Sadaacharasmruti

ACHARYA MADHWASadaacharasmruti ಸದಾಚಾರಸ್ಮೃತಿ सदाचारस्मृति

This is a grantha by Acharya Madhwa containing the essence of Bhagavat Geeta, Upanishads and other Agamas, dedicated for nitya karmanustana –   Do’s and don’ts of an individual.     The grantha gives guidelines on our daily routine : when to wake up, what do do after that, how to take bath, procedure for japa , sandhyavandana, chaturvarna duties.

Shloka No 1 :

ಯಸ್ಮಿನ್ ಸರ್ವಾಣಿ ಕರ್ಮಾಣಿ ಸನ್ಮಾಸ್ಯಾಧ್ಯಾತ್ಮಚೇತಸಾ |

ನಿರಾಶೀರ್ನಿರ್ಮಮೋ ಯಾತಿ ಪರಂ ಜಯತಿ ಸೋsಚ್ಯುತ:||

यस्मिन् सर्वाणि कर्माणि सन्मास्याध्यात्मचेतसा ।
निराशीर्निर्ममो याति परं जयति सोsच्युत:||

yasmin sarvaaNi karmaaNi sanyasya AdhyaatmachEtasaa |
niraashI: nirmamO yaati paraM jayati sO&chyuta: ||

ಯಸ್ಮಿನ್ ಸರ್ವಾಣಿ ಕರ್ಮಾಣಿ ಸನ್ಯಸ್ಯ ಆಧ್ಯಾತ್ಮಚೇತಸಾ |
ನಿರಾಶೀ: ನಿರ್ಮಮೋ ಯಾತಿ ಪರಂ ಜಯತಿ ಸೋಽಚ್ಯುತ: ||

ಸಜ್ಜನರು ಅಹಂಕಾರ, ಮಮಕಾರ, ಶಿಷಿದ್ಧ ಕಾಮನೆಗಳನ್ನು ಬಿಟ್ಟು ಸಕಲ ಕರ್ಮಗಳನ್ನೂ ಶ್ರೀ ಹರಿಪೂಜಾ ರೂಪದಿ ಅರ್ಪಣ ಮಾಡುತ್ತಾರೆ.  ಸರ್ವೋತ್ಕೃಷ್ಟನಾದ ಪರಮಾತ್ಮನನ್ನು ಪಡೆಯಲು ಶುದ್ಧವಾದ ಜ್ಞಾನದ ಮೂಲಕ ಮಾತ್ರ ಸಾಧ್ಯ.
ಶ್ರೀಹರಿ ಸರ್ವೋತ್ಕೃಷ್ಣನಾಗಿದ್ದಾನೆ.   ನಾವು ಮಾಡಿದ ಪುಣ್ಯವನ್ನು ಪರಮಾತ್ಮನಿಗೆ ಅರ್ಪಿಸದಿದ್ದರೆ, ಆ ಪುಣ್ಯವನ್ನು ದೈತ್ಯರು ಅಪಹರಿಸುತ್ತಾರೆ.  ನಾವು ಮಾಡಿದ ಪಾಪಕರ್ಮಗಳನ್ನು ಪರಮಾತ್ಮನಿಗೇ ಅರ್ಪಿಸಿ ಇಂತಹ ಪಾಪವನ್ನು ನಮ್ಮಿಂದ ಮಾಡಿಸಬೇಡವೆಂದು ಪ್ರಾಯಶ್ಚಿತ್ತ ರೂಪವಾಗಿ ಪ್ರಾರ್ಥಿಸಿದಾಗ ನಮ್ಮ ಪಾಪವನ್ನು ದೈತ್ಯರಿಗೆ ಹಂಚುತ್ತಾನೆ.  ಆದ್ದರಿಂದ ಸಕಲ ಕರ್ಮಗಳನ್ನೂ ಶ್ರೀಹರಿಗೆ ಸಮರ್ಪಿಸಬೇಕು.

The first and foremost should be that one shall not having desires in the worldly pleasures and one must note that Srihari is the principal doer of all the activities.  Without him nothing will happen.  It is He (Srihari), who motivates, and does all the activities.  One must do the samarpana of all the activities to Srihari irrespective of whether it is paapakarma or punyakarma.    If we are not doing the samarpana of punya to Srihari, then those punyaas would be taken away by daithyaas.  When we do the samarpana of paapa karma also to Srihari, with the praarthana to Srihari to make him never do that sin,  he will distribute the same to daithyaas, and make us saatwik.  As such, one must do the samarpana of all karmaas to Srihari.

