Balipadyami – Deepavali

Bali Padyami – Kartheeka Shudda Padya

ಬಲಿಪಾಡ್ಯಮಿಯನ್ನು ಕಾರ್ತಿಕ ಶುದ್ಧ ಪಾಡ್ಯದಂದು ಆಚರಿಸಲಾಗುತ್ತದೆ

ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ |
ಇಂದ್ರಶತ್ರೋ ಅಮರಾವತೇ ವಿಷ್ಣುಸಾನ್ನಿಧ್ಯತೋ ಭವ |

बलिराज नमस्तुभ्यं दैत्यदानव वंदित ।
इंद्रशत्रो अमरावते विष्णुसान्निध्यतो भव ।

*ಬಲಿಪಾಡ್ಯಮಿಯ ವಿಶೇಷತೆ ಏನು* ?
ಪರಮಾತ್ಮನು ಕಶ್ಯಪ ಅದಿತಿಗಳ ಪ್ರಾರ್ಥನೆಯಂತೆ ಅವರ ಮಗನಾಗಿ ವಾಮನನಾಗಿ ಅವತರಿಸಿ, ಇಂದ್ರಾದಿ ದೇವತೆಗಳಿಗೆ ಕಂಟಕನಾಗಿದ್ದ ದೈತ್ಯಚಕ್ರವರ್ತಿ ಬಲಿಚಕ್ರವರ್ತಿಯನ್ನು ನಿಗ್ರಹಿಸಿ, ಅವನಿಂದ ಮೂರು ಹೆಜ್ಜೆ ದಾನ ಪಡೆದು ಅವನನ್ನು ಸುತಳ ಲೋಕಕ್ಕೆ ಅಟ್ಟಿ, ಅಲ್ಲಿ ಅವನ ಮನೆ ಬಾಗಿಲಲ್ಲೇ ನಿಂತ ದಿನವೇ ಬಲಿಪಾಡ್ಯಮಿ. ಇದನ್ನು ಕಾರ್ತೀಕ ಶುದ್ಧ ಪ್ರತಿಪತ್ ದಿನದಂದು ಆಚರಿಸಲಾಗುತ್ತದೆ. ಬಲಿಯ ಪ್ರಾರ್ಥನೆಯಂತೆ ಈ ದಿನವನ್ನು ಅವನ ಹೆಸರಿನಿಂದ ಪ್ರಖ್ಯಾತಿಗೊಳಿಸಿ ಅನುಗ್ರಹಿಸಿದ ವಾಮನರೂಪಿ ಹರಿಯು. ಈ ದಿನದಂದು ವಿಶೇಷ ಕಾರ್ಯಗಳಿಗೆ ಮುಹೂರ್ತವನ್ನು ನೋಡಬೇಕಾಗಿಲ್ಲ. ಸ್ವಯಂಸಿದ್ಧ 3½ ಮುಹೂರ್ತಗಳಲ್ಲಿ ಅರ್ಧ ಮುಹೂರ್ತ ಬಲಿಪಾಡ್ಯಮಿಯೆಂದು ಪ್ರಸಿದ್ಧ. ಉಳಿದ ಮೂರು ಮುಹೂರ್ತಗಳು ವಿಜಯದಶಮಿ, ಅಕ್ಷಯತೃತೀಯ, ಮತ್ತು ಯುಗಾದಿ. ಬಲಿಪಾಡ್ಯಮಿಯಂದು ಅರ್ಧದಿನದವರೆಗೂ ಸ್ವಯಂಸಿದ್ಧ ಮುಹೂರ್ತವಾಗಿದ್ದು, ಇಂದೂ ಕೂಡ ತೈಲಾಭ್ಯಂಜನವನ್ನು ಮಾಡಬೇಕು. ಮತ್ತು ಈ ದಿನ ದೀಪದಾನ, ಗೋದಾನ, ವಸ್ತ್ರದಾನ, ಮಂಗಳವಸ್ತ್ರಗಳ ದಾನ ಮಾಡಿದರೆ ವಾಮನ ರೂಪಿ ಪರಮಾತ್ಮನು ಸುಪ್ರೀತನಾಗುತ್ತಾನೆ. ಈದಿನ ದೀಪಪ್ರಜ್ವಲವನ್ನು ಮಾಡುವುದರಿಂದ ಲಕ್ಷ್ಮೀದೇವಿಯು ಸುಪ್ರೀತಳಾಗಿ ಸ್ಥಿರವಾಗಿ ನೆಲೆಸುತ್ತಾಳೆ.

