“ಹೋಳಿ ಹುಣ್ಣಿಮೆ, ಕಾಮದಹನ”
ಅ. ಹೋಳಿಯನ್ನು ಎಂದು ಆಚರಿಸುತ್ತಾರೆ?
– ಫಾಲ್ಗುಣ ಹುಣ್ಣಿಮೆ ದಿನ
ಆ. ಈ ದಿನ ಯಾರನ್ನು ರುದ್ರದೇವರು ತಮ್ಮ ಮೂರನೇ ಕಣ್ಣಿಂದ ಸುಟ್ಟರು?
– ರುದ್ರದೇವರು ಮನ್ಮಥನನ್ನು ಸುಟ್ಟು ದಿನ
ಇ. ಹೋಲಿಕಾ ಯಾರ ಮಗಳು ?
– ಕಶ್ಯಪರ ಮಗಳು.
ಹೋಳಿ ಹುಣ್ಣಿಮೆ ಹಬ್ಬವು ವರ್ಷದ ಕಡೇ ಹಬ್ಬ.
ಮನ್ಮಥನ ಬಾಣ ಹೂವಿನಿಂದ ಮಾಡಿದ್ದರೆ ಅವನ ಬಿಲ್ಲು ಕಬ್ಬಿನ ಜಲ್ಲೆಯಿಂದ ತಯಾರಿಸಿದ್ದು.
Kaamadahana (ಕಾಮದಹನ) – ನಮ್ಮ ಸಾಧನೆಯ ಪಥದಲ್ಲಿ ಹಲವಾರು ಅಡಚಣೆಗಳು ಎದುರಾಗುತ್ತವೆ. ಅವುಗಳನ್ನು ನಿವಾರಿಸಲು ನಾವು ಕಾಮನ (ಮನ್ಮಥನ) ದಹಿಸಿದ ಮನೋ ನಿಯಾಮಕರ ಮೊರೆ ಹೋಗಬೇಕು. ನಮ್ಮಲ್ಲಿ ಬರುವ ಕಾಮನೆಗಳು ದೈವ ಕಾರ್ಯಕ್ಕೆ ಸಾಧನೆಯಾಗಲಿ ಎಂದು ಕೋರಬೇಕು. ಈ ದಿನ ಹೋಳಿಗೆ, ನೈವೇದ್ಯ ಮಾಡುವ ಸಂಪ್ರದಾಯ ಇದೆ.
For our saadhane, there are many obstacles. We must pray Manoniyamaka Rudradevaru to destroy all our dushkaamane (bad desires), and pray that Mano niyamaka shall guide us in the right path. It is in practice that on this day, Holige, Ambode and other dishes are prepared and done the naivedya
ಕಾಮನ ರುದ್ರ ದೇವರು ದಹಿಸಿದ್ದರಿಂದ “ಕಾಮದಹನ” ನನ್ನು ಈ ದಿನ ಮಾಡುತ್ತಾರೆ.
ಹೋಳಿ ಹಬ್ಬದ ಹಿನ್ನೆಲೆ ; ಹಿಂದೆ ತಾರಕಾಸುರ ಎಂಬ ದೈತ್ಯ ಬ್ರಹ್ಮದೇವರನ್ನು ಕುರಿತು ತಪಗೈದು, ಬ್ರಹ್ಮನ ಒಲಿಸಿ ನನಗೆ ಸಾವೇ ಬಾರದಿರಲಿ ಎಂದು ಕೋರಿದಾಗ, ಆ ವರವನ್ನು ನೀಡಲಾರೆನೆಂದಾಗ ಬೇರೊಂದು ವರವನ್ನು ಕೋರುತ್ತಾನೆ. ಅದೇನೆಂದರೆ “ಶಿವನಿಂದ ಜನಿಸಿದ ಏಳು ದಿನದ ಮಗನಿಂದ ಮೃತ್ಯು ಬರಲಿ” ಎಂದು ಕೋರುತ್ತಾನೆ. ಬ್ರಹ್ಮ ದೇವರು “ತಥಾಸ್ತು” ಎನ್ನುತ್ತಾರೆ. “ಶಿವನ ಮಡದಿ ಸತೀದೇವಿ ದಕ್ಷ ಯಜ್ಞದಲ್ಲಿ ಅಗ್ನಿಪ್ರವೇಶ ಮಾಡಿದ್ದರಿಂದ, ಶಿವನಿಗೆ ಮಡದಿಯಿಲ್ಲ, ಅವನು ಮತ್ತಾರನ್ನೂ ಮದುವೆ ಆಗುವುದಿಲ್ಲ, ಶಿವನು ತಪಸ್ಸು ಮಾಡುತ್ತಿದ್ದಾನೆ. ಅವನಿಗೆ ಮಕ್ಕಳಾಗುವುದಿಲ್ಲ, ಆದರೂ ಏಳು ದಿನದ ಮಗುವಿನಿಂದ ತಾರಕಾಸುರನ ಕೊಲ್ಲಲಾಗುವುದಿಲ್ಲ” ಅಂತ ಅವನ ಲೆಕ್ಕಾಚಾರ. ಆದರೆ ವಿಧಿಯನ್ನೇ ಬರೆವ ಬ್ರಹ್ಮನ ಮೇಲೇ ನಾನು ಗೆದ್ದೆನೆಂಬ ಹುಂಬತನ ತಾರಕಾಸುರನಿಗೆ.
