*ಯಮದೀಪದಾನ* :
ಆಶ್ವಯುಜ ಬಹುಳ ತ್ರಯೋದಶಿಯಂದು ಯಮದೀಪದಾನ ಮಾಡತಕ್ಕದ್ದು.
ಈ ದಿನ ಸಾಯಂಕಾಲ ದೀಪವನ್ನು ಯಮನಿಗಾಗಿ ದಕ್ಷಿಣದಿಕ್ಕಿಗೆ ಮುಖಮಾಡಿ ಮಣ್ಣಿನ ಹಣತೆಯಲ್ಲಿ ಹಚ್ಚಬೇಕು. ಈ ದೀಪ ಮಾರನೇ ದಿನ ಅರುಣೋದಯ ಕಾಲದತನಕ ಉರಿಯುವಂತೆ ಹಚ್ಚಬೇಕು. ಇದರಿಂದ ಅಪಮೃತ್ಯು ಪರಿಹಾರವಾಗಲಿದೆ. ಮನೆಯ ಎತ್ತರದ ಭಾಗದಲ್ಲಿ ಇದನ್ನು ಹಚ್ಚುವುದರಿಂದ ಇದನ್ನು ಆಕಾಶದೀಪ ಎನ್ನುತ್ತಾರೆ.
ಅಕಾಶದೀಪ ಮತ್ತು ಯಮದೀಪದಾನ ಮಾಡುವ ಉದ್ದೇಶ :
ಅ. ಗಗನಮಾರ್ಗದಲ್ಲಿ ಸಂಚರಿಸುವ ಪಿತೃದೇವತೆಗಳಿಗೆ ದಾರಿ ತೀರಿಸುವುದು.
ಆ. ಪಿತೃದೇವತೆಗಳ ತೃಪ್ತಿ
ಇ. ದೀಪ ಬೆಳಗುವುದರಿಂದ ನಮ್ಮ ಸಂಸ್ಕೃತಿಯ ಪ್ರೋತ್ಸಾಹ.
ಈ. ಯಮಧರ್ಮರಾಜನ ಪ್ರೀತಿಗಾಗಿ ಮಾಡುವ ದೀಪದಾನ. ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಆಗುವುದಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು ಯಮಧರ್ಮನಿಗೆ ಕಣಕದಿಂದ ತಯಾರಿಸಿದ ಎಳ್ಳೆಣ್ಣೆಯ ದೀಪವನ್ನು ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು.
ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಕು. ಆನಂತರ ಈ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಬೇಕು.
*ಯಮದೀಪದ ತಯಾರಿಕೆ* : ಅಷ್ಟಭುಜಾಕಾಲದಲ್ಲಿ ಅಥವಾ ದ್ವಾದಶ ಭುಜಾಕಾರದಲ್ಲಿ ಬಿದಿರಿನ ಕೋಲುಗಳಿಂದ ಗೂಡು ರಚಿಸಿ, ದೀಪವು ಶಾಂತವಾಗದಂತೆ ಅದನ್ನು ಬಟ್ಟೆ ಅಥವಾ ಕಾಗದದಿಂದ ಸುತ್ತಿ ಮನೆಯ ಎತ್ತರದ ಭಾಗದಲ್ಲಿ ಹಚ್ಚಿಡಬೇಕು. ಕೆಲವರು ವಿದ್ಯುದ್ದೀಪಗಳಿಂದ ಅಲಂಕಾರ ಮಾಡುತ್ತಾರೆ. ಆದರೆ ಎಣ್ಣೆ ದೀಪವನ್ನು ಹಚ್ಚುವುದರಿಂದ ಪುಣ್ಯ ಬರುತ್ತದೆ.
ಸಂಕಲ್ಪ : ಪ್ರಣವಸ್ಯ……. ಆಶ್ವಯುಜ ಕೃಷ್ಣ ಪಕ್ಷ ತ್ರಯೋದಶ್ಯಾಂ ಶುಭತಿಥೌ, ಪ್ರದೋಷ ಸಮಯೇ, ಯಮಾಂತರ್ಗತ ಶ್ರೀ ವಿಷ್ಣು ಪ್ರೇರಣಯಾ, ಶ್ರೀ ವಿಷ್ಣು ಪ್ರೀತ್ಯರ್ಥಂ ಯಮದೀಪದಾನಂ ಕರಿಷ್ಯೇ. ಇದು ಯಮನಿಗೆ ಉದ್ದಿಶ್ಯವಾದ ದೀಪಜ್ವಲನವಾದ್ದರಿಂದ ಯಮದೀಪದಾನ ಎಂದು ಹೆಸರಾಗಿದೆ.
ಸಾಧ್ಯವಾದರೆ ಒಬ್ಬ ಬ್ರಾಹ್ಮಣನಿಗೆ ಒಂದು ಜೊತೆ ದೀಪವನ್ನು ಯಥಾಶಕ್ತಿ ದಕ್ಷಿಣೆ ಸಹಿತ ದಾನ ನೀಡಬೇಕು.
