“ओं धं धन्वंतरिये नम:” “ಓಂ ಧಂ ಧನ್ವಂತರಿಯೇ ನಮ:”
“ಧನ್ವಂ” + “ಅಂತರಿ” = ಧನ್ವಂತರಿ
“dhanvaM” + “aMtari” = dhanvaMtari;
“धन्वं” + “अंतरि” = धन्वंतरि
DhanvaM – means diseases; antari – means – destroy. That is Dhanvantary is the one who destroys all the diseases.
ಧನ್ವಂ– ಕಾಯಿಲೆಗಳು, ರೋಗ ರುಜಿನ, ಕಷ್ಟ ಕಾರ್ಪಣ್ಯಗಳು ಅಂತರಿ – ಧ್ವಂಸ
ನಮಾಮಿ ಧನ್ವಂತರಿಂ ಆದಿದೇವಂ ಸುರಾಸುರೈ: ವಂದಿತ ಪಾದಪದ್ಮಂ |
ಲೋಕೇ ಜರಾರುಗ್ಭಯ ಮೃತ್ಯುನಾಶಂ ಧಾತಾರಂ ಈಶಂ ವಿವಿಧ ಔಷಧೀನಾಂ |
नमामि धन्वंतरिं आदिदेवं सुरासुरै: वंदित पादपद्मं ।
लोके जरारुग्भय मृत्युनाशं धातारं ईशं विविध औषधीनां ।
*ಧನ್ವಂತರಿ ಅಂದರೆ ಯಾರು* ? ಧನ್ವಂತರಿ ರೂಪವು ಸಾಕ್ಷಾತ್ ಪರಮಾತ್ಮನ ಅವತಾರವಾಗಿದ್ದು, ಆ ರೂಪವು ಎರಡು ಸಲ ಕಂಡುಬಂದಿದೆ. ಒಮ್ಮೆ ಸಮುದ್ರಮಥನ ಕಾಲದಲ್ಲಿ ಭಾದ್ರಪದ ಶುಕ್ಲ ದ್ವಿತೀಯ ದಿನದಂದು ಅಮೃತ ಕಲಶವನ್ನು ಹಿಡಿದುಕೊಂಡು ವ್ಯಕ್ತವಾದ ರೂಪ . ಆ ರೂಪವನ್ನು ಅಬ್ಜ ಎಂದು ಕರೆಯುತ್ತಾರೆ. ಆಗ ಅಸುರರು ಅವನಿಂದ ಅಮೃತವನ್ನು ಕಸಿದಾಗ, ಮೋಹಿನಿ ರೂಪದಿಂದ ಶ್ರೀಹರಿ ಮತ್ತೆ ಪ್ರಕಟಗೊಂಡು ದೇವತೆಗಳಿಗೆ ಅಮೃತವನ್ನು ಹಂಚಿದ. ಮತ್ತೊಮ್ಮೆ ಕಾರ್ತೀಕ ಬಹುಳ ದ್ವಾದಶಿ ಯಂದು ಸುಧಾಂಶು ವಂಶದಿ ಮಗನಾಗಿ ಅವತರಿಸಿ ಆಯುರ್ವೇದ ಸಂಹಿತವನ್ನು ಉಪದೇಶಿಸಿದನು. ತಾನು ಮಾನವನಾಗಿ ಅವತರಿಸಿದ್ದರಿಂದ ಭಾರದ್ವಾಜ ಋಷಿಗಳಿಂದ ಆಯುರ್ವೇದವನ್ನು ಕಲಿತು, ಆಯುರ್ವೇದವನ್ನು ಪ್ರಚುರಪಡಿಸಿದ ರೂಪ. ಆಯುರ್ವೇದ ದಿಂದ ಕಾಯಚಿಕಿತ್ಸೆ, ಬಾಲಚಿಕಿತ್ಸೆ, ಗ್ರಹಚಿಕಿತ್ಸೆ, ಊರ್ದ್ವಾಂಗ ಚಿಕಿತ್ಸೆ, ದಂಷ್ಟ್ರಚಿಕಿತ್ಸೆ, ಜರಾಚಿಕಿತ್ಸೆ, ವಾಜೀಕರಣಚಿಕಿತ್ಸೆ ಇತ್ಯಾದಿ ೮ ವಿಭಾಗಗಳನ್ನು ಮಾಡಿ ಆಯುರ್ವೇದ ಪ್ರವರ್ತಕನೆಂದು ಖ್ಯಾತಿ ಪಡೆದನು.
ಧನ್ವಂತರಿ ಧ್ಯಾನದ ಅಧಿಷ್ಟಾನ ಯಾವುದು ಮತ್ತು ಕ್ರಮವೇನು ?
