- Chandra Grahana – 28.10.2023 Saturday (29.10.23 early morning).
* ಶ್ರೀ ಶ್ರೀ ಚಿಂತಲವಾಡಿ ಲಕ್ಷ್ಮೀ ನರಸಿಂಹ ಪ್ರಸಾದ*
“ಚಂದ್ರಗ್ರಹಣ” – Lunar Eclipse –
ಆಶ್ವಯುಜ ಶುದ್ಧ ಹುಣ್ಣಿಮೆಯಂದು
Ashwayuja Shudda Hunnime,
Chandra Grahana (ketugrasta)
(Timings based on Bangalore. Other places, few seconds/minutes may vary)
Sparsha kaala – 1.02 am
Madhya kaala – 1.47 am
Moksha kaala – 2.24 am
[28th October midnight – 29th October early morning}
Total period of eclipse 82 minutes in India
Vedha kaala starts from 4.02 pm on 28.10.23.
Lunar Eclipse this time will be observed in entire India, most Asian countries,
Refer your local timings. ಸ್ಥಳೀಯ ಕಾಲವನ್ನು ಗಮನಿಸಿ
Shuba phala – Mithuna, Karka, Vruschika, Kumbha
Mishra phala – Simha, Tula, Dhanu, Meena
Ashuba phala – Mesha, Vrushabha, Kanya, Makara
Vishesha Ashubha Phala : Ashwini Nakshatra, Mesha Rashi
ಶುಭ ಫಲ – ಮಿಥುನ, ಕರ್ಕ, ವೃಶ್ಚಿಕ, ಕುಂಭ
ಮಿಶ್ರ ಫಲ – ಸಿಂಹ, ತುಲಾ, ಧನು, ಮೀನ
ಅಶುಭ ಫಲ – ಮೇಷ, ವೃಷಭ, ಕನ್ಯಾ , ಮಕರ – ರಾಶಿ
ವಿಶೇಷ ಅಶುಭ ಫಲ – ಅಶ್ವಿನಿ ನಕ್ಷತ್ರ, ಮೇಷ ರಾಶಿ
They have to do special japa, paarayana, daana during the grahana period. (They have to do/participate in extra japa, parayana, suvarna, rajata, or yathashakthi daana)
Bhojana, phalahaara – As Chandragrahana is observed in the third yaama, Vedha kaala starts from 4.02 pm. on 28.10.23 However, for children, pregnants, sick and aged, they can take food upto 10 pm
Those who have to do pournima shraaddha can do before 4.02 pm
*ಚಂದ್ರಗ್ರಹಣ ಬಗ್ಗೆ ಮಾಹಿತಿ – ಪ್ರಶ್ನೋತ್ತರ*
28 ಅಕ್ಟೋಬರ್ 2023🌜*
1. ಈ ಸಲದ ಚಂದ್ರ ಗ್ರಹಣ ಯಾವ ತಿಥಿಯಂದು ಬರುತ್ತದೆ?
ಉತ್ತರ- ಆಶ್ವಯುಜ ಶುದ್ಧ ಪೂರ್ಣಿಮಾ
2. ಈ ಸಲದ ಗ್ರಹಣ ಯಾವ ದಿನಾಂಕ ಬರುತ್ತದೆ?
ಉತ್ತರ – 28.10.23 ಶನಿವಾರ
3. ಈ ಸಲದ ಗ್ರಹಣ ಯಾವ ನಕ್ಷತ್ರದಲ್ಲಿ ಬರುತ್ತೆ?
ಉತ್ತರ – ಅಶ್ವಿನಿ ನಕ್ಷತ್ರ, ಮೇಷ ರಾಶಿ
4. ಈ ಸಲದ ಗ್ರಹಣ ಕಾಲದಲ್ಲಿ ಯಾವ ಯಾವ ರಾಶಿಗಳಿಗೆ ಅಶುಭಫಲವಿದೆ?
ಉತ್ತರ – ಅಶುಭ ಫಲ – ಮೇಷ, ಸಿಂಹ, ಕನ್ಯಾ, ಮಕರ ರಾಶಿ
5. ಈ ಸಲದ ಗ್ರಹಣ ಸಮಯ ಬೆಂಗಳೂರಿನಲ್ಲಿ ಯಾವ ಸಮಯದಲ್ಲಿರುತ್ತದೆ?
ಉತ್ತರ – ಬೆಂಗಳೂರಿನಲ್ಲಿ ಮಧ್ಯರಾತ್ರಿ 01.04am to 02.24am
6. ತರ್ಪಣಾಧಿಕಾರಿಗಳು ಯಾವ ಸಮಯದಲ್ಲಿ ತರ್ಪಣ ಕೊಡಬೇಕು?
ಉತ್ತರ – ಮಧ್ಯರಾತ್ರಿ 1.47
7. ಈ ಸಲದ ಗ್ರಹಣ ದೋಷ ಇರುವವರು ಯಾವ ದಾನ ಮಾಡಬೇಕು?
ಉತ್ತರ – ಅಕ್ಕಿ, , ತೆಂಗಿನಕಾಯಿ, ದಕ್ಷಿಣಾ , ಸ್ವರ್ಣ ದಾನ
8. ಚಂದ್ರ ಗ್ರಹಣದ ಮುಂಚಿನ ಎಷ್ಟು ಸಮಯದ ಮುಂಚೆ ವೇದಾರಂಭವಾಗುತ್ತೆ?
ಉತ್ತರ – ಗ್ರಹಣಾರಂಭಕ್ಕೆ 9 ಗಂಟೆ ಮುಂಚೆ
9. ಗ್ರಹಣ ಸಮಯದಲ್ಲಿ ಹಾಲು, ಮೊಸರು, ತರಕಾರಿ ಮುಂತಾದವುಗಳು ಹಾಳಾಗದಂತೆ ಅವುಗಳ ಮೇಲೆ ಏನನ್ನು ಹಾಕಬೇಕು?
ಉತ್ತರ – ದರ್ಬೆ
10. ಗ್ರಹಣ ಹಿಡಿಯುವ ದಿನ ಯಾವ ಯಾವ ಸಮಯದಲ್ಲಿ ಸ್ನಾನ ಮಾಡಬೇಕು?
ಉತ್ತರ – ಗ್ರಹಣ ಸ್ಪರ್ಶ ಸಮಯದಲ್ಲಿ ಮತ್ತು ಗ್ರಹಣ ಮೋಕ್ಷ ನಂತರ (ಆಯಾ ಪ್ರದೇಶದ ಸಮಯ ಅಂತರ್ಜಾಲ ಮೂಲಕ ತಿಳಿದುಕೊಳ್ಳಿ)
11. ತರ್ಪಣಾಧಿಕಾರಿಗಳು ಯಾವ ನೀರಿನಿಂದ ತರ್ಪಣ ನೀಡಬೇಕು?
ಉತ್ತರ – ನಿರ್ಮಾಲ್ಯತೀರ್ಥದಿಂದ . ನಿರ್ಮಾಲ್ಯ ತೀರ್ಥ ಇಲ್ಲದ ಪಕ್ಷದಲ್ಲಿ ಶುದ್ಧವಾದ ನೀರು ಉಪಯೋಗಿಸಿ. ಸಂಕಲ್ಪಕ್ಕೆ ಉಪಯೋಗಿಸಿದ ನೀರು ಅರ್ಘ್ಯ , ತರ್ಪಣ, ಪೂಜೆಗೆ ಉಪಯೋಗಿಸಬಾರದು.
12. ಗ್ರಹಣದ ದಿನ ಯಾವಾಗ ಅಡುಗೆ ಮಾಡಬೇಕು?
