Kanaka Dasaru

“Kanakadaasaru”

 

यमांशस्य पराभक्त्या सुप्रसन्नो हरि: स्वयं।
यस्याचार्यो व्यासराय: तं वंदे कनकाभिधं।
ಯಮಾಂಶಸ್ಯ ಪರಾಭಕ್ತ್ಯಾ ಸುಪ್ರಸನ್ನೋ ಹರಿ: ಸ್ವಯಂ|
ಯಸ್ಯಾಚಾರ್ಯೋ ವ್ಯಾಸರಾಯ: ತಂ ವಂದೇ ಕನಕಾಭಿಧಂ|
யமாம்ஶஸ்ய பராபக்த்யா ஸுப்ரஸந்நோ ஹரி: ஸ்வயம்|
யஸ்யாசார்யோ வ்யாஸராய: தம் வம்தே கநகாபிதம்|
యమాంశస్య పరాభక్త్యా సుప్రసన్నో హరి: స్వయం|
యస్యాచార్యో వ్యాసరాయ: తం వందే కనకాభిధం|

 

Part 1 – Devaranamagalu – click

Part 2 – Devaranamagalu – click

Part 3 – Mundigegalu – click

Kanakadasaru was a Harisarvottamatva pratipaadaka – 

Kanakadasa stamp 

Even the stamp contains Vaishnava symbol on Kanakadasaru.

Part 4 – Kanakadasaru & Harisarvottamatva – Click

Part 5 – Harisarvottamatva stapane songs by Kanakadasaru – Click

(Drawing by Vaidya Srinivas)

ಜನ್ಮನಾಮ – ತಿಮ್ಮಪ್ಪ ನಾಯಕ ಆದರೆ ಕನಕಪ್ಪ ನಾಯಕ ಎಂದು ಪ್ರಸಿದ್ಧಿ.

ಅಂಕಿತ – ಬಾಡದಾದಿ ಕೇಶವ / ಕಾಗಿನೆಲೆ ಆದಿಕೇಶವ

ಜನ್ಮದಿನ – ಕಾರ್ತೀಕ ಬಹುಳ ತೃತೀಯ

ಕಾಲ – 1508 – 1606

ಆಶ್ರಯ ನೀಡಿದವರು – ಶ್ರೀ ವ್ಯಾಸರಾಯರು

ಜನ್ಮಸ್ಥಳ – ಬಾಡ

ನಿರ್ಯಾಣ ಸ್ಥಳ – ಕಾಗಿನೆಲೆ

ಕನಕದಾಸರು ಜನ್ಮತಃ ಕುರುಬನಾಗಿ ಜನಿಸಿದರೂ ಶ್ರೀ ವ್ಯಾಸರಾಯರ ಆಶ್ರಯದಿಂದ ಹರಿದಾಸರೆಂದೇ ಪ್ರಸಿದ್ದಿ ಪಡೆದರು.

ಸಮಕಾಲೀನರು – ಶ್ರೀ ವ್ಯಾಸರಾಯರು, ಶ್ರೀ ವಾದಿರಾಜರು, ಶ್ರೀ ಕೃಷ್ಣದೇವರಾಯ, ಪುರಂದರದಾಸರು, ವೈಕುಂಠದಾಸರು.

ತಿಮ್ಮಪ್ಪನಾಯಕ ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯಿಂದಲೇ ಪೋಷಿಸಲ್ಪಟ್ಟು, ಕತ್ತಿವರಸೆ, ಬೇಟೆ, ಇತ್ಯಾದಿ ಕಲಿತು ಪಾಳೇಗಾರರಾಗಿದ್ದರು.  ವಿಜಯನಗರ ರಾಜರ ಪರವಾಗಿ ತೆರಿಗೆ ಸಂಗ್ರಹ ಮಾಡುತ್ತಿದ್ದರು.

ಒಮ್ಮೆ ಭೂಮಿಯನ್ನು ಅಗೆದಾಗ ಇವರಿಗೆ ಭಾರೀ ನಿಧಿ ಸಿಕ್ಕಿತು.  ಅದರಿಂದ ತಿಮ್ಮಪ್ಪ ಕನಕಪ್ಪನಾದ.  ಕಾಗಿನೆಲೆಯಲ್ಲಿ ಕೇಶವನ ದೇವಸ್ಥಾನ ಕಟ್ಟಿಸಿದರು.  ಉಳಿದ ಹಣವನ್ನು ದಾನ ಮಾಡುತ್ತಿದ್ದರು.   ಆದರೂ ಕೂಡ ವಿಜಯನಗರ ರಾಜ್ಯದ ಕೆಲಸ ಮಾಡುತ್ತಿದ್ದರು.

