Makara sankramana ಮಕರ ಸಂಕ್ರಮಣ

  1. Pongal cow decorated
  • ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು

    ಎಲ್ಲರಿಗೂ ಮಕರ ಸಂಕ್ರಾಂತಿಯು ಆರೋಗ್ಯ ಭಾಗ್ಯ ನೀಡಿ ಕೊರೋನಾದಂತಹ ಹೆಮ್ಮಾರಿಯನ್ನು ತೊಲಗಿಸಲಿ

ಉತ್ತರಾಯಣ –   ಸೂರ್ಯನು ಭೂಮಧ್ಯೆಯ ರೇಖೆಗೆ ಉತ್ತರಾಭಿಮುಖ ವಾಗಿ ಸಂಚರಿಸುವ ಕಾಲ.  ಸಾಮಾನ್ಯವಾಗಿ ಜನವರಿ 14, 15ಕ್ಕೆ ಪ್ರಾರಂಭವಾಗುತ್ತದೆ.  ಮಕರಕ್ಕೆ ಸೂರ್ಯನು ಪ್ರವೇಶಿಸಿದ ನಂತರ ಮುಂದಿನ ಮೂವತ್ತು ಘಳಿಗೆ ಬಹಳ ಪುಣ್ಯಕಾಲ. ಅದಕ್ಕೇ ಪಂಚಾಂಗದಲ್ಲಿ ಉತ್ತರಾಯಣ ಪುಣ್ಯಕಾಲದ ಸಮಯವನ್ನು ತಿಳಿಸಿರುತ್ತಾರೆ.   ಉತ್ತರಾಯಣ ಪರ್ವಕಾಲದಲ್ಲಿ ಕರಿಎಳ್ಳು ಅರೆದು ಅದನ್ನು ಮೈಗೆ ಹಚ್ಚಿಕೊಂಡು ಎಲ್ಲರೂ ಸ್ನಾನ ಮಾಡಬೇಕು. ಇದರಿಂದ ರೋಗದಿಂದ ದೂರ.  ಉತ್ತರಾಯಣ ಪರ್ವಕಾಲದಲ್ಲಿ ಹೆಂಗಸರು ತಲೆಯ ಮೇಲೆ ಸ್ನಾನ ಮಾಡಬಾರದು.  ಆದರೆ ಎಳ್ಳು ಮೈಗೆ ತಿಕ್ಕಿ ಸ್ನಾನ ಮಾಡಬೇಕು.

ಮಕರ ಸಂಕ್ರಾಂತಿ ದಿನ  : ಷಡ್ತಿಲ ಕರ್ಮಾನುಷ್ಠಾನ ಆಚರಣೆ ಮಾಡಬೇಕು.  ಅಂದರೆ ಎಳ್ಳಿನ ಸಂಬಂಧಿತ ಆರು ಕರ್ಮಾನುಷ್ಠಾನ.  ೧) ಎಳ್ಳು ಹಚ್ಚಿ ಸ್ನಾನ,  ೨) ಎಳ್ಳುದಾನ, ೩) ಎಳ್ಳು ಹೋಮ  ೪) ಎಳ್ಳು ಭಕ್ಷಣ,  ೫) ಎಳ್ಳಿನಿಂದ ತರ್ಪಣ,   ೬) ಎಳ್ಳೆಣ್ಣೆಯ ದೀಪ ಇವು ಬಹಳ ವಿಶೇಷ.

 

ಸಂಕ್ರಮಣ ಪರ್ವಕಾಲದಲ್ಲಿ ದ್ವಾದಶ ಪಿತೃಗಳಿಗೆ ತರ್ಪಣ ರೂಢಿಯಲ್ಲಿದೆ.   ಸರ್ವಪಿತೃಗಳಿಗೂ ತರ್ಪಣ ಕೊಡಬೇಕು ಕನಿಷ್ಠ ದ್ವಾದಶಪಿತೃಗಳಿಗಾದರೂ ಕೊಡಬೇಕು.  

ಸಂಕ್ರಾಂತಿ ಎಂದರೇನು ?
ಸೂರ್ಯನ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುವುದನ್ನು “ಸಂಕ್ರಮಣ” ಎನ್ನುತ್ತಾರೆ.

ಒಟ್ಟು ಎಷ್ಟು ಸಂಕ್ರಮಣಗಳಿವೆ?
ಒಟ್ಟು ಹನ್ನೆರಡು ಸಂಕ್ರಮಣಗಳಿವೆ.

ಮಕರ ಸಂಕ್ರಮಣ ಎಂದರೇನು ?
ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯವನ್ನು ಮಕರ ಸಂಕ್ರಮಣ ಅಥವ ಉತ್ತರಾಯಣ ಪರ್ವಕಾಲವೆನ್ನುತ್ತಾರೆ.

ಸಂಕ್ರಮಣದ ಪರ್ವಕಾಲವೆಂದರೇನು ?
ಸೂರ್ಯನು ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಮಯವನ್ನು ಸಂಕ್ರಮಣ ಪರ್ವಕಾಲವೆನ್ನುತ್ತಾರೆ.
ದಕ್ಷಿಣಾಯಣ ಪುಣ್ಯಕಾಲದಲ್ಲಿ ಉತ್ತರಾಯಣ ಮುಗಿಯುವ ಮುನ್ನದ ಕೆಲವು ಘಳಿಗೆ ಪ್ರಶಸ್ತ. ಉತ್ತರಾಯಣ ಪುಣ್ಯಕಾಲ ದಲ್ಲಿ ಮಕರ ರಾಶಿಯ ಪ್ರವೇಶಿಸಿದ ನಂತರದ ಘಳಿಗೆ ಪ್ರಶಸ್ತ.

