Vata Savitri Hunnime ವಟಸಾವಿತ್ರಿ ಹುಣ್ಣಿಮೆ

Vata Savitri Hunnime –

Jyesta Shudda Hunnime

 

*ವಟಸಾವಿತ್ರಿ ಹುಣ್ಣಿಮೆ*

ವಟಸಾವಿತ್ರಿ ಹುಣ್ಣಿಮೆ ಆಚರಿಸುವುದರಿಂದ ದುರ್ಮರಣ ಅನಾರೋಗಾದಿ ದೋಷ ಪರಿಹಾರ.  ವಿಶೇಷವಾಗಿ ಯಮದೇವರನ್ನು ಪ್ರಾರ್ಥಿಸಬೇಕು.  ಹೆಣ್ಣು ಮಕ್ಕಳು ಶ್ಯಾಮಲಾ ಸಹಿತ ಯಮಧರ್ಮ ರಾಜನಿಗೆ ಅರ್ಚಿಸಬೇಕು.

ಆಲದ ಮರದಲ್ಲಿ ಪ್ರತಿ ತಿಂಗಳೂ ಯಮದೇವರನ್ನು ಒಂದೊಂದು ಹೆಸರಿನಿಂದ ಪೂಜಿಸುತ್ತಾರೆ.

ಶ್ಲೋಕ :
ಧರ್ಮರಾಜೋ ಯಮೋ ಜಾತಾ; ಮೃತ್ಯು: ಕಾಲಾಂತಕೋ ಯಮ: ವೈವಸ್ವತ: ಚಿತ್ರಗುಪ್ತೌ ದಾಂತೋ ಮೃತ್ಯು ಕ್ಸಯೋ ವಟ:!!

ಇವಿಷ್ಟು ಯಮಧರ್ಮನಿಗೆ ವಿವಿಧ ಮಾಸಗಳಲ್ಲಿ .ಹೇಳುವ ಹೆಸರುಗಳು. ಧರ್ಮರಾಜ: ಚೈತ್ರಮಾಸದಲ್ಲಾದರೆ, ಅದೇ ರೀತಿ ಕ್ರಮವಾಗಿ ಮೇಲೆ ಇರುವ ಹೆಸರುಗಳು ವೈಶಾಖಾದಿ ಮಾಸಗಳಲ್ಲಿ ಹೇಳುತ್ತಾರೆ. ಯಮದೇವರ ಪೂಜೆ , ಯಮದೇವರಿಗೆ ಅರ್ಘ್ಯ, ಸಾವಿತ್ರಿಗೆ ಅರ್ಘ್ಯ ಕೊಡುವ ಸಂಪ್ರದಾಯ ಇದೆ.

ಈ ದಿನ ಸಾವಿತ್ರಿಯು ತನ್ನ ಪತಿಯ ಕಳೆದುಹೋದ ಜೀವವನ್ನು ಯಮಧರ್ಮನೊಂದಿಗೆ ಹೋರಾಡಿ ಮತ್ತೆ ಪಡೆದ ದಿನವೆಂದು ಪರಿಗಣಿಸಲಾಗಿದೆ. ಚಿಕ್ಕ ವಯಸ್ಸಿನಲ್ಲೇ ಮೃತನಾದ ಸತ್ಯವಾನನನ್ನು ಯಮಧರ್ಮನನ್ನು ಮೆಚ್ಚಿಸಿ ಮತ್ತೆ ಪಡೆದ ದಿನ.  ಯಮಧರ್ಮರಾಜನು ತನ್ನ ಪತಿಯನ್ನು ಎಳೆದುಕೊಂಡು ಹೋಗುವ ಮೊದಲ ಮೂರೂ ದಿನ ಸಾವಿತ್ರಿಯು ಹಿರಿಯರ ಆಜ್ಞೆಯ ಅನುಸಾರ ವ್ರತವನ್ನು ಮಾಡಿದಳು .  ಅವಳ ವ್ರತ ಮತ್ತು ಪಾತಿವ್ರತ್ಯದ ಪ್ರಭಾವ ಯಮಧರ್ಮನ ಪಟ್ಟಣಕ್ಕೇ ಹೋದರೂ ಯಾರೂ ಅವಳ ತಡೆಯಲಾಗಲಿಲ್ಲ.