ಉತ್ತರ – ಗ್ರಹಣ ಮೋಕ್ಷಾನಂತರ ಸ್ನಾನ ಮಾಡಿ ನಂತರ ತಯಾರಿಸಬೇಕು. ಆದರೆ ಈ ಸಲ ಗ್ರಹಣ ಮೋಕ್ಷಾನಂತರದಲ್ಲಿ ಮಧ್ಯರಾತ್ರಿ ಆಗಿರುವುದರಿಂದ ಬರೀ ಸ್ನಾನ ಅಷ್ಟೇ. ಮಾರನೇ ದಿನ ಬೆಳಿಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜೆ ಮಾಡಿ ಆಹಾರ ಸ್ವೀಕರಿಸಬಹುದು.
13. ಬೆಳಿಗ್ಗೆ ಅಡಿಗೆ ಮಾಡಿ ಮುಚ್ಚಿಟ್ಟು ದರ್ಬೆ ಹಾಕಿಟ್ಟು ಗ್ರಹಣ ಮೋಕ್ಷ ನಂತರ ಸ್ನಾನ ಮಾಡಿ ಊಟ ಮಾಡಬಹುದಾ?
ಉತ್ತರ : ಬೇಡ. ಹಾಲು, ಮೊಸರು, ನೀರು ಮುಂತಾದ ಪದಾರ್ಥಗಳನ್ನು ಮಾತ್ರ ದರ್ಬೆ ಹಾಕಿಟ್ಟು ನಂತರ ಉಪಯೋಗಿಸಬಹುದು.
14. ತರಕಾರಿ ಗ್ರಹಣ ಮುನ್ನ ತಂದಿಟ್ಟು ಹೆಚ್ಚಿಕೊಂಡಿರಬಹುದಾ?
ಉತ್ತರ : ಆಗಬಹುದು
15. ಗ್ರಹಣದ ದಿನ ಹಸ್ತೋದಕ ಯಾವಾಗ ಕೊಡಬೇಕು?
ಉತ್ತರ – ಗ್ರಹಣದ ದಿನ ಹಸ್ತೋದಕ ಇಲ್ಲ ಏಕೆಂದರೆ ಯತಿಗಳು ಗ್ರಹಣ ದಿನ ಉಪವಾಸವಿರುತ್ತಾರೆ. ಸೂತಕ ಮುಂಚೆ ಮಾಡಬಹುದು.
16. ಸೂತಕ ಇದ್ದವರು ಮತ್ತು ರಜಸ್ವಲೆಯಾದವರು ಸ್ನಾನ ಮಾಡಬಹುದಾ ಬೇಡವಾ?
ಉತ್ತರ – ಮಾಡಬೇಕು
17. ಈ ಸಲದ ಆಶ್ವಯುಜ ಪೂರ್ಣಿಮಾ ಶ್ರಾದ್ದವಿದ್ದವರು ಎಂದು ಮಾಡಬೇಕು?
ಉತ್ತರ – ಈ ಸಲದ ಶ್ರಾದ್ಧವಿರುವವರು 28.10.23ರಂದು ಸೂರ್ಯೋದಯ ನಂತರ ಮಾಡಬೇಕು.
18 ಚಂದ್ರಗ್ರಹಣದ ಚಂದ್ರ ನೇರ ನೋಡಬಹುದಾ?
ಉತ್ತರ – ನೇರ ನೋಡಬಹುದು
19. ಈ ಗ್ರಹಣದ ಸಂದರ್ಭದಲ್ಲಿ ಯಾವ ಯಾವ ಸ್ತೋತ್ರ *ಪಾರಾಯಣ* ಮಾಡಬಹುದು?
ಉತ್ತರ – ವಿಷ್ಣು ಸಹಸ್ರನಾಮ, ವಾಯು ಸ್ತುತಿ, ರಾಯರ ಸ್ತೋತ್ರ ಗಾಯತ್ರಿ ಜಪ, ವೇದ ಪಾರಾಯಣ,
ಹೆಂಗಸರು ಕೇಶವನಾಮ, ಮಧ್ವನಾಮ, ಲಕ್ಷ್ಮೀ ಶೋಭಾನೆ, ಇತ್ಯಾದಿ.
20. *ಹೆಂಗಸರು ಗಾಯತ್ರಿ ಜಪ ಮಾಡಬಹುದಾ?*
ಉತ್ತರ – ಮಾಡಬಾರದು. ಹೆಂಗಸರು ಗಾಯತ್ರಿ ಜಪಕ್ಕೆ ಯಾವಾಗಲೂ ಅನರ್ಹರು.
21. ಗ್ರಹಣ ಸಮಯದಲ್ಲಿ ಏನೇನು ಮಾಡಬಾರದು?
ಉತ್ತರ – ನಿದ್ದೆ, ಊಟ, ತಿಂಡಿ, ಮಲಮೂತ್ರ ವಿಸರ್ಜನೆ , ಮೈಥುನ ನಿಷಿದ್ಧ. ಅದರಿಂದ ಅನಾರೋಗ್ಯವಾಗುತ್ತೆ. ಈ ಸಂದರ್ಭದಲ್ಲಿ ಗರ್ಭ ಧರಿಸಿದರೆ ಆ ಮಗುವಿಗೆ ಅಂಗವಿಕಲತೆಯಾಗುವ ಸಂದರ್ಭ ಬರಬಹುದು.
22. ಎಷ್ಟು ಗಂಟೆಯವರೆಗೆ ಊಟ ಮಾಡಬಹುದು.
ಉತ್ತರ – ಮಧ್ಯಾಹ್ನ 4.02 ವರೆಗೂ ಮಾಡಬಹುದು.
ಬಸುರಿ, ಬಾಣಂತಿಯರು, ಮತ್ತು ಎಂಟು ವರ್ಷದ ಒಳಗಿನ ಮಕ್ಕಳು 28.10.23 ಚಂದ್ರ ಗ್ರಹಣದ ಮೂರು ಗಂಟೆ ಮುನ್ನ ಮಾಡಬಹುದು.
23. *ಯಾರು ಅಶಕ್ತರು* ?
ಉತ್ತರ – ಬಸುರಿ, ಬಾಣಂತಿ, ೮೦ ವರ್ಷ ದಾಟಿದವರು, ೮ ವರ್ಷದ ಒಳಗಿನ ಮಕ್ಕಳು, ಮತ್ತು ಕಾಯಿಲೆಯಿಂದ ಅಸ್ವಸ್ಥರಾದವರು
24 ಗ್ರಹಣಾನಂತರ ಪೂಜೆಗೆ ಹಿಂದಿನ ದಿನ ಒಣಹಾಕಿದ್ದ ಬಟ್ಟೆ ಉಡಬಹುದಾ?
ಉತ್ತರ – ಇಲ್ಲ. ಗ್ರಹಣಾನಂತರ ಪೂಜೆಗೆ ಹಿಂದಿನ ದಿನ ಹಾಕಿದ್ದ ಬಟ್ಟೆ ಉಡುವಂತಿಲ್ಲ. ನೀರೂ ಕೂಡ ಉಪಯೋಗಿಸುವಂತಿಲ್ಲ. ಸ್ನಾನ ಮಾಡಿ ಮತ್ತೆ ಬಟ್ಟೆಯ ಚೆನ್ನಾಗಿ ಹಿಂಡಿ ಏಳು ಸಲ ಜಾಡಿಸಿ ಉಪಯೋಗಿಸಿ.
25. ರಜಸ್ವಲೆಯಾದವರು ಗ್ರಹಣ ಸಮಯದಲ್ಲಿ ಸ್ನಾನ ಮಾಡುವ ವಿಧಾನವೇನು?
