ವಿಜಯದಾಸರ ಕೃತಿ – ನಿನ್ನ ಒಲುಮೆಯಿಂದ
Click here:
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೋ ಮಹರಾಯ ।
ಎನ್ನ ಪುಣ್ಯಗಳಿಂದ ಈ ಪರಿಯುಂಟೆನೊ ನಿನ್ನದೇ ಸಕಲ ಸಂಪತ್ತು ।।
ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ ಪೂರ್ಣವಿಚಿತ್ರ ಸುವಾಸನ ।
ವರ್ಣ ವರ್ಣದಿಂದ ಬಾಹೋದೇನೊ ಸಂ ಪೂರ್ಣ ಗುಣಾರ್ಣವ ದೇವಾ ।।
ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕೆ
ತಬ್ಬಿಬ್ಬುಗೊಂಡೆನೊ ಹಿಂದೆ।
ನಿಬ್ಬರದಲಿ ಸರ್ವರ ಕೂಡುಂಬೊ ಹಬ್ಬದೂಟವ ಉಣ್ಣಿಸುವೆಯೋ ।।
ಸಂಜಿ ತನಕ ಇದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೋ ।
ವ್ಯಂಜನ ಮೊದಲಾದ ನಾನ ರಸಂಗಳ ಭುಂಜಿಸುವುದು ಮತ್ತೇನೋ ।।
ಮನೆಮನೆ ತಿರುಗಿದರು ಕಾಸು ಪುಟ್ಟದೆ ಸು
ಮ್ಮನೆ ಚಾಲವರಿದು ಬಳಲಿದೆನೋ ।
ಹಣ ಹೊನ್ನು ದ್ರವ್ಯಗಳಿದ್ದಲ್ಲಿಗೆ ತಾನಾಗೆ ತಾನೆ ಪ್ರಾಪ್ತಿ ನೊಡೋ ಜೀಯಾ ।।
ಮಧ್ಯಾನ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾವ। ಈ ಧರೆಯೊಳಗೆ ಸತ್ಪಾತ್ರರ ಕೂಡುಂಬೊ ಪದ್ಧತಿ ನೋಡೋ ಪುಣ್ಯಾತ್ಮ ।।
ನೀಚೊಚ್ಛ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆ ನೋಸಲ ಹಸ್ತಗಳ ।
ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕ್ಕೆ ನಿಲಿಕದೋ ಹರಿಯೇ ।।
ವೈದಿಕ ಪದವೀವಗೀಬಗೆ ಲೌಕಿಕ ಐದಿಸುವದು ಬಲು ಖ್ಯಾತೆ ।
ಮೈದುನಗೊಲಿದ ಶ್ರೀ ವಿಜಯವಿಟ್ಠಲ ನಿನ್ನ
ಪಾದಸಾಕ್ಷಿಯ ಅನುಭವವೋ ।।
ನಿನ್ನ ಒಲುಮೆಯಿಂದ ..