PrasannaVenkataDasaru

Srinivasa, Bhoodevi And Sridevi – Vigrahaas pooja done by Sri Prasanna Venkata Dasaru

Tamburi used by Sri Prasanna Venkata Dasaru

                               ಶ್ರೀ ಪ್ರಸನ್ನ ವೆಂಕಟದಾಸರು ಉಪಯೋಗಿಸುತ್ತಿದ್ದ ಗೋಪಾಲಬುಟ್ಟಿ

 

ಶ್ರೀ ಶಾತ್ಪ್ರಾಪ್ತ ಸುವಿಜ್ಞಾನಂ ಶ್ರೀಶೈಕ ನಿರತಂ ಸದಾ |
ಪ್ರಸನ್ನ ವೇಂಕಟಾರ್ಯೋಮೇ ಭೂಯಾತ್ ಸರ್ವಾರ್ಥ ಸಿದ್ಧಯೇ |
श्री शात्प्राप्त सुविज्ञानम् श्रीशैक निरतं सदा ।
प्रसन्न वेंकटार्योमे भूयात् सर्वार्थ सिद्धये ।
ಹೆಸರು – ಕಾಖಂಡಕಿ ವೆಂಕಪ್ಪ (ವೆಂಕಟೇಶ)
ಕಾಲ –  1680-1752 AD
ಪುಣ್ಯದಿನ – ಭಾದ್ರಪದ ಶುದ್ಧ ದ್ವಾದಶಿ
ತಂದೆ ತಾಯಿ – ಲಕ್ಷ್ಮೀಬಾಯಿ ಮತ್ತು ಕಾಕಂಡಕಿ ನರಸಪ್ಪಯ್ಯ
ಸ್ಥಳ – ಬಾದಾಮಿ, ಬಾಗಲಕೋಟೆ
ಗೋತ್ರ – ಕಾಶ್ಯಪ
ಗುರುಗಳು – ಮುದ್ಗಲ ಜನಾರ್ದನಚಾರ್ಯರು
ಅಂಕಿತ – *ಪ್ರಸನ್ನ ವೆಂಕಟ*  ಅಥವಾ *ಪ್ರಸನ್ನ ವೆಂಕಟಕೃಷ್ಣ*.
ಒಮ್ಮೆ ಸ್ವಾಮಿ ಪುಷ್ಕರಿಣಿತೀರ್ಥದಲ್ಲಿ ಸ್ನಾನಗೈದು , ಶ್ರೀ ಹರಿಯನ್ನು ಸ್ತುತಿಸುತ್ತಿದ್ದಾಗ “ಪ್ರಸನ್ನವೆಂಕಟ” ಮುದ್ರಿಕೆಯನ್ನು ಶ್ರೀಹರಿಯೇ ಸ್ವಪ್ನಗೋಚರನಾಗಿ ಅವರ ನಾಲಿಗೆಯಲ್ಲಿ ಬರೆದನಂತೆ.

 

ಬಾಗಲಕೋಟೆಯ ಶ್ರೀಪ್ರಸನ್ನ ವೇಂಕಟದಾಸರು. ಬಾಲ್ಯದಲ್ಲಿಯೇ ತಂದೆ,ತಾಯಿಯ ಪ್ರೇಮದಿಂದ ವಂಚಿತರಾಗಿ,  ಸಹೋದರನ ಆಶ್ರಯದಲ್ಲಿ ತಮ್ಮ ಜೀವನವನ್ನು ಸಾಗಿಸಿದ ವೆಂಕಣ್ಣ, ಅತ್ತಿಗೆಯ ಅನಾದರದಿಂದ, ಮಜ್ಜಿಗೆಯೂ ದೊರೆಯದೆ ಮನನೊಂದು ತಿರುಪತಿ ಶ್ರೀನಿವಾಸನ  ಯಾತ್ರಿಗಳೊಡನೆ ತೆರಳಿದರು. ಅಲ್ಲಿ ಶ್ರೀನಿವಾಸನು   ಪ್ರಸನ್ನನಾಗಿ ಅನುಗ್ರಹಿಸಿದ ಫಲವಾಗಿ ಪ್ರಸನ್ನ ವೇಂಕಟದಾಸರಾದರು.
. ‘. ‘ಶ್ರೀಕೃಷ್ಣನ ಬಾಲಲೀಲೆಗಳನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ.
‘ತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೇ ನೀನು’, ‘
ಹಕ್ಕಿಯ ಹೆಗಲೇರಿ ಬಂದವಗೆ’, ‘
*ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ*
 ‘ಬಿಡೆನೋ ನಿನ್ನಂಘ್ರಿ ಶ್ರೀನಿವಾಸ’,
‘ಎಂದು ಕಾಂಬುವೆ ಎನ್ನ ಸಲಹುವ ತಂದೆ ಉಡುಪಿಯ ಜಾಣನ’
“ಏನು ಕಾರಣ ಮರೆತೆ ಎಲೆ ಉಡುಪಿ ನಿಲಯ’ – ನಿಂದಾ ಸ್ತುತಿ

