ಯಲಗೂರೇಶ ಕಾರ್ತಿಕೋತ್ಸವ

Yelaguru Pranesha Karthikotsava
*ಯಲಗೂರು ಪ್ರಾಣೇಶ ಕಾರ್ತಿಕೋತ್ಸವ*

 

ಶ್ರೀ ಸತ್ಯಾತ್ಮತೀರ್ಥರಿಂದ ಮಂಗಳಾರತಿ ಯಲಗೂರೇಶನಿಗೆ

https://youtube.com/shorts/EPjnUJEdHYk?feature=share

*ಯಲಗೂರೇಶ* – *ಯಲಗೂರು ಹನುಮ*

ಸಾಮಾನ್ಯವಾಗಿ ನಾವು ಪ್ರತಿ ಊರಿಗೊಂದು ಹನುಮಂತ ದೇವರ ಗುಡಿಯನ್ನು ಕಾಣುತ್ತೇವೆ. ಆದರೆ ಬಿಜಾಪುರ ಜಿಲ್ಲೆಯ

ನಿದಗುಂಡಿ ತಾಲ್ಲೂಕಿನ ಒಂದು ಗ್ರಾಮ ಯಲಗೂರು. ಈ ಊರಿನ ಸುತ್ತ ಮುತ್ತಲಿನ ಏಳು ಹಳ್ಳಿಗಳಿಗೆ ಇರುವುದು ಇದೊಂದೇ ಹನುಮಂತ. ಕಾಸಿನಕುಂಠೆ, ಚಂದ್ರಗಿರಿ, ಅರಳಿನದಿಣ್ಣೆ, ಬೂದಿಹಾಳ, ನಾಗಸಂಪಿಗೆ, ಯಲಗೂರು, ಮಸೂತಿ, ಹೀಗೆ ಈ ಏಳು ಗ್ರಾಮಗಳಿಗೂ ಸೇರಿ ಒಬ್ಬನೇ ಹನುಮ – ಇರುವುದು ಯಲಗೂರಿನಲ್ಲಿ. ಇವನನ್ನು *ಯಲಗೂರೇಶ* ಎಂದೂ ಕರೆಯುತ್ತಾರೆ. ಇವನು ಈ ಎಲ್ಲ ಏಳು ಊರುಗಳಿಗೂ ಒಡೆಯನಾದ್ದರಿಂದ ಏಳು + ಊರೇಶ = ಎಲಗೂರೇಶ ಎನ್ನುತ್ತಾರೆ.

ಕೃಷ್ಣಾನದಿ ತೀರದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಹನುಮಂತನ ಎತ್ತರ ಏಳು ಅಡಿ.

*ಭಗ್ನವಾಗಿದ್ದ ಹನುಮ ಯಲಗೂರೇಶನಾದ* :

ಒಮ್ಮೆ ಹನುಮಂತ ದೇವರು ಒಬ್ಬ ಪುರೋಹಿತನ ಕನ‌ಸಿನಲ್ಲಿ ಬಂದು ನಾನು ಗೋವಿಂದ ರಾಜ ಕೆರೆಯ ಬಳಿಯಲ್ಲಿ ಶ್ರೀ ವೆಂಕಟೇಶ್ವರ ಮತ್ತು ಶ್ರೀದೇವಿಯರ ವಿಗ್ರಹದ ಮಧ್ಯದಲ್ಲಿರುವ ಬಂಡೆಗಲ್ಲಿನಲ್ಲಿ ಇದ್ದೇನೆ ಎಂದನಂತೆ.