ಉತ್ತರ – ಅವರು ನದೀ, ಬಾವಿಯಲ್ಲಿ ಮಾಡುವಂತಿಲ್ಲ. ಬೇರೆಯವರು ತುಂಬಿಸಿಟ್ಟಿದ್ದ ನೀರಿನಲ್ಲಿ ಸ್ನಾನಗೈದು ದೇವರ ಸ್ಮರಣೆ ಮಾಡಬೇಕು. ಬೇರಾರನ್ನೂ ಮುಟ್ಟುವಂತಿಲ್ಲ.
26. *ಜಾತಾಶೌಚ ಮತ್ತು ಮೃತಾಶೌಚ ಇರುವವರು ಹೇಗೆ ಆಚರಿಸಬೇಕು?*
ಉತ್ತರ – ಅವರೂ ಸ್ನಾನ ಮಾಡಬೇಕು. ಬಾವಿ, ನದೀ, ಸರೋವರದಲ್ಲಿ ಬೇಡ. ಮನೆಯಲ್ಲಿ ಮಾಡಿ. ಮೃತಾಶೌಚವಿರುವವರು ಬೇರೆಯವರನ್ನು ಮುಟ್ಟುವಂತಿಲ್ಲ. ತಮ್ಮಷ್ಟಕ್ಕೇ ಶುದ್ಧಿಯಾಗಿ ಹರಿಸ್ಮರಣೆ ಮಾಡಿ.
ದಾನಧರ್ಮ ಮಾಡುವಂತಿಲ್ಲ ಸ್ವೀಕರಿಸುವಂತಿಲ್ಲ. ಅವರು ಬೇರೆಯವರಿಗೆ ನಮಿಸುವಂತಿಲ್ಲ. ಬೇರೆಯವರೂ ಅಶೌಚವಿರುವವರಿಗೆ (ಯಾವ ಸಂದರ್ಭದಲ್ಲೂ) ನಮಿಸುವಂತಿಲ್ಲ.
27. ಗ್ರಹಣ ನಿಮಿತ್ತ ದಾನ ಯಾವಾಗ ಕೊಡಬೇಕು?
ಉತ್ತರ – ಗ್ರಹಣ ಮಧ್ಯಕಾಲದಲ್ಲಿ ಕೊಡತಕ್ಕದ್ದು. ಅಕಸ್ಮಾತ್ ಆ ಸಮಯದಲ್ಲಿ ಕೊಡಲಾಗದಿದ್ದರೆ ಸಂಕಲ್ಪ ಮಾಡಿ ತೆಗೆದಿಟ್ಟು ನಂತರ ಕೊಡಬಹುದು
28. *ತರ್ಪಣಾಧಿಕಾರಿಗಳು ಅಂದರೆ ಯಾರು* ?
ಉತ್ತರ – ತಂದೆ ಇಲ್ಲದವರು. ತಂದೆ ಸತ್ತು ಒಂದು ವರ್ಷ ಆಗಿದ್ರೆ ಮಾತ್ರ. (ತಾಯಿ ಸತ್ತಿದ್ದು ತಂದೆ ಇದ್ದರೆ ತರ್ಪಣ ಇಲ್ಲ.)
29. ಗ್ರಹಣ ಸಮಯದಲ್ಲಿ ದೇವರ ಪೂಜೆ ಮಾಡಬಹುದೇ?
ಉತ್ತರ : ಗ್ರಹಣ ಸಮಯದಲ್ಲಿ ಸ್ನಾನ ಮಾಡಿ, ಗೋಪೀಚಂದನ ಹಚ್ಚಿ, ನಿರ್ಮಾಲ್ಯ ವಿಸರ್ಜನೆ ಮಾಡಿ, ಜಪ, ಪಾರಾಯಣ, ಮಾಡಿ. ಪೂಜೆ ಗ್ರಹಣ ಮೋಕ್ಷ ನಂತರವೇ ಮಾಡಬೇಕು. ಆದರೆ ಈ ಸಲ ಪೂಜೆ ಇಲ್ಲ. ಮಾರನೇ ದಿನ ಬೆಳಿಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜಿಸಬೇಕು.
30. ಗ್ರಹಣ ಸಮಯದಲ್ಲಿ ಧರಿಸಿದ ವಸ್ತ್ರ ಸ್ನಾನಾನಂತರ ಧರಿಸಬಹುದೇ?
ಉತ್ತರ : ಅವುಗಳನ್ನು ನೆನೆಸಬೇಕು. ಬೇರೆ ವಸ್ತುಗಳನ್ನು ಧರಿಸಿ..
31. ಗ್ರಹಣ ಸಮಯದಲ್ಲಿ ಕೆಲವರು ಆಫೀಸಿನಲ್ಲಿ ಇರಲೇಬೇಕಾಗತ್ತೆ. ಅಥವಾ ಪ್ರಯಾಣದಲ್ಲಿರಬೇಕಾಗತ್ತೆ. ಆ ಸಮಯದಲ್ಲಿ ಸ್ನಾನಕ್ಕೆ ಅವಕಾಶವಿರದಾಗ ಏನು ಮಾಡಬೇಕು?
ಉತ್ತರ : ಸಾಧ್ಯವಾದಷ್ಟೂ ಪ್ರಯತ್ನಿಸಿ. ಅಸಾಧ್ಯವಿದ್ದಲ್ಲಿ, ಕನಿಷ್ಠ ಮಾನಸಿಕವಾಗಿ ಸ್ನಾನ ಮಾಡಿ, ಮನಸ್ಸಿನಲ್ಲೇ ಎಷ್ಟು ಸಾಧ್ಯವೋ ಅಷ್ಟು ಹರಿಧ್ಯಾನ ಮಾಡಿ. ಆಹಾರ ಸೇವಿಸದಿರಿ .
32 ಗ್ರಹಣ ಸಮಯದಲ್ಲಿ ಧರಿಸುವ ಧಾವಳಿ ನೆನೆಸಬಹುದೇ?
*ಉತ್ತರ* – ದಾವಳಿ ನೆನೆಸಿದರೆ ಮತ್ತೆ ಮಡಿಗೆ ಉಪಯೋಗಕ್ಕೆ ಬರಲ್ಲ.
33 ಗ್ರಹಣ ಸಮಯದಲ್ಲಿ ಭೋಜನ ಮಾಡಿದರೆ ಏನೂ ಆಗಲ್ಲ ಅದೆಲ್ಲ ಮೂಡನಂಬಿಕೆ ಎನ್ನುತ್ತಾರಲ್ಲ ?
ಉತ್ತರ : ಗ್ರಹಣ ಸಮಯದಲ್ಲಿ ಆಹಾರದ ಮೇಲೆ ಪರಿಣಾಮ ಬೀಳಲಿರುವ ಕಿರಣಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅದಕ್ಕೇ ಭುಂಜಿಸಬಾರದು
35. ಗ್ರಹಣ ಕಾಲದಲ್ಲೇ ಸಂಧ್ಯಾವಂದನೆ ಮಾಡಬಹುದಾ ?
