ ಜೊತೆಗೆ ಹುಣಿಸೇ ಗೊಜ್ಜು, ಬೆಲ್ಲ, ಸಕ್ಕರೆ, ಬೆಣ್ಣೆ ಉಪಯೋಗಿಸುವ ಸಂಪ್ರದಾಯವಿದೆ.
ಧನುರ್ಮಾಸದಲ್ಲಿ ಪ್ರಾರ್ಥನ –
ವಿಷ್ಣುಪ್ರಿಯ ವ್ಯತೀಪಾತ ಪಿತೃಣಾಮನೃಣಪ್ರದ |
ಪಿತೃಣಾಂ ಮಮ ವೈಕುಂಠಂ ಪ್ರಯಚ್ಚ ಭಗವಾನ್ ಹರೇ |
ತ್ವತ್ಪ್ರಸಾದೇನ ಮೇ ಭಕ್ತಿರಸ್ತ್ವೇವಮನಪಾಯಿನೀ |
ಜ್ಞಾನವಿಜ್ಞಾನವೈರಾಗ್ಯಂ ಪ್ರಯಚ್ಚ ಭಗವನ್ ಮಮ |
ಅನೇನ ಧನುರ್ವ್ಯತೀಪಾತಪೂಜಾರ್ಘ್ಯ ತಿಲ ತರ್ಪಣಾದಿಕರ್ಮಕರಣೇನ ವಿಷ್ಣುಚಕ್ರಾಂತ:ಸ್ಥಿತಸುದರ್ಶನಾತ್ಮಕ ಸಂಕರ್ಷಣರೂಪಿ ಪರಮಾತ್ಮಾ ಪ್ರಿಯತಾಂ |
ಧನುರ್ವ್ಯತೀಪಾತ ಯೋಗ – ವ್ಯತೀಪಾತವೆಂಬುದು ಒಂದು ವಿಶೇಷ ಯೋಗವಾಗಿದ್ದು, ಚಂದ್ರ ಸೂರ್ಯರು ಪರಸ್ಪರ ಒಬ್ಬರ ಮೇಲೊಬ್ಬರ ದೃಷ್ಠಿ ಬಿದ್ದ ಪರಿಣಾಮ ಕೋಪದ ಸಂಪಾತದಿಂದ ಒಬ್ಬ ಭಯಂಕರವಾದ ಪ್ರಲಯಾಗ್ನಿ ಸದೃಶನಾದ ಒಬ್ಬ ವ್ಯಕ್ತಿ ಜನಿಸಿದನು – ಅವನೇ “ವ್ಯತೀಪಾತ”.
ಧನುರ್ಮಾಸದಲ್ಲಿ ವ್ಯತೀಪಾತಯೋಗವು ಸಹಸ್ರ ಅರ್ಧೋದಕಕ್ಕೆ ಸಮಾನ. ಈ ದಿನ ಪಿತೃ ತರ್ಪಣವನ್ನು ಕೊಡಬೇಕು. ಮೇಷದಲ್ಲಿ ರವಿಯಿದ್ದು, ಸಿಂಹರಾಶಿಯಲ್ಲಿ ಗುರು ಹಾಗೂ ಕುಜರಿದ್ದು. ಹಾಗೂ ಶುಕ್ಲಪಕ್ಷ ದ್ವಾದಶಿಯಲ್ಲಿ ಹಸ್ತಾ ನಕ್ಷತ್ರವಿದ್ದರೂ ವ್ಯತೀಪಾತ ಯೋಗವೆನಿಸುವುದು.
