vijayadasaru ಉಗಾಭೋಗ

Shri Vijaya Dasara Ugaabogagalu – lirics in Kannada, Telugu, Tamil and Sanskrit lipi

 

Ugabogagalu – Kannada  – click

Ugabogagalu – Telugu – click
Ugabogagalu – Tamil  – click

Ugabogagalu – Sanskrit  – click 

ಒಂದೆಂಟು ಬಾಗಿಲುಳ್ಳ ಪಟ್ಟಣದೊಳಗೆ
ಮುಂದೆ ಇಪ್ಪತ್ತನಾಲ್ಕು ಮನೆಯೊಳು
ತಂದೆನ್ನ ನಿಲ್ಲಿಸಿ ಒಳಗಿಟ್ಟು ಕಾವಲು ಮಾಡಿ
ಬಂಧನದೊಳಗಿಟ್ಟು ಬಳಸಿಸುವದು ಅನ್ಯಾಯ
ತಂದೆ ಅಂತರಾತ್ಮಕ ನೀನು ಒಳಗಿದ್ದು ಸ್ವತಂತ್ರ-
ನೆಂದೆನಿಸಿ ಎನ್ನ ಬರಿದೆ ಕೊಲ್ಲಿಸುವರೇನೋ ?
ಕಂದರ್ಪಪಿತ ರಂಗ ನೀ ಕಾಯಬೇಕೆನ್ನ
ಎಂತಾದರೇನು ಅನಂತ ಮೂರುತಿ ವಿಜಯವಿಠಲ

&&&&&&&&&&&&

ಒಂದೆರೆಡು ಮೂರು ನಾಲ್ಕೈದಾರು ಏಳು
ಒಂದೇಳು ಒಂಬತ್ತು ಹತ್ತುಸಾರಿ
ವಂದಿಸಿ ಸ್ತೋತ್ರ ಮಾಡಿದುದಕೆ, ಅವರವರ
ಬಂಧನ ಪರಿಹರಿಸಿ ಕಾಯ್ದೆ ನೀನು
ಒಂದೊಂದು ಚಿತ್ತಕ್ಕೆ ಅನುಭವ ನ್ಡಿ
ಇಂದು ಪ್ರಾರ್ಥಿಸಿದೆನು ಪಾರ್ಥಸೂತ
ಅಂದ ಮಾತನು, ಬರಿತಾಗದಂತೆ ದೇವ
ಬಂದಪಮೃತ್ಯುವ ಕಡೆಗೆ ಮಾಡಿದಾ
ನಂದವ ಇತ್ತು, ಈ ದೇಹದಿ ಸುಖಪಡಿಸು
ತಂದೆ ಈ ಭಕ್ತನ ಮೊರೆಯ ಕೇಳಿ
ಕಂದರ್ಪ ಪಿತ ನಮ್ಮ ವಿಜಯವಿಠಲ ನಿನ್ನ
ಪೊಂದಿದ ಮೇಲೆ ಮುನ್ನಾವ ಕ್ಲೇಶಗಳಿಲ್ಲ

############

ಎತ್ತಣದೋ, ಈ ಮಾಯಾ ಸಂಸಾರ
ನಿತ್ಯವಲ್ಲ ನಿತ್ಯವಲ್ಲ ವಿಚಾರಿಸೆ
ತುತ್ತುವನು ಮೆಲುವಾಗ, ಕಂಟಕವಿದ್ದಂತೆ
ಮೃತ್ಯುಮಾರಿಗಳುಕಾದಿಪ್ಪವೆಲ್ಲ
ಮರ್ತ್ಯದಲಿ ಪುಟ್ಟಿ ಸುಖಬಯಸುವ ನರಗೆ
ಹತ್ತು ಸಾವಿರ ಪ್ರಣಾಮ ಮಾಡುವೆನೋ
ಉತ್ತಮ ಗತಿ ಬಯಸೋ, ನಾಯಿ ತಲೆ ಮೇಲಿನ
ಬುತ್ತಿಯಂದದಿ ಕಾಣೋ ಸತಿ ಸುತರು
ಚಿತ್ತದಲ್ಯಾಡುವ ವಿಜಯವಿಠಲರೇಯನ
ತುತಿಸಲು ಬಂದು ಕೈವಲ್ಯಾದಾರಿಡುವ ||

@@@@@@@@@@@@@

 