ಈ ವ್ರತದ ನಿಯಮಾನುಸಾರ ಜ್ಯೇಷ್ಟ ಶುದ್ದ ದ್ವಾದಶಿ ದಿನ ಲಘು ಭೋಜನ ಮಾಡಿ, ತ್ರಯೋದಶಿಯಿಂದ ಹುಣ್ಣಿಮೆಯ ತನಕ ಉಪವಾಸವಿರಬೇಕು.  ಹುಣ್ಣಿಮೆಯ ದಿನ ಚಂದ್ರಾರ್ಘ್ಯ, ಸುವಾಸಿನಿ ಪೂಜ, ದಂಪತಿ ಪೂಜ ಮಾಡಬೇಕು.

*ಸಾವಿತ್ರಿ ಯಾರು* ? – ಮದ್ರ ದೇಶದ ಅಧಿಪತಿ ಅಶ್ವಪತಿ ಮತ್ತು ಮಾಲವಿ ತಮಗೆ ಮಕ್ಕಳು ಬೇಕೆಂದು ಸವಿತೃನಾಮಕ ಸೂರ್ಯನನ್ನು ಕುರಿತು ತಪ ಮಾಡಲು ಹೆಣ್ಣು ಮಗುವನ್ನು ಕರುಣಿಸಿದರು.  ಆ ಮಗುವೇ ಸಾವಿತ್ರಿ.  ಅವಳ ಜಾತಕ ರೀತ್ಯ ಅವಳ ಗಂಡನಿಗೆ ಚಿಕ್ಕ ವಯಸ್ಸಿನಲ್ಲೇ ಮೃತನಾಗುವನೆಂದು ತಿಳಿಯಿತು. ಮದುವೆಯ ವಯಸ್ಸು ತಲುಪಿದ ಮಗಳ ವಿವಾಹಕ್ಕೆ ವರನನ್ನು ಹುಡುಕುತ್ತಿದ್ದಾಗ, ನಾರದರು ಸತ್ಯವಾನನನ್ನು ಸೂಚಿಸಿದರು.  ಸತ್ಯವಾನನಾದರೂ ತನ್ನ ಕುರುಡ ತಂದೆ ದ್ಯುಮತ್ಸೇನನ ಸೇವೆ ಮಾಡಿಕೊಂಡಿದ್ದನು.  ನಾರದರು ಅವನ ಅಲ್ಪಾಯಸ್ಸಿನ ಬಗ್ಗೆಯೂ ತಿಳಿಸಿ ಸಾವಿತ್ರಿಗೆ ತ್ರಿದಿನದ ಜ್ಯೇಷ್ಟಮಾಸದ ವೃತವನ್ನು ಉಪದೇಶಿಸಿದ್ದರು.  ಅದರಂತೆ ಜ್ಯೇಷ್ಟಾ ವ್ರತವನ್ನು ಮಾಡಿದ ಸಾವಿತ್ರಿ ಕಡೆಯ ದಿನ ಎಲ್ಲ ಮುಗಿದ ನಂತರ ತನ್ನ ಪತಿಯ ಒಯ್ಯಲು ಕೋಣವಾಹನನಾಗಿ ಬಂದ ಯಮನೊಂದಿಗೆ ಹೋರಾಡಿ ಪತಿಯನ್ನು ಪಡೆದ ದಿನವೇ ವಟಸಾವಿತ್ರಿ ಹುಣ್ಣಿಮೆ

ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವೂ ವೃದ್ಧಿಯಾಗಬೇಕೆಂದು ಸ್ತ್ರೀಯರು ಈ ವ್ರತವನ್ನು ಮಾಡುತ್ತಾರೆ. ಸಾವಿತ್ರಿಯನ್ನು ಒಬ್ಬ ಶ್ರೇಷ್ಟ ಪತಿವ್ರತೆ ಎಂದು ಪರಿಗಣಿಸಲಾಗಿದೆ

ಈ ವ್ರತದ ಪ್ರಧಾನ ದೇವತೆ ಸಾವಿತ್ರಿಸಹಿತ ಬ್ರಹ್ಮದೇವ. ಸತ್ಯವಾನ, ಸಾವಿತ್ರಿ, ನಾರದ ಮತ್ತು ಯಮಧರ್ಮ ಇವರು ಉಪ (ಗೌಣ) ದೇವತೆಗಳಾಗಿದ್ದಾರೆ.

ಈ ಸಾವಿತ್ರಿ ಕಥೆಗೆ ವಟ ಶಬ್ದ ಪ್ರಯೋಗದ ಔಚಿತ್ಯವೇನು ?