- “ಆತ್ಮಸಂಸ್ತಂ” ಎಂಬ ಮಾತಿನಿಂದ ಆಚಾರ್ಯರು ಧ್ಯಾನದ ಅಧಿಷ್ಟಾನವನ್ನು ತಿಳಿಸಿದ್ದಾರೆ. ನಮ್ಮ ಹೃದಯದಲ್ಲಿ ಅಗ್ನಿಮಂಡಲ ಚಂದ್ರಮಂಡಲ ಸೂರ್ಯ ಮಂಡಲಗಳಿವೆ. ಹೃದಯದಲ್ಲಿರುವ ಸೂರ್ಯಮಂಡಲದಲ್ಲಿ ಸೂರ್ಯನಾರಾಯಣ ನನ್ನು ಚಿಂತಿಸಿ, ಗಾಯತ್ರಿ ಮಂತ್ರವನ್ನು ಜಪಿಸುವಂತೆ ಹೃದಯದಲ್ಲಿರುವ ಚಂದ್ರಮಂಡಲದಲ್ಲಿ ಧನ್ವಂತರಿಯನ್ನು ಚಿಂತಿಸಿ ಜಪ ಮಾಡಬೇಕು. ಹೃದಯದ ಚಂದ್ರಮಂಡಲದಲ್ಲಿರುವ ಧನ್ವಂತರಿಯು ೭೨೦೦೦ ನಾಡಿಗಳಲ್ಲಿ ತನ್ನ ಬೆಳಕನ್ನು ಸೂಸುತ್ತಾ ನಮ್ಮ ಸಮಸ್ತ ದೇಹವನ್ನು ಅಮೃತಮಯವನ್ನಾಗಿ ಮಾಡುವನು. ಅಲ್ಲದೆ ಶಿರಸ್ಸಿನಲ್ಲಿ ಹುಬ್ಬುಗಳನಡುವೆ, ಕಿರುನಾಲಿಗೆಯಲ್ಲಿ, ಹೊಕ್ಕಳಿನಲ್ಲಿ ಮತ್ತು ಕೆಳಭಾಗದಲ್ಲಿರುವ ಷಟ್ ಚಕ್ರಗಳಲ್ಲಿಯೂ ಇದೇ ಧನ್ವಂತರಿಯು ಅಮೃತಧಾರೆಯನ್ನು ಸುರಿಸುತ್ತಿರುವನು.
*ಧನ್ವಂತರಿಯ ರೂಪ ಹೇಗಿದೆ* ?
ಧನ್ವಂತರಿಯು ಅಮೃತಕಲಶವನ್ನು ಎಡಗೈಯಲ್ಲಿಯೂ, ಬಲಗೈಯಲ್ಲಿ ಜ್ಞಾನಮುದ್ರೆಯನ್ನೂ ಧರಿಸಿದ್ದಾನೆ.
*Who is Dhanvantari* ? – Dhanvantari is the saakshaat paramathma avatara, who appeared during the samudra mathana. Dhanvantari roopi paramathma appeared carrying Amrutha during samudra mathana.
-
Dhanvantary appeared twice – Once during the churning of ocean “Samudra mathana” where he brought in the “amrutha” – i.e., on Bhadrapada Shukla Dwiteeya – in the direct Srihari roopa – He was called as Abja
-
Dhanvantary appeared for second time as the son of Dirghatama on Karthika Bahula Dwadashi. He in turn gave us the Ayurveda samhita with eight divisions – in the maanava avataara. – He learnt Ayurveda from sage Bharadhwaja. This is only loka moharnartha and to do the anugraha to the sage only.
-
Dhanvantari is said to be the founder of Ayurvedha.
-
Dhanvantari means ” paapa parihaaraka” – poorvajanma krutaM paapaM vyaadhirUpEna bhaadate” – Dhanvantari roopi paramaathma does the parihara of vyaadhi and bhava roga. – In the doctors, we have to do the chintana of Doctors – “vaidyO naaraayaNO hari:”
*Devaranamas on Dhanvantary – Click*
*ಧನ್ವಂತರಿ ಮಹಾಮಂತ್ರ (ತಂತ್ರಸಾರಸಂಗ್ರಹ)*
ಸ್ವಯಮುದ್ದೇಶವಾನ್ ಪೂರ್ವವರ್ಣಪೂರ್ವೋ ನಮೋ ಯುತ: |
ಧಾನ್ವಂತರೋ ಮಹಾ ಮಂತ್ರ: ಸಂಸೃತಿವ್ಯಾಧಿನಾಶನ: || ೧ ||
|| ಧಂ ಧನ್ವಂತರಯೇ ನಮ: ||
ಆಚಾರ್ಯ ಮಧ್ವರು ತಮ್ಮ ತಂತ್ರಸಾರಸಂಗ್ರಹದಲ್ಲಿ 72 ಮಂತ್ರಗಳನ್ನು ಹೇಳಿದ್ದು, ಅದರಲ್ಲಿ ಧನ್ವಂತರಿ ಮಹಾಮಂತ್ರವನ್ನೂ, ಸೇರಿಸಿದ್ದಾರೆ. ಹತ್ತು ಶ್ಲೋಕಗಳಲ್ಲಿ ಧನ್ವಂತರಿ ಮಂತ್ರದ ಸ್ವರೂಪ, ಧ್ಯೇಯರೂಪ, ಧ್ಯಾನಶ್ಲೋಕ, ಜಪ, ಹೋಮಗಳ ಫಲವನ್ನೂ ತಿಳಿಸಿರುವರು. ನಮಗೆ ಯಾವ್ಯಾವುದರ ಅಪೇಕ್ಷೆ ಇದೆಯೋ ಅವೆಲ್ಲ ಧನ್ವಂತರಿ ಮಂತ್ರದ ಜಪ ಹೋಮಗಳಿಂದ ಈಡೇರುವುದೆಂದು ಹೇಳಿದ್ದಾರೆ –
ಚಂದ್ರೌಘಕಾಂತಿಮಮೃತೋರುಕರೈರ್ಜಗಂತಿ
ಸಂಜೀವಯಂತಮಮಿತಾತ್ಮಸುಖಂ ಪರೇಶಂ |
ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ
ಶೀತಾಂಶುಮಂಡಲಗತಂ ಸ್ಮರತಾಽತ್ಮಸಂಸ್ಥಂ || ೨ ||
ಅನಂತಚಂದ್ರರ ಕಾಂತಿಯಿಂದ ಪ್ರಕಾಶಿಸುತ್ತಿರುವ, ತನ್ನ ಅಮೃತಸ್ರವವೆಂಬ ಕಿರಣಗಳಿಂದ ಜಗತ್ತಿಗೆ ಜೀವಕಳೆಯನ್ನು ತುಂಬುತ್ತಿರುವ, ರಮಾಬ್ರಮ್ಹಾದಿಗಳಿಗೂ ಒಡೆಯನಾದ ಪರಮಾತ್ಮನು ತನ್ನ ಬಲಗೈಯಲ್ಲಿ ಜ್ಞಾನಮುದ್ರೆಯನ್ನೂ, ಎಡಕೈಯಲ್ಲಿ ಅಮೃತಪೂರ್ಣ ಕೊಡವನ್ನು ಹಿಡಿದಿರುವ, ಚಂದ್ರಮಂಡಲದಲ್ಲಿರುವ ಧನ್ವಂತರಿಯನ್ನು ತನ್ನೊಳಗೆ ನೆಲೆಸಿರುವನೆಂದು ಸ್ಮರಿಸಿರಿ.
ಮೂರ್ಧ್ನಿ ಸ್ಥಿತಾದಮುತ ಏವ ಸುಧಾಂ ಸ್ರವಂತೀಂ
ಭ್ರೂಮಧ್ಯಗಾಚ್ಚ ತತ ಏವ ಚ ತಾಲುಸಂಸ್ಥಾತ್ |
ಹಾರ್ದಾಚ್ಚ ನಾಭಿಸದನಾದಧರಾಸ್ಥಿತಾಚ್ಚ
ಧ್ಯಾತ್ವಾಽಭಿಪೂರಿತತನುರ್ದುರಿತಂ ನಿಹನ್ಯಾತ್ | ೩ |
ತನ್ನ ಶಿರಸ್ಸಿನಲ್ಲಿ, ಹುಬ್ಬುಗಳ ನಡುವೆ, ಕಿರುನಾಲಿಗೆಯಲ್ಲಿ, ಹೃದಯದಲ್ಲಿ, ಹೊಕ್ಕುಳಿನಲ್ಲಿ ಮತ್ತು ಕೆಳಭಾಗದಲ್ಲಿ ಹೀಗೆ ಷಟ್ ಚಕ್ರಗಳಲ್ಲೂಸನ್ನಿಹಿತನಾದ ಧನ್ವಂತರಿಯಿಂದ ಸುರಿಯುತ್ತಿರುವ ಅಮೃತಧಾರೆಯನ್ನು ನೆನೆದು, ಆ ಅಮೃತಧಾರೆಯಲ್ಲಿ ತನ್ನ ಶರೀರವೆಲ್ಲ ತೊಯ್ದು ಪವಿತ್ರವಾದಂತೆ ಅನುಸಂಧಾನಿಸಿ ಜಪಿಸುವವನು ಎಲ್ಲ ದುರಿತಗಳನ್ನೂ ತಡೆಯಬಲ್ಲ.
ಅಜ್ಞಾನ ದು:ಖ ಭಯ ರೋಗ ಮಹಾವಿಷಾಣಿ
ಯೋಗೋಽಯಮಾಶು ವಿನಿಹಂತಿ ಸುಖಂ ಚ ದದ್ಯಾತ್ |
ಉನ್ಮಾದವಿಭ್ರಮಹರ: ಪರತಶ್ಚ ಸಾಂದ್ರ
ಸ್ವಾನಂದ ಮೇವೆ ಪದಮಾಪಯತಿ ಸ್ಮ ನಿತ್ಯಂ | ೪ |
ಧನ್ವಂತರಿ ಮಂತ್ರವನ್ನು ಪ್ರತಿನಿತ್ಯ ಯಥಾಶಕ್ತಿ ಶ್ರದ್ಧೆಯಿಂದ ಜಪ ಮಾಡಿದರೆ, ಅಜ್ಞಾನ, ದು:ಖ, ಭಯ, ಹಲವು ಬಗೆಯ ರೋಗಗಳು, ಮಾರಕವಾದ ವಿಷಗಳು ಇವನ್ನೆಲ್ಲ ಪರಿಹರಿಸಿ, ಸುಖವೀಯುವುದು.
ಧ್ಯಾತ್ವೈವ ಹಸ್ತತಲಗಂ ಸ್ವಮೃತಂ ಸ್ರವಂತಂ
ದೇವಂ ಸ ಯಸ್ಯ ಶಿರಸಿ ಸ್ವಕರಂ ನಿಧಾಯ |
ಆವರ್ತಯೇನ್ಮನುಮಿಮಂ ಸ ಚ ವೀತರೋಗ:
ಪಾಪಾದಪೈತಿ ಮನಸಾ ಯದಿ ಭಕ್ತಿ ನಮ್ರ: | ೫ |
ಒಬ್ಬ ಮಂತ್ರೋಪಾಸಕನು ಶ್ರದ್ಧಾ-ಭಕ್ತಿಯಿಂದ ಅಮೃತವನ್ನು ಸುರಿಸುತ್ತಿರುವ ಧನ್ವಂತರಿಯನ್ನು ಮನದಲ್ಲಿ ನೆನೆದು ರೋಗಿಯ ತಲೆಯ ಮೇಲಿ ಕೈಯನ್ನಿಟ್ಟು ಧನ್ವಂತರಿ ಮಹಾ ಮಂತ್ರವನ್ನು ಉಚ್ಚರಿಸಿದರೆ, ರೋಗವು ಪರಿಹಾರವಾಗುವುದು. ಅಮೃತವನ್ನು ತಂದ ಧನ್ವಂತರಿಯನ್ನು ಸ್ತುತಿಸಿ ರೋಗಿಯ ತಲೆಯ ಮೇಲೆ ತನ್ನ ಕೈಯನ್ನಿಟ್ಟರೆ ರೋಗ ಪರಿಹಾರವಾಗುವುದಲ್ಲದೆ ಅದಕ್ಕೆ ಮೂಲವಾದ ಪಾಪವೂ ದೂರವಾಗುವುದು.