Shloka No 2 :

ಸ್ಮೃತ್ವಾ ವಿಷ್ಣುಂ ಸಮುತ್ಥಾಯ ಕೃತಶೌಚೋ ಯಥಾವಿಧಿ |
ಧೌತದಂತ: ಸಮಾಚಮ್ಯ ಸ್ನಾನಂ ಕುರ್ಯಾದ್ವಿಧಾನತ: | ೨ |

स्मृत्वा विष्णुं समुत्थाय कृतशौचो यथाविधि ।
धौतदंत: समाचम्य स्नानं कुर्याद्विधानत: । २ ।

smr̥tvā viṣṇuṁ samutthāya kr̥taśaucō yathāvidhi |
dhautadaṁta: samācamya snānaṁ kuryādvidhānata: | 2 |

ವಿಷ್ಣುಂ ಸ್ಮೃತ್ವಾ ಸಮುತ್ಥಾಯ ಯಥಾವಿಧಿ ಕೃತಶೌಚ: ಧೌತದಂತ: ಸಮಾಚಮ್ಯ ವಿಧಾನತ: ಸ್ನಾನಂ ಕುರ್ಯಾತ್ |

We have to get up in the Brahmee Muhurtha, and while getting off bed, do the smarana of Srihari, then do the shoucha vidhi, do mruttika shoucha, do dhanta dhaavana, Achamana and do snaana with proper sankalpa.  –  Here Brahmee Muhurtha means two hours before the sunrise – i.e., if Suryodaya happens at 6.15 am, then Brahmee Muhurtha starts at 4.15.    After getting up from  the bed, he has to chant stotras of Gajendra Moksha, Dadivamana Stotra, Jitante Stotra,

Achamana vidhi –  It must be done facing East or North and never to South or West;  Separate Water to be used for achamana ; do not make sound while doing achamana.  The Achamana is of three types viz., 1. Smartha Achamana, 2. Shrouta Achamana 3. Vaishnavachamana.

  • Smaartha Achamana refers doing achamana with Gayatri Mantra with Anganasa and karanyasa.
  • Shrouta Achamana refers to doing Achamana with chanting Rugvedaaya nama: Yajurvedaaya nama: SaamavEdaaya nama:
  • Vaishnava Achamana refers to doing Achamana with Keshshavaadi naamocharana and doing anga sparsha.

We have to do achamana twice after mala or mootra visarjana and thrice after bhojana

Snaana Vidhi :

Praata: snaana removes the graha peeda, daaridrya, dusvapna soochita anishtaas.  We have to do snaana with proper sankalpa .

Snaana is of 5 types – viz.,       1. Mala snaana, 2. mantra snaana 3. dhyana snaana  4. Varuna Snaana and 5 Jala snaana. – ಮಲ ಸ್ನಾನ, ಮಂತ್ರ ಸ್ನಾನ, ಧ್ಯಾನ ಸ್ನಾನ, ವಾರುಣ ಸ್ನಾನ, ಜಲ ಸ್ನಾನ

Mala snaana (ಮಲ ಸ್ನಾನ) – refers to mala nivaaraka snaana doing with gomaya and cleaning all the parts of body.  Even while doing snaana in our house with tap water, we must drop a few drops of gomaya, tulasi mruttike to that water and do the snaana chanting the sankalpa.

Mantra snaana (ಮಂತ್ರ ಸ್ನಾನ) – refers to snaana with only mantra – It is applicable for only who are sick and unable to do snaana – the body to be cleaned by wet cloth – Remove the previous day’s cloth, wear fresh cloth – do achamana – do prokshana with tulasi with Gayatri Mantra – “Apo hista” mantra, etc and do sandhyaadi karmaas

Dhyaana Snaana (ಧ್ಯಾನ ಸ್ನಾನ) – It is a snaana for those (unhealthy) who can’t do any type of other snaanas – They have to do the chintana of Srihari’s sannidhana on their head.   They have to do the chintana of gangaa which came out of Srihari’s paadakamala, which is taken by Brahmadevaru for prakshaalana and which Rudradevaru held in his shirassu, which is doing the paavitra of entire body.   Then do achamana.

Vaaruna Snaana (ವಾರುಣ ಸ್ನಾನ)  – Doing snaana in Sarovara or wells shaastrokta reetya.

Jala Snaana (ಜಲ ಸ್ನಾನ)  – While doing snaana in Gangaadi Tirthas,  – we have to do the prarthana of nadyabhimani devataas, and chintana of bhagavan moorthi while doing snaana.