ಮಕರ ಸಂಕ್ರಮಣದ ಪರ್ವಕಾಲ ಎಷ್ಟು ಸಮಯ ವಿರುತ್ತದೆ ?
ಉತ್ತರ : ಮಕರ ಸಂಕ್ರಮಣದ ಪರ್ವಕಾಲ ಸಂಕ್ರಮಣದ ನಂತರದ 16 ಘಳಿಗೆ (20 ಘಳಿಗೆ ಕೆಲವರ ಸಂಪ್ರದಾಯ).  ಅರ್ಥಾತ್ ಒಂದು ಘಳಿಗೆ ಅಂದರೆ 48 ನಿಮಿಷ.

 

ಈ ಸಲದ ಮಕರ ಸಂಕ್ರಮಣದ ಪರ್ವಕಾಲ ಸಮಯ ಯಾವುದು ?
ಉತ್ತರ : ಈ ಸಮಯ ಸಂಕ್ರಮಣ ಪರ್ವಕಾಲ 14.1.25 ಮಂಗಳವಾರ ಮಧ್ಯಾಹ್ನ 2.43ರಿಂದ ಸೂರ್ಯಾಸ್ತವರೆಗೂ ಉತ್ತರಾಯಣ  ಪರ್ವಕಾಲ  ಇರುತ್ತದೆ,

ಸಂಕ್ರಮಣ ಕಾಲದಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಶ್ರೇಷ್ಟ ಎನ್ನುತ್ತಾರೆ. ಆದರೆ ಅಲ್ಲಿಗೆ ಹೋಗಲು ಅನುಕೂಲ ಇಲ್ಲದವರು ಏನು ಮಾಡಬೇಕು?
ಉತ್ತರ : ಎಲ್ಲರೂ ಸಂಕ್ರಮಣ ಸಂದರ್ಭದಲ್ಲಿ ನದಿ ಸ್ನಾನಕ್ಕೆ ಹೋಗಲು, ಅಥವಾ ಬಾವಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ. ಅಂತಹವರು ಮನೆಯಲ್ಲಿಯೇ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳನ್ನು ನೆನೆದು ಸ್ನಾನ ಮಾಡತಕ್ಕದ್ದು.

ಮಕರ ಸಂಕ್ರಮಣದಂದು ಪೂಜೆಯನ್ನು ಸಂಕ್ರಮಣದ ನಂತರವೇ ಮಾಡಬೇಕೆ ಅಥವಾ ಮುನ್ನವೇ ಮಾಡಬಹುದೇ?

ಉತ್ತರ : ಮಕರ ಸಂಕ್ರಮಣದಲ್ಲಿ ಪೂಜೆಯನ್ನು ಸಂಕ್ರಮಣಕ್ಕಿಂತ ಮುನ್ನವೇ ಮಾಡಬಹುದು. ನೈವೇದ್ಯವನ್ನೂ ಮಾಡಬಹುದು.

ತರ್ಪಣಾಧಿಕಾರಿಗಳು ತರ್ಪಣ ಕೊಡುವ ಸಮಯ ಯಾವುದು ?
ಉತ್ತರ : ಮಕರ ಸಂಕ್ರಮಣ ಪರ್ವಕಾಲ ಸಮಯದಲ್ಲಿ.   14.1.2025  ಮಧ್ಯಾಹ್ನ 2.43 pm ರಿಂದ ಸೂರ್ಯಾಸ್ತದವರೆಗೂ ತರ್ಪಣ ಕೊಡಬಹುದು.

ಮಕರ ಸಂಕ್ರಮಣ ದಿನವೇ ಶ್ರಾದ್ಧ ಇದ್ದರೆ ಏನು ಮಾಡಬೇಕು ?
ಉತ್ತರ : ಶ್ರಾದ್ಧವನ್ನು ಸಂಕ್ರಮಣ ಮುನ್ನವೂ ಮಾಡಬಹುದು. ಆ ಸಂದರ್ಭದಲ್ಲಿ ಮಾಡಿದರೆ ಶ್ರೇಷ್ಟ.

ದಾನವನ್ನು ಯಾವಾಗ ಕೊಡಬೇಕು ?
ಉತ್ತರ : ದಾನವನ್ನು ಸಂಕ್ರಮಣ ಸಮಯದಲ್ಲಿ ಅಥವಾ ನಂತರ ಕೊಡಬಹುದು. ಅನುಕೂಲವಿದ್ದರೆ ದಾನ ಆ ಸಮಯದಲ್ಲೇ ಕೊಡಿ. ಇಲ್ಲದಿದ್ದರೆ ಮೀಸಲಿಟ್ಟು ನಂತರ ದಾನವನ್ನು ಕೊಡಬಹುದು.

ತಂದೆಯಿರುವವರು, ಸ್ತ್ರೀಯರು, ಮಕ್ಕಳು ಬೆಳಿಗ್ಯೆ ಫಲಹಾರ ಮಾಡಬಹುದಾ?
ಉತ್ತರ :   ಅವರುಗಳು ಉಪವಾಸವಿರಬೇಕೆಂದಿಲ್ಲ. ಬೆಳಿಗ್ಯೆ ಪೂಜೆ ಮುಗಿಸಿ, ಹಣ್ಣು, ಫಲಹಾರ ಮಾಡಿ, ಸಂಕ್ರಮಣದ ನಂತರ ಭೋಜನ ಮಾಡತಕ್ಕದ್ದು.