ಶತಂ ಸಹಸ್ರಮಯುತಂ ಲಕ್ಷಂ ವಾಽಽರೋಗಸಂಕ್ಷಯಾತ್ |
ಇಮಮೇವ ಜಪೇನ್ಮಂತ್ರಂ ಸಾಧೂನಾಂ ದು:ಖಶಾಂತಯೇ | ೬ |
ಈ ಮಂತ್ರವನ್ನು ೧೦೦, ೧೦೦೦, ೧೦೦೦೦, ಲಕ್ಷ ಆವೃತ್ತಿ ರೋಗಿಗಳ ರೋಗ ನಿವೃತ್ತಿಗಾಗಿ ಜಪಿಸಬೇಕು. ಸಜ್ಜನರ ದು:ಖ ಪರಿಹಾರಕ್ಕಾಗಿ ಈ ಮಂತ್ರವನ್ನೇ ಜಪಿಸಬೇಕು.
ಜ್ವರ ದಾಹಾದಿ ಶಾಂತ್ಯರ್ಥಂ ತರ್ಪಯೇನ್ಮುನುನಾಽಮುನಾ |
ಧ್ಯಾತ್ವಾ ಹರಿಂ ಜಲೇ ಸಪ್ತರಾತ್ರಾಜ್ಜೂರ್ತಿರ್ವಿನಶ್ಯತಿ || ೭ |
ಒಂದು ವಾರ ಕಾಲ ಪ್ರತಿನಿತ್ಯ ದಿನಕ್ಕೆ ಯಥಾಶಕ್ತಿ ಸಾವಿರಬಾರಿ “ಓಂ ಧನ್ವಂತರಿಯೇ ನಮ:” ಎಂದು ಜಪ ಮಾಡಿ ತರ್ಪಣ ಕೊಡಿರಿ ರೋಗಗಳು ಮಾಯವಾಗುತ್ತದೆ.
ಧನ್ವಂತರೋ ಮಹಾಮಂತ್ರ: ಸಂಸೃತಿವ್ಯಾಧಿನಾಶನ: | ಎಂದಿರುವ ಆಚಾರ್ಯರ ವಾಣಿಯಂತೆ ಧನ್ವಂತರಿ ಮಂತ್ರವು ಕ್ಷಣಿಕ ರೋಗಗಳನ್ನಷ್ಟೇ ಅಲ್ಲದೆ ಸಂಸಾರ ರೋಗವನ್ನೇ ಪರಿಹಾರ ಮಾಡುವ ಸಾಮರ್ಥ್ಯವುಳ್ಳದೆಂದಿದ್ದಾರೆ.
ಆಯುತಾಮೃತಸಮಿದ್ಧೋಮಾತ್ ಗೋಘೃತಕ್ಷೀರಸಂಯುತಾತ್ |
ಸರ್ವರೋಗಾ ವಿನಸ್ಯಂತಿ ವಿಮುಖೋ ನ ಹರೇರ್ಯದಿ || ೮ ||
ರೋಗಿಯು ಭಗವಂತನಿಗೆ ನಿಶ್ಚಲ ಭಕ್ತನಾಗಿದ್ದರೆ ಧನ್ವಂತರಿ ಮಂತ್ರದಿಂದಲೇ ಗೋವಿನ ತುಪ್ಪ, ಕ್ಷೀರ, ಅಮೃತಬಳ್ಳಿ ಸಮಿತ್ತಿನಿಂದ ಹೋಮಿಸಿದರೆ, ಎಲ್ಲಾ ರೋಗಗಳೂ ನಾಶವಾಗುವುದು .
ಭೂತಾಭಿರಸಾಂತ್ಯರ್ಥಮಪಾಮಾರ್ಗಾಹುತಿಕ್ರಿಯಾ |
ದ್ವಿಗುಣಾಽಮೃತಯಾ ಪಶ್ಚಾತ್ಯೇವಲೇನ ಘ್ರುತೇನ ವಾ | ೯ |
ಭೂತ, ಪ್ರೇತ, ಪಿಶಾಚಾದಿಗಳ ಪೀಡೆ, ಅಪಮೃತ್ಯಾದಿಗಳ ಪರಿಹಾರಕ್ಕಾಗಿ, ಉತ್ತರಣೆಯ ಸಮಿಧೆಗಳಿಂದ ಹೋಮವನ್ನು ಮಾಡಿ, ಅದಕ್ಕಿಂತ ಇಮ್ಮಾಡಿ ಅಮೃತ ಬಳ್ಳಿಯ ಸಮಿಧೆಗಳಿಂದ ಅಥವಾ ಆಜ್ಯದಿಂದ ಹೋಮಿಸಬೇಕು.