*ಉತ್ತರ* – ಮಾಡಬಹುದು
ಒಟ್ಟಿನಲ್ಲಿ ಗ್ರಹಣವೆಂದು ಹೆದರಿಕೆ ಬೇಡ. ಇದು ನಿಮ್ಮ ಹೆಚ್ಚಿನ ಸಾಧನೆಗೆ, ಪುಣ್ಯಪ್ರಾಪ್ತಿಗೆ ಸಹಾಯಕಾರಿ
*ಶುಭ ಫಲ* – ಮಿಥುನ, ಕರ್ಕ, ವೃಶ್ಚಿಕ, ಕುಂಭ, ರಾಶಿ
ಮಿಶ್ರ ಫಲ – ಸಿಂಹ, ತುಲಾ, ಧನು, ಮೀನ
*ಅಶುಭ ಫಲ –* ಮೇಷ, ವೃಷಭ, ಕನ್ಯಾ , ಮಕರ – ರಾಶಿ
*ವಿಶೇಷ ಅಶುಭ ಫಲ – ಮೇಷ ರಾಶಿ, ಅಶ್ವಿನಿ ನಕ್ಷತ್ರ,* – ಅವರು *ಹೆಚ್ಚಿನ ಜಪ, ಪಾರಾಯಣ ಮಾಡಬೇಕು*
ಆಯಾ ಪ್ರದೇಶದ ಈ ಸಮಯದ ನಂತರ ಕೂಡಲೇ ಗ್ರಹಣಸ್ಪರ್ಶ ಸ್ನಾನ ಮಾಡುವುದು. *ಗ್ರಹಣ ಮೋಕ್ಷ ನಂತರ ಅಂದರೆ 02:24ರ ನಂತರ ಸ್ನಾನ ಮಾಡುವುದು* . ಆದರೆ ಪಲಾಹಾರ ಭೋಜನ ಇಲ್ಲ.
ಮಧ್ಯ ಕಾಲ : 01.44 AM
ಮೋಕ್ಷ ಕಾಲ :02.24 am
(ಮಧ್ಯರಾತ್ರಿ ನಂತರ)
ಗ್ರಹಣದ ಒಟ್ಟು ಕಾಲ : 01:22 ನಿಮಿಷ
*ವೇಧಾರಂಭ* : 28-10-2023, ಶನಿವಾರ ಸಾಯಂಕಾಲ 04:02 ವೇಧಾರಂಭವಾಗುತ್ತದೆ.
ಶಕ್ತಿಯಿದ್ದವರು ಸುವರ್ಣ, ರಜತ ದಾನ ಮಾಡಿ. ಇಲ್ಲದವರು ಒಂದು ಬಟ್ಟಲಲ್ಲಿ ಅಥವಾ ದೊನ್ನೆಯಲ್ಲಿ ಹುರಳೀ ಯಥಾಶಕ್ತಿ ದಕ್ಷಿಣೆ ಸಹಿತ ದಾನ ಮಾಡಿ.
ಗ್ರಹಣ ಸಮಯದಲ್ಲಿ ಸಾಧ್ಯವಾದಷ್ಟೂ *ಸಾಧನೆ ಮಾಡಿಕೊಳ್ಳಿ ಅಧಿಕ ಪುಣ್ಯ ಗಳಿಸಿ.*
ಚಂದ್ರ ಗ್ರಹಣ ಸ್ನಾನ ಸಂಕಲ್ಪ :
ಆಚಮನ, ಕೇಶವಾಯ ಸ್ವಾಹಾ, ನಾರಾಯಣಾಯ ಸ್ವಾಹಾ;
ಮಾಧವಾಯ ಸ್ವಾಹಾ, ಗೋವಿಂದಾಯ ನಮ: ,……….ಹರಯೇ ನಮ:| ಓಂ ಶ್ರೀಕೃಷ್ಣಾಯ ನಮ: |
ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ………
ಶ್ರೀ ……. ನಾಮ ಸಂವತ್ಸರೇ, …. ಆಯನೇ, ….. ಋತೌ. , ಕೃಷ್ಣ ಪಕ್ಷೇ, ಪೂರ್ಣಿಮಾ ………ವಾಸರೇ, …ನಕ್ಷತ್ರ, ,…. ಯೋಗ, ……. ಕರಣ, ಏವಂಗುಣ ವಿಶೇಷಣ ವಿಶಿಷ್ಟಾಯಾಂ, ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ (ಮನೆದೇವರು),ಪ್ರೇರಣಯಾ, ……. ಪ್ರೀತ್ಯರ್ಥಂ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥಂ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, ___ಸನ್ನಿಧೌ, (ಕ್ಷೇತ್ರದೈವ), ಏವಂಗುಣ.. ಚಂದ್ರಗ್ರಹಣ ನಿಮಿತ್ತ ಚಂದ್ರ ಗ್ರಹ ಪೀಡಾ ಪರಿಹಾರಾರ್ಥಂ …ಮಾಸ ನಿಯಾಮಕ ಶ್ರೀ .…. ಶ್ರೀ ಲಕ್ಷ್ಮೀ ನರಸಿಂಹ/ ವೇಂಕಟೇಶ ಪ್ರೀತ್ಯರ್ಥಂ ಸ್ನಾನಂ ಕರಿಷ್ಯೇ.
*ರಾಹು ಕೇತು ಯಾರು* ?
ಭಾರತೀಯ ಪುರಾಣಗಳಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣಗಳನ್ನು ರಾಹು-ಕೇತುಗಳ *ಸಂಕ್ರಮಣವೆಂದು* ಹೇಳಲಾಗಿದೆ.. ಮೂಲತಃ: ರಾಹುಕೇತು *ಸ್ವರ್ಭಾನು* ಎಂಬ ದೈತ್ಯ. ಸಮುದ್ರಮಥನ ವೇಳೆ ಬಂದ ಅಮೃತವನ್ನು ಮೋಹಿನಿ ರೂಪದಲ್ಲಿ ಶ್ರೀಹರಿಯು ಹಂಚುವಾಗ ದೇವತೆಗಳು ಒಂದು ಸಾಲು ಮತ್ತು ದೈತ್ಯರು ಒಂದು ಸಾಲಿನಲ್ಲಿ ಕುಳ್ಳಿರಿಸಿ ಕಣ್ಣು ಮುಚ್ಚಿಕೊಂಡು ಕೂಡುವಂತೆ ಹೇಳುತ್ತಾನೆ. ರಾಕ್ಷಸರಿಗೆ ಅಮೃತ ಪಡೆಯಲು ಯೋಗ್ಯತೆ ಇಲ್ಲದ್ದರಿಂದ ವಿಷ್ಣು ಮೋಹಿನಿ ರೂಪ ತಾಳಿ ದೇವತೆಗಳಿಗೆ ಮಾತ್ರ ಅಮೃತ ನೀಡುತ್ತಿರುತ್ತಾನೆ. ದೇವತೆಗಳಿಗೆ ಅಮೃತ ನೀಡಿದರೆ ದೈತ್ಯರಿಗೆ ಬರೀ ಗೆಜ್ಜೆ ಸಪ್ಪಳ ಕೇಳಿಸುತ್ತದೆ. ವಿಷ್ಣುವಿನ ಮೋಹಿನಿ ರೂಪ ಮತ್ತು ಆತ ರಾಕ್ಷಸರಿಗೆ ಮಾಡುತ್ತಿರುವ ವಂಚನೆ ಸ್ವರ್ಭಾನುವಿಗೆ ಗೊತ್ತಾಗಿ ಅವನು ದೇವತೆಗಳ ಸಾಲಿಗೆ ಹೋಗಿ ಕುಳಿತು ಮೋಹಿನಿ ಕೈಯಿಂದ ಅಮೃತ ಪಡೆಯುತ್ತಾನೆ. ಇದನ್ನು ಸೂರ್ಯ ಮತ್ತು ಚಂದ್ರರು ನೋಡಿ ವಿಷ್ಣುವಿನ ಗಮನಕ್ಕೆ ತರುತ್ತಾರೆ. ಆಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸ್ವರ್ಭಾನುವಿನ ತಲೆ ಕಡಿಯುತ್ತಾನೆ. ರುಂಡ ಮತ್ತು ಮುಂಡ ಬೇರ್ಪಡುತ್ತದೆ ಅಷ್ಟೇ. ರುಂಡವನ್ನ *ರಾಹು* ಎಂದೂ ಮುಂಡವನ್ನು *ಕೇತು” ಎಂದೂ ಕರೆಯಲಾಗುತ್ತದೆ. ಆದರೆ, ಅಷ್ಟರಲ್ಲೇ ಅವನು ಅಮೃತ ಪಾನ ಮಾಡಿರುತ್ತಾನೆ. ಸ್ವರ್ಭಾನು