ಒಬ್ಬ ಸತಿ ಪತಿಗಾಗಿ ಮುನಿಯ ಶಾಪವ ಧರಿಸಿ
ಅಬ್ಜ ಬಾಂಧವನ ನಿಲಿಸಿದಳು ನೋಡೋ
ಒಬ್ಬ ಸತಿ ಪತಿಗಾಗಿ ಧರ್ಮನ ಸಬೆ ಸಾರಿ
ನಿಬ್ಬರದಿ ಪ್ರಾಣವನು ಪಡೆದಳು ನೋಡೋ
ಒಬ್ಬ ಸತಿ ಪತಿಗಾಗಿ ಚಿತ್ರಗುಪ್ತರಾಡಿದ
ಶಬ್ದ ಲಾಲಿಸಿ ಐದೆತನ ಪಡೆದಳೋ
ಊರ್ಬಿಯೊಳೀಪರಿ ಸತಿಯರ ಸ್ವಧರ್ಮ
ನಿರ್ಭೀಡೆಯಾಗಿದೆ ನಿನ್ನ ದಯದಿ
ಅಬ್ಜನಾಭನೆ ಇವನ ಮೇಲೆ ದಯಮಾಡು
ಕರುಣಾಬ್ಧಿಯೇ, ಉಪೇಕ್ಷೇ ಮಾಡದೆಲೆ
ಅಬ್ಜರ ದೈವ ವಿಜಯವಿಠಲರೇಯ
ಲಬ್ಧವಾಗಲಿ ಬೇಡಿದವನ ಅಭಯವು

***************

ಎಲೊ ಎಲೊ ದುರಿತವೆ, ಓಡು ಓಡು ನೀ
ನಿಲಲಾಗದು ಎನ್ನ ಬಳಿಯಲಿ ಮೊದಲಂತೆ
ತಲೆ ಬಲೆತು, ಸೊಕ್ಕಿನಿಂದಲಿ ಮೆರೆಯೆ, ನಿನ್ನ
ಕುಲ ಕ್ಷೇಮವಿಲ್ಲ, ಕೈಲಿ ಖಡ್ಡಿಯನಿತ್ತೆ
ಮಲೆತವರ ಗಂಡ ಶ್ರೀ ಹರಿ ಕಂಡರೆ ನಿನ್ನ
ತಲೆಯ ಚಂಡಾಡುವ ಭೂತಬಲಿಯನೀವ
ತಿಳಿದುಕೋ, ನೀ ಕೇಳು, ಮೊದಲಂತೆ ನಾನಲ್ಲ
ಸುಲಭ, ವಿಜಯವಿಠಲನೊಲಿದ ಭಯವಿಲ್ಲ ||

(((((((((((
ಈಶಾವಾಸ್ಯಕೆ ಯಜ್ಞ ನಾಮಕದೇವ
ಲೇಸು ಅಥರ್ವಣಕೆ ಪುರುಷೋತ್ತಮ ದೇವತೆ
ವಾಸುದೇವನ ನೆನಸು ಷಟ್ಪ್ರಶ್ನಕೆ ಜಗ
ಧೀಶ ನಾರಾಯಣ ತಳವಕಾರಕೆ ದೇವತೆ
ಭೂಷಣ ವಾಮನನು ಕಾಠಕ ಪ್ರತಿಪಾದ್ಯ
ಕೋಶ ರೂಪಗಳೈದು ತೈತರೀಯಕೆ ಸಿದ್ಧಾ
ಭಾಸಿತ ವಿಷ್ಣು ಐತರೇಯಕೆ ಪೇಳಿ
ಶೇಷಶಯನ ರೂಪ ಛಾಂದೋಗ್ಯ ಭಾಷ್ಯಕ್ಕೆ
ಶ್ರೀಶನು ಬೃಹದಾರಣ್ಯಕ್ಕೆ
ಈಸು ವೇದಾಂತದಲಿ ಹರಿಯ ಧ್ಯಾನವ ಮಾಡಿ
ದೋಷರಾಶಿಗಳಿಂದ ನಿರ್ಮಲನಾಗುವೆನೋ

(ಶ್ರೀವಿಜಯದಾಸರು)

************

ಅಡಿಗಡಿಗೆ ನಾ ನಿನ್ನ ಅಡಿಗಳನೇ ನಂಬಿದೆ
ತೋರಯ್ಯ ಎನಗೆ ಸುಚಿತ್ರ, ಚಿತ್ತಜನಯ್ಯ
ಎಡಬಿಡದೆ ನಿನ್ನಂಘ್ರಿ ಚೆನ್ನಾಗಿ ಪೂಜಿಸಿ
ಎಡೆಗೆಡಿಪ ಲಿಂಗವನ್ನು ಬಂಧಿಸಿಕೊಂಡು
ಬಡಿವಾರ ನಿನ್ನವನೆಂಬೋ ಮಾತನೇ ಪೇಳಿ
ಸಡಗರದಿ ಮೆರೆವ ದಾಸನ್ನ ಮಾಡಯ್ಯಾ
ಬಿಡೌಜಪತಿ ಸಿರಿವಿಜಯವಿಠಲ ಸ್ವಾಮಿ
ಬರಿಸೋ ಬರಿಸೋ ನಿನ್ನ ಸ್ಮರಣೆ