 

*ಯಾರು ಈ ಬಲಿಚಕ್ರವರ್ತಿ* –

ಯಾರು ಈ ಬಲಿಚಕ್ರವರ್ತಿ –  ಕಶ್ಯಪ ದಿತಿಗಳ ವಂಶದಲ್ಲಿ ಬಂದ ಪ್ರಹ್ಲಾದರಾಜರ ಮೊಮ್ಮಗನೇ ಈ ಬಲಿಚಕ್ರವರ್ತಿ. ಹಿರಣ್ಯಕಶಿಪುವಿನ ಮಗ ಪ್ರಹ್ಲಾದರಾಜರು – ಅವರ ಮಗ ವಿರೋಚನ – ಅವರ ಮಗನೇ ಬಲಿಚಕ್ರವರ್ತಿ. ಬಲಿಯ ಮಗ ಬಾಣಾಸುರ. ಬಲಿಯ ನಿಜವಾದ ಹೆಸರು ಇಂದ್ರಸೇನ. ಇವನು ದೈತ್ಯಕುಲದಲ್ಲಿ ಹುಟ್ಟಿದ್ದರೂ ತನ್ನ ಆಡಳಿತದಲ್ಲಿ ಧರ್ಮನಿಷ್ಟೆ ಮತ್ತು ದಾನದಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ. ಸಮುದ್ರಮಥನ ಕಾಲದಲ್ಲಿ ದೈತ್ಯರ ಗುಂಪಿನ ನಾಯಕನಾಗಿದ್ದವನು ಈ ಬಲಿಚಕ್ರವರ್ತಿಯೇ.  ಮುಂದಿನ ಸಾವರ್ಣಿ ಮನ್ವಂತರದಲ್ಲಿ ಇಂದ್ರಪದವಿಗೆ ಬರುವವನು ಈ ಬಲಿಯೇ. 

 

ಬಲಿಚಕ್ರವರ್ತಿ ದೈತ್ಯನಾಗಿದ್ದರೂ ಸಾತ್ವಿಕ ಸ್ವಭಾವದವನಾಗಿದ್ದ. ಕೆಲವೊಮ್ಮೆ ಅವನಲ್ಲಿ ಅಸುರಾವೇಶವಿರುತ್ತಿತ್ತು. ಬಲಿ ತನ್ನ ಅಸುರಾವೇಶದಲ್ಲಿ ಪರಮಾತ್ಮನ ಅವಹೇಳನ ಮಾಡಿದ್ದನ್ನು ಸಹಿಸದ ಪ್ರಹ್ಲಾದರಾಜ ಶಪಿಸಿದ್ದ – “ನಿನ್ನ ಸಮಸ್ತ ಸಾಮ್ರಾಜ್ಯ ನಾಶವಾಗಲಿ”. ಆಗ ಪಶ್ಚಾತ್ತಾಪವಾಗಿ ಕ್ಷಮೆ ಯಾಚಿಸಿದ್ದ. ತನ್ನ ತಾತನ ಶಾಪವು ಅವನ ಅವನತಿಗೆ ಕಾರಣವಾಯಿತು