 

*ಅಂಗಾರದ ಆಚಾರ್ಯರು* – ಶ್ರೀ ಪ್ರಸನ್ನ ವೆಂಕಟದಾಸರು ಒಮ್ಮೆ ಊರಿಂದೂರಿಗೆ ಪ್ರಯಾಣಿಸುವಾಗ ಎದುರಾದ ಹುಲಿಯ ಮೈ ಚಪ್ಪರಿಸಿ ಅದರ ಮೇಲೆ ದೇವರ ಪೆಟ್ಟಿಗೆಯಿಟ್ಟು ತಮ್ಮ ಜೊತೆಗೇ ಊರು ತಲುಪುವವರೆಗೂ ಕರೆದೊಯ್ಯುತ್ತಿದ್ದರಂತೆ.  ಅಲ್ಲಿ ಅದಕ್ಕೆ ಅಂಗಾರ ಹಚ್ಚಿ ಯಾವ ಗೋವುಗಳನ್ನೂ ಹಿಂಸಿಸಬೇಡವೆಂದು ಹೇಳು ಕಳಿಸುತ್ತಿದ್ದರಂತೆ.  ಆ ಹುಲಿಗಳು ಎಂದೂ ಗೋವುಗಳ ತಂಟೆಗೆ ಬರುತ್ತಿರಲಿಲ್ಲವಂತೆ.  ಆದ್ದರಿಂದ ಅವರನ್ನು ಅಂಗಾರದ ಆಚಾರ್ಯರು ಎಂದೇ ಕರೆಯುತ್ತಿದ್ದರು.

 

Gurugalu – Mudgal Janardhanacharya – After swapna labda upadesha from Srihari, he studied under Mudgal Janardhanacharya under various aspects.  As a mark of respect to his beloved guru, he has composed many devaranamas on his guru.
Please click the link for devaranamas on his guru.

Contemporaries – Vijayadasaru, Gopaladasaru,

Contributions – More than 400 Keerthanegalu, 20 Ugaboga, 9 Suladigalu and 3 kolu haadu

Some of the krutees by him may be summarised as follows :

  1. “Satyabhaama Vilasa” or “Srikrishna Paarijata” –  It has 51 stanjas
  2. Narayana Panjara – It has 40+ stanzas – comprising of stuti on Srihari
  3. Bedha Muktavali – It is a kolu haadu – praising all the devates taratamyanusaara –  Madhwa matha samarthana kruti
  4. Samastanama Manigana Shatcharana Padyamala – It has 70+ Stanzas – another Haristuti – with more samskruta influence
  5. Narada Koravanji – This is a kruti – wherein Naarada will come as a Koravanji to narrate Rukmini’s birth, Rukmini Kalyana, etc
  6. Bhagavatha – Krishna Charite
  7. Uttaradimutt Guruparampara Kruti – Click the link for MP3 song of the same

ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ
ಗತಿಯುಂಟು ಸಂತತಿ ಸಂಪತ್ತಿಯುಂಟು || ಪ ||

ಶ್ರೀ ಮಧ್ವ ಪದ್ಮನಾಭ ನರಹರಿ ಮಾಧವ
ಆ ಮೌನಿ ಅಕ್ಷೋಭ್ಯ ಜಯರಾಯ
ವಿದ್ಯಾಧಿರಾಜ ಭೂಮಾ ಕವೀಂದ್ರ ವಾಗೀಶರ || ೧ ||

ಮುನಿರಾಮಚಂದ್ರ ವಿದ್ಯಾನಿಧಿ ರಘುನಾಥ
ಮಾರನ ಗೆಲಿದ ರಘುವರ್ಯ ರಘೋತ್ತಮ
ವೇದವ್ಯಾಸ ಘನ ವಿದ್ಯಾಧೀಶ ವೇದನಿಧಿಗಳ || ೨ ||

ಸತ್ಯವ್ರತ ಸತ್ಯನಿಧಿ ಸತ್ಯನಾಥ ಅನುಪಮ
ಸತ್ಯಾಭಿನವ (ಗುರು) ಕರಪದ್ಮಜ
ನಮ್ಮ ಗುರು ಸತ್ಯಪೂರ್ಣ ಪ್ರಸನ್ವೇಂಕಟಾ ಪ್ರಿಯರ || ೩||

For Devaranamas & other details : CLICK HERE

For Devaranamas on his gurugalu – Click here

Bideno ninnanghri Srinivasa –  Even Today, Mettilotsava Function and many Dasa Sahitya functions at various Places in India ends with his Bideno Ninnanghri Shreenivasa Kruti.