ಯಮಧರ್ಮರಾಜನು ಸತ್ಯವಾನನ ಪ್ರಾಣಹರಣ ಮಾಡಿದ ನಂತರ ಸಾವಿತ್ರಿಯು ಯಮಧರ್ಮನೊಂದಿಗೆ ಸತತವಾಗಿ ಮೂರು ದಿನ ಶಾಸ್ತ್ರಚರ್ಚೆಯನ್ನು ವಟವೃಕ್ಷದ ಕೆಳಗೆ ಮಾಡಿದಳು. ಆ ವಟವೃಕ್ಷದ ಕೆಳಗೇ ಯಮಧರ್ಮನು ಪ್ರಸನ್ನನಾಗಿ ಸತ್ಯವಾನನಿಗೆ ಮರು ಜೀವವ ನೀಡಿದನು ಆದುದರಿಂದ ವಟವೃಕ್ಷದೊಂದಿಗೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು. ವಟವೃಕ್ಷ, ಅಶ್ವತ್ಥ ವೃಕ್ಷ, ಶಮಿ /ಬನ್ನಿ ವೃಕ್ಷ ಇವು ಪವಿತ್ರ ಮತ್ತು ಯಜ್ಞ ವೃಕ್ಷಗಳಾಗಿವೆ, ಇವೆಲ್ಲ ವೃಕ್ಷಗಳಲ್ಲಿ ವಟವೃಕ್ಷದ ಆಯುಷ್ಯವು ಅತ್ಯಧಿಕವಾಗಿದ್ದು ಅದರಂತೇ ಸತ್ಯವಾನನ ಆಯಸ್ಸು ಅಧಿಕವಾಗಿದೆ.

ಪ್ರಳಯಕಾಲದಲ್ಲೂ ಬಾಲಮುಕುಂದ ರೂಪದಿಂದ ಪರಮಾತ್ಮನು ಲಕ್ಷ್ಮೀ ಸಾನ್ನಿಧ್ಯವಿರುವ ವಟವೃಕ್ಷದ ಮೇಲೆ ಮಲಗಿರುತ್ತಾನೆ. ಮತ್ತು ಬ್ರಹ್ಮ ವಟ ವೃಕ್ಷವು ಬ್ರಹ್ಮ ವಿಷ್ಣು ಮಹೇಶ್ವರರ ಆವಾಸಸ್ಥಾನವಾಗಿರುತ್ತದೆ. ಇದೆಲ್ಲ ಮಹತ್ವ ವಟ ವ್ರುಕ್ಷಕ್ಕೆ ಇದೆ. ಆದ್ದರಿಂದಲೇ ಬಹುಶ: ಸಾವಿತ್ರಿ ವಟವೃಕ್ಷದ ಕೆಳಗೇ ಯಮಧರ್ಮನೊಂದಿಗೆ ವಾಗ್ವಾದ ಮಾಡಿದಳು.

*ವ್ರತವನ್ನು ಆಚರಿಸುವ ಪದ್ಧತಿ* :
ಸೌಭಾಗ್ಯವತಿ ಸ್ತ್ರೀಯು ನನಗೆ ಮತ್ತು ನನ್ನ ಪತಿಗೆ ಆರೋಗ್ಯಸಹಿತ ದೀರ್ಘಾಯುಷ್ಯವನ್ನು ದೊರೆಯಲಿ’, ಎಂದು ಸಂಕಲ್ಪ ಮಾಡಬೇಕು.
ವಟವೃಕ್ಷಕ್ಕೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಪೂಜೆಯಲ್ಲಿ ಅಭಿಷೇಕವಾದ ನಂತರ ವಟಕ್ಕೆ ದಾರವನ್ನು ಸುತ್ತಬೇಕು, ವಟದ ಕೊಂಬೆಯ ಸುತ್ತಲೂ ಹತ್ತಿಯ ದಾರದಿಂದ ಮೂರು ಸುತ್ತು ಸುತ್ತಬೇಕು. ಪೂಜೆಯ ಕೊನೆಯಲ್ಲಿ ‘ಅಖಂಡ ಸೌಭಾಗ್ಯ ಲಭಿಸಲಿ, ಪ್ರತಿಯೊಂದು ಜನ್ಮದಲ್ಲಿ ಈ ಪತಿಯೇ ಲಭಿಸಲಿ, ಹಾಗೆಯೇ ಧನಧಾನ್ಯ ಮತ್ತು ಕುಲದ ವೃದ್ಧಿಯಾಗಲಿ’, ಎಂದು ಸಾವಿತ್ರೀಸಹ ಬ್ರಹ್ಮದೇವನಿಗೆ ಪ್ರಾರ್ಥಿಸುತ್ತಾರೆ. ಸ್ತ್ರೀಯರು ಸಂಪೂರ್ಣ ದಿನ ಉಪವಾಸವನ್ನು ಮಾಡಬೇಕು.

