Mahipati Dasaru

ಜಗದ್ಗುರುಂ ಕೃಪಾಸಿಂಧುಂ ಶರಣಾಗತ ವತ್ಸಲಂ
ಭಕ್ತಮಾನಸ ಸಂಚಾರಂ ಮಹೀಪತಿ ಗುರುಂ ಭಜೇ
ಸ್ವಭಕ್ಥಾನುಗ್ರಹಾರ್ಥಾಯ ಸಾಮೀಪ್ಯಾತ್ ಧ್ರುವಮಾಗಥಾನ್
ಮಹೀಪತಿಗುರೂನ್ ವಂದೇ ಸರ್ವವಿದ್ಯಾವಿಶಾರದಾನ್ |

 

जगद्गुरुम् कृपासिंधुम् शरणागत वत्सलम्
भक्तमानस संचारं महीपति गुरुं भजे
स्वभक्थानुग्रहार्थाय सामीप्यात् ध्रुवमागथान्
महीपतिगुरून् वंदे सर्वविद्याविशारदान् ।

Aradhana – Karthika Bahula Amavasye

Click for Upanyasa on Mahipathi Dasaru by Bannanje Govindacharya

ಕಾಲ – 1611 – 1681
ವಂಶ  ಕಥವಾಟೆ
ಗುರುಗಳು – ಕೊಲ್ಹಾರ ಪ್ರಹ್ಲಾದ ಕೃಷ್ಣಾಚಾರ್ಯ
ತಂದೆ – ಕೊನೇರಿರಾಯರು
ವೃತ್ತಿ – ನವಾಬರ ಬಳಿ ಲೆಕ್ಕಿಗನಾಗಿ ಸ್ವಲ್ಪ ಕಾಲ
ತಿಳಿದ ಭಾಷೆಗಳು – ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ಉರ್ದು ಮತ್ತು ಪಾರ್ಸಿ
ವ್ಯವಹಾರ ನಾಮ – ಮಹಿಪತಿ ರಾಯರು – ಮಹಿಪತಿ ದಾಸರು
ಅಂಕಿತ – ಮಹಿಪತಿ
ಸ್ಥಳ – ಕಾಖಂಡಕಿ

 

For devaranama – click here

Hrudaya Shuddavagade – click

ಮಹಿಪತಿದಾಸರ ಕೋಲು ಕೋಲೆನ್ನ ಕೋಲೆ –  Kolu kolenna kole song by Mahipathi Dasaru – Click 

This place is famous for Shri. Mahipati Rayara Vrundaavana and the Aaradhane festival happens on Chchatti Amavasya of every year.
Upanyaasa in Urdu –  Once Sri Mahipathi Dasaru was rendering upanyasa in a Nrusimha Temple in Vijapur.    Hundreds of people were listening to his pravachana.  At that time a minister of Adilshaha by name Khavaas Khan heard about the pravachana of Dasaru and requested him to come to his house and render the upanyasa, which the Dasaru readily agreed and did the pravachana in his house also in Urdu and Parsi language.    It delighted all the Muslims as well.

