ಪುಷ್ಯ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ ದಿನದಂದು
ಶ್ರವಣ ನಕ್ಷತ್ರ, ಅಮಾವಾಸ್ಯೆ, ವ್ಯತೀಪಾತ ಯೋಗ ಮತ್ತು
ಭಾನುವಾರ ಈ ಎಲ್ಲಾ ನಾಲ್ಕರ ಸಮ್ಮಿಳನವಾಗಿದ್ದರೆ ಅದನ್ನು ಅರ್ಧೋದಯ ಪರ್ವಕಾಲ ಎಂದೂ ಅಥವಾ ಈ ನಾಲ್ಕರಲ್ಲಿ ಯಾವುದೇ ಒಂದು ಕಡಿಮೆ ಇದ್ದರೂ ಅದನ್ನು ಮಹೋದಯ ಪರ್ವಕಾಲ ಎನ್ನುತ್ತಾರೆ.
ಈ ದಿನ ನದಿ ಸ್ನಾನ ಅಥವಾ ಸಮುದ್ರ ಸ್ನಾನ ಅಥವಾ ಅದೂ ಸಾಧ್ಯವಿಲ್ಲದಿದ್ದರೆ ಮನೆಯಲ್ಲೇ ಅನುಸಂಧಾನ ಪೂರ್ವಕ ಸ್ನಾನ ಮಾಡಬೇಕು.
ದಾನ – ಕಂಚಿನ ಪಾತ್ರೆಯಲ್ಲಿ ಪಾಯಸವನ್ನು ಯೋಗ್ಯ ಬ್ರಾಹ್ಮಣನಿಗೆ ದಾನ ನೀಡಬೇಕು ಅಥವಾ ಯೋಗ್ಯ ರೀತಿಯಲ್ಲಿ ಪಾಯಸ ಮಾಡಲಾಗದಿದ್ದರೆ ಅದಕ್ಕೆ ಬೇಕಾದ ಪದಾರ್ಥಗಳನ್ನು ಯಥಾಶಕ್ತಿ ದಕ್ಷಿಣೆ ಸಹಿತ ದಾನ ನೀಡಬೇಕು. ಅಥವಾ ಯಥಾಶಕ್ತಿ ಏನಾದರೂ ನೀಡಬಹುದು.
ಎಲ್ಲವನ್ನೂ ವಿಷ್ಣು ಪ್ರೇರಣಯಾ ವಿಷ್ಣು ಪ್ರೀತ್ಯರ್ಥ ಮಾಡಬೇಕು.