ಆ ಪುರೋಹಿತರು ಆ ಬಂಡೆಗಲ್ಲನ್ನು ಒಡೆದು ಯಲಗೂರೇಶನನ್ನು ಹೊರಗೆ ತೆಗೆಯುವಾಗ ಮೂರ್ತಿಯು ಭಗ್ನಗೊಂಡಿತಂತೆ. ಇದರಿಂದ ಚಿಂತಿತರಾದ ಪುರೋಹಿತರ ಕನಸಿನಲ್ಲಿ ಮತ್ತೆ ಹನುಮಂತ ಕಾಣಿಸಿಕೊಂಡು ಆ ಭಗ್ನಗೊಂಡ ವಿಗ್ರಹವನ್ನು ಏಳು ದಿನಗಳ ಕಾಲ ದೇವಸ್ಥಾನದ ಗರ್ಭಗೃಹದಲ್ಲಿ ಇರಿಸಿ ಬೀಗ ಹಾಕಿಬಿಡಿ, ಏಳು ದಿನಗಳ ಕಾಲ ಬೀಗ ತೆರೆಯಬಾರದು ಎಂದು ಕಟ್ಟಪ್ಪಣೆ ಮಾಡಿದನಂತೆ. ಆರು ದಿನಗಳವರೆಗೂ ಸುಮ್ಮನಿದ್ದ ಆ ಪುರೋಹಿತರು ಕುತೂಹಲ ತಡೆಯಲಾಗದೇ 7ನೇ ದಿನ ಮುಂಜಾನೆ ಬಾಗಿಲು ತೆಗೆದು ನೋಡಿದಾಗ ಈ ಯಲಗೂರೇಷನ ವಿಗ್ರಹದ ಮೇಲಿನ ಭಾಗ ಮಾತ್ರ ಕೂಡಿಕೊಂಡಿತ್ತಂತೆ. ಕೆಳಗಿನ ಸ್ವಲ್ಪ ಭಾಗ ಕೂಡಿಕೊಂಡಿರಲಿಲ್ಲ. ಆಗ, ಸ್ವಾಮಿಯ ಆಜ್ಞೆಯಂತೆ ಪುರೋಹಿತರು ಕೃಷ್ಣಾನದಿಯ ನೀರು ತಂದು ಅಭಿಷೇಕಿ‌ಸಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರಂತೆ. ಇಂದಿಗೂ ಕೂಡ ಯಲಗೂರೇಶನ ಮೂರ್ತಿಯ ಕೆಳಭಾಗ ಸ್ವಲ್ಪ ಹೊಂದಿಕೊಂಡಂತೆ ಕಾಣಿಸುವುದಿಲ್ಲ.

ಪ್ರತಿವರ್ಷ ಮಾಘಮಾಸದ ಕೃಷ್ಣ ಪಕ್ಷದ ಮೊದಲ ಶನಿವಾರ ಮತ್ತು ಭಾನುವಾರಗಳಂದು ಕಾರ್ತಿಕೋತ್ಸವ ಜರುಗುತ್ತದೆ. ಈ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಬರುವ ಭಕ್ತರು ಯಲಗೂರೇಶನಿಗೆ ಹೋಳಿಗೆ ನೈವೇದ್ಯ ಅರ್ಪಿಸಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ.

ಇಲ್ಲಿ ಮಾಧ್ವ ಸಂಪ್ರದಾಯದ ರೀತ್ಯಾ ಪೂಜೆ ನಡೆಯುತ್ತದೆ

Normal date of Karthikotsava at Yelaguru will be the immediate Saturday after Magha Hunnime. i.e., the first saturday falling in the Magha Maasa Krishna Paksha. This Karthikotsava day does not have connection with Tithi. This is also called as Yelaguresha Kruttikotsava.

He is called as Yelaguresha as he is being worshipped by the seven villages in and around here. He is the lord for these villages. Shri Yalguresha stands in the village of Yalgur as per the orders of Shri Ramachandra for seven villages. Yalaguru is few Km away from Alamatti Dam in Bijapur Dist. of Karnataka

Route to reach Yelaguresha – From Bijapur, Bagalkot reach Nidagundi (in NH 13) through Autoriksha. There will be buses from Bijapur and Bagalkote also during the festival days

Sumadhwa Seva © 2022