ಸ್ತ್ರೀಯರು, ಸಂಕ್ರಮಣ ಸಮಯದಲ್ಲಿ ತಲೆಗೆ ಸ್ನಾನ ಮಾಡಬಹುದಾ?
ಉತ್ತರ : ಸ್ತ್ರೀಯರು ಯಾವ ಕಾಲದಲ್ಲೂ ಬರೀ ಸ್ನಾನವನ್ನು ಮಾಡುವಂತಿಲ್ಲ. ಎಣ್ಣೆ ನೀರು ಹಾಕಿಕೊಳ್ಳುವವರು ಮಾತ್ರ ತಲೆಗೆ ಸ್ನಾನ ಮಾಡಬಹುದು.

ಸಂಕ್ರಮಣಕ್ಕೂ ಮುನ್ನವೇ ಅಡಿಗೆ ಮಾಡಬಹುದಾ ಅಥವಾ ಗ್ರಹಣದ ರೀತಿ ನಂತರ ಮಾಡಬೇಕೆ?
ಉತ್ತರ :  ಗ್ರಹಣಕ್ಕೂ ಸಂಕ್ರಮಣಕ್ಕೂ ಬಹಳ ವ್ಯತ್ಯಾಸವಿದೆ. ಸಂಕ್ರಮಣಕ್ಕೂ ಮುನ್ನವೇ ಅಡಿಗೆ ಸಿದ್ಧಪಡಿಸಿ, ಮುನ್ನವೇ ನೈವೇದ್ಯವನ್ನೂ ದೇವರಿಗೆ ಮಾಡಬಹುದು. ಸ್ವೀಕಾರ ಮಾತ್ರ ಸಂಕ್ರಮಣ ನಂತರ.

ಉತ್ತರಾಯಣ ಪರ್ವಕಾಲದಲ್ಲಿ ತಿಲದ ಪ್ರಾಮುಖ್ಯತೆ ಏನು ?
ಉತ್ತರ :  ಈ ಕಾಲದಲ್ಲಿ ಆರು ತಿಲ ಕರ್ಮಗಳನ್ನು ಮಾಡತಕ್ಕದ್ದು. ಅ) ತಿಲ ಸ್ನಾನ, ಆ) ತಿಲ ದೀಪ, ಇ) ತಿಲ ತರ್ಪಣ, ಈ) ತಿಲ ಹೋಮ, ಉ) ತಿಲ ದಾನ, ಊ) ತಿಲ ಭಕ್ಷಣ. ಸ್ನಾನ ಸಮಯದಲ್ಲಿ ತಿಲವನ್ನು ಹಚ್ಚಿಕೊಂಡು ಮಾಡಬೇಕು.

ಉತ್ತರಾಯಣ ಕಾಲದಲ್ಲಿ ಮಾಡಿದ ದಾನ ಸಾಮಾನ್ಯ ದಿನಗಳಲ್ಲಿ ಮಾಡಿದ ದಾನಕ್ಕಿಂತಲೂ ಕೋಟಿಪಾಲು ಪುಣ್ಯಪ್ರದ. ಯಥಾಶಕ್ತಿ ದಾನ ಮಾಡಬೇಕು. ಸಾಲವ ಮಾಡಾದರೂ ದಾನ ಮಾಡಬೇಕಾಗಿಲ್ಲ.

ಇಂದು ಗೋವುಗಳನ್ನು ವಿಶೇಷವಾಗಿ ಪೂಜಿಸಬೇಕು. ಹಸುಗಳಿಗೆ ವಿಶೇಷವಾಗಿ ಸ್ನಾನ ಮಾಡಿಸಿ ಅರಿಶಿನ ಹಚ್ಚಿ, ಕೊಂಬುಗಳಿಗೆ ಮತ್ತು ಇಡೀ ಗೋವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.