 

*ಕನಕನ ವೈರಾಗ್ಯ* :. ಕಾಗಿನೆಲೆ ಕೇಶವ ಅವರ ಕನಸ್ಸಿನಲ್ಲಿ ಬಂದು ಹಲವು ಸಾರಿ ದಾಸನಾಗು ಎಂದರೂ ಇವರು ಒಪ್ಪಲಿಲ್ಲ.  ಅವರ ಹೆಂಡತಿ ಮತ್ತು ತಾಯಿ ನಿಧನರಾದರೂ ವೈರಾಗ್ಯ ಬರಲಿಲ್ಲ.  ಒಮ್ಮೆ ತಿಮ್ಮಪ್ಪ ನಾಯಕರು ವಿಜಯನಗರ ಸಾಮ್ರಾಜ್ಯದ ಪರವಾಗಿ ಯುದ್ಧ ಮಾಡುತ್ತಿದ್ದಾಗ,  ಶತ್ರು ಪಡೆಯಿಂದ ಇವರಿಗೆ ಭಾರೀ ಆಘಾತವಾಯಿತು.  ಕತ್ತಿಯೂ ಕೆಳಗೆ ಬಿದ್ದಿತು.  ಬಹಳ ಏಟು ಬಿದ್ದಿದ್ದರಿಂದ ರಕ್ತಸ್ರಾವ ಆಗುತ್ತಿತ್ತು.   ಶತ್ರು ಪಡೆಯುವರು ಸತ್ತಿರಬಹುದೆಂದು ಊಹಿಸಿ ಹೊರಟರು.  ಆಗ ಆದಿ ಕೇಶವನು ಒಬ್ಬ ಸಾಮಾನ್ಯ ಮನುಷ್ಯನಂತೆ ಬಂದು ಅವನ ಆರೈಕೆ ಮಾಡಿ, ತಾನು ಆದಿ ಕೇಶವ ಎಂಬ ವಿಷಯ ತಿಳಿಸುತ್ತಾನೆ.    ನಂತರ ತಿಮ್ಮಪ್ಪ ನಾಯಕರು ಕಾಗಿನೆಲೆಗೆ ಬಂದಾಗ, ಆದಿ ಕೇಶವನು ಅವನ ಕನಸ್ಸಿನಲ್ಲಿ ಬಂದು ನೀನು ವ್ಯಾಸರಾಜರ ಬಳಿ ಹೋಗಿ ದಾಸತ್ವ ದೀಕ್ಷೆ ಪಡೆಯೆನಲು, ಅದರಂತೆ ಹೊರಟ ಅವರು ವ್ಯಾಸಸಮುದ್ರ ನಿರ್ಮಾಣದಲ್ಲಿದ್ದ ಶ್ರೀ ವ್ಯಾಸರಾಯರ ಭೇಟಿಯಾಗಿ ಹರಿದಾಸತ್ವ ಸ್ವೀಕರಿಸಿದರು.

 

ಇವರ ಕೃತಿಗಳು ;

೧. ನಳಚರಿತ್ರೆ – 481 ಪದ್ಯಗಳು ನಳ ದಮಯಂತಿ ಕುರಿತಾದ ಕಥಾ ಚಿತ್ರಣ.

೨. ಹರಿಭಕ್ತಿಸಾರ – 110 ಪದ್ಯಗಳ ಭಾಮಿನೀ ಷಟ್ಪದಿಯ ಹರಿಸರ್ವೋತ್ತಮ ಸಾಧಕ ಕೃತಿ .

೩. ನೃಸಿಂಹಸ್ತವ (not available)

೪. ರಾಮಧಾನ್ಯ ಚರಿತೆ – ಪ್ರಾಮುಖ್ಯತೆಯಲ್ಲಿ  ರಾಗಿ ಹೆಚ್ಚೋ ಅಕ್ಕಿ ಹೆಚ್ಚೋ ಎಂದು ಶ್ರೀರಾಮಚಂದ್ರನ ಮುಂದೆ ಹೋದಾಗ ರಾಮಚಂದ್ರ ರಾಗಿಯೇ ಅಕ್ಕಿಗಿಂತ ಹೆಚ್ಚು ಉಪಯೋಗಿ ಎಂದನಂತೆ.

