ಭೋಗಿ ಹಬ್ಬವನ್ನು ಮಕರ ಸಂಕ್ರಾಂತಿಯ ಹಿಂದಿನ ದಿನ ಅಂದರೆ ಧನುರ್ಮಾಸದ ಕಡೆಯ ದಿನ ಆಚರಿಸತಕ್ಕದ್ದು.
ಭೋಗಿ ಹಬ್ಬವು ಸಂಕ್ರಾಂತಿ ಆಚರಣೆಯ ಮೊದಲ ಹಬ್ಬವಾಗಿದೆ. ಈದಿನ ದೇವೇಂದ್ರನನ್ನು ಪೂಜಿಸುವುದು ವಾಡಿಕೆ ಏಕೆಂದರೆ ದೇವೇಂದ್ರನು ಮಳೆಯ ದೇವತೆ. ಭೂಮಿಗೆ ಸುಭಿಕ್ಷ ಬರಲಿ ಎಂದು ಕೇಳುತ್ತಾ ಈ ಹಬ್ಬವನ್ನು ಆಚರಿಸುತ್ತಾರೆ. ಈದಿನ ನಮ್ಮ ಮನೆಯನ್ನು ಸ್ವಚ್ಛಗೊಳಿಸಿ, ತಳಿರುತೋರಣದಿಂದ ಅಲಂಕಾರ ಮಾಡುತ್ತಾರೆ. ಮನೆಯ ಮುಂದೆ ಸೆಗಣಿಯಿಂದ ಸಾರಿಸುತ್ತಾರೆ. ಈದಿನ ಸಿಹಿಗುಂಬಳ ಕಾಯಿಯ ಪಲ್ಯ, ರೊಟ್ಟಿ ಮಾಡುತ್ತಾರೆ.
ಭೋಗಿ ಹಬ್ಬದ ದಿನ ಬೆಳಿಗ್ಗೆ ಬ್ರಾಹ್ಮಣ ದಂಪತಿಗಳಿಗೆ ತರಕಾರಿ, ದವಸಧಾನ್ಯ ಕೊಡುವ ಸಂಪ್ರದಾಯವಿದೆ. ಏಕೆಂದರೆ ಈ ವರ್ಷದ ಮೊದಲ ಫಸಲನ್ನು ಕೊಟ್ಟು ತಿನ್ನಬೇಕೆಂಬ ಸಂಪ್ರದಾಯ. ಆದ್ದರಿಂದ ಭೋಗಿ ಹಬ್ಬದ ದಿನ ಬೆಳಿಗ್ಗೆ ಸ್ನಾನ ಪೂರ್ವದಲ್ಲಿ ಯೋಗ್ಯ ಮುತ್ತೈದೆಯರ ಮನೆಗೆ ಹೋಗಿ ಸಾಧ್ಯವಾದಷ್ಟು ತರಕಾರಿ, ಹಣ್ಣುಗಳು, ಧವಸಧಾನ್ಯಗಳು , ಎಣ್ಣೆ, ತುಪ್ಪ ಇವುಗಳನ್ನು ದಕ್ಷಿಣೆ ಸಹಿತ ಕೊಟ್ಟು ಅಂದಿನ ಅಡುಗೆಗೆ ಉಪಯೋಗಿಸುವಂತೆ ಕೋರಬೇಕು.
ಸಾಮಾನ್ಯವಾಗಿ ಭೋಗಿಹಬ್ಬದ ದಿನ ಎಣ್ಣೆ ಸ್ನಾನ ಮಾಡಬೇಕು. ಆದರೆ ದಶಮಿ, ದ್ವಾದಶಿ ಅಥವಾ ಅಮಾವಾಸ್ಯೆ ಹೋಗಿ ಭೋಗಿ ಹಬ್ಬ ಬಂದರೆ ಮತ್ತು ಪವಿತ್ರ ದಿನವಾದ್ದರಿಂದ ದ್ವಾದಶಿಯ ನೆಂಟು ಇದ್ದರೂ ಸ್ವಲ್ಪ ಹಾಲು ತುಪ್ಪ ಬೆರೆಸಿ ಸ್ನಾನ ಮಾಡತಕ್ಕದ್ದು. ಹೆಣ್ಣು ಮಕ್ಕಳು ಯೋಗ್ಯರಾದ ಮುತ್ತೈದೆಯರಿಗೆ ಮರದ ಬಾಗಿನ ಕೊಡತಕ್ಕದ್ದು.