ಆಯುರ್ವಿವೃದ್ಧಯೇ ನಿತ್ಯಂ ಜನ್ಮ ನಕ್ಷತ್ರ ಏವ ವಾ |
ಚತುಶ್ಚತುರ್ಭಿರ್ದೂವಾಭಿ: ಕ್ಷೀರಾಜ್ಯಾಕ್ತಾಭಿರಿಷ್ಯತೇ | ೧೦ |
ಆಯುಷ್ಯಾಭಿವೃದ್ಧಿಗಾಗಿ ಪ್ರತಿನಿತ್ಯವೂ, ಅಥವಾ ಜನ್ಮ ನಕ್ಷತ್ರ ದಿನದಲ್ಲಾಗಲೀ, ಆಕಳ ಹಾಲು ತುಪ್ಪ ಮಿಶ್ರವಾದ, ಕದಿರಿನ ಕುಡಿಗಳಿಂದ ಹೋಮಮಾಡಬೇಕು
ಸರ್ವಕ್ರಿಯಾ ಹರೌ ಭಕ್ತೇ ಹರಿಭಕ್ತೈಸ್ಸ್ವನುಷ್ಠಿತಾ: |
ಗುರುಭಕ್ತೈ ಸದಾಚಾರೈ: ಫಲಂತ್ಯದ್ಧಾ ನ ಚಾನ್ಯಥಾ | ೧೧ |
ಹೋಮ ಮಾಡತಕ್ಕವನಿಗೆ ಹರಿಭಕ್ತ್ಯಾದಿ ಗುಣಗಳಿಲ್ಲದಿದ್ದರೆ ಸರ್ವಥಾ ಫಲಿಸದು. ಸದಾಚಾರ ಸಂಪನ್ನರಾದ ಹರಿ ಗುರು ಭಕ್ತರಿಂದಲೇ ಜಪ ಹೋಮ ಮೊದಲಾದ ಸರ್ವಕ್ರಿಯೆಗಳೂ ಹರಿಸ್ಮರಣ ಪೂರ್ವಕ ಮಾಡಿರೆ ಫಲ ನಿಶ್ಚಯ.
++++++++++++++++++++++++++++++
*धन्वंतरि वेद मंत्र – ಧನ್ವಂತರಿ ವೇದ ಮಂತ್ರ* –
अयं मे हस्तो भगवान् अयं मे भगवत्तर: ।
अयं मे विश्वभेषजोऽयं शिवाभिमर्शन: । ऋग्वेद ।
ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರ: |
ಅಯಂ ಮೇ ವಿಶ್ವಭೇಷಜೋಽಯಂ ಶಿವಾಭಿಮರ್ಶನ: | ಋಗ್ವೇದ |
+++++++++++++++++++++++++++++++++++++++
*Vaadiraaja Tirtha kruta Dashavatara stotra* :
ಧನ್ವಂತರೇಽಗರುಚಿ ಧನ್ವಂತರೇಽರಿತರು ಧನ್ವಂಸ್ತರಿ ಭವಸುಧಾ-
ಭಾನ್ವಂತರಾವಸಥ ಮನ್ವಂತರಾಧಿಕೃತ ತನ್ವಂತರೌಷಧನಿಧೇ |
ಧನ್ವಂತರಂಗ ಶುಗು ಧನ್ವಂತಮಾಜಿಷು ವಿತನ್ವನ್ಮಮಾಬ್ಧಿತನಯಾ-
ಸೂನ್ವಂತಕಾತ್ಮ ಹೃದ ತನ್ವಂತರಾವಯವ ತನ್ವಂತರಾತ್ರಿ ಜಲಧೌ ||
धन्वंतरेऽगरुचि धन्वंतरेऽरितरु धन्वंस्तरि भवसुधा-
भान्वंतरावसथ मन्वंतराधिकृत तन्वंतरौषधनिधे ।
धन्वंतरंग शुगु धन्वंतमाजिषु वितन्वन्ममाब्धितनया
सून्वंतकात्म हृद तन्वंतरावयव तन्वंतरात्रि जलधौ ॥
Dhanvantary Home would be done for improvement of health with the main mantra “Om Dhanvantariye namaha”.
*Benefits of Performing Dhanvantari Homa* :
– By performing Dhanvantari Homa one can get relief from health issues . This can be done individually or in a group for the welfare of the society with the main intention “sarvE janah sukhino bhavantu”
=====================================
*Dhanvantary in MBTN Adhyaaya 10, shloka 2*
ತತೋ ಭವಾನ್ ದಕ್ಷಿಣಬಾಹುನಾ ಸುಧಾಕಮಂಡಲುಂ ಕಲಶಂ ಚಾಪರೇಣ |
ಪ್ರಗೃಹ್ಯ ತಸ್ಮಾನ್ನಿರಗಾತ್ ಸಮುದ್ರಾತ್ ಧನ್ವಂತರಿರ್ನಾಮ ಹರಿನ್ಮಣಿದ್ಯುತಿ: |
ततो भवान् दक्षिणबाहुना सुधा कमंडलुं कलशं चापरेण ।
प्रगृह्य तस्मान्निरगात् समुद्रात् धन्वंतरिर्नाम हरिन्मणिद्युति: ।
tatO bhavaan dakShiNabaahunaa sudhaa- kamaMDaluM kalashaM chaaparENa | pragRuhya tasmaanniragaat samudraat dhanvaMtarirnaama harinmaNidyuti: |
Than Bhagavan Dhanvantary, holding a kamandalu to serve Amrita in his right hand, and the pots of Amrita in the left hand, came out of the ocean in the form of Dhanvantari and were shining with the radiance of Indraneela mani.