 

ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ನನ್ನ
ದುಡಿಸಿಕೊಳ್ಳೆಲೋ ಶ್ರೀನಿವಾಸ ನಿ-
ನ್ನುಡಿಯ ಜೀತಲ್ಲೋ ಶ್ರೀನಿವಾಸ ನನ್ನ
ನಡೆ ತಪ್ಪು ಕಾಯೋ ಶ್ರೀನಿವಾಸ   | ಪ |
ಬಡಿಯೋ ಬೆನ್ನಲಿ ಶ್ರೀನಿವಾಸ ನ-
ನ್ನೊಡಲ ಹೊಯ್ಯದಿರೋ ಶ್ರೀನಿವಾಸ ನಾ
ಬಡವ ಕಾಣೆಲೋ ಶ್ರೀನಿವಾಸ ನಿ
ನ್ನೊಡಲ ಹೊಕ್ಕೆನೋ ಶ್ರೀನಿವಾಸ   | ೧ |
ಪಂಜುಹಿಡಿವೆನೊ ಶ್ರೀನಿವಾಸ ನಿ
ನ್ನೆಂಜಲ ಬಳಿದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ
ಳಂಜಿಯ ಪಿಡಿವೆನೋ ಶ್ರೀನಿವಾಸ | ೨ |
ಸತ್ತಿಗೆ ಚಾಮರ ಶ್ರೀನಿವಾಸ ನಾ
ನೆತ್ತಿ ಕುಣಿವೆನೋ ಶ್ರೀನಿವಾಸ ನಿನ್ನ
ತತ್ತುನ ಹಾವಿಗೆ ಶ್ರೀನಿವಾಸ ನಾ
ಹೊತ್ತು ನಲಿವೆನೋ ಶ್ರೀನಿವಾಸ | ೩ |
ಹೆಳಿದಂತಾಲಿಹೆ ಶ್ರೀನಿವಾಸ ನಿ
ನ್ನಾಳಿಗಾಳಾಗಿಹೆ ಶ್ರೀನಿವಾಸ ಅವ
ರೂಳಿಗವ ಮಾಳ್ಪೆ ಶ್ರೀನಿವಾಸ ನನ್ನ
ಪಾಲಿಸೋ ಬಿಡದೆ ಶ್ರೀನಿವಾಸ | ೪ |
ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳ
ಕುನ್ನಿ ನಾನಾಗಿಹೆ ಶ್ರೀನಿವಾಸ ಕಟ್ಟಿ
ನಿನ್ನವರೊದ್ದರೆ ಶ್ರೀನಿವಾಸ ನನ
ಗಿನ್ನು ಲಜ್ಜ್ಯಾತಕೆ ಶ್ರೀನಿವಾಸ | ೫ |
ಬೀಸಿ ಕೊಲ್ಲಲವರೆ ಶ್ರೀನಿವಾಸ ಮುದ್ರೆ
ಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕ
ಘಾಸಿ ಗಂಜೆನಯ್ಯ ಶ್ರೀನಿವಾಸ ಎಂಜ
ಲಾಸೆಯ ಬಂಟ ನಾ ಶ್ರೀನಿವಾಸ | ೬ |
ಹೇಸಿ ನಾನಾದರೆ ಶ್ರೀನಿವಾಸ ಹರಿ
ದಾಸರೊಳು ಪೊಕ್ಕೆ ಶ್ರೀನಿವಾಸ ಅವರ
ಭಾಸೆಯ ಕೇಳಿಹೆ ಶ್ರೀನಿವಾಸ ಆ
ವಾಶೆಯ ಸೈರಿಸೊ ಶ್ರೀನಿವಾಸ | ೭ |
ತಿಂಗಳವನಲ್ಲ ಶ್ರೀನಿವಾಸ ವತ್ಸ
ರಂಗಳವನಲ್ಲೋ ಶ್ರೀನಿವಾಸ ರಾ
ಜಂಗಳ ಸವಡಿಪೆ ಶ್ರೀನಿವಾಸ ಭ
ವಂಗಳ ದಾಟುವೆ ಶ್ರೀನಿವಾಸ | ೮ |
ನಿನ್ನವ ನಿನ್ನವ ಶ್ರೀನಿವಾಸ ನಾ
ನನ್ಯವನರಿಯೆನೊ ಶ್ರೀನಿವಾಸ ಅಯ್ಯಾ
ಮನ್ನಿಸೊ ತಾಯ್ತಂದೆ ಶ್ರೀನಿವಾಸ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ | ೯ |

Click –  http://www.prasannavenkatadasaru.org/ for more information on the great Dasaru

 

 

 

1 Comment

Add a Comment
  1. Bideno ninnangri srinivasa is a very powerful song that reverberates in my heart even when when I wake up in the middle of night ! I knew it must have come from a powerful soul to have such a deep effect on me.I struggled hard to know who it was ,and here I realized it was Prasannavenkata dasaru.I live in USA and I listen to this song every day for the last 1m in morning while I drive to work. My interest in bhakti is all from being exposed to my Guru Kalavati Devi from Belgavi from my childhood.My mother tongue is Marathi but I have great interest in all the compositions of all Dasarus.I am from Dharwad. I know Kannada as good as marathi.We are really blessed to be exposed to such great compositions ! Its a wonderful experience cannot be explained in words.

Leave a Reply

Your email address will not be published.

Sumadhwa Seva © 2022