೫. ಮೋಹಿನ ತರಂಗಿಣಿ – ಸುಮಾರು 42 ಸಂಧಿಗಳಿರುವ  2798 ಪದ್ಯಗಳಿವೆ ಬೃಹತ್ ಶ್ರೀ ಕೃಷ್ಣ ಕಥಾ.  ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ.

೬. ಮುಂಡಿಗೆಗಳು

೭. ದೇವರನಾಮಗಳು 300 +

೮. ತತ್ವಪದಗಳು.

 

ಇವರ ಸಾಹಿತ್ಯ ಬಲು ಕ್ಲಿಷ್ಟ.   ಅದರ ಅಧ್ಯಯನ ಮಾಡಲು ಶಾಸ್ತ್ರದ ಅಧ್ಯಯನ ಬೇಕು.  ಬಹಳ ಅರ್ಥಗರ್ಭಿತ.   ಸಾಮಾನ್ಯರಿಗೆ ಅರ್ಥವೇ ಆಗುವುದಿಲ್ಲ ಅವರ ಪದಲಾಲಿತ್ಯ.

 

 

Janma naama – Timmappa Nayaka –
popularly called as Kanakappa Nayaka

 

Ankitha – Baadadadi keshava / kaginele adikeshava
Birth Day – Kartheeka Krishna Triteeya
Period – 1508 – 1606
Ashraya Gurugalu – Sri Vyasarajaru
Sri Kanakadasaru has written more than 200 devaranamaas.
Birth Place      –  Baada
Niryana place – Kaginele in Haveri District
Birth Caste     –  Kuruba (shepherd)
Sri Kanakadasaru – even though was born as a Kuruba, has been considered not a “daasa” but as a “Haridaasaru”, and is one of the contemporaries of Sri Vyasarajaru, Sri Vadirajaru, Sri Vaikuntadasaru, Sri Purandaradasaru, Sri Krishnadevaraya.

 

Thimmappa Nayaka lost his father early and he was brought up by his mother Bachamma. He learnt wrestling, hunting, sword fighting, later he became paaLayagaara.  He was collecting tax from the people and was remitting to the Vijayanagar Kings.  During war, he used to fight for Vijayanagar kingdom. 
Once when he was digging the land, he got huge wealth.  Out of this he constructed a beautiful temple at Kaginele and got installed Adikeshava murthy there.  He was doing the daana of all his wealth found amongst the poor and the people used to call him as “Kanakappa Nayaka”.

 

Kanaka got vairaagya –   Even though he got the temple built for Adi Keshava, he could not visit the temples frequently as he was busy with his employment with the King and family responsibility  Once in a way, he used to visit the Kaginelle temple.    He continued his daana dharma. Once Adikeshava came in his dream and told him to became his “daasa”, which he ignored.  He was worshipping his mother as god.  After some time, both his mother and wife were dead.    Even this didn’t made him as a daasa.   Srihari again came in his dream and told him to become a daasa, which he again refused.    But Srihari’s sankalpa is different.

 

Once when Vijayanagar Kingdom was fighting with the enemy team, Thimmappa Nayaka also joined Vijayanagar fighters and was fighting fiercely.  During the course of the fight, the enemy troup attacked Kanaka and he was severely hit and blood was also coming out of his body, he lost his sword also.  Then he shouted “Aadi Keshava” and fell.  He lost his consciousness.   The enemy troup on seeing him thought that he is dead and they left.  Then Adikeshava came in the disguise of a man and treated him.  Kanaka Nayaka, gaining his consciousness, on seeing the man enquired about him and he told that he is Adikeshava, and he again advised him to become his daasa.   Now, Kanaka could not refuse Adikeshava’s word and he agreed to become daasa.  He gave all his wealth as daana to the deserving.  He reached Adikeshava temple.  Again Adikeshava came in his dream and advised him to go to Vyasarajaru for accepting Shishyatva. During that time Sri Vyasarajaru was constructing Vyasasamudra in Madanapalli.  Kanaka requested for mantropadesha, which Sri Vyasarajaru gave him after some time.  Thus he got vairagya and came to “daasatva” deekshe.

 

Some incidents – 

The other shishyas could not tolerate the same and they used to trouble Kanaka in one way or the other.    Sri Vyasarajaru wanted to make the other shishyas to understand about the shreshtatva of Kanakadasaru.    One day Vyasarajaru asked all his shishyas as to “Who amongst you will go to moksha”?   Every body were silent.  Vyasarajaru looked at Kanakadasaru for the answer, who said ” ನಾನು ಹೋದರೆ ಹೋದೇನು?”.  (naanu hOdare hOdEnu) – This made the other shishyas angry.   Then Vyasarajaru asked to explain as to what he said.  Kanaka said ” one who loses ahankaara may go go Moksha.  i.e., if the selfish words like I, myself, me words which are part of ahankara are not there, then one may go to Moksha.”  Vyasarajaru who was known of his intentions, made the other shishyas understand about Kanaka and his words.