=====================================
Extracts from : (Bhagavatha ashtama skanda adhyaya 8, shloka 31-34)*
Dhanvantary roopi paramathma’s teachings are available in Agni purana. His avatara is also explained in Vishnu purana, Ramayana, Bhagavatam, MBTN, Brahmanda purana, etc.
ದೀರ್ಘಪೀವರದೋರ್ದಂಡ: ಕಂಬುಗ್ರೀವೋಽರುಣೇಕ್ಷಣ: |
ಶ್ಯಾಮಲಸ್ತರುಣ: ಸ್ರಗ್ವೀ ಸರ್ವಾಭರಣಭೂಷಿತ: |
ಪೀತವಾಸಾ ಮಹೋರಸ್ಯ: ಸುಮೃಷ್ಟಮಣಿಕುಂಡಲ: |
ನೀಲಕುಂಚಿತಕೇಶಾಂತ: ಸುಭಗ: ಸಿಂಹವಿಕ್ರಮ: |
ಅಮೃತಾಪೂರ್ಣಕಲಶಂ ಬಿಭ್ರದ್ ವಲಯಭೂಷಿತಂ |
ಸ ವೈ ಭಗವತ: ಸಾಕ್ಷಾದ್ ವಿಷ್ಣೋರಂಶಾಂಶಸಂಭವ: |
ಧನ್ವಂತರಿರಿತಿ ಖ್ಯಾತ ಆಯುರ್ವೇದದೃಗಿಜ್ಯಭಾಕ್ |
ತಮಾಲೋಕ್ಯಾಸುರಾ: ಸರ್ವೇ ಕಲಶಂ ಚಾಮೃತಾಭೃತಂ |
दीर्घपीवरदोर्दंड: कंबुग्रीवोऽरुणेक्षण: ।
श्यामलस्तरुण: स्रग्वी सर्वाभरणभूषित: ।
पीतवासा महोरस्य: सुमृष्टमणिकुंडल: ।
नीलकुंचितकेशांत: सुभग: सिंहविक्रम: ।
अमृतापूर्णकलशं बिभ्रद् वलयभूषितं।
स वै भगवत: साक्षाद् विष्णोरंशांशसंभव: ।
धन्वंतरिरिति ख्यात आयुर्वेददृगिज्यभाक् |
तमालोक्यासुरा: सर्वे कलशं चामृताभृतं ।
dIrGapIvaradOrdaMDa: kaMbugrIvO&ruNEkShaNa: |
shyaamalastaruNa: sragvI sarvaabharaNabhUShita: |
pItavaasaa mahOrasya: sumRuShTamaNikuMDala: |
nIlakuMchitakESaaMta: subhaga: siMhavikrama: |
amRutaapUrNakalashaM bibhrad valayabhUShitaM |
sa vai bhagavata: saakShaad viShNOraMshaaMshasaMbhava: |
dhanvaMtaririti Kyaata AyurvEdadRugijyabhaak tamaalOkyaasuraa:
sarvE kalashaM chaamRutaabhRutaM |
*********************************************************
Daithyaas snatched the amruta kalasha from Dhanvantary – Clarification – As per Bhagavatam – it seems that the daithyaas snatched the amruta kalasha from the hands of Sarvottama Srihari easily. Now, one will get doubt as to whether Dhanvantary was not having the ability to avoid snatching of the kalasha. It is not so. Infact Srihari knows that the daithyas are not eligible. But still he told them that he will distribute. But they didn’t had that much of patience till sharing of the amrutha. Actually as per the agreement between the gods and daithyas the amrutha should have been shared equally. But these daithyas snatched it with the sole intention of retaining with them only. As such Srihari wanted to make the world understand that the daithyas do not deserve the amrutha. So, he allowed them snatching the kalasha.
Sri Gopaladasaru did the ayurdaana to Jagannatha Dasaru with the shakthi of Dhanvantary Mantra only.