————

ಅನಿಲದೇವನು, ದಾಹಕನಹುದೋ ಎಂದಿಗೂ
ಮನಬಲ್ಲದುಕಾಣೋ, ತ್ರಿಜಗದಲಿ
ಅನುದಿನದಲಿ ತನ್ನಿಂದನುವಾದ ವಸ್ತ್ರ-
ಕ್ಷಣದೊಳಗೆ ದಹಿಸಿಬಿಡುವನುಕಾಣಿರೋ
ವಿನಯದಿಂದಲಿ ತಾನು ಇಟ್ಟ ತೊಟ್ಟ ಉಟ್ಟ
ಮಣಿಭೂಷಣ ವಸನವ ದಹಿಸಿಕೊಂಬನೇನೋ
ವನಜನಾಭನು ಪಾವಕಸ್ಥಾನೀಯಾದಡೆ
ನೆನಸಿ ಮೊರೆ ಪೊಕ್ಕವರ ಪೆಸರುಗಳನು
ಘನದುರಿತವ ಸುಟ್ಟು, ದಾನವರ ಪುಡಿಮಾಡಿ
ಪ್ರಣತಜನರ ಅರ್ಥಿ ಕಳೆವ, ಪೊಳೆವ
ಫಣಿಶಾಯಿ ವಿಜಯವಿಠಲರೇಯ, ಕಾರುಣ್ಯ
ವನಧಿ ಕಾಣೊ, ಭಕ್ತರಿಗೆ ಪ್ರಾಣಪದಕ ||

++++++++++++++

ಅನಂತ ಅಪರಾಧ ಮಾಡಿದ ಕಾಲಕ್ಕೂ
ನೀನೆಣಿಸುವನಲ್ಲ ಸತ್ಯಕಾಮಧೇನೆಂದು
ಶ್ರೀನಾರಿ ಬೊಮ್ಮ ಮಹೇಂದ್ರಾದ್ಯರು ನಿತ್ಯ
ಎಣಿಕೆ ಮಾಳ್ಪರು ಎಲ್ಲೆಲ್ಲಿ ನಿರೀಕ್ಷಿಸಿ
ಮಾಣದೆ ಮತಿಯಿಂದ ತಲೆದೂಗಿ
ಅನುಭವ ಏನೆಂಬೆ ನಿನ್ನಯ ಬಲುಪ್ರತಾಪಕ್ಕೆ
ಮಾನವ ಗುಣಿಸಿ ನೆಲೆಗಾಣಬಲ್ಲನೆ
ಮೇನು ಗಿರಿಜೇಶಗೆ ಕಾಶಿಪಟ್ಟಣದಲಿ
ನೀ ನಿಲಿಸಿದೆ ಬ್ರಹ್ಮತ್ಯವ ಓಡಿಸಿ ಆನಂದ
ವನವಾಸ ವಿಜಯವಿಠಲರೇಯ ಜಾಹ್ನವೀ ಪಡೆದೆ ||

++++++++++

ಅನಂತ ಕಾಲ್ಪಕ್ಕೆ ನಿನ್ನ ಮೊರೆಬಿದ್ದವಗೆ
ಖಿನ್ನವಿಲ್ಲಬೆಂಬುದ ಕೇಳಿ ಬಲ್ಲೆ
ಚಿನ್ನ ಧ್ರುವ ಪ್ರಹ್ಲಾದ ಮೊದಲಾದ ಭಕುತರ
ಘನ್ನತೆ ಏನೆಂಬೆ ಲೋಕದಲಿ
ಮನ್ನಿಸು ಮಹರಾಯ ವಿಜಯವಿಠಲರೇಯ
ಬಿನ್ನಹ ಕೈಕೊಂಡು ಭಕುತನ್ನ ಪಾಲಿಸು ||

++++++++++++

ಆ ವಿಜಯವಿಠಲನ್ನ ಚರಣವಿರಲು
ಕಾವರಾರೆಂದು ಇನ್ಯಾಕೆ ಮರುಗುವಿ ಪ್ರಾಣೆ
ಆ ವಿಜಯವಿಠಲನ್ನ ಚರಣವಿರಲು
ಕ್ಷೀರವಾರಿಧಿ ತಡಿಯ ಸೇರಿ ಮನೆಗಟ್ಟಿಕೊಂಡು
ನೀರು ಮಜ್ಜಿಗೆಗಾಣದಳುವದೇನೋ
ಸಾರಿದರೆ, ನಿನ್ನ ಕುಲಸಹಿತಕ್ಕೆ ಸುಖವೀವ
ನಾರದವರದ ಸಿರಿವಿಜಯವಿಠಲೆನ್ನ ಸ್ವಾಮಿ ||