*********************************************

ಎಳ್ಳು ಸ್ವೀಕಾರಕ್ಕೆ ವೈಜ್ಞಾನಿಕ ಕಾರಣ –
ಧನುರ್ಮಾಸದಲ್ಲಿ ದೇಹಕ್ಕೆ ಉಂಟಾಗುವ ತೊಂದರೆಗಳನ್ನು ನಿವಾರಿಸುವ ಉದ್ದೇಶದಿಂದ ಹುಗ್ಗಿಯನ್ನು ಸೇವಿಸುತ್ತೇವೆ. ಏಕೆಂದರೆ ಛಳಿಗಾಲವು ಧನುರ್ಮಾಸದಲ್ಲಿ ಉಲ್ಭಣವಾಗಿರುತ್ತೆ. ಈ ಕಾಲದಲ್ಲಿ ಮಲಬದ್ಧತೆಯಾಗಿ ತೊಂದರೆಯಾಗಿರುತ್ತೆ. ಏಕೆಂದರೆ ಛಳಿಗಾಲದಲ್ಲಿ ಶರೀರದಲ್ಲಿರುವ ಉಷ್ಣಾಂಶವು ಹೆಚ್ಚು ವ್ಯಯವಾಗಿ, ಅದನ್ನು ಸರಿದೂಗಿಸಲು ವಾತಾವರಣವು ಸರಿಯಾಗಿರದೆ ಚರ್ಮ ಸುಕ್ಕು ಕಟ್ಟುತ್ತದೆ. ಎರಡನೆಯದಾಗಿ ಯಾವಾಗ ಚರ್ಮದ ಉಷ್ಣಾಂಶವು ಕಮ್ಮಿಯಾಗತ್ತೋ ಆಗ ಚರ್ಮ ಬಿರಿಯತ್ತೆ.  ಶಾಸ್ತ್ರದ ಪ್ರಕಾರ ಹುಗ್ಗಿಯನ್ನು ಪ್ರಾತ: ಕಾಲ ಸೇವಿಸಿದರೆ ಮೇಲೆ ಹೇಳಿದ ಶರೀರದ ಕೊರತೆಯೆಲ್ಲ ಸರಿದೂಗುತ್ತೆ.  ಧನುರ್ಮಾಸ ಕಳೆದು ಮಕರ ಮಾಸ ಆರಂಭ ವಾಗುವವರೆಗೆ ಮನುಷ್ಯನ ದೇಹದಲ್ಲಿನ ಕೊಬ್ಬಿನ ಅಂಶ ಅವಶ್ಯಕತೆಯಷ್ಟು ಇರುವುದಿಲ್ಲ. ಕಮ್ಮಿ ಇರುತ್ತದೆ.  ಉತ್ತರಾಯಣಕಾಲದಿಂದ  ಶೆಖೆ ಪ್ರಾರಂಭವಾಗುವುದರಿಂದ ಈ ದೇಹಕ್ಕೆ ಅತ್ಯವಶ್ಯಕವಾದ ಕೊಬ್ಬಿನ ಅಂಶ ಸರಿದೂಗದಿದ್ದರೆ ಮುಂದೆ ಬಿಸಿಲಿನ ತಾಪದಿಂದ ಅನೇಕ ತೊಂದರೆಯಾಗುತ್ತೆ. ಇದನ್ನು ತಪ್ಪಿಸಲು ಮುಂಜಾಗರೂಕತೆಗಾಗಿ ಎಳ್ಳನ್ನು ಉಪಯೋಗ ಮಾಡಬೇಕು. ವೈದ್ಯ ಶಾಸ್ತ್ರ ಮತ್ತು ಆಹಾರಶಾಸ್ತ್ರ ಪ್ರಕಾರ ಶರೀರದ ಚರ್ಮ, ನೇತ್ರ, ಮತ್ತು ಅಸ್ತಿ ಇವುಗಳ ಬೆಳವಣಿಗೆಗೆ ಬೇಕಾದ ’ಎ’ ಮತ್ತು ’ಬಿ’ ವಿಟಮಿನ್ಸ್ ಕೊಬ್ಬಿನಲ್ಲಿವೆ. ತೈಲಧಾನ್ಯವಾದ ಎಳ್ಳಿನಲ್ಲಿ ಈ ವಿಟಮಿನ್ಸ್ ಹೇರಳವಾಗಿರುವುದ ರಿಂದ ಎಳ್ಳು ಒಳ್ಳೆಯದು.

“ಎಳ್ಳು ಬೆಲ್ಲ ತಿಂದು  ಒಳ್ಳೆ ಮಾತಾಡು”. 
ನವಗ್ರಹಗಳಿಗೆ ನವಧಾನ್ಯ ಹೇಳುತ್ತಾರೆ. ನವಧಾನ್ಯಗಳಲ್ಲಿ ಎಳ್ಳು ಮಾತ್ರ ತೈಲಧಾನ್ಯ. ಉಳಿದವು ಯಾವುದೂ ತೈಲಧಾನ್ಯವಲ್ಲ. ಆದ್ದರಿಂದ ಎಳ್ಳನ್ನು ತಿನ್ನಬೇಕೆಂದಿದ್ದಾರೆ, ಬರೀ ಎಳ್ಳು ತಿಂದರೆ ಪಿತ್ತ ಜಾಸ್ತಿಯಾಗತ್ತೆ. ಅದಕ್ಕೇ ಪಿತ್ತಹರವಾದ ಬೆಲ್ಲವನ್ನೂ ಸೇರಿಸಿ ತೆಗೆದುಕೊಂಡರೆ ಕೊಬ್ಬಿನ ಅಂಶ ಸರಿದೂಗುತ್ತೆ. ಸ್ವಭಾವತ: ಬೆಲ್ಲವೂ ಪಿತ್ತದ ಗುಣವುಳ್ಳದಾದ್ದರಿಂದ ಎಳ್ಳಿನ ಜೊತೆ ತೆಗೆದುಕೊಂಡರೆ ಪಿತ್ತವನ್ನು ಸ್ಥಿಮಿತದಲ್ಲಿಡುತ್ತೆ. “ಉಷ್ಣೇನ ಉಷ್ಣಂ ಶೀತಲಂ” ಎನ್ನುವ ಹಾಗೆ ಪಿತ್ತವನ್ನು ಪಿತ್ತದಿಂದ ನಾಶ ಮಾಡುವುದೇ ಎಳ್ಳುಬೆಲ್ಲ.  ಹಸಿ ಎಳ್ಳಿನ ದೋಷ ನಿವಾರಣೆಗಾಗಿ ಹುರಿದು ಉಪಯೋಗಿಸಬೇಕು. ಇದರ ಜೊತೆಗೆ ರುಚಿಗೋಸ್ಕರ, ಕೊಬ್ಬಿನ ಅಂಶವಿರುವ ಕಡ್ಲೇಕಾಯಿ ಬೀಜವನ್ನು ಬೆರೆಸಿ ತಿನ್ನಬೇಕೆಂದಿದ್ದಾರೆ. ಎಳ್ಳಿಗೆ ವಾತ, ವ್ರಣ, ಮತ್ತು ಚರ್ಮರೋಗ ನಿವಾರಣೆ ಮಾಡುವ ಗುಣವಿದೆ. ರಕ್ತವೃದ್ಧಿ ಮಾಡುತ್ತೆ.