========================================================

ಮಹಿಪತಿದಾಸರ ವೃಂದಾವನ ಆದಂಥ ವಿಷಯ :  (ಸಂಗ್ರಹ – ಪವನ್ ಹರಿದಾಸ್)
ಮಹಿಪತಿದಾಸರಿಗೆ ತಮ್ಮ ಅವಸಾನ ಕಾಲ ಸಮೀಪವಾಗಿದೆಯೆಂದು ತಿಳಿಯಿತು. ಆಗ ಕುಲಗುರುಗಳಾದ ಕೊಲ್ಹಾರದ ಕೃಷ್ಣಾಚಾರ್ಯರನ್ನು ನೋಡಬೇಕೆಂಬ ಆಸೆಯಾಯಿತು. ಅವರು ಈ ವಿಷಯವನ್ನು ತಮ್ಮ ಹಿರಿಯ ಮಗನಾದ ದೇವರಾಯನಿಗೆ ಕೃಷ್ಣರಾಯರಿಂದ ಸುದ್ಡಿ ಕಳಿಸಿ, ತಾವು  ಕೃಷ್ಣರಾಯರಿಂದ ಕೂಡಿಕೊಂಡು ಕೊಲ್ಹಾರಕ್ಕೆ ತೆರಳಿ  ಅಲ್ಲಿ  6 ದಿನಗಳಿದ್ದು   ಸರಿಯಾಗಿ 7ನೆ ದಿನ  ಪ್ರಾಪ್ತಿಯಾಗಲು ಕೃಷ್ಣಾನದಿ ಸ್ನಾನ ಮಾಡಿಕೊಂಡು ಅನುಷ್ಟಾನಕ್ಕೆ ಕುಳಿತವರೇ ತಮ್ಮ ದೇಹತ್ಯಾಗವನ್ನು ಮಾಡಿದರು.
ಪುತ್ರದ್ವಯರಿಬ್ಬರು ಉತ್ತರಕ್ರಿಯೆಗಳನ್ನು  ಮುಗಿಸಿ  ಅಸ್ತಿಸಂಚಯನ ಮಾಡುತ್ತಿದ್ದಾಗ ಕೈಯಲ್ಲಿ ಹಿಡಿದ ಅಸ್ಥಿಗಳು ನೀರಾಗಿ ಹೋದವು. ಮತ್ತು ಅಶರೀರ ವಾಣಿಯಾಯಿತಂತೆ “ಮಗು ಚಿಂತಿಸಬೇಡ ಇವುಗಳು ಗಂಗೆಯಲ್ಲಿ  ವಿಸರ್ಜನಗೊಂಡಿವೆ” ಎಂದು ಹೇಳಿದರಂತೆ.  ನಂತರ ಕೃಷ್ಣರಾಯರಿಗೆ  ಸಮಾಧಾನವಾಗದಿದ್ದುದನ್ನು ತಿಳಿದು ಮುಂದುವರೆಸಿ , ನಾನು ಕಾಖಂಡಕಿಯಲ್ಲಿ ಅನುಷ್ಥಾನಕ್ಕೆ ಕುಳಿತುಕೊಳ್ಳುತ್ತಿದ್ದ ಶಮೀವೃಕ್ಷದ ಕೆಳಗೆ ಹನ್ನೆರಡು ಸಾಲಿಗ್ರಾಮಗಳಿವೆ ಅವುಗಳನ್ನು ತೆಗೆದು ಅದೇ ಜಾಗದಲ್ಲಿ ನನ್ನ ವೃಂದಾವನವನ್ನು ನಿರ್ಮಿಸು ಎಂದು ಹೇಳಿದರಂತೆ.
ಈಗಿರುವ ವೃಂದಾವನವು ಒಂದು ಕ್ಷೇತ್ರ ಶಾಲಿಗ್ರಮಗಳ ಸನ್ನಿಧಿಯಿರುವಂತಾಗಿದೆ.  ತಂದೆಯ ಆಜ್ಞೆಯಂತೆಯೇ  ಕಾಖಂಡಕಿಗೆ ಬಂದು ಅವರು ಅನುಷ್ಠಾನ  ಮಾಡುತ್ತಿದ್ದ ಹೊಲದಲ್ಲಿ ಬಂದು ವೃಂದಾವನ ನಿರ್ಮಿಸಬೇಕೆನ್ನುತ್ತಿರುವಾಗ ಹೊಲದ ಮಾಲೀಕನಾದ ಗೌಡನು ಅದಕ್ಕೆ ಒಪ್ಪಲಿಲ್ಲ. ಚಿಂತಾಕ್ರಾಂತರಾಗಿ ಕೃಷ್ಣರಾಯರು ಅಲ್ಲಿಯೇ ನಿಂತಾಗ ಸೇವಕನೊಬ್ಬ ಓಡಿಬಂದು ಗೌಡನ ಪುತ್ರನು ತೀರಿಕೊಂಡ ವಿಷಯ ತಿಳಿಸಿದ.  ದುಖಿತನಾದ ಗೌಡನು ನಿಮ್ಮ ತಂದೆಯು ಮೊರದೆಪ್ಪನ  ಹೆಂಡತಿಯನ್ನು  ಬದುಕಿಸಿದಂತೆ,  ನೀವು ನನ್ನ  ಮಗನನ್ನು ಬದುಕಿಸಿ ಎಂದು ಹೇಳಿದರು ರಾಯರು, ನನ್ನ ತಂದೆ ಪವಾಡಗಳನ್ನು ಮಾಡಬೇಡ ಎಂದು ಆಜ್ಞೆ  ನೀಡಿದ್ದಾರೆ. ಆದ್ದರಿಂದ ನಾನು ಬದುಕಿಸಲಾರೆ, ಇನ್ನು ನಾಲ್ಕು ತಲೆಮಾರು ದತ್ತುಪುತ್ರರಿಂದಲೇ ವಂಶ ಬೆಳೆದು ನಂತರ ನಿಮ್ಮ ಸಂತತಿಯಿಂದಲೇ ವೃದ್ಧಿಯಾಗುತ್ತದೆಂದು, ಸಂಪತ್ಭರಿತ ಜೀವನ ನಡೆಸುವಿರೆಂದು, ದಾಸರ ಸೇವೆ ಮಾಡುವಂತೆ  ತಿಳಿಸಿದರು. ಅವನ ಹೊಲವನ್ನು ದಾಸರಿಗೆನೀಡಿದ ಗೌಡರ ಮನೆತನ ಇಂದಿಗೂ ಆರಾಧನೆ ಸಮಯದಲ್ಲಿ ತುಂಬಾ ಸೇವೆ ಗೈಯುತ್ತಾರೆ. ಈಗ ವೃಂದಾವನವು ಅದೇ ಹೊಲದಲ್ಲಿ ಪ್ರತಿಷ್ಥಾಪನೆಗೊಂಡಿದೆ.  ವೃಂದಾವನ ಸಾನ್ನಿಧ್ಯ ಸಾಕ್ಷಿಗಾಗಿ ಒಮ್ಮೆ ಕೃಷ್ಣರಾಯರು “ವೃಂದಾವನೀದೇವಿ ತಂದೆ ಮಹೀಪತಿಯ ಪಾದವ ತೋರೆ” ಎಂದು ಹಾಡಲು ಸಾಕ್ಷಾತ್ ಮಹಿಪತಿರಾಯರು ವೃಂದಾವನದಿಂದ ತಮ್ಮ ಪಾದುಕೆಗಳನ್ನು ನೀಡಿದ್ದಾರೆ. ಅವುಗಳು ಇಂದಿಗೂ ಪೂಜೆಗೊಳ್ಳುತ್ತಿವೆ.
 

2 Comments

Add a Comment
  1. Namo Narayana…

    Kindly translate the above article either in English or Tamil language whichever is convenient for you. Even in future if you try to add any article on Sri Sri Sri Mahipathi Dasaru’s life history and his works too i request you to do that also in above said language so that it will be very useful for hundred and hundred of devotees who read and log in from in and around Tamil Nadu.

    This is my humble request…Thanks in advance…

    Hare Srinivasa…

    Lavanya Rajkumar

  2. T B Srinivasa Rao

    I understand that my ancestors came from Pachchapur in Belgaum district of Karnataka. We now live in Bangalore. My grandfather’s ( Died sometime around 1915 ) grandfather name is Krishnaraya and his father’s name is Devaraya. Could it likely that we hail from the family of Mahipatidasaru? Our Gotra is Atreyasa. Please throw some light on this.

Leave a Reply

Your email address will not be published.

Sumadhwa Seva © 2022