ದೈತ್ಯನಾದರೂ ತನ್ನ ಬಾಯಿಗೆ ಅಮೃತ ಬೀಳಲೆಂದು ಶಿವನಲ್ಲಿ ತಪಗೈದಿರುತ್ತಾನೆ. ಅದೇ ರೀತಿ ಇಲ್ಲಿ ಅವನ ಬಾಯಿಗೆ ಅಮೃತ ಬಿದ್ದಿರುತ್ತದೆ, ಆದರೆ ಕಂಠದಿಂದ ಕೆಳಗೆ ಬೀಳುವ ಮೊದಲೇ ಶಿರಚ್ಛೇದ ಆಗಿರುತ್ತದೆ. ಅವನ ಬಾಯಿಯಲ್ಲಿ ಅಮೃತ ಬೀಳುವ ವರವೂ ಪೂರ್ಣವಾಯಿತು. ಅಮೃತ ಬಿದ್ದಿದ್ದರಿಂದ ಮುಖದ ಭಾಗ ರಾಹುವಾಗಿಯೂ, ಕಂಠದ ಕೆಳಗಿನ ಭಾಗವು ಕೇತುವಾಗಿಯೂ ನವಗ್ರಹಗಳಲ್ಲಿ ಸೇರಿ ಪೂಜೆಗೊಳ್ಳುತ್ತಾರೆ. ಸೂರ್ಯ ಚಂದ್ರರು ವಿಷ್ಣುವಿಗೆ ಹೇಳಿ ತಮ್ಮನ್ನು ಶಿಕ್ಷಿಸಿದ್ದರಿಂದ ಅವರು ಸೂರ್ಯ ಚಂದ್ರರನ್ನು ಆಗಾಗ್ಗೆ ಕಾಡುತ್ತಾರೆ. . ಅದೇ *ಸೂರ್ಯಗ್ರಹಣ* ಮತ್ತು *ಚಂದ್ರಗ್ರಹಣ* ಎಂದು ಪುರಾಣ ಕಥೆಗಳು ಹೇಳುತ್ತವೆ. ವೈಜ್ಞಾನಿಕವಾಗಿ ನೋಡಿದಾಗ ಭೂಮಿ ಮತ್ತು ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯ ಮರೆಯಾದರೆ ಅದು ಸೂರ್ಯಗ್ರಹಣವೆನಿಸುತ್ತದೆ.
ವಾಸ್ತವವಾಗಿ ವೈಜ್ಞಾನಿಕವಾಗಿ ಕೂಡ ನಭೋಮಂಡಲದಲ್ಲಿ ಸೂರ್ಯಗ್ರಹದ ಸುತ್ತ ಭೂಮಿ ಸುತ್ತುತ್ತಿದೆ, ಭೂಮಿಯ ಸುತ್ತ ಚಂದ್ರಗ್ರಹ ಸುತ್ತುತ್ತಿದೆ. ಈ ಅಂಡಾಕಾರದ ಪರಿಕ್ರಮದ ಮಾರ್ಗವನ್ನು ಮಧ್ಯದಿಂದ ವಿಭಜಿಸುವ ಒಂದು ಸರಳರೇಖೆಯುಂಟು… ಆ ಸರಳ ರೇಖೆಯ ಎರಡು ತುದಿಗಳೇ ರಾಹು ಮತ್ತು ಕೇತು ಎಂಬ ಎರಡು ಬಿಂದುಗಳು… ವಿಷ್ಣು ಸ್ವರ್ಭಾನು ಎಂಬ ಅಸುರನನ್ನು ಕೊಂದಾಗ, ರುಂಡವಿರುವ ಭಾಗ ಒಂದು ಬಿಂದು, ಮುಂಡವಿರುವ ಭಾಗ ಇನ್ನೊಂದು ಬಿಂದುವಾಗಿದೆ
ಈ ಸರಳ ರೇಖೆಯನ್ನೇ ಮಧ್ಯಂತರ ರೇಖೆಯಾಗಿರಿಸಿಕೊಂಡು (Equatorial Point) ಎಂಬಂತೆ ನವಗ್ರಹಗಳು ಸೂರ್ಯನ ಸುತ್ತಲೂ ಸುತ್ತುವುದರ ಮತ್ತು ನಕ್ಷತ್ರ ಹಾಗೂ ರಾಶಿಗಳ ವಿಭಜನೆಗೆ ಈ ರೇಖೆ ಸಂಕೇತವಾಗಿದೆ. .ರಾಹು – ಕೇತುಗಳು ಸ್ವತಃ ಗ್ರಹಗಳಲ್ಲದಿದ್ದರೂ ಅವುಗಳ ಸಮಾನ ರೇಖೆಯಲ್ಲಿ ಒಮ್ಮೊಮ್ಮೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋದಾಗ “ಸೂರ್ಯಗ್ರಹಣ”ವಾಗುತ್ತದೆ.. ಅದು ಅಮಾವಾಸ್ಯೆ ದಿನದಂದು ನಡೆಯುತ್ತದೆ. ಅಥವಾ ಚಂದ್ರ ತಾನು ಭೂಮಿಯ ಸುತ್ತ ಸುತ್ತುವಾಗ ಸೂರ್ಯ ಮತ್ತು ಭೂಮಿಯೊಟ್ಟಿಗೆ ಸಮಾನಾಂತರ ರೇಖೆಯಲ್ಲಿ ಚಲಿಸುವಾಗ ಭೂಮಿಯ ಇನ್ನೊಂದು ಭಾಗದಲ್ಲಿ ಅಂದರೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುವ ಸಮಾನಾಂತರ ರೇಖೆಯಲ್ಲಿ ಹುಣ್ಣಿಮೆಯಂದು “ಚಂದ್ರಗ್ರಹಣ”ವಾಗುತ್ತದೆ . ಇದನ್ನೆ ಗ್ಲಹಣಗಳ ಸಂದರ್ಭದಲ್ಲಿ ಸೂರ್ಯ ಅಥವಾ ಚಂದ್ರರನ್ನು ರಾಹು ಕೇತುಗಳು ನುಂಗುತ್ತಾರೆ ಎಂಬುದು ಆಡುಭಾಷೆಯ ಮಾತು. ವಾಸ್ತವವಾಗಿ ಹಾಗಿಲ್ಲ. ಗ್ರಹಗಳ ಬೇರೆಬೇರೆ ಪಥ ಚಲನೆಯಿಂದ ಗ್ರಹಣಗಳು ಸಂಭವಿಸುತ್ತವೆ
Narahari Sumadhwa
Sumadhwa Seva
Www.Sumadhwaseva.com
Some queries
1. Pooja, tarpana when and how to do?
Answer – In the morning, as usual Nirmalya Visarjana to be doner During Grahana, again Nirmalya visarjana to be done. Tarpanadhikarigalu to give tarpana, Paarayana, bhajana, daana,
2. What are the formalities to be done during grahana period ?
Answer – Gents – During Grahana period Gayatri Japa, Vayustuti parayana, Narayanashtakshara Mantra japa, Krishnastakshara mantra japa, Vishnu sahasra naama parayana, Rayara Stotra parayana, etc.. to be done for Those who don’t know any of these Mantraas, they can chant “Om sri Narayanaya namaha”. (Ofcourse it is the duty of a Madhwa to learn all these stotras).