ಬಲಿಚಕ್ರವರ್ತಿಯು ಇಡೀ ವಿಶ್ವವನ್ನೇ ತನ್ನ ಹದಬಸ್ತಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ, ಇಂದ್ರಲೋಕವನ್ನೂ ಆಕ್ರಮಿಸಿ, ಇಂದ್ರನನ್ನು ಕೆಳಗಿಳಿಸಿದನು. ತಾನೇ ಇಂದ್ರನಾಗಲು ಉದ್ಯುಕ್ತನಾಗಿ, 100 ಅಶ್ವಮೇಧ ಯಾಗವನ್ನು ಮಾಡಲು ಆರಂಭಿಸಿ, 99 ಯಾಗವನ್ನು ಪೂರೈಸಿದನು. 100ನೇ ಯಾಗವನ್ನು ದೈತ್ಯಗುರು ಶುಕ್ರಾಚಾರ್ಯರ ನೇತೃತ್ವದಲ್ಲಿ ಆರಂಭಿಸಿದನು. ಆಗ ಇಂದ್ರನಾಗಿದ್ದ ಪುರಂದರನೆಂಬ ಇಂದ್ರನು ತನ್ನ ಹುದ್ದೆ ಕಳೆದುಕೊಳ್ಳುವ ಭೀತಿಯಿಂದ ಶ್ರೀಹರಿಯನ್ನು ಪ್ರಾರ್ಥಿಸಿದನು. ಅದೇ ಸಂದರ್ಭದಲ್ಲಿ ಅದಿತಿಯೂ ಪರಮಾತ್ಮನನ್ನು ತನ್ನ ಮಗನಾದ ಪುರಂದರನಿಗೆ ಇಂದ್ರಪದವಿಯನ್ನು ಉಳಿಸಿಕೊಡಲು ಪ್ರಾರ್ಥಿಸಿ, ಕಠಿಣ ವ್ರತಗಳ ಮಾಡಲು, ಅವರ ಪ್ರಾರ್ಥನೆಯಂತೆ, ದೇವತೆಗಳ ಪ್ರಾರ್ಥನೆಯಂತೆ, ದುಷ್ಟ ಬಲಿಯ ನಿಗ್ರಹಿಸಲು ಕಶ್ಯಪ ಅದಿತಿಗಳ ಮಗನಾಗಿ ಭಾದ್ರಪದ ಶುದ್ಧ ದ್ವಾದಶಿಯಂದು ಶ್ರವಣ ನಕ್ಷತ್ರದಲ್ಲಿ ಅಭಿಜಿನ್ ಮುಹೂರ್ತದಲ್ಲಿ ಜನಿಸಿದನು 

 

ಬಲಿಯ ನೂರನೇ ಅಶ್ವಮೇಧ ಯಾಗ ಮುಕ್ತಾಯ ಹಂತದಲ್ಲಿದ್ದಾಗ ವಾಮನ ರೂಪಿ ಪರಮಾತ್ಮನು ಯಾಗಮಂಟಪ ಪ್ರವೇಶಿಸಿದನು. ಅತಿ ಸುಂದರ ಬ್ರಹ್ಮಚಾರಿಯ ದರ್ಶನದಿಂದ ಪುಳಕಿತನಾದ ಬಲಿಯು ಅವನಿಗೆ ನಮಸ್ಕರಿಸಿ, ಪಾದಪ್ರಕ್ಷಾಲನೆ ಮಾಡಿ, ನಿನಗೆ ಏನು ಬೇಕೆಂದು ಕೇಳಿದನು. ವಾಮನನಾದರೋ ನನಗೆ ಏನೂ ಬೇಡ, ಕೇವಲ ತನ್ನ ಮೂರು ಹೆಜ್ಜೆ ಭೂಮಿಯನ್ನು ನೀಡಿದರೆ ಸಾಕೆನಲು, ಗುರು ಶುಕ್ರಾಚಾರ್ಯರು ಎಚ್ಚರಿಸಿದರೂ ಕೇಳದೆ ಆ ಮೂರು ಹೆಜ್ಜೆ ಭೂಮಿಯನ್ನು ನೀಡಲು ಉದ್ಯುಕ್ತನಾದನು. ತನ್ನ ಮೊದಲ ಹೆಜ್ಜೆಯಿಂದ ಪರಮಾತ್ಮನು ಇಡೀ ಭೂಲೋಕವನ್ನೇ ಆಕ್ರಮಿಸಿ, ತನ್ನ ಎರಡನೇ ಹೆಜ್ಜೆಯಿಂದ ತ್ರಿವಿಕ್ರಮನಾಗಿ ಬೆಳೆದು, ಆಕಾಶವನ್ನೂ ಆಕ್ರಮಿಸಿ, ಮೂರನೇ ಹೆಜ್ಜೆ ಎಲ್ಲಿಡಲೆಂದು ಪ್ರಶ್ನಿಸಿದಾಗ, ತನ್ನ ತಲೆಯನ್ನೇ ತೋರಿದ ಬಲಿಚಕ್ರವರ್ತಿ. ಬ್ರಹ್ಮದೇವರಿಂದ ಪ್ರಾರ್ಥಿತನಾದ ಪರಮಾತ್ಮನು ತನ್ನ ಪಾದಕಮಲವನ್ನು ಬಲಿಯ ತಲೆಯ ಮೇಲಿಟ್ಟು, ಅವನನ್ನು ಪಾತಾಳ ಲೋಕಕ್ಕೆ ತಳ್ಳಿ, ಅಲ್ಲಿ ತನ್ನದೇ ಒಂದು ರೂಪದಿಂದ – ಉಪೇಂದ್ರರೂಪದಿಂದ ಈಗಲೂ ಬಲಿಯ ಮನೆ ಕಾಯುತಿಹನು, ಮತ್ತು ಅವನಿಗೆ ಮುಂದಿನ ಮನ್ವಂತರದಲ್ಲಿ ನೀನೇ ಇಂದ್ರನಾಗೆಂದು ಅನುಗ್ರಹಿಸಿದನು.