 

Once when Sri Vyasarajaru asked all his shishyaas to what is there in his handful (mushti).  No one could say.  Then Kanakadasaru told “it is vaasudeva saligrama”.  When Vyasarajaru unfolded his hands, there was vasudeva saligrama.  This incident has been explained by Sri Purandaradasaru in his devaranama :kanakadaasana mEle dayamaaDalu vyaasa muni…..”

 

Udupi Krishna gave darshana to Kanakadasaru –   Once Kanakadasaru went to Udupi to have the darshana of Krishna paramathma.  But as he was from a lower caste, he was not allowed inside for the darshana.    Having denied the darshana, Kanakadasaru never repented,  he had the great respect for the sampradaya.   Even though he could not see the direct darshana, he had the darshana of Krishna paramathma through his inner eyes.  He was singing on the Western side of the temple.   Throughout the night also he was doing the bhajana.  At that time, an earthquake happened and a small crack appeared on the wall of the temple.   Through this crack, Kanakadasaru was able to have the darshana of Krishna paramathma.  Vadirajaru having noticed this,  having known of the yogyate of Kanakadasaru, and with due respect to the great daasa, he made that crack enlarged on the wall as a window instead of having it plastered.   Thus that window got the name “Kanakana kindi”.
However, some people have tried to say that the lord Krishna himself turned from East to west.  This is not acceptable.  Krishna never turned.    Acharya Madhwa had installed the icon of Krishna facing west only.  All the shrines of ashta mutts are also facing west at Udupi.  The architectural plan of the temple and all the temples at Udupi also say that the idol also facing West only.  Sri Surottama Tirtharu, the poorvashrama brother of Sri Vadirajaru also has written in his Teeka on Sanyasa paddati that Acharya Madhwa had installed the idol facing west.    In view of the above, the idol turning from east to west is an extra fitting.    Even Kanakadasaru himself would not agree to go against the wishes of Acharya Madhwa.  Sri Krishna paramathma, the sarvottama, knows the intentions of Vayudevaru, who had installed him.    This would be against Acharya Madhwa’s intentions, if one says to have Krishna idol turned.
Added to this – there is no reference from Haridasa saahitya or Vyasa saahitya that the idol of Krishna turned.    None of the daasa Chatustaya, have recorded the turning of the idol.  Even Kanakadasaru, has not recorded it in any of his keerthanaas.
As such, Krishna does not have turned.  He must have given the darshana to Kanaka when the wall had crack at that time.

 

Literal works –
  1. Nala Charite – It is a love story of Nala Damayanti with 481 stanzaas.
  2. Hari Bhaki Saara – It is a bhamini Shadpadi poem with 110 stanzaas
  3. Nrusimhastava – It is a grantha on Narasimhavatara
  4. Ramadhanya Charite –  Battle between ragi and rice, which both claimed their superiority who sought justice with Rama, which he proves the superiority of ragi over rice.  It is interpreted as poverty and humility being upheld by Dasaru above material wealth. Even today ragi is food of the poor compared to rice. 
  5. Mohana Tarangini – It is a novel
  6. Mundigegalu
  7. Devaranamagalu 300 +
  8. Tatvapadagalu

See the Quiz type Hari Sarvottamatva pratipadane by Sri Kanakadasaru in his Haribhakti saara (shloka 25)

ಸಿರಿಯು ಕುಲಸತಿ ಸುತನು ಕಮಲಜ
ಹಿರಿಯ ಸೊಸೆ ಶಾರದೆ ಸಹೋದರಿ
ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು
ನಿರುತ ಮಾಯೆಯು ದಾಸಿ ನಿಜಮಂ-
ದಿರವಜಾಂಡವು ಜಂಗಮಸ್ಥಾ-
ವರ ಕುಟುಂಬಿಗ ನೀನು ರಕ್ಷಿಸು ನಮ್ಮನನವರತ |
ಉತ್ತರ : – ಪರಮಾತ್ಮನ  ಸಂಸಾರವನ್ನು ವಿವರಿಸಿದ್ದಾರೆ ಕನಕದಾಸರು –  