ವ್ಯತೀಪಾತ ಎನ್ನುವವನು 17ನೇ ಅಧಿಪತಿ. ಸೂರ್ಯಚಂದ್ರರ ಅನುಗ್ರಹದಿಂದ ಈ ದಿನ ಅಂದರೆ ಈ ಯೋಗವಿದ್ದಾಗ ವಿಶೇಷ ಫಲವಿದೆ. ಯಾರು ಸ್ನಾನ-ದಾನಾದಿಗಳನ್ನು ಈ ದಿನ ಮಾಡುವರು ಬೇರೆ ಎಲ್ಲದಕ್ಕಿಂತ ಹೆಚ್ಚು ಫಲಕಾರಿ. ಸೂರ್ಯಚಂದ್ರಾದಿಗಳು ವ್ಯತೀಪಾತ ಯೋಗವನ್ನು ಇಪ್ಪತ್ತೇಳು ಯೋಗಗಳಲ್ಲಿ ಹದಿನೇಳನೇ ಅಧಿಪತಿಯನ್ನಾಗಿ ಮಾಡಿ, ನಿನ್ನ ದಿನದಲ್ಲಿ ಯಾರು ಸ್ನಾನ ದಾನಾದಿಗಳನ್ನು ಮಾಡುವರೋ ಅವರ ದಾನಾದಿಗಳೆಲ್ಲ ಕೋಟಿಪಟ್ಟು ವೃದ್ಧಿಸುವುವು ಎಂದು ವರವಿತ್ತರು. “ಅಸಂಖ್ಯೇಯಂ ವ್ಯತಿಪಾತೇ ದಾನಂ ವೇದವಿದೋ ವಿದುಃ “
shrI lakShmI dwaadashanaama stOtra
click the above link
ಲಕ್ಷ್ಮೀ ದ್ವಾದಶ ನಾಮ ಸ್ತೊತ್ರಂ :
ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮೃತೋದ್ಭವಾ |
ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಸರ್ವಸುಂದರೀ | ೧ |
ಪಂಚಮಂ ದೇವಗರ್ಭಾ ಚ ಷಷ್ಟಂ ಚ ಮಧುಸೂದನೀ |
ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ | ೨ |
ನವಮಂ ಶಾಂರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವತಾ |
ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ |೩ |
ಏತದ್ವಾದಶ ನಾಮಾನಿ ತ್ರಿಸಂಧ್ಯಂ ಯ: ಪಠೇನ್ನರ: |
ಆಯುರಾರೋಗ್ಯಮೈಶ್ವರ್ಯಮತಿಪುಣ್ಯಫಲಪ್ರದಂ | ೪ |
ದ್ವಿಮಾಸಂ ಸರ್ವಕಾರ್ಯಾಣಿ ಷಣ್ಮಾಸಾದ್ರಾಜ್ಯಮೇವ ಚ |
ಸಂವತ್ಸರಂ ತು ಪೂಜಾಯಾ: ಶ್ರೀಲಕ್ಷ್ಮ್ಯಾಯ: ಪೂಜ್ಯ ಏವ ಚ| ೫ |
ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ |
ದಾಸೀಭೂತಸಮಸ್ತದೇವವನಿತಾಂ ಲೋಕೈಕದೀಪಾಂಕುರಂ |೬ |
ಶ್ರೀಮನ್ಮಂದಕಟಾಕ್ಷಲಬ್ಧವಿಭವ ಬ್ರಹ್ಮೇಂದ್ರಗಂಗಾಧರಾಂ
ತಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ|೭|
|| ಇತಿ ಯುಧಿಷ್ಟಿರಂ ಪ್ರತಿ ನಾರದವಚನಂ (ಸ್ಮೃತಿಮುಕ್ತಾವಲಿ) ||
लक्ष्मी द्वादश नाम स्तॊत्रं :
श्रीदेवी प्रथमं नाम द्वितीयमृतोद्भवा ।
तृतीयं कमला प्रोक्ता चतुर्थं सर्वसुंदरी । १ ।
पंचमं देवगर्भा च षष्टं च मधुसूदनी ।
सप्तमं तु वरारोहा अष्टमं हरिवल्लभा । २ ।
नवमं शांघनी प्रोक्ता दशमं देवदेवता ।
एकादशं तु लक्ष्मी: स्यात् द्वादशं त्विंदिरा भवेत्।३ ।
एतद्वादश नामानि त्रिसंध्यं य: पठेन्नर: ।
आयुरारोग्यमैश्वर्यमतिपुण्यफलप्रदं । ४ ।
द्विमासं सर्वकार्याणि षण्मासाद्राज्यमेव च ।
संवत्सरं तु पूजाया: श्रीलक्ष्म्याय: पूज्य एव च। ५ ।
लक्ष्मीं क्षीरसमुद्रराजतनयां श्रीरंगधामेश्वरीं ।
दासीभूतसमस्तदेववनितां लोकैकदीपांकुरं ।६ ।
श्रीमन्मंदकटाक्षलब्धविभव ब्रह्मेंद्रगंगाधरां