 

ಬಲಿಪಾಡ್ಯ ಬಲಿಚಕ್ರವರ್ತಿಯ ಸಂಹಾರ ದಿನವೇ ?

ಇಲ್ಲ.  ಬಲಿ ಚಕ್ರವರ್ತಿಯ ಅಹಂಕಾರ ಮತ್ತು ತಾಮಸ ಬುದ್ಧಿಯ ಮರ್ದನ ಮಾಡಿ, ಅವವನ್ನು ವಾಮನ ರೂಪಿ ಪರಮಾತ್ಮ‌ ಅನುಗ್ರಹಿಸಿದ ದಿನ.

 

*ಬಲಿಪಾಡ್ಯಮಿ ಮಾಡಬೇಕಾದ್ದು* –
ಅಭ್ಯಂಜನ ಸ್ನಾನ. ಯಥಾ ಶಕ್ತಿ ದಾನ ಮಾಡಬೇಕು. ದೀಪ ಪ್ರಜ್ವಲನ, ಮತ್ತು ದೀಪ ದಾನ / ವಸ್ತ್ರ ದಾನ, ಮಂಗಳ ವಸ್ತ್ರ ದಾನ ಮಾಡಬೇಕು.

ಬಲಿಪೂಜಾಕ್ರಮ –

ರಂಗೋಲಿಯಿಂದ ಬಲಿಪ್ರತಿಮೆ ಚಿತ್ರವನ್ನು ಬರೆಯಬೇಕು ಅಥವಾ ಗೋಮಯದಿಂದ ಚಿತ್ರವನ್ನು ಬರೆಯಬಹುದು.
ಆಚಮನ, ಪ್ರಾಣಾನಾಯಮ್ಯ, ದೇಶಕಾಲಂ ಸಂಕೀರ್ತ್ಯ, ಸರ್ವಸಂಪದಭಿವೃದ್ಧ್ಯರ್ಥಂ ವೃಷ್ಟಿಪುಷ್ಟ್ಯಾದಿ ಸಿದ್ಧ್ಯರ್ಥಂ ಬಲೀಂದ್ರಾಂತರ್ಗತ ಶ್ರೀಮದ್ರಾಘವೇಂದ್ರತೀರ್ಥ ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ  ಶ್ರೀ ವೃಷಾಕಪಿ ವಾಮನಪೂಜಾಂ ಕರಿಷ್ಯೇ | ಎಂದು ಸಂಕಲ್ಪಿಸಿ, ಮೊದಲು ವಾಮನನನ್ನು ಪೂಜಿಸಿ ಬಲೀಂದ್ರನನ್ನು ಷೋಡಚೋಪಚಾರಗಳಿಂದ ಪೂಜಿಸಬೇಕು.