*ದೀಪದಾನ ಮಂತ್ರ* :
ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ |
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ |
ಹಸ್ತದಲ್ಲಿ ಪಾಶ ದಂಡಗಳನ್ನು ಹಿಡಿದ ಸೂರ್ಯಪುತ್ರ ಯಮ ಧರ್ಮರಾಜನು ಶ್ಯಾಮಲಾದೇವಿಯೊಂದಿಗೆ, ತ್ರಯೋದಶಿಯ ದೀಪದಾನದಿಂದ ಸಂತುಷ್ಟನಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಬೇಕು.
ಇಂದಿನಿಂದ ಪ್ರತಿದಿನ ದೀಪವನ್ನು ಕಾರ್ತೀಕ ಮಾಸದ ಅಮಾವಾಸ್ಯೆಯವರೆಗೂ ಪ್ರಜ್ವಲಿಸಬೇಕು. ಸಾಧ್ಯವಿಲ್ಲದಿದ್ದರೆ ಬೇರೆಯವರು ಹಚ್ಚಿದ ದೀಪದ ತುದಿಯನ್ನು (ಕರಿಯನ್ನು) ತೆಗೆದು ದೀಪ ಆರದಂತೆ ನೋಡಿಕೊಳ್ಳಿ.
*ಇದರ ಬಗ್ಗೆ ಒಂದು ಕಥೆಯಿದೆ* :
ಹಿಂದೆ ಒಬ್ಬ ರಾಜಕುಮಾರನ ಜಾತಕ ರೀತ್ಯಾ ಅವನ ಮೃತ್ಯು ಸರ್ಪ ಕಡಿತದಿಂದ ಅವನ ವಿವಾಹವಾದ ನಾಲ್ಕನೇ ದಿನ ಸಾವು ಬರಬೇಕಿತ್ತು. ಆದರೆ ಅವನ ಪತ್ನಿ ಆ ನಾಲ್ಕನೇ ದಿನ ಅವನು ನಿದ್ರಿಸಲು ಬಿಡಲಿಲ್ಲ. ಅವಳು ತನ್ನ ಕೊಠಡಿಯ ಹೊರಗೆ ತನ್ನೆಲ್ಲಾ ಆಭರಣಗಳನ್ನು ಇಟ್ಟು ಅದರ ಸುತ್ತಲೂ ಲೆಕ್ಕವಿಲ್ಲದಷ್ಟು ದೀಪದ ಹಣತೆ ಹಚ್ಚಿ ದೇವರನಾಮಗಳನ್ನು ಪಾಡುತ್ತಾ, ಕಥೆಗಳನ್ನು ಹೇಳುತ್ತಾ ರಾಜಕುಮಾರ ನಿದ್ರಿಸದಂತೆ ನೋಡಿಕೊಂಡಳು. ಅದೇ ಸಮಯದಲ್ಲಿ ಯಮಧರ್ಮ ಹಾವಿನ ರೂಪದಲ್ಲಿ ಅಲ್ಲಿಗೆ ಬಂದಾಗ ಆ ದೀಪಗಳ ತೀವ್ರ ಪ್ರಕಾಶದ ಸಮೂಹದ ಮಧ್ಯೆ ಒಳ ಪ್ರವೇಶಿಸಲಾಗದೆ ಆಭರಣರಾಶಿಗಳ ಮೇಲೆ ಕುಳಿತು ಆಕೆಯ ಹಾಡು ಕೇಳುತ್ತಾ ಕುಳಿತನು. ತನ್ನ ಪತಿಯ ಪ್ರಾಣವನ್ನು ಉಳಿಸಿದಳು. ಅಂದಿನಿಂದ *ಯಮದೀಪ* ಎಂಬ ಹೆಸರಿನಿಂದ ದೀಪವನ್ನು ಯಮನ ದಿಕ್ಕಿನಲ್ಲಿ ಬೆಳಗುವ ಸಂಪ್ರದಾಯ ಇದೆ.
*Yamadeepa daana* –
On this day, lamps are kept burning through out night in as a devotion to Yamadharmaraja, the god of death and prayers offered to him to keep away death and despair. There is a very interesting story about this day.
*Story behind Yamadeepdaana*
Once there lived a king whose son was supposed to die of a snake bite on the fourth day of his marriage as per the horoscope.
On the fourth day of his marriage his young wife did not allow him to sleep. She laid all the ornaments and lots of gold and silver coins in a big heap at the entrance of her husband’s palatial room and lighted infinite numbers of lamps all over the place. Further she went on telling stories and singing songs to ensure that her husband won’t sleep.
Yamadharmaraja came, in the form of a snake. His eyes got blinded by the dazzle of those brilliant lights and he could not enter the Prince’s chamber. So, he climbed on top of the heap of the ornaments and sat there whole night listening to the melodious songs. In the morning he quietly went away.
Thus the young wife saved her husband from the door of death. Since then this day was regarded as the day of *Yamadeepdaana* and lamps are kept burning throughout the night in remembering Yamadharmaraja, the god of Death.
Lamps lighted with gingelli oil are placed outside the house, facing southwards (direction of Yama), in the evening. Normally a lamp is never allowed to be kept facing southwards. But on this day, it is an exception and the light is facing the south direction only. The stotra to be chanted on this day is while doing the deepadaana is :
*dIpadaana maMtra*–
mRutyunaa paashadanDaabhyaam kaalEna shyaamayaayuta: |
trayOdashyaam dIpadaanaat sUryaja: prIyataaM mama |