Ladies – Gurumantra, paTana of Keshavanaama, Madhwanaama, Lakshmi shobaana, etc., to be done for ladies. Even Gents can do the paTana of the above shlokaas. Those who don’t know these stotras, atleast do japa of Hare raama mantra.
3 When we have to give tarpana during Grahana period ?
Answer – During the madhya kaala of the Grahana period, tarpanaadhikaarigalu have to give tarpana.
5. Those who have are doing Pournima Shraddha on 28.10.2023, whether tarpana also to be given during Madhyakala?
Answer – They have to give tarpana again during Grahana madhyakaala.
6. What to do when one has to be in travel during Grahana period or in the office invariably, where he can’t avoid the office, or the journey, how to observe Grahana?
Answer – Yes. Now a days, due to work pressure or advance ticket reservation either in flight or in train, they can’t do snaana or do any daana, yajana, pooja during the grahana period. As such, they have to follow the following procedure :- During Grahana period, they can chant yathaashakthi raama naama smarana, krishna naama smarana with sankalpa (maanasika). Once they reach their house, they have to take snaana and do ahnika, do yathashakthi daana and then do the pooja , naivedya etc
8. Whether one has to give hastodaka, panchamrutha abhisheka on this day?
Answer – No. On this day we must not do panchamrutha, phalasamarpane, hastodaka for yathigalu, as the yathigalu will be on fasting on the Grahana Day. Give 3 times theertha to vrundavana, apply gandhakshata.
9. If one has soothaka/vruddhi or Rajaswala, , whether he/she has to observe grahana.
Answer – Yes. Irrespective of Soothaka, Vruddhi, rajaswala, they have to observe grahana. They have to take Grahana snaana and moksha snaana.
10. Whether the madi vastra, which has been kept for doing pooja before grahana, can be used after grahana for the pooja?
Answer – No. We can’t use the madi vastra kept before grahana after grahana moksha. Clothes kept in Madi (ಮಡಿ) before Grahana are not to be used after Grahana. After Grahana, do snaana and clothes to be used freshly. “ಗ್ರಹಣಪೂರ್ವದಲ್ಲಿ ಒಣಗು ಹಾಕಿದ್ದ ಮಡಿ ಬಟ್ಟೆ ಗ್ರಹಣದ ನಂತರ ಬರುವುದಿಲ್ಲ. ಮತ್ತೆ ಸ್ನಾನಾನಂತರ ಬೇರೆಯಾಗಿ ಒಣಗಿಹಾಕಿಕೊಳ್ಳಬೇಕು.” ಒದ್ದೆ ಬಟ್ಟೆಯನ್ನು ಉಟ್ಟು ಪೂಜೆ ಮಾಡಬಾರದು. ಆದ್ದರಿಂದ ಆ ಒದ್ದೆ ಬಟ್ಟೆಯನ್ನು ಚೆನ್ನಾಗಿ ಹಿಂಡಿ, ಮೂರು ಸಲ ಜಾಡಿಸಿ ಉಪಯೋಗಿಸಬಹುದು. ಇದು ತಾತ್ಕಾಲಿಕ ಮಡಿಗೆ ಬರುತ್ತದೆ. ಮತ್ತು ಮಾರನೇ ದಿನಕ್ಕೆ ಮಡಿ ಒಣಗಿ ಹಾಕಿಕೊಳ್ಳಬೇಕು. OR we can use dhaavaLi (ಧಾವಳಿ) for the pooja. But the dhaavali which we are using should not have used for bhojana, phalahara sweekara, etc..
11. Shraddha falling on pournami day – Normally, in case of death anniversary falling on the eclipse day, regular shraddha has to be performed after Grahana Moksha. ( If on the grahana day, morning bhojana is permitted, then shraddha can be done on the same day.)
12. What will be the fruit for doing snaana during Grahana ?
Answer – It is called as “parva kaala”, which we have to utilise for the saadhana – to remove sins and getting more punya. It is said that taking holy dip in holy rivers like Ganga, Yamuna, Kaveri and other teerthaas, will help in removing the sins performed by people in this birth and previous births. Further, the punya saadhana which you will get during Grahana will be immense and will be more than 100 times of what one would have got in normal time.
13. What will happen if we eat during Grahana period ?
Answer – Certain things happen in the planet where anything that has moved away from its natural condition will deteriorate very fast. That is why there is a change in the way cooked food is before and after the eclipse. That is why our elders have suggested not to eat during Grahana.
Snaana sankalpa during Grahana @ river – Achamana, praaNaanaayamya, shrI gOviMda… EvaMguNa vishEShaNa vishiShTaayaaM shubha puNyatithou ………… bhaaratIramaNa muKyapraaNaaMtargata shrI viShNu prEraNaya shrIviShNu prItyarthaM chaMdra graha pIDaa parihaaraarthaM …. gangaa snaanamahaM kariShyE….ಆಚಮನ, ಪ್ರಾಣಾನಾಯಮ್ಯ, ಶ್ರೀ ಗೋವಿಂದ… ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ…………… ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಣು ಪ್ರೇರಣಯ ಶ್ರೀವಿಷ್ಣು ಪ್ರೀತ್ಯರ್ಥಂ ಚಂದ್ರ ಗ್ರಹ ಪೀಡಾ ಪರಿಹಾರಾರ್ಥಂ …. ಗಂಗಾ ಸ್ನಾನಮಹಂ ಕರಿಷ್ಯೇ.
What is Lunar Eclipse or Chandra Grahana? – We call it Chandra Grahana or Lunar Eclipse when the Earth comes between the SUN and the MOON This will occur only when the sun, earth and the moon are aligned exactly, that will be always on a full moon (Pournami) day.
What is Vedaramba? – This is a period after start of which period, we must not take eat/drink any thing. This will be 9 hours prior to Chandra Grahana and 12 hours before Surya Grahana, respectively.
Why we are keeping Darba on all the items during Grahana? – Darba is born from the body of Varaha devaru. In Darba, there is sannidhana of Srihari, Brahma and Rudra devaru. So, Darba is always pure. During Grahana, all these items like milk, curds, vegetables, which are being kept will loose their power and becomes unusable. But with the use of Darba being kept on these items, their shuddatwa will be maintained and one can use the same after Grahana also.
Kethugrasta Chandragrahana – Who is Kethu? During Samudra Mathana, when Mohini roopi Srihari was distributing the amrutha, one daithya by name Svarbhanu, came in a disguise and sat among the devate’s row. Srihari gave him Amrutha also. At that time Sun and Moon, {ಸೂರ್ಯಚಂದ್ರರು} on seeing that Swarbhanu has come in Devate’s row and taking amrutha, complained to Mohini, when Srihari through his Sudarshana removed the head of that daithya. Actually that daithya had done penance asking for Amrutha to be falling to his mouth. As such, Srihari had allowed Amrutha to be swallowed upto its mouth, but it didn’t enter beyond mouth, Srihari had removed his head. As such, the head of the daithya was fixed to a snake’s body to become “Rahu”, and the other portion without head is called as “Kethu”. To take a revenge on Surya Chandraru, Rahu tries to swallow Surya and Kethu tries to swallow Moon during Surya Grahana and Chandra Grahana respectively. That is why the eclipses are termed as Rahugrasta Suryagrahana and Kethugrasta Chandragrahana.
Rajaswala strees –
Even the Rajaswala ladies must observe Grahana snaana – But they must have water poured by somebody to a bucket and from that bucket they must take bath. They must not squeezout . They shall sit in the wet cloth itself and do dhyana.