 

ಶ್ರೀಭೂಮಿಸಹಿತಂ ದಿವ್ಯಂ ಮುಕ್ತಾಹಾರ ವಿಭೂಷಿತಂ |
ನಮಾಮಿ ವಾಮನಂ ವಿಷ್ಣುಂ ಭುಕ್ತಿಮುಕ್ತಿ ಫಲಪ್ರದಂ |
ಎಂದು ವಾಮನನನ್ನು ಪ್ರಾರ್ಥಿಸಿ, ನಂತರ ಬಲಿ ಪ್ರಾರ್ಥನೆ

ನಂತರ ಬಲಿಯನ್ನು ಮತ್ತು ಅವನ ಅಂತರ್ಗತನಾದ ವಾಮನರೂಪಿ ಪರಮಾತ್ಮನನ್ನೂ ಆವಾಹಿಸಬೇಕು.
ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ |
ಭವಿಷ್ಯೇಂದ್ರ ಸುರಾರಾತೇ ಪೂಜೋಽಯಂ ಪ್ರತಿಗೃಹ್ಯತಾಂ |
ಬಲಿರಾಜ ನಮಸ್ತುಭ್ಯಂ ದೈತ್ಯ ದಾನವ ವಂದಿತ |
ಇಂದ್ರ ಶತ್ರೋಽಮರಾರಾತೇ ವಿಷ್ಣುಂ ಸಾನ್ನಿಧ್ಯದೋ ಭವ |

 

ಬಲೀಂದ್ರಮಂತ್ರ –
ಅಸ್ಯಶ್ರೀ ಬಲೀಂದ್ರಮಂತ್ರಸ್ಯ ಶುಕ್ರ ಋಷಿ: |
ಅನುಷ್ಟಪ್ ಛಂದ: | ಬಲೀಂದ್ರಾಂತರ್ಗತ ಶ್ರೀ ವಾಮನೋ ದೇವತಾ |
ಓಂ ಶ್ರೀ ಹೃದಯಾಯ ನಮ: |
ಓಂ ಶ್ರೀ ಬಲೀಂದ್ರಾಯ ಶಿರಸೇ ಸ್ವಾಹಾ |
ಓಂ ಭಗವತೇ ಶಿಖಾಯೈ ವಷಟ್ |
ಓಂ ಓಂ ಕವಚಾಯಹುಂ |
ಓಂ ಭಗವತೇ ಅಸ್ತ್ರಾಯ ಫಟ್ |
ಓಂ ಭೂರ್ಭುವ: ಸ್ವರೋಮಿತಿ ದಿಗ್ಭಂಧ: |

 

ಬಲಿ ಧ್ಯಾನಂ |
ದ್ಯಾಯೇದ್ ಬಲೀಂದ್ರಂ ಜಗದೇಕನಾಥಂ |
ಮುಕ್ತಾಫಲಾಲಂಕೃತಸರ್ವಗಾತ್ರಂ |
ನಕ್ಷತ್ರನಾಥಂ ಭುವನಾರ್ಘವಸ್ತ್ರಂ |
ಪ್ರಿಯಂ ಮುರಾರೇ: ಕರವಾಲಹಸ್ತಂ |

 

ದ್ವಾದಶನಾಮ ಪೂಜಾ
ಬಲೀಂದ್ರಾಯ ನಮ: | ಜಗದೇಕನಾಥಾಯ ನಮ: |
ಮುಕ್ತಾಫಲಾಲಂ ಕೃತಾಯ ನಮ: |
ನಕ್ಷತ್ರನಾಥಾಯ ನಮ: | ಕರವಾಲಹಸ್ತಾಯ ನಮ: |
ಭಗವತೇ ನಮ: | ವಿಷ್ಣುಭಕ್ತಾಯ ನಮ: |
ದೈತ್ಯಪತಯೇ ನಮ: |
ಯೋಗಸಿಂಹಾಸನಸ್ಥಿತಾಯ ನಮ : |
ಬಲಿರಾಜಾಯ ಸಪರಿವಾರಾಯ ನಮ : |
ಧೂಪ, ದೀಪ, ನೈವೇದ್ಯ, ನೀರಾಜನ, ಮಂತ್ರಪುಷ್ಪಾದಿಗಳಿಂದ ಪೂಜಿಸಿ ಪ್ರಾರ್ಥಿಸಬೇಕು –
ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ |
ಇಂದ್ರಸ್ಥಾನೇ ಸಮಾಸೀನ ವಿಷ್ನುಸಾನ್ನಿಧ್ಯದೋ ಭವ |
ಅನಯಾ ಪೂಜಯಾ ಬಲೀಂದ್ರಾಂತರ್ಗತ ಶ್ರೀ ವೃಷಾಕಪಿ ವಾಮನ: ಪ್ರೀಯತಾಂ |