तां त्रैलोक्यकुटुंबिनीं सरसिजां वंदे मुकुंदप्रियां।७।
॥ इति युधिष्टिरं प्रति नारदवचनं (स्मृतिमुक्तावलि) ॥
lakShmI dwaadasha naama stotraM :
shrIdEvI prathamaM naama dvitIyamRutOdbhavaa |
tRutIyaM kamalaa prOktaa chaturthaM sarvasuMdarI | 1 |
paMchamaM dEvagarbhaa cha ShaShTaM cha madhusUdanI |
saptamaM tu varaarOhaa aShTamaM harivallabhaa | 2 |
navamaM shaaMGanI prOktaa dashamaM dEvadEvataa |
EkaadashaM tu lakShmI: syaat dvaadashaM tviMdiraa bhavEt|3 |
Etadvaadasha naamaani trisaMdhyaM ya: paThEnnara: |
AyuraarOgyamaishvaryamatipuNyaphalapradaM | 4 |
dvimaasaM sarvakaaryaaNi ShaNmaasaadraajyamEva cha |
saMvatsaraM tu pUjaayaa: shrIlakShmyaaya: pUjya Eva cha| 5 |
lakShmIM kShIrasamudraraajatanayaaM shrIraMgadhaamEshvarIM |
daasIbhUtasamastadEvavanitaaM lOkaikadIpaaMkuraM |6 |
shrImanmaMdakaTaakShalabdhavibhava brahmEMdragaMgaadharaaM
taaM trailOkyakuTuMbinIM sarasijaaM vaMdE mukuMdapriyaaM|7|
|| iti yudhiShTiraM prati naaradavachanaM (smRutimuktaavali) ||
ಶ್ರೀ ಲಕ್ಷ್ಮೀದ್ವಾದಶನಾಮಾವಳೀ –
ಶ್ರೀ ದೇವ್ಯೈ ನಮ: | ಅಮೃತೋದ್ಭವಾಯೈ ನಮ: | ಕಮಲಾಯೈ ನಮ: | ಲೋಕಸುಂದರ್ಯೈ ನಮ: |
ವಿಷ್ಣುಪತ್ನೈ ನಮ: | ಶ್ರೀ ವೈಷ್ಣವೈ ನಮ: | ವರಾರೋಹಾಯೈ ನಮ: | ಹರಿವಲ್ಲಭಾಯೈ ನಮ: |
ಶಾಂರ್ಙ್ಗಣ್ಯೈ ನಮ: | ಮಹಾಲಕ್ಷ್ಮೈ ನಮ: | ತ್ರಿಲೋಕಸುಂದರ್ಯೈ ನಮ:| ದೇವಗರ್ಭಾಯೈ ನಮ: |
ಭದ್ರಲಕ್ಷ್ಮೀ ಸ್ತೋತ್ರ :
ಶ್ರೀ – ಪದ್ಮಾ – ಕಮಲಾ – ಮುಕುಂದಮಹಿಷೀ -ಲಕ್ಷ್ಮೀ: ತ್ರಿಲೋಕೇಶ್ವರಿ |
ಮಾ- ಕ್ಷೀರಾಬ್ಧಿಸುತಾರವಿಂದಜನನೀ, ವಿದ್ಯಾ – ಸರೋಜಾತ್ಮಿಕಾ |
ಸರ್ವಾಭೀಷ್ಟ ಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |
ಪ್ರಾತ: ಶುದ್ಭತರಾ: ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ ||
.
ಧನುರ್ವ್ಯತೀಪಾತ / ಧನುರ್ವೈಧೃತಿ ಸಂಕಲ್ಪ :
ಆಚಮನ, ಕೇಶವಾಯ ಸ್ವಾಹಾ………… ಪ್ರಣವಸ್ಯ…………………. ಧನುರ್ಮಾಸ ನಿಮಾಯಕ ಸಂಕರ್ಷಣ ಪ್ರೇರಣಯಾ ಸಂಕರ್ಷಣ ಪ್ರೀತ್ಯರ್ಥಂ ಧನುರ್ವ್ಯತೀಪಾತ (ಧನುರ್ವೈಧೃತಿ) ಪರ್ವಕಾಲೇ ಪಿತೃತರ್ಪಣಾಖ್ಯಂ ಕರ್ಮ ಕರ್ತುಂ ಆದೌ ವ್ಯತೀಪಾತಾರ್ಘ್ಯ ದಾನಂ ಕರಿಷ್ಯೇ | ವ್ಯತೀಪಾತ (ವೈಧೃತಿ) ಮಹಾಸತ್ವ ಸರ್ವಪಾಪಪ್ರಣಾಶನ |ಸಹಸ್ರಬಾಹೋ ವಿಶ್ವಾತ್ಮನ್ ಗೃಹಾಣಾರ್ಘ್ಯಂ ನಮೋಽಸ್ತು ತೇ | ವ್ಯತೀಪಾತ ನಮಸ್ತೇಽಸ್ತು ನಮಸ್ತೇ ವಿಶ್ವಮಂಗಲ | ವಿಷ್ಣುಚಕ್ರ ಸ್ವರೂಪಾಯ ನಮಸ್ತೇ ದಿವ್ಯತೇಜಸೇ |