ಸೂತಕೇ ಮೃತಕೇ ಚೈವ ನ ದೋಷೋ ರಾಹುದರ್ಶನೇ |
ಸ್ನಾನೇ ನೈಮಿತ್ತಿಕೇ ಪ್ರಾಪ್ತೇ ನಾರೀ ಯದಿ ರಜಸ್ವಲಾ |
ಪಾತ್ರಾಂತರಿತೋಯೇನ ಸ್ನಾನಂ ಕೃತ್ವಾ ವ್ರತಂ ಚರೇತ್ |
ನ ವಸ್ತ್ರನಿಷ್ಪೀಡನಂ ಕಾರ್ಯಂ ನಾನ್ಯದ್ ವಸ್ತ್ರಂ ಚ ದಾರಯೇತ್ |
sootakE mRutakE chaiva na dOShO raahudarshanE |
snaanE naimittikE praaptE naarI yadi rajasvalaa |
paatraaMtaritOyEna snaanaM kRutvaa vrataM charEt |
na vastraniShpIDanaM kaaryaM naanyad vastraM cha daarayEt |
Pregnants – It is advisable that the pregnants should not come out during Grahana period, as it may affect the growth of the child. It is also scientifically proved that the Pregnants if they are attracted by the X-Rays of the Grahana falls on them that they would suffer. It may affect through Abortion or the child birth with some disabilities. Not only pregnants, but also animals, plants also would suffer during Grahana.
Effect of Grahana :
- Grahana will have different effects on different people. Based on respective rashees, different effects are there for each rashi.
- Shubha Phala – Grahana may give you some good result for you
- Mishra phala – As the name indicates it will be both Shubha + ashubha phala
- Ashubha Phala- Grahana may harm your progress.
But just hearing Ashubha don’t get panic. There are so many suggestions for overcoming the Ashubha Phala which you can do . Even if your Rashi is not having Ashubha Phala, please do all that is mentioned below to get maximum punya phala during Grahana
If your Rashi is having Ashubha/Mishra Phala, please do all that is mentioned below to get maximum punya phala during Grahana
Ladies – Chant – Vijayarayara kavacha, Madhwanama, Keshavanama, etc
Gents – Do Gayatri Japa as much as possible, Do parayanha of Sarva moola, Sumadhwa Vijaya, Vayustuti, etc., Chant Vishnu Sahasra Naama /Harivayustuti/ Shanaishcharakrutha Narasimha Stotra, Navagraha Stotra
Do yathashakti daana – During Grahana we must do daanaas – Godaana, Suvarna Daana, Bhoodana, dhaanya dhaana (yathaashakthi.) Even though it is said that Silver/Gold Daana – Don’t borrow and do the daana. Whatever you have you can do daana – Even 1 Rupee with Yatashakthi will have the same punya as that of a Silver/gold/bhoodaana.
Dos AND donots :
DO NOTs :
-
-
We must not go for urinals/latrine during Grahana – If we go for urinals – we will get daaridrya, if we go for latrine – we will get the Janma of insect.
-
We must not sleep during Grahana Time, if we sleep we will get diseases
-
We must not do maithuna during Grahana
-
We must not do abhyanjana snaana –As such, one must not eat, sleep, urinals, maithuna, bhojana during grahana kaala
Dos.
-
- We must not eat/drink anything after Vedaaramba. If we eat some thing during grahana period, we have to observe three days fasting for parihara of the grahana dosha.
- We must take bath once when the Grahana starts and once when the grahana ends.
- Even those who are observing soothaka also must observe Grahana snaana.
- Even the Rajaswala ladies must observe Grahana snaana.
- While doing sparsha snaana, we must do the snaana with the clothes we are wearing in.
- During Grahana Madhya kaala, tarpanaadhikarigalu must give tarpana to sarva pitrugalu.
- During Grahana we must do daanaas – Godaana, Suvarna Daana, Bhoodana, dhaanya dhaana (yathaashakthi.)
- Milk, curds, vegetables, water and other items are free from Grahana dosha provided a kusha (darbe) is kept on the items. But baked items are not free from grahana dosha, even though darbe is kept on them.
- Two days prior and two days after Grahana are Varjya for “Shubha Kaarya”.
- During Grahana period do as much japa as possible, do paarayana of Vayustuthi, Rayara Stotra, Sumadhwa Vijaya, etc (depending upon the time available). Those who does not know Rayara Stotra, and ladies atleast then can chant –
harE raama harE raama raama raama harE harE |
harE kRiShNa harE kRiShNa kRiShNa kRiShNa harE harE |
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ |
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |
हरे राम हरे राम राम राम हरे हरे ।
हरे कृष्ण हरे कृष्ण कृष्ण कृष्ण हरे हरे ।
Ladies can chant Madhwanaama, sing devaranamagalu, they can do guru mantra, or mantra “naaraayanaaya namaha”| etc.
ಚಂದ್ರಗ್ರಹಣ ಶಾಂತಿ ಮಂತ್ರ :
ಇಂದ್ರೋ ನಲೋ ದಂಢಧರಶ್ಚ ಕಾಲ: |
ಪಾಶಾಯುಧೋ ವಾಯುಧನೇಶರುದ್ರ: |
ಮಜ್ಜನ್ಮಋಗ್ಭೋ ಮಮ ರಾಶಿ ಸಂಸ್ಥಾ: |
ಕುರ್ವಂತು ಚಂದ್ರಗ್ರಹದೋಷಶಾಂತಿಂ |
(ಗರ್ಗಾಚಾರ್ಯ ಸ್ಮೃತಿವಾಕ್ಯ)
ಈ ಮೇಲಿನ ಮಂತ್ರವನ್ನು ತಾಮ್ರದ ತಗಡಿನಲ್ಲಿ ಬರೆದು ಹಣೆಗೆ ಕಟ್ಟಿಕೊಂಡು ಬೆಳ್ಳಿಯ ಚಂದ್ರಬಿಂಬ, ಸುವರ್ಣನಾಗ ಪ್ರತಿಮೆಯನ್ನು ತುಪ್ಪದಿಂದ ತುಂಬಿದ ತಾಮ್ರ/ಕಂಚು ಪಾತ್ರೆಯ ಮೇಲಿಟ್ಟು, ಬ್ರಾಹ್ಮಣರಿಗೆ ಪೂಜಿಸಿ ದಾನ ಮಾಡಬೇಕು. OR ಇದು ಮಾಡಲು ಕಷ್ಟವಾದರೆ ಯಥಾ ಶಕ್ತಿ ದಕ್ಷಿಣೆ ದಾನಮಾಡಬಹುದು.
ದಾನ ಸಂಕಲ್ಪ :
ಅದ್ಯ ಪೂರ್ವೋಚ್ಚರಿತ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಚಂದ್ರ ಗ್ರಹಾಂತರ್ಯಾಮಿ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀನರಸಿಂಹ ಪ್ರೇರಣಯ ಶ್ರೀ ಲಕ್ಷ್ಮೀನರಸಿಂಹ ಪ್ರೀತ್ಯರ್ಥಂ ಚಂದ್ರೋಪರಾಗ ಪೀಡಾಪರಿಹಾರಾರ್ಥಂ ನಾಗಪ್ರತಿಮಾಯುಕ್ತ ಚಂದ್ರಬಿಂಬದಾನಂ ಕರಿಷ್ಯೇ
ತಮೋಮಯ ಮಹಾಭೀಮ ಸೋಮಸೂರ್ಯವಿಮರ್ದನ : |
ಹೇಮತಾರಾಪ್ರದಾನೇನ ಮಮ ಶಾಂತಿಪ್ರದೋ ಭವ|
ವಿಧುಂತುದ ನಮಸ್ತುಭ್ಯಂ ಸಿಂಹಿಕಾನಂದನಾಚ್ಯುತ |
ದಾನೇನಾನೇನ ನಾಗಸ್ಯ ರಕ್ಷಮಾಂ ವೇಧಜಾದ್ಭಯಾತ್ |
Grahana dosha pariharaartha stotra to be chanted– Every body shall chant the following Mantrap during Chandra Grahana, for parihaara, irrespective of whether the Grahana effect for their nakshatra is there or not.
ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: |
ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು |
ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: |
ಚಂದ್ರೋಪರಾಗಸಂಭೂತಾಂ ಅಗ್ನೇ: ಪೀಡಾಂ ವ್ಯಪೋಹತು|
ಯ: ಕರ್ಮಸಾಕ್ಷೀ ಲೋಕಾನಾಂ ಧರ್ಮೋ ಮಹಿಷವಾಹನ: |
ಯಮಶ್ಚಂದ್ರೋಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು |
ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: |
ಖಡ್ಗಹಸ್ತೋಽತಿಭೀಮಶ್ಚ ಗ್ರಹಪೀಡಾಂ ವ್ಯಪೋಹತು ||
ನಾಗಪಾಶಧರೋ ದೇವ: ಸದಾ ಮಕರವಾಹನ: |
ಸ ಜಲಾಧಿಪತಿರ್ದೇವ: ಗ್ರಹಪೀಡಾಂ ವ್ಯಪೋಹತು ||
ಪ್ರಾಣರೂಪೋ ಹಿ ಲೋಕಾನಾಂ ಸದಾ ಕೃಷ್ಣಮೃಗಪ್ರಿಯ: |
ವಾಯುಶ್ಚಂದ್ರೋಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು ||
ಯೋಽಸೌ ನಿಧಿಪತಿರ್ದೇವ: ಖಡ್ಗಶೂಲಗದಾಧರ: |
ಚಂದ್ರೋಪರಾಗಕಲುಷಂ ಧನದೋಽತ್ರ ವ್ಯಪೋಹತು |
ಯೋಽಸಾವಿಂದುಧರೋ ದೇವ: ಪಿನಾಕೀ ವೃಷವಾಹನ: |
ಚಂದ್ರೋಪರಾಗಪಾಪಾನಿ ಸ ನಾಶಯತು ಶಂಕರ:||
ತ್ರೈಲೋಕ್ಯೇ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|
ಬ್ರಹ್ಮವಿಷ್ಣುರ್ಕರುದ್ರಾಶ್ಚ ದಹಂತು ಮಮ ಪಾತಕಂ ||
योसौ वज्रधरो देव: आदित्यानां प्रभुर्मत: ।
सहस्रनयन: शक्रो ग्रहपीडां व्यपोहतु ।
मुखं य: सर्वदेवानां सप्तार्चिरमितद्युति: ।
चंद्रोपरागसंभूतां अग्ने: पीडां व्यपोहतु।
य: कर्मसाक्षी लोकानां धर्मो महिषवाहन: ।
यमश्चंद्रोपरागोत्थां ग्रहपीडां व्यपोहतु ।
रक्षोगणाधिप: साक्षात् नीलांजनसमप्रभ: ।
खड्गहस्तोऽतिभीमश्च ग्रहपीडां व्यपोहतु ॥
नागपाशधरो देव: सदा मकरवाहन: ।
स जलाधिपतिर्देव: ग्रहपीडां व्यपोहतु ॥
प्राणरूपो हि लोकानां सदा कृष्णमृगप्रिय: ।
वायुश्चंद्रोपरागोत्थां ग्रहपीडां व्यपोहतु ॥
योऽसौ निधिपतिर्देव: खड्गशूलगदाधर: ।
चंद्रोपरागकलुषं धनदोऽत्र व्यपोहतु ।
योऽसाविंदुधरो देव: पिनाकी वृषवाहन: ।
चंद्रोपरागपापानि स नाशयतु शंकर:॥
त्रैलोक्ये यानि भूतानि स्थावराणि चराणि च।
ब्रह्मविष्णुर्करुद्राश्च दहंतु मम पातकं ॥
యోసౌ వజ్రధరో దేవ: ఆదిత్యానాం ప్రభుర్మత: |
సహస్రనయన: శక్రో గ్రహపీడాం వ్యపోహతు |
ముఖం య: సర్వదేవానాం సప్తార్చిరమితద్యుతి: |
చంద్రోపరాగసంభూతాం అగ్నే: పీడాం వ్యపోహతు|
య: కర్మసాక్షీ లోకానాం ధర్మో మహిషవాహన: |
యమశ్చంద్రోపరాగోత్థాం గ్రహపీడాం వ్యపోహతు |
రక్షోగణాధిప: సాక్షాత్ నీలాంజనసమప్రభ: |
ఖడ్గహస్తోఽతిభీమశ్చ గ్రహపీడాం వ్యపోహతు ||
నాగపాశధరో దేవ: సదా మకరవాహన: |
స జలాధిపతిర్దేవ: గ్రహపీడాం వ్యపోహతు ||
ప్రాణరూపో హి లోకానాం సదా కృష్ణమృగప్రియ: |
వాయుశ్చంద్రోపరాగోత్థాం గ్రహపీడాం వ్యపోహతు ||
యోఽసౌ నిధిపతిర్దేవ: ఖడ్గశూలగదాధర: |
చంద్రోపరాగకలుషం ధనదోఽత్ర వ్యపోహతు |
యోఽసావిందుధరో దేవ: పినాకీ వృషవాహన: |
చంద్రోపరాగపాపాని స నాశయతు శంకర:||
త్రైలోక్యే యాని భూతాని స్థావరాణి చరాణి చ|
బ్రహ్మవిష్ణుర్కరుద్రాశ్చ దహంతు మమ పాతకం ||
யோஸௌ வஜ்ரதரோ தேவ: ஆதித்யாநாம் ப்ரபுர்மத: |
ஸஹஸ்ரநயந: ஶக்ரோ க்ரஹபீடாம் வ்யபோஹது |
முகம் ய: ஸர்வதேவாநாம் ஸப்தார்சிரமிதத்யுதி: |
சம்த்ரோபராகஸம்பூதாம் அக்நே: பீடாம் வ்யபோஹது|
ய: கர்மஸாக்ஷீ லோகாநாம் தர்மோ மஹிஷவாஹந: |
யமஶ்சம்த்ரோபராகோத்தாம் க்ரஹபீடாம் வ்யபோஹது |
ரக்ஷோகணாதிப: ஸாக்ஷாத் நீலாம்ஜநஸமப்ரப: |
கட்கஹஸ்தோதிபீமஶ்ச க்ரஹபீடாம் வ்யபோஹது ||
நாகபாஶதரோ தேவ: ஸதா மகரவாஹந: |
ஸ ஜலாதிபதிர்தேவ: க்ரஹபீடாம் வ்யபோஹது ||
ப்ராணரூபோ ஹி லோகாநாம் ஸதா க்ருஷ்ணம்ருகப்ரிய: |
வாயுஶ்சம்த்ரோபராகோத்தாம் க்ரஹபீடாம் வ்யபோஹது ||
யோஸௌ நிதிபதிர்தேவ: கட்கஶூலகதாதர: |
சம்த்ரோபராககலுஷம் தநதோத்ர வ்யபோஹது |
யோஸாவிம்துதரோ தேவ: பிநாகீ வ்ருஷவாஹந: |
சம்த்ரோபராகபாபாநி ஸ நாஶயது ஶம்கர:||
த்ரைலோக்யே யாநி பூதாநி ஸ்தாவராணி சராணி ச|
ப்ரஹ்மவிஷ்ணுர்கருத்ராஶ்ச தஹம்து மம பாதகம் ||
ಕೃಷ್ಣಾರ್ಪಣಮಸ್ತು
Excellent, useful information for rest others followers I warmly welcome certain guidelines
Thank u very much