Naivedya haadu

 

ನೈವೇದ್ಯ ಸಮಯದಲ್ಲಿ ಹಾಡತಕ್ಕಂತಹ ಹಾಡು.

 

ಪ್ರಾತ: ಸ್ಮರಣೀಯ ಶ್ರೀ ಗೋಪಾಲದಾಸರ ಕೃತಿ.

ನೈವೇದ್ಯ ಸಮಯದಲ್ಲಿ ಹಾಡತಕ್ಕಂತಹ ಹಾಡು.

ಅವರ ಆರಾಧನೆ ನಿಮಿತ್ತ ಗಾಯಕ
ಶ್ರೀ ಗುರುಪ್ರಸಾದ್ ಹಾಡಿರುವುದು

 

ಏಳು ಆರೋಗಣೆಗೆ ಯಾಕೆ ತಡವೊ || ಪ ||
ಆಲಸ್ಯಮಾಡದಲೆ ಮೂಲರಾಮಚಂದ್ರ || ಅ.ಪ.||
ಕುಡಿ ಬಾಳಿದೆಲೆ ಹಾಕಿ | ಸಡಗರದಿಂದ ಎಡೆಮಾಡಿ
ಮಣೆ ಹಾಕಿ ಮುತ್ತಿನ ಸಮೆಗಳಿಟ್ಟು ||
ಮುಡಿಸಿ ದೀಪಗಳು ಹಚ್ಚಿ ಉದಕ ರಂಗೋಲಿ ಹಾಕಿ (ಉಡುತರ೦ಗೋಲ್ಹಾಕಿ)
ಬಡಿಸಲು ಶ್ರೀದೇವಿ ಬಂದು ನಿಂತಿಹಳೋ || 1 ||

ಪುಡಿ ಉಪ್ಪು ಚಟ್ನಿ | ಕೋಸಂಬರಿ ಉಪ್ಪಿನಕಾಯಿ |
ಪಡವಲಕಾಯಿಯೋ | ಚವಳೀಕಾಯಿಯೋ ||
ಅಡವಿಗುಳ್ಳದ ಪಳದ್ಯಾ | ಅ೦ಬೋಡಿಗತಿರಸವು |
ಬಡಿಸಲು ಶ್ರೀದೇವಿ ಬಂದು ನಿಂತಿಹಳೋ || 2 ||

ಏಣ್ಣೋವಿಗತರಸವು | ಸಣ್ಣ ಶ್ಯಾವಿಗೆ ಫೇಣಿ |
ಅನ್ನ ದಧ್ಯಾನ ಕ್ಷೀರಾನ್ನಗಳನು ||
ಬೆಣ್ಣೆ ದೋಸೆ ಹುಗ್ಗಿ | ಕಾಯ್ದಾಲು | ಬಡಿಸಲು
ಬಣ್ಣಿಸಿ ಶ್ರೀದೇವಿ ಬಂದು ನಿಂತಿಹಳೋ || 3 ||

ಗಂಧ ಕಸ್ತೂರಿ ಪುನುಗು | ಕರ್ಪೂರದಾ ವೀಳ್ಯೆಯನು |
ಚೆಂದಾಗಿ ಮಡಿಚಿ | ಕೈಯಲಿ ಹಿಡಿದುಕೊಂಡು ||
ದುಂಡು ಮಲ್ಲಿಗೆ ಮಾಲೆ | ಅಂದವಾಗಿ ಕಟ್ಟಿ |
ರಮೆ ಜಾನಕಿದೇವಿ ಹಿಡಿದು ನಿಂತಿಹಳೋ || 4 ||

ನಿತ್ಯತೃಪ್ತನು ನೀನು | ನಿನ್ನುದುರದೂಳಗಿಹಾ |
ಉತ್ತಮಾ ಪುರುಷರು | ಉಣಲಿ ಏಳೋ
ಮುಕ್ತಿದಾಯಕ ನಮ್ಮ ಗೋಪಾಲವಿಠಲಾ |
ಭಕ್ತರಬಿನ್ನಪವ | ನೀ ಕೇಳಿ ಬಾರೋ || 5 ||

Leave a Reply

Your email address will not be published.

Sumadhwa Seva © 2022