ಸಿರಿಯು – ಲಕ್ಷ್ಮೀದೇವಿ  ಕುಲಸತಿ – ಧರ್ಮಪತ್ನಿ;
ಕಮಲಜ – ಕಮಲಸಂಭವನಾದ ಬ್ರಹ್ಮನು ಪುತ್ರನು;
ಹಿರಿಯ ಸೊಸೆ – ದೊಡ್ಡ ಸೊಸೆ ಸರಸ್ವತಿಯು;
ಸಹೋದರಿ ಗಿರಿಜೆ – ಕೃಷ್ಣನ ತಂಗಿಯಾಗಿ ಅವತರಿಸಿದ ದುರ್ಗೆ ಮಹಾಲಕ್ಷ್ಮಿಯಾದರೂ, ಅವಳ ವಿಶೇಷ ಸನ್ನಿಧಾನ ಪಾರ್ವತಿ ದುರ್ಗೆಯಲ್ಲಿದೆ.  ಆದ್ದರಿಂದ ಗಿರಿಜೆ ಸಹೋದರಿ.  ಅಲ್ಲದೆ ಕೃಷ್ನನ ತಂಗಿ ಸುಭದ್ರೆಯಲ್ಲೂ ಗಿರಿಜೆಯ ಆವೇಶ.  ಆದ್ದರಿಂದ ಗಿರಿಜೆ ಸಹೋದರಿ.
ಮೈದುನ ಶಂಕರ – ದುರ್ಗೆಯ ಪತಿ ಶಂಕರನಾದ್ದರಿಂದ ಮೈದುನ.  ಅಲ್ಲದೆ ಅರ್ಜುನ ಸುಭದ್ರೆಯ ಗಂಡ.  ಅರ್ಜುನ ಇಂದ್ರನ ಅವತಾರ.  ಬ್ರಹ್ಮಾಂಡ ಪುರಾಣದಂತೆ ಗರುಡ, ಶೇಷ, ರುದ್ರ ಮತ್ತು ಇಂದ್ರರು ವಾಯು-ಭಾರತೀದೇವಿಯರ ಪುತ್ರರು.  ಆದ್ದರಿಂದ ಶಿವನು ಇಂದ್ರನ ಸಹೋದರ.  ಆದ್ದರಿಂದ ಶಿವನೂ ಮೈದುನ.  
ಸುರರು – ಇತರ ದೇವತೆಗಳು ಕಿಂಕರರು.
ಮಾಯೆಯು ನಿರುತ ದಾಸಿ – ಮಾಯಾಶಕ್ತಿಯು ನಿನ್ನ ದಾಸಿ.
ಮಂದಿರವಜಾಂಡವು – ಬ್ರಹ್ಮಾಂಡವೇ ನಿನ್ನ ಗೃಹ
ಜಂಗಮಸ್ಥಾವರ – ಜಡ ಚೇತನಗಳನ್ನು ಕೂಡಿದ
ಕುಟುಂಬಿಗ ನೀನು – ಕುಟುಂಬವರ್ಗವನ್ನು ಹೊಂದಿರುವ ಶ್ರೀಹರಿ.

 

ಮುಖ್ಯಪ್ರಾಣ ಸ್ತುತಿ ಕನಕದಾಸರಿಂದ –

ಪರಮಪದವಿಯನೀವ ಗುರುಮುಖ್ಯಪ್ರಾಣನ
ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ | ಪ |

ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ
ಬಂದು ದಾಶರಥಿಯ ಪಾದಕೆರಗಿ
ಸಿಂಧುವನು ದಾಟಿ ಮುದ್ರಿಕೆಯಿತ್ತು ದಾನವರ
ವೃಂದಪುರ ದಹಿಸಿ ಚೂಡಾಮಣಿಯ ತಂದವನ | ೧ |

ದ್ವಾಪರಯುಗದಲಿ ಭೀಮಸೇನನೆನಿಸಿ
ಶ್ರೀಪತಿಯ ಪಾದ ಕಡು ಭಜಕನಾಗಿ
ಕೋಪಾವೇಶದಲಿ ದುಶ್ಯಾಸನನನು ಸೀಳಿ
ಭೂಪರ ಬಲದೊಳಗೆ ಜರೆ ಜರೆದು ಕರೆದವನ | ೨ |

ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ
ಕಲುಷದ ಮಾಯಿಗಳನು ಸೋಲಿಸಿ
ಖಿಲವಾದ ಮಧ್ವಮತವನು ಬಲಿದೆನಿಸಿ ಕಾಗಿ
ನೆಲೆಯಾದಿ ಕೇಶವ ಪರದೈವನೆಂದೆನಿಸುವನ | ೩ |