*ಗೋಪಾಲದಾಸರ ಕೃತಿ* :
ಆವ ರೋಗವೋ ಎನಗೆ ದೇವ ಧನ್ವಂತ್ರಿ | ಪ |
ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ | ಅ.ಪ |
ಹರಿ ಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ
ಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆ
ಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ | ೧ |
ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು
ಗುರುಹಿರಿಯರಂಘ್ರಿಗೆ ಶಿರ ಬಾಗದು
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ | ೨ |
ಅನಾಥ ಬಂಧು ಗೋಪಾಲವಿಠಲರೇಯ
ಎನ್ನ ಬಾಗದ ವೈದ್ಯ ನೀನೆಯಾದೆ
ಅನಾದಿ ಕಾಲದ ಭವರೋಗ ಕಳೆಯಯ್ಯಾ
ನಾನೆಂದಿಗು ಮರೆಯೇ ನೀ ಮಾಡಿದುಪಕಾರ | ೩ |
===================
*ಧನ್ವಂತ್ರಿ ಅವತಾರಗಳು*
ಆದಿಯಲಿ ಅಬ್ಜನಾಗಿ ನೀನವತರಿಸಿದೆ
ಅಭಿಮಂಥನ ಕಾಲದಿ ಹಸ್ತದಲಿ
ಸುಧೆಯ ಬಿಂದಿಗೆ ಧರಿಸಿ; ಅಸುರರು ಮೇಲೆ
ಬಿದ್ದದನು ಕಿತ್ತುಕೊಂಡರು; ಬಿಟ್ಟೆ ನೀನು
ಕೆಟ್ಟ ತಾಮಸ ಜನರಿಗೆ ತೊಟ್ಟು ಕೊಡ
ಅಮೃತಯೋಗ ಸಿಗದೆಂಬುದರುಹಿ ನೀನು
ಕೆಟ್ಟವರಿವರೆಂಬುದ ಜಗಕೆಲ್ಲ ತೋರಿ
ದಿಟ್ಟತನ ಬಿಟ್ಟೇ; ಬಲು ಜಗಜೆಟ್ಟಿ ನೀನು;
ಎರಡನೆಯ ದ್ವಾಪರದಿ ಅವತಾರ ಮಾಳ್ದೆ
ಧರೆಯೊಳು ಸುಧಾಂಶು ವಂಶದಿ ಧನ್ವರಾಜ
ವರ ಕುಮಾರನೆನಿಸಿದೆ ಧನ್ವಂತ್ರಿ ನೀನು
ನರರಿಗಿತ್ತೆ ಆಯುರ್ವೇದ ವರ ಚಿಕಿತ್ಸೆ
ಆದಿಯನು ವ್ಯಾಧಿಯನು ಭವವೇದೆಯನು
ಛೇದಿಸುವ ಮೂಲ ಭೇಷಜನಾದಿಪುರುಷ
ವೇದವೇದ್ಯನೆ ಧನ್ವಂತ್ರಿ ಆದಿ ವೈದ್ಯ
ಬೇದಿಸೆಮ್ಮನು ಕಾಡುವ ವ್ಯಾಧಿಗಳನು
ಹುಟ್ಟು ಸಾವ್ಗಳ ಸರಪಳಿ ಕಟ್ಟಿ ಸೆಳೆಯೆ
ಕೆಟ್ಟ ಮರುಭೂಮಿಯಲಿ ಮತಿಗೆಟ್ಟು
ಕ್ಷುತೃಡಾರ್ತಿಗಳಿಗೆ ಸಿಕ್ಕಿ ಕ್ಷೋಭೆಗೊಂಡು
ಗುರು ಮರೆತು ಸಂಚರಿಪ ದೀನ ನರನು ನಾನು
ಕರುಣಿಗಳರಸ ಧನ್ವಂತ್ರಿ ನೆರಳು ತೋರೊ
ಧರೆಯನಳೆದ ನಿನ್ನಡಿಗಳ ನೆರಳು ತೋರೊ
ಸ್ವರ್ಧುನಿಯ ಪೆತ್ತ ಚರಣದ ನೆರಳು ತೋರೊ
ಗಿರಿಯ ಭಾರವ ಪೊತ್ತಡಿ ನೆರಳು ತೋರೊ
ಉರಗಶಿರವಲಾಡಿದ ಆದಿ ನೆರಳು ತೋರೊ
ಸಿರಿತೊಡೆಯ ಮೇಲ್ಮೆರೆವಡಿಯ ನೆರಳು ತೋರೊ
ಜ್ಞಾನಸಾಗರ ಮಾಧವಾ ನಿನ್ನ ಕರುಣೆ
ಸುರಿಸುವ ಚರಣ ಕಮಲದ ನೆರಳು ತೋರೊ
– ಶ್ರೀ ವಿದ್ಯಾಸಾಗರ ಮಾಧವತೀರ್ಥರು
ಶ್ರೀಮಾಧವತೀರ್ಥ ಮಠ, ತಂಬಿಹಳ್ಳಿ
=========================
Sri Vijaya daasa kruta Dhanvantari Suladi :
Sri DhanvaMtari SuLaadi
ರಾಗ – ಭೈರವಿ ತಾಳ – ಧ್ರುವ
ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು
ಕಾಯಾ ನಿರ್ಮಲಿನಾ ಕಾರಣವಾಹದೋ
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದ
ನಾಯಿ ಮೊದಲಾದ ಕುತ್ಸಿತ ದೇಹ ನಿ-
ಕಾಯವಾ ತೆತ್ತು ದುಷ್ಕರ್ಮದಿಂದ
ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕಕರ್ತ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನ್ನು ಪಾಲಿಪಾ-
ಧ್ಯೇಯಾ ದೇವಾದಿಗಳಿಗೆ ಧರ್ಮಜ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ-
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ ವಿಜಯ ವಿಟ್ಠಲರೇಯಾ
ಪ್ರಿಯನು ಕಾಣೋ ನಮಗೆ ಅನಾದಿ ರೋಗ ಕಳೆವಾ || 1 ||
ತಾಳ – ಮಟ್ಟ
ಧನ್ವಂತ್ರಿ ಶ್ರೀಧನ್ವಂತ್ರಿ ಎಂದು
ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೋ ಘನ್ನತಿಯಲಿ ನೆನೆದ
ಮನ್ನೂಜ ಭುವನದೊಳು ಧನ್ಯನು ಧನ್ಯನೆನ್ನಿ
ಚೆನ್ನಮೂರುತಿ ಸುಪ್ರಸನ್ನ ವಿಜಯ ವಿಠ್ಠ-
ಲನ್ನಸತ್ಯವೆಂದು ಬಣ್ಣಿಸು ಬಹು ವಿಧದಿ || 2 ||
ತಾಳ – ತ್ರಿವಿಡಿ
ಶಶಿಕುಲೋದ್ಭವ ದೀರ್ಘತಮ ನಂದನ ದೇವಾ
ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆ ಪೂದೆ ತಾಪ ಓ-
ಡಿಸುವೌಷಧಿ ತುಲಸಿ ಜನಕ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ
ಬಿಸಜ ಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೊ
ದಶದಿಶದೊಳು ಮೆರೆವ ವಿಜಯವಿಠ್ಠಲ ಭಿಷ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ || 3 ||
ತಾಳ – ಆಟ
ಶರಣು ಶರಣು ಧನ್ವಂತರಿ ತಮೋಗುಣ ನಾಶಾ
ಶರಣು ಆರ್ತಜನ ಪರಿಪಾಲಕ ದೇವಾ
ತರುವೆ ಭವ ತಾಪ ತರುಣ ದಿತಿಸುತ
ಹರಣ ಮೋಹಕ ಲೀಲಾ ಪರಮ
ಪೂರ್ಣ ಬ್ರಹ್ಮಬ್ರಹ್ಮ ಉದ್ಧಾರಕ
ಉರುಪರಾಕ್ರಮ ಉರಗಶಾಯಿ
ವರಕಿರೀಟ ಮಹಾಮಣಿ ಕುಂಡಲಕರ್ಣ
ಮಿರುಗುವ ಹಸ್ತ ಕಂಕಣ ಹಾರಪದಕ ತಾಂ-
ಬರ ಕಾಂಚಿ ಪೀತಾಂಬರ ಚರಣಭೂಷಾ
ಸಿರಿವತ್ಸಲಾಂಛನ ವಿಜಯ ವಿಟ್ಠಲರೇಯಾ
ತರುಣಗಾತರ ಜ್ಞಾನ ಮುದ್ರಾಂಕಿತ ಹಸ್ತಾ || 4 ||
ತಾಳ – ಆದಿ
ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ
ಬೀಳುವಾಗಲಿ ನಿಂತು ಕುಳಿತಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ-
ಮ್ಮೇಳವಾಗಲಿ ಮೇಲು ಪುತ್ರಾದಿ ಒಡೆಯೊಡನೆ
ಖೇಳವಾಗಿ ಮನುಜ ಮರ್ಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು ಒಮ್ಮೆ
ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ
ವ್ಯಾಳಿ ವ್ಯಾಳಿಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯ ವಿಠ್ಠಲರೇಯಾ
ವಾಲಗ ಕೊಡುವನು ಮುಕ್ತರ ಸಂಗದಲ್ಲಿ || 5 ||
ಜತೆ
ಧಂ ಧನ್ವಂತರಿ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಠ್ಠಲವೊಲಿವಾ || 6 ||
+++++++++++++++++++++++++++++++++++++
*ಗೋಪಾಲದಾಸರ ಕೃತಿ – ಎನ್ನ ಭಿನ್ನಪ ಕೇಳು ಧನ್ವಂತ್ರಿ*
(Enna binnapa kelu dhanvantri)
ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ |
ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ ||ಪ||
ಆರೋಗ್ಯ ಆಯುಶ್ಯ ಐಶ್ವರ್ಯವೆಂಬೋ ಈ ಮೂರುವಿಧ ವಸ್ತುಗಳು
ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು
ಘೋರ ವ್ಯಭಿಚಾರ ಪರನಿಂದೆ ಪರ ವಿತ್ತಾಪಹಾರ ಮಾಡಿದ ದೋಷದಿ
ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೇ ||೧||
ವಸುಮತಿಯ ಮೇಲಿನ್ನು ಅಸುರ ಜನರ ಬಹಳ ವಶವಲ್ಲ ಕಲಿಯ ಬಾಧೆ
ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಲು ನಾವಿಪ್ಪೆವು
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೇ ಪೊರೆಯೋ ಸ್ವಾಮಿ ||೨||
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ
ಹೇ ದೇವ ನಿನ್ನ ಕರಕಲಶ ಸುಧೆಗರೆದು ಸಾಧುಗಳ ಸಂತೈಸುವಿ
ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನಿವೀ
ಆದರಿಸಿ ಇವಗೆ ತವಪಾದ ಧ್ಯಾನವನಿತ್ತು ಸಾಧುಗಲೊಳಗಿತ್ತು ಮೋದಕೊಡು ಸರ್ವದಾ ||೩||
ಆನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ
ನಿನ್ನವರನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ
ಅನ್ನ ಆರೋಗ್ಯಕ್ಕೆ ಅಲ್ಪ ಜೀವಿಗಳಿಗೆ ಇನ್ನು ಆಲ್ಪರಿಯಬೇಕೆ
ನಿನ್ನ ಸಂಕಲ್ಪ ಭಕ್ತರ ಪೋಷಕನೆಂಬ ಘನ್ನ ಬಿರುದಿನ್ನು ಉಲುಹೊ ಸಲಹೊ ||೪||
ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದು
ನಿನ್ನ ನಾ ಪ್ರಾರ್ಥಿಸಿದ ಅನ್ಯರಿಗೆ ಅಲ್ಪರಿಯೆ ಎನ್ನ ಪಾಲಿಸುವ ದೊರೆಯೆ
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೆಕು ಕರುಣಿ
ಅನಂತ ಗುಣಪೂರ್ಣ ಗೋಪಾಲವಿಠಲ ಇನ್ನಿದನೆ ಪಾಲಿಸುವುದೋ ಪ್ರಭುವೇ ||೫||
Source :