********

ಆಕಳಿಗೆ ಕರುವುಗಳು ಯೇಸು ಇಪ್ಪಾವೆಂದು
ಲೋಕದೊಳು ಕೇಳಿದರೆ ಜನ ಒಪ್ಪೋದು
ಈ ಕರುವಿಗೆ ಎಷ್ಟು ಆಕಳುಗಳುಂಟೆಂದು
ವಾಕು ಬೆಸಗೊಂಡರೆ ಜನ ಮೆಚ್ಚುವದೆ ?
ಶ್ರೀಕಾಂತ ನಿನಗಿಂದು ಉತ್ತರ ಕೊಡಲಾಪನೇ
ಸಾಕುವ ದೊರೆಗಳು ಎಷ್ಟೆಂದು
ನೀ ಕೇಳಿದುದಕೆ ಸೋಜಿಗವಾಗಿದೆ ಎನಗೆ
ಸಾಕುವರು ನಿನ್ನ ವಿನಹ ಉಂಟೇನಯ್ಯ
ಬಾಕುಳಿಗಮಾನವರು ಎನ್ನಂಠವರು ನಿನಗ-
ನೇಕ ಜನ ತುಂಬಿಹದು ನೋಡಿದಲ್ಲಿ
ಏಕೋ ಸ್ವಾಮಿ ನೀನೇ ಎನಗೋರ್ವನಲ್ಲದೆ
ನಾಕಾಣೆ ಇನ್ನೊಂದು ನಿನ್ನ ಸಮಾನ
ಶ್ರೀಕಳತ್ರ ವಿಜಯವಿಠಲವೇಂಕಟರಾಯ
ಯಾಕೆ ಎನ್ನೊಡನೆ ಈ ಮಾತು ಸೊಗಸೆ?
*******

ಈ ಕಲ್ಪಸಾಧನ ಅಪರೋಕ ನಂತರದಲಿ
ಬ್ರಹ್ಮ ಮೊದಲು ಮಾಡಿ ತೃಣ ಜೀವ ಪರಿಯಂತರ
ಅವರ ಯೋಗ್ಯತೆ ಸಾಧನ ಹೇಳಿ
ಅದೇ ಇದು ಎಷ್ಟು ಆಯಿತೆಂದರೆ, ಎರೆಡು ಮಹಪದ್ಮ
ಆರೈವತ್ತು ಪದ್ಮ, ಎರೆಡು ಅರ್ಭುದ, ಆರೈವತ್ತಾರು ಕೋಟಿ
ವರುಷವಾಯಿತು ಶ್ರೀ ವಿಜಯವಿಠಲ ||

***************

 

ಉಪವಾಸವಿದ್ದವಗೆ ಊರು ತುಂಬಿದರೇನು
ಅಪಹಾಸಗೊಳಿಸುವ ಗೆಳೆಯನಾದರೆ ಏನು
ಕುಪಿತವ ಬಿಡದವನು ಕುಲಜನಾದರೇನು
ಕಪಟವ ಬಿಡದವನ ಕೂಡ ಉಂಡರೇನು
ಕೃಪೆ ಮಾಡದವನ ಕಾಲಿಗೆ ಬಿದ್ದರೇನು
ತಪಸೊಗಳೊಡೆಯ ನಮ್ಮ ವಿಜಯವಿಠಲರೇಯ |
‌^^^^^^^^^^^^^

ಋಷಿಗಳ ಋಣ ಪೂರ್ವಾಶ್ರಮದಿಂದ ಪರಿಹಾರ ಶ್ರೀ=
ದಶರ ಋಣ ಮೇಧಾದಿಗಳು ಮಾಡೆ
ಆಸುಸಂಬಂಧಿಗಳ ಋಣ ಗೃಹಸ್ತಾಶ್ರಮದಲಿ
ಪುಸಿಯಲ್ಲ ತಿದ್ದಿ ಹೋಗುವುದು ಸಿದ್ಧ
ವಸುಧೆಯೊಳಗೆ ಒಂದು ಕಾಸು ಕೊಟ್ಟವನ ಋಣ
ವಸುಧೆಯೆಲ್ಲ ತಿರುಗೆ ಪೋಗದಯ್ಯ
ಪಶುಪಾಲ ಅವ್ಯಯಾತ್ಮ ವಿಜಯವಿಠಲ ರಂಗ
ಬಸುರೊಳು ಪೊಗಲಿಟ್ಟು ಬೆಸಸದೆ ಬಿಡದಯ್ಯ ||

$$$$$$$$$$$

 

 

Sumadhwa Seva © 2022