ಜಯವದೆ ಮನೆತನಕೆ

Sri Purandaradasaru has composed a song in the form of a folk song or budabudike song –

ಜಯವದೆ ಜಯವದೆ ಮನೆತನಕೆ
ಬಿಡುಬಿಡು ಬಿಡುಬಿಡು ಮನ ಸಂಶಯವ |
ಶುಕನೆಂಬಕ್ಕಿ ಹೇಳುತದಪ್ಪ | ಜಗವೆಂಬೋ ಗಿಡ ಹುಟ್ಟೈತಣ್ಣ |
ಹಣ್ಣುಗಳೆರಡು ಐದಾವಪ್ಪ | ಮೂರು ಬುಡದ ಗಿಡ ಕೇಳಣ್ಣ |
ಹಣ್ಣಿನ ಒಳಗೆ ನಾಲ್ಕು ರಸವು | ಐದು ದೊಡ್ಡ ಹರೆ ಕಾಣಪ್ಪ |
ಆರು ಬಗೆಯ ಸ್ವರೂಪ ಕೇಳು | ಏಳು ಬಗೆಯ ತೊಗಟುಂಬಣ್ಣ |
ಸಣ್ಣಗರಿಗಳು ಎಂಟೈದಾವೆ | ಅಕ್ಷವು ಇದಕೆ ಒಂಭತ್ತೈತೆ |
ಎಲೆಗಳು ಹತ್ತು ಐದಾವಪ್ಪ | ಒಂದೇ ಹಕ್ಕಿ ಹಣ್ತಿಂತೈತಿ |
ಮತ್ತೊಂದ್ ಹಕ್ಕಿ ನೋಡುತದಪ್ಪ | ಹಣ್ತಿಂದ್ ಹಕ್ಕಿ ಬಡವಾಗೈತೆ |
ತಿನ್ನದ ಹಕ್ಕಿ ಬಲಿತೈತಣ್ಣ | ಸುಳ್ಳಲ್ಲ ನೀ ಕೇಳೊ ತಮ್ಮ |
ದ್ವಾಸುಪರ್ಣ ಶೃತಿಯಲ್ಲೈತೆ | ಒಂದೇ ಕುಲದ ಹಕ್ಕಲ್ಲಣ್ಣ |
ಒಂದೇ ಕುಲವೆಂದು ತಿಳಿಯ ಬೇಡ | ತಿಳಿದರೆ ನಿಮಗೆ ಕೇಡಾದೀತು |
ಹಳೇ ವಸ್ತ್ರವ ಬಿಸಾಡಣ್ಣ | ಹೊಸಾ ವಸ್ತ್ರವ ದೇವರು ಕೊಟ್ಟಾನು |
ಹಕ್ಕಿಯ ಅರಸ ಆಡಿದ ಮಾತು | ಉತ್ತಮ ಮಾರ್ಗ ಹಿಡಿಯೋ ತಮ್ಮ |
ಮಾರ್ಗವ ಕಟ್ಟಿ ಸುಲಿಯುತ್ತಾರೆ | ಗಿರಿದುರ್ಗಂಗಳು ಐದಾವಪ್ಪ |
ಮಾರನೆಂಬ ಕಳ್ಳ ಐದಾನಪ್ಪ | ಸಮೀರನಾದರೆ ಹೊರಟ್ ಹೋಗ್ತಾನೆ |
ಪುರಂದರನಾದರೆ ಬಿಡುವೋನಲ್ಲ | ಸುರಜ್ಯೇಷ್ಠನ ಸಂಗತಿ ಹಿಡಿಯೋ ತಮ್ಮ |
ಕಣ್ಣು ಮೂಗು ಕಿವಿ ನಾಲಿಗೆಯಪ್ಪ | ಒಂದೊಂದೊಬ್ಬರೆ ಕೊಂದಾವಣ್ಣ |
ಕುರಂಗ ಮಾತಂಗ ಪತಂಗ ಕೇಳೋ | ಭೃಂಗಾ ಮೀನಾ ಹತವಾದ್ವಣ್ಣ |
ಜ್ಞಾನ ಭಕ್ತಿ ಎಂಬ ಮಾರ್ಗವು ಎರಡು | ದೊಡ್ಡ ಮಾರ್ಗವ ಹಿಡಿಬೇಕಣ್ಣ |
ದೊಡ್ಡ ಸಂಗತಿ ಬರುವೋ ತನಕ ಎರಡೂ ಮನೆಯಲ್ಲಿರಬೇಕಣ್ಣ |
ದಾನಕ ಕೈಯ ತೋರಿಸಬೇಕು | ಅದರಿಂದ ನದಿಯ ದಾಟುವೆಯಪ್ಪ |
ನಿನ್ನ ಯೋಗ್ಯತೆ ತಿಳಿದಾ ಮೇಲೆ ಪುರಂದರ ವಿಠಲ ಸ್ಥಳ ಕೊಟ್ಟಾನು ||

जयवदॆ जयवदॆ मनॆतनकॆ बिडुबिडु बिडुबिडु मन संशयव ।
शुकनॆंबक्कि हेळुतदप्प ।  जगवॆंबो गिड हुट्टैतण्ण ।
हण्णुगळॆरडु ऐदावप्प । मूरु बुडद गिड केळण्ण ।
हण्णिन ऒळगॆ नाल्कु रसवु । ऐदु दॊड्ड हरॆ काणप्प ।
आरु बगॆय स्वरूप केळु । एळु बगॆय तॊगटुंबण्ण ।
सण्णगरिगळु ऎंटैदावॆ । अक्षवु इदकॆ ऒंभत्तैतॆ ।
ऎलॆगळु हत्तु ऐदावप्प । ऒंदे हक्कि हण्तिंतैति ।
मत्तॊंद् हक्कि नोडुतदप्प । हण्तिंद् हक्कि बडवागैतॆ ।
तिन्नद हक्कि बलितैतण्ण । सुळ्ळल्ल नी केळॊ तम्म ।
द्वासुपर्ण शृतियल्लैतॆ । ऒंदे कुलद हक्कल्लण्ण ।
ऒंदे कुलवॆंदु तिळिय बेड । तिळिदरॆ निमगॆ केडादीतु ।
हळे वस्त्रव बिसाडण्ण । हॊसा वस्त्रव देवरु कॊट्टानु ।
हक्किय अरस आडिद मातु । उत्तम मार्ग हिडियो तम्म ।
मार्गव कट्टि सुलियुत्तारॆ । गिरिदुर्गंगळु ऐदावप्प ।
मारनॆंब कळ्ळ ऐदानप्प । समीरनादरॆ हॊरट् होग्तानॆ ।
पुरंदरनादरॆ बिडुवोनल्ल । सुरज्येष्ठन संगति हिडियो तम्म ।
कण्णु मूगु किवि नालिगॆयप्प । ऒंदॊंदॊब्बरॆ कॊंदावण्ण ।
कुरंग मातंग पतंग केळो । भृंगा मीना हतवाद्वण्ण ।
ज्ञान भक्ति ऎंब मार्गवु ऎरडु । दॊड्ड मार्गव हिडिबेकण्ण ।
दॊड्ड संगति बरुवो तनक ऎरडू मनॆयल्लिरबेकण्ण ।
दानक कैय तोरिसबेकु । अदरिंद नदिय दाटुवॆयप्प ।
निन्न योग्यतॆ तिळिदा मेलॆ पुरंदर विठल स्थळ कॊट्टानु ।

 

Leave a Reply

Your email address will not be published.

Sumadhwa Seva © 2022