Shloka No 3 :

ಉದ್ಧೃತೇತಿ ಮೃದಾssಲಿಪ್ಯ ದ್ವಿಷಡಷ್ಟಷಡಕ್ಷರೈ: |
ತ್ರಿರ್ನಿಮಜ್ಯಾಪ್ಯಸೂಕ್ತೇನ ಪ್ರೋಕ್ಷಯಿತ್ವಾಪುನಸ್ತತ: | ೩ |

उद्धृतेति मृदाssलिप्य द्विषडष्टषडक्षरै: ।
त्रिर्निमज्याप्यसूक्तेन प्रोक्षयित्वापुनस्तत: । ३ ।

uddhr̥tēti mr̥dAlipya dviṣaḍaṣṭaṣaḍakṣarai: |
trirnimajyāpyasūktēna prōkṣayitvāpunastata: | 3 |

उद्धृतेति मृदाऽऽलिप्य द्विषट् अष्ट षडक्षरै: त्रि:निमज्य आप्यसूक्तेन प्रोक्षयित्वा पुन: तथा ।

“उध्ध्रुतासि वराहेण कृष्णेन शतबाहुना ।
मृत्तिके हर मे पापं यन्मया दुष्क्रुतं कृतं ।”  –

“ಉದ್ಧೃತಾಽಸಿ ವರಾಹೇಣ’ ಮಂತ್ರದಿಂದ ತುಲಸೀ ಮೃತ್ತಿಕೆಯನ್ನು ಶರೀರಕ್ಕೆ ಲೇಪಿಸಿಕೊಂಡು “ದ್ವಿಷತ್”, “ಅಷ್ಟ” ಮತ್ತು “ಷಡಕ್ಷರ” ಪೂರಿತವಾದ ವಾಸುದೇವ ದ್ವಾದಶಾಕ್ಷರ (ದ್ವಿಷತ್ ೬  ೨ = ೧೨); ನಾರಾಯಣಾಷ್ಟಾಕ್ಷರ (ಅಷ್ಟ); ಮತ್ತು ಕೃಷ್ಣ ಷಡಕ್ಷರ (ಷಡಕ್ಷರ) ಮಂತ್ರ ಪಠಿಸುತ್ತ, ಮೂರು ಬಾರಿ ಮುಳುಗು ಹಾಕಿ(ನದೀ ಅಥವಾ ಸಮುದ್ರ ಸ್ನಾನವಾದಲ್ಲಿ),  “ಅಪ್” ಸೂಕ್ತದಿಂದ (ಆಪೋಹಿಷ್ಟಾ….. ) ಮಂತ್ರದಿಂದ ಪ್ರೋಕ್ಷಿಸಿಕೊಳ್ಳಬೇಕು.  ನದಿಯಲ್ಲಿ ಸ್ನಾನ ಮಾಡುವಾಗ ಪ್ರವಾಹಾಭಿಮುಖವಾಗಿಯೂ, ಸರೋವರದಲ್ಲಿ ಸೂರ್ಯಾಭಿಮುಖವಾಗಿಯೂ ಮುಳುಗಿ ಹಾಕಿ ಸ್ನಾನ ಮಾಡಬೇಕು. 

With chanting of this maha mantra from Narayana Upanishad , one must apply Mruttika on our body.

Then we must chant Dwadashashtara {द्विषट् = 6x 2 = 12 dvaadasha)  – vaasudEva dwaadashaakShara mantra  – i.e., “Om namo bhagavatE vasudevaya” then अष्ट – 8 letter chant NarayanashTakShara mantra –  “Om namO naaraayaNaaya” – and then षडक्षरै – chant VishNu shadakshara mantra “Om VishNavE nama” ;  त्रि:निमज्य –  and dip thrice,    OR we must chant three manthraas and dip thrice continuously.  Then with “ap” devata sooktaaA – i.e.,  chant “आपोहिष्टा” (“ಆಪೋಹಿಷ್ಟಾ”) mantra प्रोक्षयित्वा (ಪ್ರೋಕ್ಷಯಿತ್ವಾ) – prokshana (sprinkling) of water to be done .

While doing snaana in rivers – we must dip facing pravaaha (pravaahaabhimuka), and in Sarovaraas, we must be facing suryaa.

Women must take bath only upto the neck.

 

Shloka 4 :

ಮೃದಾಲಿಪ್ಯ ನಿಮಜ್ಯ ತ್ರಿ:ತ್ರಿರ್ಜಪೇದಘಮರ್ಷಣಂ |
ಸ್ರಷ್ಟಾರಂ ಸರ್ವಲೋಕಾನಾಂ ಸ್ಮೃತ್ವಾ ನಾರಾಯಣಂ ಪರಂ | ೪ |

ಯತಶ್ವಾಸೋ ನಿಮಜ್ಯಾಪ್ಸುಪ್ರಣವೇನೋತ್ಥಿತಸ್ತತ: |
ಸಿಂಚೇತ್ ಪುರುಷಸೂಕ್ತೇನ ಸ್ವದೇಹಸ್ಥಂ ಹರಿಂ ಸ್ಮರನ್ | ೫ |

मृदालिप्य निमज्य त्रि:त्रिर्जपेदघमर्षणं ।
स्रष्टारं सर्वलोकानां स्मृत्वा नारायणं परं । ४ ।