==============================

ಸಂಕ್ರಾಂತಿ ದಿನ ಸಂಜೆ ಮಕ್ಕಳನ್ನು ಕೂಡಿಸಿ ಆರತಿ ಮಾಡಿ ಬೋರೇ ಹಣ್ಣು (ಎಳಚಿ ಹಣ್ಣು), ಕಬ್ಬಿನ ಚೂರು, ನಾಣ್ಯಗಳನ್ನು ಹಾಕುತ್ತಾರೆ. ಏಕೆಂದರೆ

ಮಕರ ಸಂಕ್ರಾಂತಿಯ ಸಂಜೆ ಐದು ವರ್ಷದ ಒಳಗಿನ ಮಕ್ಕಳನ್ನು ಕೂಡಿಸಿ, ಆರತಿ ಮಾಡಿ ಅವರಿಗೆ ಬೋರೇ ಹಣ್ಣು (ಎಲಚೇ ಹಣ್ಣು) ಕಬ್ಬಿನ ಜಲ್ಲೆಯ ಚೂರು ಮತ್ತು ನಾಣ್ಯಗಳನ್ನು ಕೂಡಿಸಿ ಅವರ ತಲೆಯ ಮೇಲೆ ಎರೆಯುವುದು ಮಾಡುತ್ತೇವೆ. ಏಕೆ ? ಇದಕ್ಕೂ ವೈಜ್ಞಾನಿಕ ಕಾರಣವಿದೆ. ಆಯುರ್ವೇದ ರೀತ್ಯ ನೆಗಡಿ, ಕೆಮ್ಮು, ಮೂಲವ್ಯಾಧಿ, ಸುಟ್ಟಗಾಯ, ಬೆವರುವುದು, ಬಿಕ್ಕಳಿಕೆ ಮೊದಲಾದ್ದಕ್ಕೆ ಎಲಚಿಹಣ್ಣಿನಿಂದ ಮಾಡಿದ ಔಷಧಿಗಳು ಬಹಳ ಪರಿಣಾಮಕಾರಿ. ಇಷ್ಟೇ ಅಲ್ಲ, ಅವು ಮಕ್ಕಳಲ್ಲಿನ ತುಂಟತನ, ಹಠಮಾರಿತನ ಹೋಗಲಾಡಿಸಲೂ ಸಹಕಾರಿ. ಎಲಚೆ ಹಣ್ಣಿನ ಕಷಾಯವನ್ನು ಇಂತಹ ಮಕ್ಕಳಿಗೆ ಕೊಡುವ ವಾಡಿಕೆಯಿದೆ. ಆದ್ದರಿಂದ ಅದರ ಸ್ಪರ್ಷದಿಂದ ಕೂಡ ಅದರ ಗುಣ ಬರುತ್ತದೆ.

ಸುಮ್ಮನೆ ತಲೆಯ ಮೇಲೆ ಈ ಹಣ್ಣು ಬಿದ್ದರೆ ತುಂಟತನ ಹೇಗೆ ಹೋಗುತ್ತೆ? ಮನುಷ್ಯನ ದೇಹವೂ ಕೂಡ ಒಂದು ವಿದ್ಯುತ್ ಕೇಂದ್ರ.  ಸದಾ ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ವಿಸರ್ಜನೆ ಆಗುತ್ತಿರುತ್ತದೆ. ಈ ಉತ್ಪಾನೆಯ ಮುಖ್ಯ ಕೇಂದ್ರ ಬ್ರಹ್ಮಾಂಡವೂ (ನೆತ್ತಿ) ಒಂದು. ಎಲಚಿ ಹಣ್ಣನ್ನು ತಲೆಯ ಮೇಲೆ ಹಾಕಿದಾಗ ಇದರ ಸ್ಪರ್ಶ ಮಾತ್ರದಿಂದ ದೇಹದಲ್ಲಿರುವ ವಿದ್ಯುತ್ ಈ ಗುಣವನ್ನು ಸ್ವಲ್ಪ ಆಕರ್ಷಿಸುತ್ತದೆ. ಇದಕ್ಕೆ ಎಲೆಕ್ಟ್ರೋ ಮಾಗ್ನೆಟಿಸಂ ಎನ್ನುತ್ತಾರೆ. ಹೀಗೆ ಆಕರ್ಷಿಸಲ್ಪಟ್ಟ ಎಲಚಿ ಹಣ್ಣಿನ ಗುಣವು ನೆತ್ತಿಯಲ್ಲಿರುವ ಸಂಬಂಧಿಸಿದ ನರಗಳ ಮೇಲೆ ಪ್ರಭಾವ ಬೀರಿ ಈ ಹಠಮಾರಿತನಕ್ಕೆ ಸಂಬಂಧಿಸಿದ ನರಗಳು ಸುಧಾರಿಸುತ್ತವೆ. ತುಂಟತನ ಕಡಿಮೆಯಾಗುತ್ತದೆ. ಎಳಚಿಹಣ್ಣಿನಲ್ಲಿ ಅನುದ್ವೇಗಪಡಿಸುವ ಗುಣ ಇದೆ ಎಂದಾಯಿತು. ಇದು ಮುಂಜಾಗರೂಕತೆ ದೃಷ್ಟಿಯಿಂದ ಹಿಂದಿನವರು ಮಾಡಿದ್ದು ನಮಗೆ ಸಂಪ್ರದಾಯವಾಗಿ ಕಂಡುಬಂದರೂ ವೈಜ್ಞಾನಿಕವೂ ಹೌದು.