ಮೊರದ ಬಾಗಿನದಲ್ಲಿ ಇಡತಕ್ಕಂತಹ ವಸ್ತುಗಳು :
ಅಕ್ಕಿ, ಬೇಳೆಗಳು, ಎಳ್ಳು, ಉಪ್ಪು, ಹುಣಿಸೇ ಹಣ್ಣು, ದೇವರ ದೀಪಕ್ಕೆ ಉಪಯೋಗಿಸುವ ಬತ್ತಿಗಳು, ಬೆಲ್ಲ, ಧನಿಯ, ಜೀರಿಗೆ, ಲವಂಗ, ಮೆಣಸು, ಇಂಗು, ಎಣ್ಣೆ, ತುಪ್ಪ, ಕೊಬ್ಬರಿ, ಅರಿಶಿಣ, ಕುಂಕುಮ, ಅನಿಷಿದ್ಧ ಹಣ್ಣುಗಳು, ತರಕಾರಿ, ಹಾಲು, ಮೊಸರು, ಬಾಚಣಿಕೆ, ಬಿಚ್ಚೋಲೆ, ಕರಿಮಣಿ, ಕುಪ್ಪಸದ ಕಣ, ಕನ್ನಡಿ, ಬಳೆ, ಕಾಡಿಗೆ, ವಿಳ್ಳೇದೆಲೆ, ಅಡಕೆ, ದಕ್ಷಿಣೆ.
ಇದೆಲ್ಲವನ್ನೂ ಸಿದ್ಧಪಡಿಸಿ, ದೀಪವನ್ನು ಹಚ್ಚಿ, ದೇವರ ಮುಂದಿಟ್ಟು, ದೇವರಿಗೆ ಸಮರ್ಪಿಸಿ, ಆಹ್ವಾನಿತ ಮುತ್ತೈದೆಯ ಪಾದ ಪೂಜೆ ಮಾಡಿ, ಪೂರ್ವಾಭಿಮುಖವಾಗಿ ಮಣೆ/ ಚಾಪೆಯ ಮೇಲೆ ಕೂಡಿಸಿ, (ಬರೀ ನೆಲದ ಮೇಲೆ ಕೂಡಿಸಬೇಡಿ), ಕುಂಕುಮ ಕೊಟ್ಟು, ಅರಿಶಿನ ಕೊಟ್ಟು, ತಲೆ ಬಾಚಿ, ಹೂವು ಮುಡಿಸಿ, ಕಣ್ಣಿಗೆ ಕಾಡಿಗೆ ಹಚ್ಚಿ, ಕನ್ನಡಿಯಿಂದ ಅವರ ಮುಖವನ್ನು ತೋರಿಸಿ, ವಿಳ್ಳೇದೆಲೆ ಆಡಕೆ ದಕ್ಷಿಣೆ ಕೊಟ್ಟು, ಕೊಡುವವರ ಸೆರಗು ಮತ್ತು ಪಡೆದುಕೊಳ್ಳುವವರ ಸೆರಗು ಮೊರದ ಬಾಗಿನದ ಮೇಲೆ ಹರಡಿ ಮೂರು ಬಾರಿ ತೂಗಿ, ದಾನ ಕೊಟ್ಟು, ನಂತರ ಮೊರದ ಬಾಗಿನದ ಮೇಲಿನ ಮೊರವನ್ನು ತೆಗೆದು ಮುತ್ತೈದೆಗೆ ತೋರಿಸಬೇಕು. ನಂತರ ಮುತ್ತೈಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು
ಮರದ ಬಾಗಿನ ಕೊಡುವವರು ಹೇಳತಕ್ಕದ್ದು :
ರಾಮಪತ್ನೀ ಮಹಾಭಾಗೇ ಪುಣ್ಯಮೂರ್ತೇ ನಿರಾಮಯೇ |
ಮಯಾದತ್ತಾನಿ ಶೂರ್ಪಾಣಿ ತ್ವಯಾ ಸ್ವೀಕೃತಾ ಜಾನಕೀ |
ಮರದ ಬಾಗಿನ ಪಡೆಯುವವರು ಹೇಳತಕ್ಕದ್ದು :
ರಾಮಪತ್ನೀ ಮಹಾಭಾಗೇ ಪುಣ್ಯಮೂರ್ತೇ ನಿರಾಮಯೇ |
ತ್ವಯಾ ದತ್ತಾನಿ ಶೂರ್ಪಾಣಿ ಮಯಾ ಸ್ವೀಕೃತಾ ಜಾನಕೀ |
Bhogi is the first festival day of Sankranthi and is celebrated with the worship of Devendra, the God of Rains. Lord Indra is worshiped for the providing satisfactory harvest, thereby bringing plenty and prosperity to the land. On Bhogi day, we clean our homes and throw unwanted things. This is usually celebrated the day prior to Sankranthi/pongal, usually on 13th or 14th of January every year. On Bhogi Festival day, usually the following Rituals are performed.
- Cleaning the house and decoration of the house with mango leaves and plantains.
- House is also cleaned with cow dung {ಸೆಗಣಿ}. { Daily we have to clean our house with cow dung}.
- On this day, rotti to be made of sihigumbala kayi (ಸಿಹಿಗುಂಬಳ). Even Palya (ಪಲ್ಯ) also to be made of ಸಿಹಿಗುಂಬಳ (sihigumbala). In Tamilnadu, they celebrate with great enthusiasm.During evening, elachi hannu (ಎಲಚಿ ಹಣ್ಣು ) will be poured and arathi to be done to children below 5 years of age.
- ಮರದ ಬಾಗಿನ (marada baagina) to be given to muthaideyaru.