यतश्वासो निमज्याप्सुप्रणवेनोत्थितस्तत: ।
सिंचेत् पुरुषसूक्तेन स्वदेहस्थं हरिं स्मरन् । ५ ।

मृदालिप्य त्रि: निमज्य त्रि: अघमर्षणं जपेत् सर्वलोकानां स्रष्टारं परं नारायणं स्मृत्वा  यत: श्वास: निमज्य अप्सु प्रणवेन उत्थित: तत: पुरुषसूक्तेन स्वदेहस्थं हरिं स्मरन् सिंचेत् |

ಮೃತ್ತಿಕೆಯನ್ನು ಲೇಪಿಸಿ, ನದಿಯಲ್ಲಿ ಮೂರು ಬಾರಿ ಮುಳುಗಿ, ಅಘಮರ್ಷಣ ಸೂಕ್ತ ಪಠಣ ಮಾಡಬೇಕು ( ಋತಂ ಚ ಸತ್ಯಂ ಚಾಭೀಧ್ಧಾತ್………… ಸ್ವ:)  ಸರ್ವಲೋಕದ ಸೃಷ್ಟಿಕರ್ತನಾದ ಶ್ರೀಹರಿಯನ್ನು ಸ್ಮರಿಸಿ, ಅವನೇ ಉತ್ತಮ, ಸರ್ವರಿಗೂ ಸ್ವಾಮಿ ಎಂದು ಅನುಸಂಧಾನ ಮಾಡುತ್ತಾ, ಶಾವಸವನ್ನು ನಿರೋಧಿಸಿಕೊಂಡು, ನೀರಿನಲ್ಲಿ ಮುಳುಗಿ, ಪ್ರಣವ ಮಂತ್ರವನ್ನು ಹೇಳಿಕೊಂದು ಎದ್ದು, ಪುರುಷಸೂಕ್ತ ಪಠಿಸುತ್ತ ಶಂಖಮುದ್ರೆಯಿಂದ ತನ್ನ ತಲೆಯ ಮೇಲೆ  ಪ್ರೋಕ್ಷಣೆ ಮಾಡಿಕೊಳ್ಳಬೇಕು  (ಶ್ರೀಹರಿಗೆ ಅಭಿಷೇಕವೆಂದು ಚಿಂತಿಸಿ)

After taking snaana , one must chant purusha sookta and prokshana of water on his head with omkara arthanusandhana – with smarana of Srihari – that this snaana is for Srihari and that the paadodaka is falling on him.

Then while in water itself one must give snaananga Deva – Rushi – Pitru tarpanaas.

Deva Tarpana with the mantras “brahmadayO yE devastaan dEvaan tarpayaami |…….”  the tarpana water must pass through the edge of all the fingers. – It shall be given facing east direction

Rushi Tarpana to be given with Yagnopaveetha in maalaakara – to Rushees – it shall be given facing north direction

Pitru Tarpana to be given with Yagnopaveetha to our left – to be given to south direction

———————-

वसित्वावास आचम्य प्रोक्ष्याचम्य च मंत्रत: ।
गायत्र्या चांजलिं दत्वाध्यात्वासूर्यगतं हरिं । ६ ।

ವಸಿತ್ವಾವಾಸ ಆಚಮ್ಯ ಪ್ರೋಕ್ಷ್ಯಾಚಮ್ಯ ಚ ಮಂತ್ರತ: |
ಗಾಯತ್ರ್ಯಾ ಚಾಂಜಲಿಂ ದತ್ವಾಧ್ಯಾತ್ವಾಸೂರ್ಯಗತಂ ಹರಿಂ | ೬ |

ವಸಿತ್ವಾ ವಾಸ ಆಚಮ್ಯ ಪ್ರೋಕ್ಷಾ ಆಚಮ್ಯ  ಗಾಯತ್ರ್ಯಾ ಚ  ಅಂಜಲಿಂ ದತ್ವಾ ಸೂರ್ಯಗತಂ ಹರಿಂ ಧ್ಯಾತ್ವಾ

ಸ್ನಾನಾನಂತರ ಒಣಗಿದ ವಸ್ತ್ರವನ್ನು ಧರಿಸಿ ಆಚಮನ ಮಾಡಿ, ಪ್ರೋಕ್ಷಿಸಿಕೊಂಡು, ಮತ್ತೆ ಆಚಮನ ಮಾಡಿ, ಗಾಯತ್ರಿ ಮಂತ್ರದಿಂದ ಅರ್ಘ್ಯವನ್ನು ನೀಡಬೇಕು.   ನಂತರ ಸೂರ್ಯಾಂತರ್ಗತನಾದ ಶ್ರೀಹರಿಯನ್ನು ಧ್ಯಾನಿಸಬೇಕು.  ಸಂಧ್ಯಾವಂದನ ಮಾಡಬೇಕು.