ಬೋರೇ ಹಣ್ಣಿನ ಜೊತೆ ಕಬ್ಬಿನ ಚೂರು ಮತ್ತು ನಾಣ್ಯಗಳನ್ನೂ ಹಾಕುತ್ತಾರೆ. ಮಕ್ಕಳಿಗೆ ಸಿಹಿ ಅಂದರೆ ಇಷ್ಟ. ಕಬ್ಬಿನ ಹಣ್ಣಿನ ಚೂರು ಗಳನ್ನು ತಿನ್ನಲು ಆಸಕ್ತರಾಗು ಹಸೆಮಣೆ ಮೇಲೆ ಕೂಡುತ್ತಾರೆ. ಅಲ್ಲದೆ ಕಬ್ಬಿನ ರಸ ಪಿತ್ತಹರ. ಉತ್ತರಾಯಣ ಕಾಲದಲ್ಲಿ ಉಷ್ಣವು ಜಾಸ್ತಿ ಯಾಗುವುದರ ಮೂಲಕ ಪಿತ್ತ ಸಂಬಂಧಿ ದೋಷಗಳು ಬಾರದಿರಲಿ ಎಂದು ಕಬ್ಬಿನ ಉಪಯೋಗ ಮಾಡಿದ್ದಾರೆ.

ಮಕರ ಸಂಕ್ರಮಣವು ಪುಷ್ಯ ಮಾಸದಲ್ಲೇ ಸಾಮಾನ್ಯವಾಗಿ ಬರುತ್ತದೆ. ಶನಿಯ ನಕ್ಷತ್ರ ಪುಷ್ಯ. ಪುಷ್ಯಕ್ಕೆ ಬೃಹಸ್ಪತಿ ಅಧಿದೇವತೆ. ಶನಿಗೆ ಯಮ ಅಧಿದೇವತೆ. ಯಮ ಅಂದರೆ ಸಂಯಮ ಎಂದೂ ಅರ್ಥ. ಶನಿ ಜೀವ ನಾಡಿಗೆ ಕಾರಕ. ಉತ್ತರಾಯಣದಲ್ಲಿ ರವಿಯು ಮಕರ ರಾಶಿಗೆ ಪ್ರವೇಶಿಸುತ್ತಿದ್ದ ಹಾಗೆ ಹವಾ ಬದಲಾವಣೆಯಾಗಲು ಆರಂಭವಾಗುತ್ತದೆ. ಇದು ಎಳೆ ಮಕ್ಕಳ ಮೇಲೆ ಪ್ರಭಾವಕಾರಿ. ಮಕ್ಕಳ ಮೇಲೆ ಹೃದಯ ಬಡಿತ ಮತ್ತು ರಕ್ತ ಚಲನೆಯನ್ನು ಜೀವನಾಡಿಯು ಚುರುಕುಗೊಳಿಸುತ್ತದೆ. ಇದನ್ನು ಹತೋಟಿಯಲ್ಲಿಡಲೂ ಎಲಚಿ ಹಣ್ಣು ಸಹಾಯಕಾರಿ.

(Source article – Late Sri HKS Rao’s article on Sankranthi, Shivaratri, Ugaadi)

==============================

Sankranthi means ‘sacred change’ –  This occurs every month as the Sun moves from one house of the Zodiac to another. But special sacredness attaches to the movement of the Sun to Capricorn (Makara-Sankranthi).  The trees, the plants, herbs and  the nature are subjected to rainy season, the autumn   and the  freezing cool atmosphere  that normally exists in dakshiNaayana.  There are 12 sankramanaas in a year.  Makara Sankranthi has different names in different places :  It is Makara Sankranthi in Karnataka, Andhra, Maharashtra, etc.  It is called as Pongal in Tamilnadu, Makara Vilakku in Kerala, Maaghi in Haryana, Punjab, etc.  The festival also marks the beginning of a six months auspicious period for Hindus known as  Uttarayana period.
 
What is Uttarayana?
This time Uttarayana 14.01.2025   – Parvakaala starts from 2.43 pm till Suryasta .

 

For Gods,  it is night during Dakshinayana and it is Day during Uttarayana.  Unlike other festivals or aradhanas, Uttarayana/Dakshinayana is not followed on any particular tithi.  It starts on Makara Sankramana Day, usually January 14 or 15th and Dakshinayana starts usually on July 15th or 16th.

 
Uttarayana or Dakshinayana comprising of six months each is the time taken by the Sun to travel from one house to the other during these periods. Starting from “ಮಕರ ರಾಶಿ” (Capricorn) up to “ಮಿಥುನ” (Gemini), the travel of Sun is called as Uttarayana and starting from “ಕರ್ಕಾಟಕ” (Cancer) up to”ಧನು”, (Sagittarius) it is known as  “Dakshinayana”.   Dakshina means South direction and “ಆಯನ” means  movement.   The movement of Sun in the Southern direction is called as Dakshinayana. The time when the Sun leaves “ಮಿಥುನ ರಾಶಿ” (Gemini) and enters “ಕರ್ಕಾಟಕ ರಾಶಿ” (Cancer) is called as Karkataka Sankramana (”ಕರ್ಕಾಟಕ ಸಂಕ್ರಮಣ”), when the period of Uttarayana ends , Dakshinayana begins.  UtharaayaNa welcomes the spring season. The temperate weather, the balanced season, the harvest, the good health that man enjoys, the granary that is being filled with so many yields after hard work  etc  are all the characteristics of  the  UttaraayaNa.  That is why it is named  as  “PuNyakaala”.  “Ayana” means Movement. Path. The sun starts  changing his path leaning towards Uttara.  Gods will be having day and the daithyaas will be having night during the uttarayana.
 