 

ಪರಮಾತ್ಮನ ಪಾದವನ್ನು ಬಿಟ್ಟು ಜೀವಿಸುವುದು ಸರ್ವಥಾ ಸಾಧ್ಯವಿಲ್ಲವೆಂಬುದನ್ನು ವಿವರಿಸುವ ಕನಕದಾಸರ ಕೀರ್ತನೆ –
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಮರೆಯ ಮಾತೇಕಿನ್ನು ಅರಿತು ಪೇಳುವೆನಯ್ಯ | ಪ |
ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು
ದಾಯಾದಿ ಬಂಧುಗಳ ಬಿಡಲೂಬಹುದು
ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು
ಕಾಯಜನ ಪಿತ ನಿನ್ನ ಅಡಿಯ ಬಿಡಲಾಗದು | ೧ |
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಪೋಗಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು | ೨ |
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಲುಬಹುದು
ಪ್ರಾಣನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದೊ | ೩ |

 

ಕನಕದಾಸರ ಹರಿಭಕ್ತಿಸಾರದಲ್ಲಿನ ಕೆಲವು ಅಪರೂಪ ಪದಪ್ರಯೋಗಗಳು –

“ಗಾಂಗೇಯನುತ – ಗಾಂಗೇಯ ಎಂದರೆ ಗಂಗಾಪುತ್ರ ಭೀಷ್ಮರಿಂದ ಸ್ತುತಿಸಲ್ಪಟ್ಟವನು.

“ಚತುರೋಪಾಯ” – ಧರ್ಮ, ಅರ್ಥ, ಕಾಮ ಮೋಕ್ಷ ಎಂಬ ನಾಲ್ಕೂ ಪುರುಷಾರ್ಥಗಳು

“ಜಗದ್ಭರಿತ” – ಜಗತ್ತನ್ನೆಲ್ಲ ವ್ಯಾಪಿಸಿರುವವನು- ಈಶಾವಾಸ್ಯಮಿದಂ ಸರ್ವಂ ಎಂಬಂತೆ ಸಕಲ ಜಗತ್ತಲ್ಲೂ ವ್ಯಾಪ್ತನಾದವನು

“ಭಾವಜಾರಿಪ್ರಿಯ” – ಭಾವಜ ಎಂದರೆ ಮನಸ್ಸಿನಿಂದ ಜನಿಸಿದ ಮನ್ಮಥ, ಅರಿ – ಭಾವಜನ ಅರಿ ಅಂದರೆ ಮನ್ಮಥನನ್ನು ತನ್ನ ಮೂರನೇ ಕಣ್ಣಿನಿಂದ ದಹಿಸಿದ ಶಿವ, ಅವನಿಗೆ ಪ್ರಿಯ

“ಖಗಪತಿಗಮನ” – ಖಗ ಎಂದರೆ ಪಕ್ಷಿ, ಖಗಪತಿ ಎಂದರೆ ಪಕ್ಷಿಗಳ ನಾಯಕ ಗರುಡ, ಅರ್ಥಾತ್ ಖಗಪತಿಗಮನ ಎಂದರೆ ಗರುಡಗಮನ.

ಕಂಜಜನಯ್ಯ – ಕ – ನೀರು; ಕಂಜ – ಜಲಜ; ಅರ್ಥಾತ್ ಕಮಲದಲ್ಲಿ ; ಕಂಜಜ ಕಮಲದಲ್ಲಿ ಜನಿಸಿದ ಬ್ರಹ್ಮದೇವರು; ಅಯ್ಯ – ಅಂದರೆ ತಂದೆ – ಬ್ರಹ್ಮಜನಕ ಎಂದರ್ಥ.

“ಚಕ್ರಾಧಾರ” – ಎಂದರೆ ಚಕ್ರಪಾಣಿ – ಕೈಯಲ್ಲಿ ಚಕ್ರವನ್ನು ಧರಿಸಿದವನು ಎಂದರ್ಥ. ಇಲ್ಲಿ ಕನಕದಾಸರು ಚಕ್ರಕ್ಕೆ ಕೃಷ್ಣನೇ ಆಧಾರ ಎಂಬುದನ್ನು ಸೂಚಿಸಲು ಚಕ್ರಾಧಾರ ಪದ ಪ್ರಯೋಗಿಸಿದ್ದಾರೆ.