After snaana wear another dress, do Achamana, Do the prokshana, do again Achamana, arGya with Gayatri Mantra to be given.  We have to meditate upon Sriman Naarayana who is Suryaantargata.

—————————-

मंत्रत: परिवृत्याथ समाचम्य सुरादिकान् ।
तर्पयित्वानिपीड्याथ वासो विस्तृत्य चांजसा । 7 ।

ಮಂತ್ರತ: ಪರಿವೃತ್ಯಾಥ ಸಮಾಚಮ್ಯ ಸುರಾದಿಕಾನ್ |
ತರ್ಪಯಿತ್ವಾನಿಪೀಡ್ಯಾಥ ವಾಸೋ ವಿಸ್ತೃತ್ಯ ಚಾಂಜಸಾ | ೭ |

ಮಂತ್ರತ: ಪರಿವೃತ್ಯ ಅಥ ಸುರಾಧಿಕಾನ್ ತರ್ಪಯಿತ್ವಾ ನಿಪೀಡ್ಯಾಥ ವಾಸೋ ವಿಸ್ತೃತ್ಯ ಚ ಅಂಜಸಾ |

मंत्रत: परिवृत्य अथ सुराधिकान् तर्पयित्वा निपीड्याथ वासो विस्तृत्य च अंजसा |

“ಆಸಾವಾದಿತ್ಯೋ ಬ್ರಹ್ಮಾ” ಮಂತ್ರದಿಂದ ನೀರನ್ನು ತಮ್ಮ ಸುತ್ತಲೂ ಚೆಲ್ಲಬೇಕು. ಆಚಮನ ಮಾಡಿ ದೇವತಾ ತರ್ಪಣ, ಋಷಿ ತರ್ಪಣ ಮತ್ತು ಪಿತೃ ತರ್ಪಣ ನೀಡಬೇಕು.  ಮುಂಚೆ ಉಟ್ಟಿದ್ದ ಒದ್ದೆಯಾದ ವಸ್ತ್ರವನ್ನು ನೀರಿನಲ್ಲಿ ಜಾಲಾಡಿಸಿ ಹಿಂಡಿ ಒಣಗಿಸಬೇಕು.   ಬ್ರಹ್ಮಯಜ್ಞ, ದೇವ ಋಷಿ ಮತ್ತು ಪಿತೃ ತರ್ಪಣವನ್ನು, ಸಂದ್ಯಾವಂದನೆಯ ನಂತರವೂ ಕೊಡಬಹುದು (ಸೂರ್ಯೋದಯಾ ನಂತರ ಮಾಡುವುದು ಶ್ರೇಷ್ಟ)

———————————–

ಅರ್ಕಮಂಡಲಗಂ ವಿಷ್ಣುಂ ಧ್ಯಾತ್ವ್ಯೈವ ತ್ರಿಪದೀಂ ಜಪೇತ್ |
ಸಹಸ್ರ ಪರಮಾಂ ದೇವೀಂ ಶತಮಧ್ಯಾಂ ದಶಾವರಾಂ | 8 |

अर्कमंडलगं विष्णुं  ध्यात्व्यैव त्रिपदीं जपेत् ।
सहस्र परमां देवीं शतमध्यां दशावरां । 8 ।

ಅರ್ಕಮಂಡಲಗಂ ವಿಷ್ಣುಂ ಧ್ಯಾತ್ವಾ ಏವ ತ್ರಿಪದೀಮ್ ಸಹಸ್ರಪರಮಾಂ ದೇವೀಂ ಶತಮಧ್ಯಾಂ ದಶಾವರಾಂ ಜಪೇತ್ |

ಅರ್ಕಮಂಡಲಸ್ಥ (ಸೂರ್ಯಮಂಡಲ)ನಾದ ಶ್ರೀಹರಿಯನ್ನು “ಧ್ಯೇಯ: ಸದಾ……. ” ಮಂತ್ರದಿಂದ ಧ್ಯಾನಿಸಿ ಯಥಾಶಕ್ತಿ ಕನಿಷ್ಟ ೧೦ ಗಾಯತ್ರಿಯನ್ನು ಜಪಿಸಬೇಕು.    ಗಾಯತ್ರಿಗೆ ೩ ಪಾದಗಳಿವೆ – ಗಾಯತ್ರಿ, ಸಾವಿತ್ರಿ ಮತ್ತು ಸರಸ್ವತಿ.  ಸಹಸ್ರ ಮಾಡುವುದು ಉತ್ತಮ, ಶತ ಮಾಡುವುದು ಮಧ್ಯಮ ಮತ್ತು ಕನಿಷ್ಟ ದಶ ಜಪ ಮಾಡ್ವುದು ಅಧಮ.  ಅದೇ ರೀತಿ ಮನಸ್ಸಿನಲ್ಲಿ ಮಾಡುವುದು ಶ್ರೇಷ್ಟ.  ತುಟಿಯನ್ನು ಅಲ್ಲಾಡಿಸಿ ಮಾಡುವುದು ಮಧ್ಯಮ, ಮತ್ತು ಬೇರೆಯವರಿಗೆ ಕೇಳುವಂತೆ ಹೇಳುವುದು ಅಧಮ.  ಅನುಶಾಸನ ಪರ್ವದಲ್ಲಿ ಕೃಷ್ನನನ್ನು ಅರ್ಜುನ ಇದೇ ಪ್ರಶ್ನೆ ಮಾಡುತ್ತಾನೆ.  ಎಷ್ಟು ಜಪ ಮಾಡಬೇಕು ಎಂದಾಗ ಕೃಷ್ಣ ಹೇಳುತ್ತಾನೆ.  ಜಪ ಮಾಡುವಾಗ ರುಷಿ, ಚಂದಸ್ಸು ಮತ್ತು ದೇವತೆಗಳನ್ನು ನೆನೆದು ಮಾಡಬೇಕು. 