 

*ಬಲಿ ಪಾಡ್ಯಮಿ ದಿನ ಗೋಪೂಜೆ ಮತ್ತು ಗೋವರ್ಧನ ಗಿರಿ ಪೂಜೆ*

 

ಬಲಿಪಾಡ್ಯಮಿ ದಿನವೇ ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದನು. ಆದ್ದರಿಂದ ಇಂದು ಗೋವರ್ಧನ ಪೂಜೆಯನ್ನೂ ಗೋವುಗಳ ಪೂಜೆಯನ್ನೂ ಮಾಡುವ ಸಂಪ್ರದಾಯವಿದೆ. ಗೋವರ್ಧನ ಗಿರಿಯನ್ನು ಭೇಟಿಯಾಗಲು ಎಲ್ಲರಿಗೂ ಅಸಾಧ್ಯವಾದ್ದರಿಂದ ಅದರ ಪ್ರತೀಕವಾಗಿ ಗೋವಿನ ಸೆಗಣಿಯಿಂದ ಮನೆಯ ಹೊಸ್ತಿಲು ಸಾರಿಸಿ, ಸೆಗಣಿಯಿಂದ ಪರ್ವತ ರೀತಿ ಮಾಡಿ ಅದರ ಮೇಲೆ ತುಳಸಿ , ಗರಿಕೆ, ಹೂವುಗಳಿಂದ ಪೂಜಿಸಿ ಸುತ್ತಲು ಹಸು ಕರು ಚಿತ್ರವನ್ನು ಬರೆದು ಪೂಜಿಸುವ ಸಂಪ್ರದಾಯ ಇದೆ.

 

CLICK FOR Kannada PDF FILE ON BALIPADYAMI

What is Bali Padyami?

Bali Padyami falls on Karthika Shudda Padya.  This day is reserved for Bali Chakravarthi.   It is the day on which Bali Chakravarthi will be the Chakravarthi for the entire world.  It is the day on which Vamana roopi Srihari pushed Bali Chakravarthi to sutala loka. This is the boon given by Vamanaroopi paramathma after the nigraha of Bali.    Vamana also gave the boon that “Karthika Shudda paadya day will be reserved for Bali Chakravarthi.  On this day whatever daanaas given like Godaana, vastradaana,  bhoodaana and other daanaas will please Vamana” “Deepa Prajvalana on this day will make Lakshmidevi to stay in their house”

 

 

Who is Bali Chakravarthi?

Bali Chakravarthi is the great grand son of Prahladaraja and the son of Virochana.   His real name is Indrasena. Born in the daithyakula of Hiranyakashipu, he was the daithya chakravarthi.  Even though he was a daithya, he ruled the state with proper dharmaniste and he was an expert in giving daanaas.  Bali Chakravarthi led the Daithya team during Samudra mathana.  He will become Indra in Saavarni manvantra.

Story as per Skanda purana (Reva khanda) – In his previous janma, he was a business man and was fond of women and was always wasting his time with various prostitute women.   He had never done any punya kaarya at all.  But during his last stages, he gave the daana of whatever he had with him to various brahmins.  He died and the yama doothaas took him to Yamaloka.  There, Chitragupta opened his file and submitted before Yamadharmaraaja.  His file was fully covered with sins only.   Yama Dharma verified the file and surprised to note that he had the punya of  daana at his last stage.  He had the punya of becoming Indra for 3 muhurthas.  Yamadharma asked Indrasena as to whether he intends to use the punya first or the paapa first.   Punya phala to become the Indra.   He opted for Indra’s throne for 3 muhurthas.  Yama Dharma agreed and asked Indra to give the throne for 3 muhurthas to Indrasena.

After sitting in the throne for a very short time, he gave the daana whatever available in Indraloka to Vasistaru, Vishwamitraru, etc.   This punya of giving daana at Indraloka ensured that all his sins were destroyed and he was eligible for Indra throne.  As such, he was born as the son of Virochana and got the throne of Daithya vamsha.  Finally with the anugraha of Vamana he was eligible for Indra throne, which he would get in Saavarni manvantra.