“ತಾಮರಸದಳನಯನ” : ತಾಮರಸ – ಎಂದರೆ ಕಮಲ; ದಳ ನಯನ – ಕಣ್ಣುಳ್ಳವನು
(ಕಮಲದ ದಳಾಗಳಂತೆ ವಿಶಾಲವಾದ ನೇತ್ರವುಳ್ಳವನೇ) – ಎಂದರೆ ಪುಂಡರೀಕಾಕ್ಷ ಎಂದರ್ಥ.

“ಹಲಧರ ರಾಮ” – ನೇಗಿಲನ್ನು ಆಯುಧವನ್ನಾಗಿ ಉಳ್ಳ
ಭಾರ್ಗವ ರಾಮ – ಭೃಗುವಂಶದ ಜಮದಗ್ನಿಯ ಪುತ್ರತ್ವೇನ ಅವತಾರ ಮಾಡಿದ್ದರಿಂದ ಭಾರ್ಗವ ರಾಮ.

“ನಾದಬಿಂದುಕಳಾತಿಶಯ” – ನಾದ, ಬಿಂದ್ಗಳನ್ನು ಕಲೆಗಳನ್ನಾಗುಳ್ಳ “ಓಂ”ಕಾರದಿಂದ ಸರ್ವೋತ್ತಮನು ಎಂದು ಪ್ರತಿಪಾದಿತನಾದವನು.

“ಅಕ್ಷಯಾಶ್ರಿತ” : – ಅಕ್ಷಯರು – ಕ್ಷಯವಿಲ್ಲದವರು – ಅಂದರೆ ಜನನವಿಲ್ಲದವರು – ಅಂದರೆ – ಮುಕ್ತರು – ಮುಕ್ತರಿಂದ ಆಶ್ರಯಿಸಲ್ಪಟ್ಟವನು – ಮುಕ್ತರಿಗೂ ಪರಮಾತ್ಮ ಆಶ್ರಯನಾದವನು – ಮುಕ್ತಾನಾಂ ಪರಮಾಗತಿ:.

“ಧಾತ್ರಿಜಾಂತಕ” – ಧಾತ್ರಿ ಎಂದರೆ ಭೂಮಿ; ಧಾತ್ರಿಜ ಎಂದರೆ ಭೂಮಿಪುತ್ರನಾದ ನರಕಾಸುರ ; ಅವನನ್ನು ಸಂಹರಿಸಿದವ – ನರಕಾಸುರಸಂಹಾರೀ.

“ದುರಿತ ತಿಮಿರ ಪತಂಗ” : ದುರಿತ ಎಂದರೆ ಅನಿಷ್ಟ; ತಿಮಿರ ಎಂದರೆ ಕತ್ತಲೆ; ಪತಂಗ – ಸೂರ್ಯ. ಹೇಗೆ ಕತ್ತಲೆಯು ಸೂರ್ಯನಿಂದ ದೂರವಾಗುವುದೋ ಅದೇ ರೀತಿ ಸಕಲ ದುರಿತಗಳೂ ಶ್ರೀಹರಿಯ ಅನುಗ್ರಹದಿಂದ ದೂರವಾಗುವುದು

“ಕುಂದಕುಡ್ಮಲರದನ” : ಕುಂದ – ಜಾಜಿ; ಕುಡ್ಮಲ – ಮೊಗ್ಗು; ರದನ – ದಂತ. ಅಂದರೆ ಜಾಜಿ ಮೊಗ್ಗುಗಳಂತಹ ಸುಂದರವಾದ ಬಿಳಿದಂತಪಂಕ್ತಿಯುಳ್ಳವನು ಶ್ರೀಹರಿ”ದುರಿತ ತಿಮಿರ ಪತಂಗ : ದುರಿತ ಎಂದರೆ ಅನಿಷ್ಟ; ತಿಮಿರ ಎಂದರೆ ಕತ್ತಲೆ; ಪತಂಗ – ಸೂರ್ಯ. ಹೇಗೆ ಕತ್ತಲೆಯು ಸೂರ್ಯನಿಂದ ದೂರವಾಗುವುದೋ ಅದೇ ರೀತಿ ಸಕಲ ದುರಿತಗಳೂ ಶ್ರೀಹರಿಯ ಅನುಗ್ರಹದಿಂದ ದೂರವಾಗುವುದು.