———————————-

ಆಸೂರ್ಯದರ್ಶನಾತ್ ತಿಷ್ಠೇತ್ ತತಸ್ತೂಪವಿಶೇತ ವಾ |
ಪೂರ್ವಾಂ ಸಂಧ್ಯಾಂಸನಕ್ಷತ್ರಾಂ ಉತ್ತರಾಂ ಸದಿವಾಕರಾಂ |
ಉತ್ತರಾಮುಪವಿಶ್ವೈವವಾಗ್ಯತ: ಸರ್ವದಾ ಜಪೇತ್ | 9 |

आसूर्यदर्शनात् तिष्ठेत् ततस्तूपविशेत वा ।
पूर्वां संध्यांसनक्षत्रां उत्तरां सदिवाकरां ।
उत्तरामुपविश्वैववाग्यत: सर्वदा जपेत् । 9 ।

ಆ ಸೂರ್ಯ ದರ್ಶನಾತ್ ತಿಷ್ಠೇತ್ ತತ: ತು ಉಪವಿಶೇತ ವಾ ಪೂರ್ವಾಂ ಸಂಧ್ಯಾಂ ಸನಕ್ಷತ್ರಾಂ ಉತ್ತರಾಂ ಸದಿವಾಕರಾಂ ಉತ್ತರಾಂ ಉಪವಿಶ್ಯೇವ ವಾಗ್ಯತ: ಸರ್ವದಾ ಜಪೇತ್ ||

ಸೂರ್ಯದರ್ಶವಾಗುವ ಮೊದಲು (ಸೂರ್ಯೋದಯ ಪೂರ್ವದಲ್ಲಿ) ನಿಂತೇ ಗಾಯತ್ರಿ ಮಂತ್ರ ಜಪಿಸಬೇಕು.  ನಂತರ ಕುಳಿತು ಮಾಡಬಹುದು.  ಪ್ರಾತ: ಸಂಧ್ಯಾವಂದನೆ ನಕ್ಷತ್ರವಿರುವಾಗಲೇ ಮಾಡಬೇಕು.  ಸಾಯಂ ಸಂಧ್ಯಾವಂದನೆಯನ್ನು ಸೂರ್ಯನಿರುವಾಗಲೇ ಮಾಡಬೇಕು.  ಸಾಯಂ ಸಂಧ್ಯಾವಂದನೆಯನ್ನು ಕುಳಿತು ಮೌನದಿಂದ ಮಾಡಬೇಕು.

————————————

ಧ್ಯೇಯ: ಸದಾ ಸವಿತೃಮಂಡಲ ಮಧ್ಯವರ್ತೀ
ನಾರಾಯಣ: ಸರಸಿಜಾಸನ ಸನ್ನಿವಿಷ್ಠ: |
ಕೇಯೂರವಾನ್ ಮಕರಕುಂಡಲವಾನ್ ಕಿರೀಟೀ
ಹಾರೀ ಹಿರಣ್ಮಯವಪುಧೃತಶಂಖಚಕ್ರ: || ೧೦ ||

ध्येय: सदा सवितृमंडल मध्यवर्ती
नारायण: सरसिजासन सन्निविष्ठ: ।
केयूरवान् मकरकुंडलवान् किरीटी
हारी हिरण्मयवपुधृतशंखचक्र: ॥ १० ॥