ರುದ್ರ ದೇವರು ಘೋರ ತಪಸ್ಸನ್ನಾಚರಿಸುತ್ತಿರುತ್ತಾರೆ. ತಾರಕಾಸುರನು ವರದಿಂದ ಉನ್ಮತ್ತನಾಗಿ ಸಕಲ ಸಜ್ಜನರಿಗೆ ಭಾರೀ ಉಪಟಳ ಕೊಡುತ್ತಿರುತ್ತಾನೆ. ದೇವತೆಗಳು ಯೋಚನೆ ಮಾಡಿ ರುದ್ರ ದೇವರ ತಪಸ್ಸಿಗೆ ಭಂಗ ತಂದು, ಅವನಿಗೆ ಪಾರ್ವತೀದೇವಿಯರ ಕೊಟ್ಟು ವಿವಾಹ ಮಾಡಿಸಬೇಕೆಂದು ಉಪಾಯ ಮಾಡಿ ರತಿ-ಮನ್ಮಥನನ್ನು ಒಪ್ಪಿಸುತ್ತಾರೆ. ತಪೋನಿರತರಾದ ರುದ್ರ ದೇವರ ಮುಂದೆ ಹೂವಿನ ಬಾಣವನ್ನು ಬಿಟ್ಟು ಮನ್ಮಥನು ಶಿವನ ಧ್ಯಾನಕ್ಕೆ ಭಂಗತರುತ್ತಾನೆ. ಇದರಿಂದ ಕೋಪಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಮನ್ಮಥನನ್ನು ದಹಿಸುತ್ತಾನೆ. ನಂತರ ರತಿಯು ತನ್ನ ಪತಿಯನ್ನು ಬದುಕಿಸಿ ಕೊಡಬೇಕೆಂದು ಕೋರಿದಾಗ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಲಿ ಬೇರಾರಿಗೂ ಅವನು ಕಾಣದಿರಲಿ ಎನ್ನುತ್ತಾನೆ. ಇದರಿಂದ ಮನ್ಮಥನಿಗೆ “ಅನಂಗ” ಎಂದು ಹೆಸರು ಬಂದಿದೆ.
“ಕಾಮನೇ ಷಣ್ಮುಖ”. -.
ನಂತರ ಎಲ್ಲಾ ದೇವತೆಗಳ ಪ್ರಾರ್ಥನೆಯಂತೆ ತನ್ನನ್ನೇ ಮದುವೆಯಾಗಬೇಕೆಂದು ಪರ್ವತರಾಜನಲ್ಲಿ ಜನಿಸಿದ್ದ ಪಾರ್ವತೀದೇವಿಯನ್ನು ರುದ್ರ ದೇವರು ವಿವಾಹವಾಗಿ ನೂರಾರು ವರ್ಷ ಆದರೂ ಕೂಡ ಅವರು ಮಕ್ಕಳನ್ನು ಪಡೆಯದಿದ್ದಾಗ, ಅಗ್ನಿ ದೇವರು ಕೈಲಾಸಕ್ಕೆ ಹೋಗಿ ಭಿಕ್ಷೆ ನೀಡಿರೆಂದು ಶಿವನ ಕೇಳಿದಾಗ ಅವರ ತೇಜಸ್ಸು ಪಾತವಾಗಿರಲು, ಅದನ್ನು ಪಾರ್ವತೀದೇವಿಯೂ ತನ್ನ ಕೈಯಲ್ಲಿ ಧರಿಸಿ ಅಗ್ನಿಗೆ ಭಿಕ್ಷಾರೂಪದಲ್ಲಿ ಹಾಕಿದರು,. ಅಗ್ನಿಗೂ ಆ ತೇಜಸ್ಸು ನಿರ್ಮಿಸಲಾಗಿದೆ ಅದನ್ನು ಗಂಗೆಯಲ್ಲಿ ಹಾಕಿದನು. ಗಂಗೆಯೂ ಅದನ್ನು ತಡೆಯಲಾರದೆ ಪ್ರವಾಹದ ಮೂಲಕ ಹೊರಚೆಲ್ಲುಲು ಭೂಮಿಯಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣವು ಉತ್ಪನ್ನ ವಾಯಿತು. ಸ್ವಲ್ಪ ತೇಜಸ್ಸು ಅಲ್ಲೊಂದು ವನದಲ್ಲಿದ್ದ ದರ್ಬೆಯಲ್ಲಿ ಬೀಳಲು ಅಲ್ಲಿ ಜನಿಸಿದವನೇ ಕುಮಾರ ಅಥವಾ ಸ್ಕಂಧ. ಅವನ ಅಪ್ರತಿಮ ಸೌಂದರ್ಯ ನೋಡಿ ಆರು ಮಂದಿ ಕೃತ್ತಿಕೇಯರು ಅವನಿಗೆ ಸ್ತನ್ಯಪಾನ ಮಾಡಿಸಿದರು. ಅದರಿಂದ ಅವನು ಕಾರ್ತಿಕೇಯನೆನಿಸಿದನು. ಆರು ಮಂದಿ ಕೃತ್ತಿಕೇಯರು ಸ್ತನ್ಯಪಾನ ಮಾಡಿಸಲು ಆರು ಮುಖ ಹೊಂದಿ ಷಣ್ಮುಖನಾದವು.
