Tirupathi Theertha Kshetragalu
Srinivasa Kalyana Quiz Part 1
*ಶ್ರೀನಿವಾಸ ಕಲ್ಯಾಣ* ಮೊದಲ ಅಧ್ಯಾಯ. ಪ್ರಶ್ನೆಗಳು. ಈ ಪ್ರಶ್ನೆಗೆ ಉತ್ತರಿಸಿ ಯಥಾಶಕ್ತಿ ಶ್ರೀನಿವಾಸ ಕಲ್ಯಾಣ ಅರಿಯೋಣ
1. ಶ್ರೀನಿವಾಸ ಕಲ್ಯಾಣ ಯಾವ ಪುರಾಣಗಳಲ್ಲಿ ಲಭ್ಯವಿದೆ ?
2. ಶ್ರೀನಿವಾಸ ಕಲ್ಯಾಣ ಬರೆದವರಾರು?
3. ಶ್ರೀನಿವಾಸ ಕಲ್ಯಾಣ ಯಾರ ಸಂಭಾಷಣೆಯಲ್ಲಿ ಪ್ರಾಪ್ತವಾಗಿದೆ.
4. ತಿರುಪತಿಗೆ ಯಾವ ಯಾವ ಯುಗಗಳಲ್ಲಿ ಯಾವ ಯಾವ ಹೆಸರಿತ್ತು?
5. ಜನಕರಾಜನ ಸಹೋದರನ ಹೆಸರೇನು?
6. ಜನಕರಾಜನ ಮಗಳ ಹೆಸರೇನು?
7. ಶತಾನಂದರು ಯಾರ ಮಗ?
8. ಜನಕರಾಜನಿಗೆ ಯಾರು ಶ್ರೀನಿವಾಸ ಕಲ್ಯಾಣ ಕಥೆ ಹೇಳಿದರು?
9. ವೃಷಭಾಸುರನು ನಿತ್ಯ ಯಾವ ತೀರ್ಥದಲ್ಲಿ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿದ್ದನು?
10. ವೃಷಭಾಸುರನು ನಿತ್ಯ ತನ್ನ ಪೂಜೆಯ ನಂತರ ನೃಸಿಂಹನಿಗೆ ಏನನ್ನು ಸಮರ್ಪಿಸುತ್ತಿದ್ದನು. ?
11. ವೃಷಭಾಸುರನು ಶ್ರೀನಿವಾಸನಲ್ಲಿ ಯಾವ ವರವನ್ನು ಕೇಳಿದನು?
12. ಅಂಜನೆಯು *ಯಾವ ಮುನಿಗಳ* ಅಣತಿಯಂತೆ ಹನ್ನೆರಡು ವರ್ಷಗಳ ಕಾಲ *ಯಾವ ತೀರ್ಥದ* ಬಳಿ ತಪಗೈದಳು?
13. ಅಂಜನೆಯು ತಪ: ಕಾಲದಲ್ಲಿ ಯಾವ ತೀರ್ಥದಲ್ಲಿ ಸ್ನಾನ ಮಾಡುತ್ತಿದ್ದಳು?
14. ಶೇಷದೇವರು ಯಾರೊಂದಿಗೆ ತಾನೇ ಶ್ರೇಷ್ಠನೆಂದರು?
15. ವಾಯುದೇವರ ತನ್ನ ಕನಿಷ್ಟಾಂಗುಲಿ ಸ್ಪರ್ಶ ಮಾತ್ರದಿಂದ ಶೇಷದೇವರಿಂದ ಕೂಡಿದ ಆನಂದಾದ್ರಿಯು ಎಷ್ಟು ದೂರ ಹಾರಿಹೋಯಿತು?
16. ಮಾಧವ ಬ್ರಾಹ್ಮಣನ ಮಡದಿ ಯಾರು?
17. ಮಾಧವ ಬ್ರಾಹ್ಮಣನು ಯಾವ ಹೆಣ್ಣಿನೊಂದಿಗೆ ಸಂಬಂಧ ಬಯಸಿದನು?
18. ಮಾಧವ ಬ್ರಾಹ್ಮಣನು ಯಾವ ತೀರ್ಥದಲ್ಲಿ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದನು
19. ಮಾಧವ ಬ್ರಾಹ್ಮಣನು ಯಾವುದರಿಂದ ಪಿಂಡ ಪ್ರದಾನ ಮಾಡಿದನು.
20. ವೇಂಕಟಾಚಲ ಎಂದರೇನು?
21. ವೃಷಭಾಚಲ ಎಂದು ಹೆಸರು ಯಾರಿಂದ ಬಂದಿತು. ?
22. ಶೇಷಾಚಲ ಎಂದು ಹೆಸರು ಯಾರಿಂದ ಬಂದಿತು?
23. ಅಂಜನೆಯಿಂದಲೋ ಅಥವಾ ಆಂಜನೇಯನಿಂದಲೋ ಯಾರಿಂದ ಅಂಜನಾಚಲವೆಂದು ಪ್ರಸಿದ್ಧಿ ಪಡೆದಿದೆ?
24. ಸ್ವಾಮಿ ಪುಷ್ಕರಿಣಿಯ ಅಭಿಮಾನಿ ದೇವತೆ ಯಾರು?
25. ತಿರುಪತಿಯಲ್ಲಿ ಇರುವ ಯಾವುದಾದರೂ ಐದು ಸರೋವರದ ಹೆಸರು ಹೇಳಿ.
Narahari Sumadhwa