  • ಸವಿತೃಮಂಡಲ: ಸರಸಿಜಾಸನ ಸನ್ನಿವಿಷ್ಠ: ಕೇಯೂರವಾನ್ ಮಕರಕುಂಡಲವಾನ್  ಕಿರೀಟೀ ಹಾರೀ ಧೃತ ಶಂಖ ಚಕ್ರ: ಹಿರಣ್ಮಯವಪು: ನಾರಾಯಣ:ಸದಾ ಧ್ಯೇಯ: |
  • ಸೂರ್ಯಮಂಡಲದಲ್ಲಿ ಸರಸಿಜಾಸನದಲ್ಲಿ ಅಂದರೆ ಪದ್ಮಾಸನದಲ್ಲಿ ಕುಳಿತಿರುವ, ತೋಳಿನಲ್ಲಿ ಆಭರಣಯುಕ್ತನಾದ, ಕಿವಿಯಲ್ಲಿ ಮಕರಕುಂಡಲವನ್ನು ಧರಿಸಿರುವ, ಕಿರೀಟವನ್ನು ಶಿರಸ್ಸಿನಲ್ಲಿ ಧರಿಸಿರುವ, ಮುತ್ತಿನ ಹಾರವನ್ನು ಹೊಂದಿರುವ, ಶಂಖ ಚಕ್ರ ಧರಿಸಿರುವ, ಹಿರಣ್ಮಯನಾದ ಅಂದರೆ ಬಂಗಾರದ ಮೈಬಣ್ಣವುಳ್ಳ ಶ್ರೀಮನ್ನಾರಾಯಣನನ್ನು ಸದಾ ಧ್ಯಾನಿಸಬೇಕು.

 

ಗಾಯತ್ರ್ಯಾಸ್ತ್ರಿಗುಣಂ ವಿಷ್ಣುಂ ಧ್ಯಾಯನ್ನಷ್ಟಾಕ್ಷರಂ ಜಪೇತ್ |
ಪ್ರಣಮ್ಯ ದೇವಾನ್ ವಿಪ್ರಾಂಶ್ಚ ಗುರೂಂಶ್ಚ ಹರಿಪಾರ್ಷದಾನ್ || 11 ||

गायत्र्यास्त्रिगुणं विष्णुं ध्यायन्नष्टाक्षरं जपेत् ।
प्रणम्य देवान् विप्रांश्च गुरूंश्च हरिपार्षदान् ॥

ಗಾಯತ್ರ್ಯಾ: ತ್ರಿಗುಣಂ ವಿಷ್ಣುಂ ಅಷ್ಟಾಕ್ಷರಂ ಜಪೇತ್ ದೇವಾನ್ ವಿಪ್ರಾನ್ ಚ ಗುರೂನ್ ಚ ಹರಿಪಾರ್ಷದಾನ್ ಪ್ರಣಮ್ಯ |

ಗಾಯತ್ರಿ ಮಂತ್ರವನ್ನು ಜಪಿಸಿದ ನಂತರ, ಅದರ ಮೂರರಷ್ಟು ನಾರಾಯಣಾಷ್ಟಾಕ್ಷರ ಮಂತ್ರ ಜಪಿಸಬೇಕು.  ಬ್ರಹ್ಮಾದಿ ದೇವತೆಗಳನ್ನು, ಬ್ರಾಹ್ಮಣರನ್ನೂ, ಸದ್ಗುರುಗಳನ್ನೂ, ಹರಿಯ ದ್ವಾರಪಾಲಕರನ್ನೂ, ನಮಿಸಬೇಕು. 

 

ಏವಂ ಸರ್ವೋತ್ತಮಂ ವಿಷ್ಣುಂಧ್ಯಾಯನ್ನೇವಾರ್ಚಯೇದ್ಧರಿಂ |
ಧ್ಯಾನ ಪ್ರವಚನಾಭ್ಯಾಂ ಚ ಯಥಾಯೋಗ್ಯಮುಪಾಸನಂ | 12 |

एवं सर्वोत्तमं विष्णुंध्यायन्नेवार्चयेद्धरिं ।
ध्यान प्रवचनाभ्यां च यथायोग्यमुपासनं ।

ಸರ್ವೋತ್ತಮಂ ಹರಿಂ ಏವಂ ಧ್ಯಾಯನ್ ಏವ ಅರ್ಚಯೇತ್ ಧ್ಯಾನ ಪ್ರವಚನಾಭ್ಯಾಂ ಚ ಯಥಾಯೋಗ್ಯಂ ಉಪಾಸನಂ |

ಸರ್ವೋತ್ತಮನಾದ ಶ್ರೀಹರಿಯನ್ನು ಸದಾ ಕಾಲ ಸರ್ವ ಸ್ಥಳಗಳಲ್ಲೂ ಧ್ಯಾನಿಸಬೇಕು.  ಶ್ರೀಹರಿಯನ್ನು ಅರ್ಚಿಸಬೇಕು.  ಯಥಾಶಕ್ತಿ ಉಪಾಸನ ಮಾಡಬೇಕು

ಧರ್ಮೇಣೇಜ್ಯಾಸಾಧನಾನಿ ಸಾಧಯಿತ್ವಾ ವಿಧಾನತ: |
ಸ್ನಾತ್ವಾಸಂಪೂಜಯೇತ್ ವಿಷ್ಣುಂ ವೇದತಂತ್ರೋಕ್ತಮಾರ್ಗತ: ||೧೩||