Importance of ellu {ಎಳ್ಳು} or black sesame during sankramana –
Black is given special importance during Makara Sankranti.  Black color Sesame – Tila or Ellu ಎಳ್ಳು}is distributed among friends and relatives.  Delicacies made of Tila are also eaten on the day.   The main reason why black color and Tila is used because it is widely believed that sesame contains prosperities that keeps the body healthy and warm during Sankranti period.   Another reason is that Makara Sankramana swaroopa or the personified deity associated with Makara rashi is black in color.
 
Tila Karmas during Uttarayana –  During Uttarayana punyakaala, we have to do six karmaas from tila.  viz., a) snaana, b) tila deepa  c) pitru tarpana, d) tila homa,  e) tila daana. f)  Bhakshana of Tila.  Apart from this, some are preparing tila mishrita panchagavya also. 
 

Some notable points on Makara Sankramana

1. “Sankramana” means, san + kramana,  to commence movement. Hence, the name Makar Sankranti is given to one of the largest, most auspicious,  festivals in the India.   
2. Uttarayana is referred as Devayana, as it is the day for devataas and as such most of the auspicious things are done in this period only.
3. It is on this day that Bhagiratha gave tarpana to his ancestors in Ganga.
4. Bhishma, was in the sharapanjana for 56 days, and he was waiting for this parvakala, i.e., Uttarayana punyakala for breathing his last.  It is said that those who die during Uttarayana punyakala, will not have punarjanma.  (provided he has done all his dharma kaarya)
5. Preparation of Pongal –  On this day, preparation of  sweet rice  is the most important recipe done. This is a food prepared with rice, dal, jaggery, grapes, dry fruits, sugar and milk. All these ingredients are cooked in a  pot in the open and allowed to boil over, signifying plenty and prosperity for the year ahead. This is offered to the Suryanamaka paramathma as naivedya.
6.  Harvest festival –  Pongal is termed as harvest festival.  On this day, the farmer expresses his gratitudes to land, cattle and the sun
Makara Sankramana swaroopa  –   It comprise of 3 heads, 2 faces, 5 mouths, 3 eyes,  hanging ear, red teeth, long nose, 8 arms, 2 legs, black colour, mixture of male and female.
 
Distribution of ellu during makara sankramana –  ellu; jaggery; sugar doll (sakkare acchu); sweet pumpkin; sugar cane (kabbu), dakshine, taambula to be distributed during makara sankramana.  Sakkare acchu will be of different shapes like various weapons, various vehicles, various animals like elephant, tiger, lion, cow, horse,, etc.      Making of different types of sakkare acchu is for getting peace in the families of friends and relatives.
 
Ashirvada to children –  During evening, Zizyphus jujube (bore hannu), and small pieces of sugar cane, other small fruits all should be mixed and to be poured with our blessings on the children.  This will ensure ayassu vruddi for the children.
 
Uttarayana Punyakala – DOs.  –  Rituals of Makara Sankramana  :
  • During Uttarayana Punyakala, take bath using ellenne or atleast smearing ellu on the body.   If possible, do snaana in a River during Uttarayana Punyakaala.
  • House is decorated with mango leaves
  • For naivedya, pongal, ellu, bella, sugarcane is in addition to the regular naivedya.
  • Food is cooked with freshly harvested rice, sugarcane and turmeric on this day.
  • Farmers worship their ploughs and other equipments on this day.
  • People wear new clothes and ornaments after taking a holy dip on this day.
  • In villages, the farmers decorate their cows and offer special pooja and in the evening
  • Light up ellu deepa  (Gingelli oil) in front of God.
  • Give Tilatarpana to Dwaadasha pitrugalu ( only those doesn’t have father )
  • Ellu homa: i.e mix ellu along with rice and perform vaishvadeva.
  • Ellu Daana: Mixture of ellu and jaggary and cocunut has to be given to Brahmin.
  • Ellu Sweekara: Eating the above mixture. Ellupudi chitraanna should  be cooked for the Naivedya.  Atleast 6 types of items should be made of Ellu on this day for naivedya.
  • daana of pumpkin (sihi gumbala) is recommended for the day.
  • Newly married couple give daana of plantains to five households, usually five bananaas to each household, to be increased by five each year upto five years.  In the last year the plaintains will be 25.   (first year 5, second 10, third 15, and so on).  This is given in addition to ellu, bella, sakkare achu, sugarcane, etc
ಉತ್ತರಾಯಣ ಪುಣ್ಯಕಾಲ ತರ್ಪಣ ಸಂಕಲ್ಪ :-
೧.  ಆಚಮನ
೨. ಪವಿತ್ರ ಧಾರಣ (ಪವಿತ್ರ ಮಾಡಲು ಬರದಿದ್ದರೆ ಪವಿತ್ರದ ಉಂಗುರವಿದ್ದರೂ ಪರವಾಗಿಲ್ಲ)
೩.  ಪುನರಾಚಮನ
೪.  ಪ್ರಾಣಾಯಾಮ

 