“ಬಾಣಬಾಹುಚ್ಚೇದ” – ಸಾವಿರ ಕೈಗಳನ್ನು ಹೊಂದಿದ್ದ ಬಲಿಚಕ್ರವರ್ತಿಯ ಮಗ ಬಾಣಾಸುರ ಅಸುರಾವೇಶದಿಂದ ಶ್ರೀಕೃಷ್ಣನಿಗೆ ವಿರೋಧ ಮಾಡಿದಾಗ ಅವನ ಎರಡು ಕೈಗಳನ್ನು ಬಿಟ್ಟು ಉಳಿದವನ್ನು ಕತ್ತರಿಸಿದ ಶ್ರೀಹರಿ. ಈ ಮುಂಚೆ ಶಿವಭಕ್ತನಾಗಿದ್ದ ಬಾಣಾಸುರ ನಂತರ ಶ್ರೀ ಹರಿಭಕ್ತನಾದ.

“ಕ್ಷೋಣಿಪತಿ” : ಕ್ಷೋಣಿ – ಭೂಮಿ; ಕ್ಷೋಣಿಪತಿ – ವರಾಹರೂಪಿ ಶ್ರೀಹರಿ.

“ನಾಗನಗರಿಧರಿತ್ರಿಕೋಶವಿಭಾಗ” : ನಾಗನಗರಿ – ನಾಗಲೋಕ; ಧರಿತ್ರಿ – ಭೂಮಿ; ಕೋಶ – ಸಂಪತ್ತಿನ ನೆಲೆ ; ಅಂತಹ ಕೋಶಗಳ ಅನೇಕ ನೆಲೆಗಳು.

“ಕಾಪುರುಷರೈದಾರುಮಂದಿ” : – ಐದಾರು ಮಂದಿ ಅಂದರೆ 5 + 6 = 11 ಮಂದಿ, ಅಂದರೆ ಐದು ಕರ್ಮೇಂದ್ರಿಯಗಳು, ಕಾಮಾದಿ ಆರು ಅರಿಷಡ್ವರ್ಗಗಳು, ಕಾಪುರುಷರು – ಎಂದರೆ ಕೆಟ್ಟ ಜನರು – ಅಂದರೆ ಈ ಎಲ್ಲ ಅಭಿಮಾನಿ ದೈತ್ಯರು ಎಂದು ಅರ್ಥ ಮಾಡಿಕೊಳ್ಳಬೇಕು.

kanakadaasara ugaabogagalu :

ಅಳಿವಾ ದೇಹವಾ ಸಿಂಗರಿಸುವೆಯೇಕೆ
ಬೆಳೆಸು ಹರಿಭಕ್ತಿ ಮನದೊಳು ನಿರತ
ಕಳೆವ ತನುವಿದು ಶಾಶ್ವತವಲ್ಲ ತಿಳಿ
ಒಳಗಿನ ಆತ್ಮ ನಿರಂತರವಾಗಿರಲು
ಘಳಿಗೆಗೊಮ್ಮೆ ಅವನ ಧ್ಯಾನವ ಮಾಡು
ಸುಳಿಯಲಿ ಸಿಕ್ಕಿರಲು ನೀನುಳಿವ ದಾರಿ
ತಿಳಿ, ನೀ ಕರೆ ಸೇರೆ ನಿನ್ನನಾ
ನಳಿನಾಕ್ಷ ಶ್ರೀ ಆದಿಕೇಶವರಾಯ ಪೊರೆವ

ಮಣ್ಣಲಿ ಮಾಡಿಹ ಮಡಕೆ ಮಸಿಯಾಗೆ
ಮಣ್ಣಿಂದಲೆ ತಿಕ್ಕಿ ಮಸೆ ಹೋಗುವುದು
ಕಣ್ಣು ಕಿವಿಗಳ ನಡೆಪ ಮನ ಮಲಿನವಾಗೆ
ಕಣ್ಣು ಕಿವಿಗಳಿಂದಲಿ ಮನ ತಿದ್ದಲಾಗುವುದೇ?
ಹಣ್ಣಾಗುವುದು ಮನ ಶ್ರೀ ಹರಿಧ್ಯಾನ ಮಾಡೆ
ಹುಣಾಗಿ ಕಾಡಿಪುದು ಅವನ, ಅದ ಮರೆಯ
ಕಣ್ಣಲಿ ಕಣ್ಣಾಗಿ ಕತ್ತಲಲಿ ಬೆಳಕಾಗಿ
ಫಣಿಶಾಯಿ ಆದಿಕೇಶವರಾಯ ಪೊರೆವ |

Collection by Narahari Sumadhwa
source : Sri Kanakadaasavirachita “Haribhaktisaara” by Dr Vyasanakere Prabhanjanacharya.

Leave a Reply

Your email address will not be published.

Sumadhwa Seva © 2022