ಅವನೇ ತಾರಕಾಸುರನನ್ನು ತಾನು ಹುಟ್ಟಿದ ಏಳನೇ ದಿನದಂದು ಭಾರೀ ಯುದ್ಧಾನಂತರ ಶಕ್ತ್ಯಾಯುಧದಿಂದ ಸಂಹರಿಸಿದನು.
What is Holi? Holi – Click
Holi represents the Festival of colours. It is celebrated on the full moon day, i.e., pournami in phalguna maasa every year. It is popularly called as “Kaamana habba”. It is the day on which Mano niyamaka Rudra Devaru burnt Manmatha.
Story of Holika – .Story of Holika – Holi festival is associated with the death of the demoness Holika, the sister of Hiranyakashipu.. The daithyaraaja Hiranyakashipu, with the support of the boons granted by Brahma, was very powerful and wanted to be worshipped as God. He ordered his people that Hiranyakashipu is the Supreme. People had to tell “Hiranya kashipuve namaha” instead of Narayanaya namaha. But, his son Prahlaada, a staunch devotee of Srimannarayana refused to accept his father’s supremacy. Hiranyakashipu, could not tolerate that his own son Prahlada is not accepting his supremacy. So he decided to kill Prahlada. After trying several attempts to kill Prahlada in vain, he sent his sister, Holika who possessed the boon of never being burnt by fire. She had a shawl which protects her body from fire burning. Young Prahlaada was made to sit on his aunt’s lap. A bonfire was lit with Prahalada and Holika in the center. Brahma had told that if she used for evil activity, she herself would be killed.
When Holika tried to burn Prahlada, with hari preranaya, her shawl which was protecting her from firing flew out of her body, and she was burnt to ashes, while Prahlaada was spared by the fire, by the grace of Vishnu. The bonfire lit and the burning of the pratime of Holika during Holi, symbolizes the triumph of good over evil, humility over haughtiness and power of prayer over physical strength.
On the eve of Holi, huge bonfires are lit with logs of wood, dried cow dung cakes, ghee, honey and the new crops brought from the fields. Women prepare delicious sweets and put it in the bonfire as “Naivedya” (offering) to the “Agnidevata” the celestial deity, Fire. The ash from the extinguished fire is applied on the forehead by everyone. The ash is preserved at home all through the year and used as an effective remedy against impending evil.
ಬಾಲಕರೆಲ್ಲ ನೆರೆವುದೊಂದು ಘಳಿಗೆ
ಹೋಳಿಯನಾಡುವ ಸಂಭ್ರಮದೊಳಗೆ
ಕಾಳಗ ಬೇಡಿರೋ ನಿಮ್ಮ ನಮ್ಮೊಳಗೆ
ಏನೇನು ಕದ್ದರು | ಸೌದೆ ಬೆರಣಿ ಕದ್ದರು | ಏತಕ್ಕೆ ಕದ್ದರು | ಕಾಮನ್ನ ಸುಡುಕ್ಕೆ ಕದ್ದರು
एनेनु कद्दरु सौदॆ बॆरणि कद्दरु एतक्कॆ कद्दरु कामन्न सुडुक्कॆ कद्दरु
ஏநேநு கத்தரு ஸௌதெ பெரணி கத்தரு ஏதக்கெ கத்தரு காமந்ந ஸுடுக்கெ கத்தரு
ఏనేను కద్దరు సౌదె బెరణి కద్దరు ఏతక్కె కద్దరు కామన్న సుడుక్కె కద్దరు
EnEnu kaddaru soude beraNi kaddaru Etakke kaddaru kaamanna suDukke kaddaru