ನಂತರ ಸಂಕಲ್ಪ —

ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಆದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೋದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ನಾಮ ಸಂವತ್ಸರೇ, ಉತ್ತರಾಯಣೇ, _____ಋತೌ, ____ಮಾಸೇ, ____ ನಕ್ಷತ್ರೇ, ____ಯೋಗೇ ______ ಕರಣೇ, _____ವಾಸರಯುಕ್ತಾಯಂ, ಪಿತ್ರಾದಿ ಸಮಸ್ತ ಪಿತ್ರೂಣಾಂ ಅಂತರ್ಗತ, ಮನುನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ –

೧. ಪಿತ್ರು, ಪಿತಾಮಹ, ಪ್ರಪಿತಾಮಹ
೨. ಮಾತ್ರು, ಪಿತಾಮಹಿ, ಪ್ರಪಿತಾಮಹಿ
೩.ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ
೪. ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ

ಈ ಮೇಲ್ಕಂಡ 12 ಜನಕ್ಕೂ ಅಲ್ಲದೆ ಸರ್ವಪಿತೃಗಳಿಗೂ ತರ್ಪಣ ಕೊಡಬಹುದು.  (ಅಕಸ್ಮಾತ್ ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಟ್ಟು).

ಅವತ್ತು ಏಕಭುಕ್ತನಾಗಿರಬೇಕು.

ಬೆಳಿಗ್ಯೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು,

ಉತ್ತರಾಯಣ ಪುಣ್ಯಕಾಲ ಸಮಯದವರೆಗೂ ಉಪವಾಸವಿದ್ದು, ಪರ್ವಕಾಲ ಬಂದ ಮೇಲೆ ಸ್ನಾನಾದಿಗಳನ್ನು ಮಾಡಿ ನಂತರ ಸೂರ್ಯಾಸ್ತದೊಳಗೆ ತರ್ಪಣಕೊಟ್ಟರೆ ಶ್ರೇಷ್ಠ.

Devarapooja on Makara Sankramana –

It is preferable to do Pooja followed by Naivedya on Makara Sankaramana Day during Parvakaala.  If done, they will get more punya.  Those who are doing pooja during Parvakala, they have to do nirmalya in the morning as usual, sandhyavandana, parayana, etc.  During Parvakala, he has to take bath once again and do the pooja.   Those who does not have the time, or incapable to wait upto Parvakala, may do it in the morning itself.      

Please note Hastodaka not to be given on this day as yathigalu will be fasting on sankramana Day.

Morning he has to get up as usual (Usha:kaala), even though the Uttarayana Punyakala is late.  Sometimes, the punyakala comes during afternoon or evening.  Still they have to get up early as usual and do our regular Snaana, Sandhyavandhane, Nirmalya Visarjane, etc,  as usual.

 

When to give the Tarpana ?-

Tarpana to be given in the parvakala to atleast Dwadasha pitrugalu.   Sometimes, Amavasye Darsha also falls on the same day of Sankramana.  As such,  Amavasye Tarpana/ and tarpana due to Amavasye before Tithi  also to be given after Sankramana tarpana during the parvakala.

tila tarpaNa sankalpa –

1.     Achamana
2.    Pavitra dhaaraNa (If one does not know how to prepare pavitra, even pavitra ring will do)
3.    punaraachamana
4.    praaNaayaama 
sankalpa —
shrI gOvinda gOvinda viShNOraajnayaa pravartamaanasya, Adya brahmaNa:, dvitIya paraardhE, shrI shvEtavaraahakalpE, vaivasvata manvantarE, kaliyugE, prathamapaadE, jambhOdvIpE, danDakaaraNyE, gOdaavaryaa: dakShiNEtIrE shaalIvaahana shakE, bouddhaavataarE, raamakShEtrE (/parashuraama kShEtrE), shrI parama vaiShNava sannidhou, asmin vartamaanE chaandramaanEna ________ samvatsarE, uttarayaNe, _____ Rutou, ______ maasE, _______pakShE, _______ tithou, ______ nakShatrE,  _ yOgE, __ karaNE, _______vaasara yuktaayam, pitraadi samasta pitrUNaam antargata, manunaamaka, shrI bhaaratI ramaNa muKyapraaNaantargata, shrIman madhvavallabha janaardhana vaasudEva prEraNayaa, shrIman madhvavallabha janaardhana vaasudEva prItyartham, viShNu nakShatra, viShNuyOga, viShNu karaNa, EvanguNa vishEShaNa viSiShTaayaam puNyatithou., (praachInaavIti), (keep janivaara to your left) sadya: tilatarpaNam kariShyE –

1. pitru, pitaamaha, prapitaamaha

2. maatru, pitaamahi, prapitaamahahi

3. maataamaha, maatu: pitaamaha, maatu: prapitaamaha

4. maataamahi, maatu: pitaamahi, maatu: prapitaamahi

Tarpana to be given for the above mentioned 12 people atleast (However, if any one of them is still there, note not to include him in the tarpana list)
Those who have given the tarpana they have to take teertha prasada only once and in the night they can take phalahara.
He should be empty stomach till UttarayaNa Punyakala.   Then he has to give Tarpana as per the above method.  Tarpana to be given after Uttarayana punyakala and before Suryaasta.
For those who are Jeevanpitrus  (those who are have their father) – they need not give tarpana, they can do their daily routine works.
 
   
       
   
Collection from various sources –
a. Chaturvedi Vedavyasachar
b. HKS Rao’s book
 
by Narahari Sumadhwa

1 Comment

Add a Comment
  1. Excellent guidelines! Dhanyavadagalu.

Leave a Reply

Your email address will not be published.

Sumadhwa Seva © 2022