ಲೇಖನ: ಶ್ರೀಮತಿ ಗೀತಾ ನರಹರಿ

This is the day on which Savitri got her husband Satyavan back to life.   Satyavan had died at an early age.  Savitri did the vratha for three days, when Yamadharma Raja came to take her husband after his death, she also followed him to Yamaloka and brought back her husband.

It is a celebration observed by married women. On this pournami day,  during the three days of the month of Jyesta,  a married woman marks her love for her husband by tying a ceremonial thread around a vat (banyan) tree. 

Purpose : ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವೂ ವೃದ್ಧಿಯಾಗಬೇಕೆಂದು ಸ್ತ್ರೀಯರು ಈ ವ್ರತವನ್ನು ಮಾಡುತ್ತಾರೆ. ಸಾವಿತ್ರಿಯನ್ನು ಒಬ್ಬ ಶ್ರೇಷ್ಟ ಪತಿವ್ರತೆ ಎಂದು ಪರಿಗಣಿಸಲಾಗಿದೆ

Satyavan – Savitri Story :
This is a story narrated by Markandeya Rushigalu to Yudhishtira available in “Vana Parva” of Mahabharatha.
Aswapathi was the king of Madra. He was childless. He prayed Savitranamaka Soorya to be blessed with a child. He was blessed with a female child, and was named after her as “Savitri”.

Savitri reaches her marriage age and her father was searching for a groom. Naradaru suggested Satyavan, son of blind king Dyumatsena. He was living as a forest dweller. Savitri married Satyavan and was happy. Naradaru further told that Satyavan has a very short life and he recommends a vrutha called as “Trirathra vratha”. .

As per the Vratha Savithri has to do fasting (upavaasa) for 3 days :
Jyesta shudda Dwadashi – Laghu Bhojana
Jyesta Shudda Trayadoshi to Hunnime – 3 days – upavaasa

On Hunnime – Chandraarghya, Suvasini pooja, dampathi pooja., etc.

Savitri performed the vratha with utmost care before the foreseen death day of Satyavan. The forecasted death day of Satyavan came. Savitri also followed Satyavan to the forest. There Satyavan attacked by severe headache and died.   Yamadharmaraja came for carrying Satyavan.  Savitri also followed Yamadharmaraja. Because of her pathiseva, and in-law’s seva, no one could stop her anywhere. She followed Yamadharmaraja to Yamaloka also.
Yamadharmaraja pleased with her gave a boon that her father in law gets his eye vision back and the kingdom back to him.
Yamadharmaraja asked her to ask for another boon, when she asked “I want 100 children from Satyavan”.
Yamadharmaraja pleased with her blessed her and awarded Satyavan with 104 years of life.

This is on this Day Savitri completed the Vratha. That is why this Vratha is called as Vatasavitri Hunnime.

On this day – marada baagina {ಮರದ ಬಾಗಿನ ದಾನ} to be given to muthaideyaru seeking dheerga maangalya bhaagya.

ಮರದ ಬಾಗಿನ ದಾನ ಮಂತ್ರ

ಸಾವಿತ್ರೀಯಂ ಮಯ ದತ್ತಾ ಸಹಿರಣ್ಯಾ ಮಹಾಸತೀ |
ಬ್ರಹ್ಮಣ: ಪ್ರೀಣನಾರ್ಥಾಯ ಬ್ರಾಹ್ಮಣ ಪ್ರತಿಗೃಹ್ಯತಾಂ |
ವ್ರತೇನಾನೇನ ಗೋವಿಂದ ವೈಧವ್ಯಂ ನಾಪ್ನುಯಾತ್ ಕ್ವಚಿತ್ |

CLICK HERE FOR PDF FILE – English

Kannada PDF File

 

 

ಆಧಾರ ; ಹಲವು ಲೇಖನಗಳು

Sumadhwa Seva © 2022