Bali Chakravarthi’s son is Baanasura, another daithya.   He had thousand arms, he was a follower of Shiva.    Banasura had a boon from Shiva to fight with Krishna and was killed by Krishna.

Why is Bali Chakravarthi in Paataala loka ?

Bali Chakravarthi had the control of the entire world and he had occupied all the kingdoms and occupied the Devaloka also by pushing out Devendra.  He wanted to be the Indra.  For getting the throne of Indra, one must do atleast 100 Ashwamedha Yajna.  He had completed 99 Ashwamedha Yaagaas, and was doing the 100th.  He was doing the Yajna under the pourohitya of Shukracharyaru, who is the daithya guru. Indra (Purandara named Indra) approached Srihari and sought his help.  At the same time, Aditi, the mother of Devates asked her husband Kashyapa Rushigalu to protect gods from Balichakravarthi.  So, both Aditi-Kashyapas approached Srihari for help.  Srihari decided to born as their son “Vamana” for the nigraha of the daithya.

Bali was in the finishing stage of his Yajna.  Vamana came to the place of Yajna.  On seeing the handsome, attractive young brahmachari, Vamana, Bali stood and did the paada prakshalana of Vamana and asked him as to what he wants – a beautiful girl, kingdom, or ornaments, etc.  Vamana said that he does not require anything, except 3 steps of land.  Shukracharya, the daithya guru,  warned Bali Chakravarthi and told him not to accede to Vamana’s request.  But Bali went ahead for the daana of the 3 steps to Vamana.  Getting angry at Bali, Shukracharya cursed him that Bali shall loose all his kingdom.

Bali Chakravarthi did the sankalpa and started giving the three steps to Vamana.  Vamana extended himself to be that of Trivikrama to extend to the entire world from his very first step itself.  From the second step he occupied the atala, vitala, sutala, patala lokaas also.  For the third step, there was no place.  He is said to have been bounded with the ropes of Varuna by Garuda since Vamana could not place his foot anywhere on the earth and Bali offered his head itself and asked Trivikrama Vamana to keep his leg on his head. Brahma then asks Vamana to release Bali and Vamana keeping his Vishnu paada which has the Ganga sannidhana, pushed him down to earth to Paataala loka, and even today he is guarding him in his Upendra Roopa.  Bali Chakravarthi will be the next Indra in the coming Manvantara.

Bali Padyami half  Muhurtha –

There are 3½ muhurthaas which are termed as Good Muhurthaas.  They are Vijayadashami, Ugadi and Akshaya Triteeya which are full day muhurthaas, whereas Bali Padyami is termed as Half Muhurthaas (for the first half day).  On this day, we need not look at the panchanga for taaraabala, chandrabala, for the shubhakarya.  Whatever good works done on this day will fetch more punya.  On this day also we have to do tailabhyanjana snaana.

Balipoojakrama –
He was also given the boon that he will be allowed to rule the entire universe for one day in a year and on that day he can visit the earth, which is the Balipadyami day – the Kaarthika Shudda Padya.

We have to sketch the Balichakravarthi’s figure in rangoli or Gomaya.  Then we have to invite Bali.  We have to put curds in front of Bali.  Ladies will enter the house, by pouring milk from outside, which is a method of inviting Lakshmi.    From the Gomaya itself, we have to sketch the the fort with four gates and in the centre of the fort, one has to put the pillaari gopura and do the pooja with the following mantra.

baliraaja namastubhyaM virOchanasuta prabhO: |
bhaviShyEMdra suraaraatE pUjOyaM pratigRuhyataam |
baliraaja namastubhyaM daityadaanavavaMdita: |
iMdrashatrO amaraavatE viShNusaannidhyadO bhava|
 
Source : Sri Chaturvedi Vedavyasachar’s Chaitraadimaasa kartavyagalu,
               Vratamuktaavali from Rayara Mutt,
               Vaarshika vishEshadinagalu from Dr Satyanaraayanacharya

Leave a Reply

Your email address will not be published.

Sumadhwa Seva © 2022