धर्मेणेज्यासाधनानि साधयित्वा विधानत: ।
स्नात्वासंपूजयेत् विष्णुं वेदतंत्रोक्तमार्गत: ॥१३॥

ಧರ್ಮೇಣ ಇಜ್ಯಾ ಸಾಧನಾನಿ ಸಾಧಯಿತ್ವಾ ವಿಧಾನತ: ಸ್ನಾತ್ವಾ ವೇದ ತಂತ್ರ ಉಕ್ತಮಾರ್ಗತ: ವಿಷ್ಣುಂ ಸಂಪೂಜಯೇತ್ |

ಪೂಜೆಯೆಂಬ ಯಜ್ಞಕ್ಕಾಗಿ ಸಾಧಕವಾದ ವಸ್ತುಗಳನ್ನು ನಿಯಮೇನ (ಧಾರ್ಮಿಕ ರೀತಿಯಿಂದ) ದೊರಕಿಸಿಕೊಂಡು ಸ್ನಾನ ಮಾಡಿ, ವೇದ ಪಂಚರಾತ್ರ – ತಂತ್ರಸಾರಾದಿಗಳಲ್ಲಿ ನಿರೂಪಿಸಿದ ವಿಧಿಯಿಂದ ಶ್ರೀಹರಿಯನ್ನು ಪೂಜಿಸಬೇಕು.

ವೈಶ್ವದೇವಂ ಬಲಿಂ ಚೈವ ಕುರ್ಯಾನ್ನಿತ್ಯಂ ತದರ್ಪಣಂ |
ಇಷ್ಟಂ ದತ್ತಂ ಹುತಂ ಚಪ್ತಂ ಜಪ್ತಂ ಪೂರ್ತಂ ಯಚ್ಚಾತ್ಮನ: ಪ್ರಿಯಂ | ೧೪ |

वैश्वदेवं बलिं चैव कुर्यान्नित्यं तदर्पणं ।
इष्टं दत्तं हुतं चप्तं जप्तं पूर्तं यच्चात्मन: प्रियं । १४ ।

ವೈಶ್ವದೇವಂ, ಬಲಿಂ ಚೈವ, ಕುರ್ಯಾನ್ ನಿತ್ಯಂ ತು ತರ್ಪಣಂ ಇಷ್ಟಂ ಹುತಂ ದತ್ತಂ ಪೂರ್ತಂ ಯತ್ ಚ ಆತ್ಮನ: ಪ್ರಿಯಂ

ವೈಶ್ವದೇವ ಮತ್ತು ಬಲಿಹರಣವನ್ನು ನಿತ್ಯವೂ ಶ್ರದ್ಧೆಯಿಂದ ಮಾಡಿ ಪರಮಾತ್ಮನಿಗೆ ಸಮರ್ಪಿಸಬೇಕು. ಇಷ್ಟಂ – ಯಜ್ಞ, ಯಾಗ, ಹುತಂ – ಹೋಮ, ದತ್ತಂ – ದಾನ , ಪೂರ್ತಂ – ಸರೋವರ ನಿರ್ಮಾಣ, ದೇವಾಲಯ ನಿರ್ಮಾಣ, ಯತ್ ಚ ಆತ್ಮನ ಪ್ರಿಯಂ – ತನಗೆ ಪ್ರಿಯವಾದ ಆಹಾರ, ಹಣ್ಣು, ನೀರು ಇತ್ಯಾದಿ ವಸ್ತುಗಳು ಶ್ರೀಹರಿಗೆ ಸಮರ್ಪಿಸಬೇಕು.

vaishvadEva –  ವೈಶ್ವದೇವ –   ದೇವತೆಗಳಿಗೆ ಪ್ರಜ್ವಲಿಸುವ ಅಗ್ನಿಯಲ್ಲಿ ತುಳಸಿಕಾಷ್ಠ ಸಹಿತ ಆಹುತಿ ನೀಡುವ ಯಜ್ಞವೇ ವೈಶ್ವದೇವ.  ಪರಮಾತ್ಮನಿಗೆ ಸಮರ್ಪಿಸಿದ ಅನ್ನದಲ್ಲಿ ಒಂದು ಭಾಗವನ್ನು ತೆಗೆದು ವೈಶ್ವದೇವ ಮಾಡಬೇಕು.  ವೈಶ್ವದೇವದಿಂದ ಅನ್ನ ಶುದ್ಧಿಗೆ ಕಾರಣವಾಗಿದೆ.  ವೈಶ್ವದೇವ ರಹಿತವಾದ ಭೋಜನವನ್ನು ಮಾಡಬಾರದು.

Leave a Reply

Your email address will not be published.

Sumadhwa Seva © 2022