Bhagini Truteeya or Vishnu Gauri Vratha
ಕಾರ್ತೀಕ ಮಾಸ ಶುಕ್ಲ ಪಕ್ಷ ತೃತೀಯಾ
ಇಂದು ಪೂಜಿಸಬೇಕಾದವಳು – ಪರಶುಕ್ಲತ್ರಯರಲ್ಲೊಬ್ಬಳಾದ ಲಕ್ಷ್ಮೀದೇವಿ.
ಇಲ್ಲಿ ಗೌರಿ ಎಂದರೆ ಶಂಕರನ ಪತ್ನಿಯಾದ ಗೌರಿಯಲ್ಲ, ಸಾಕ್ಷಾತ್ ಲಕ್ಷ್ಮೀದೇವಿಯೇ.
ಈದಿನ ಅಷ್ಠದಳದ ಪದ್ಮವನ್ನು ಕುಂಕುಮದಿಂದ ಬರೆದು ಅದರ ಮಧ್ಯದಲ್ಲಿ ಕಲಶ ಹಾಗೂ ಲಕ್ಷ್ಮೀನಾರಾಯಣರ ಬೆಳ್ಳಿಯ ಅಥವಾ ಹಿತ್ತಾಳೆಯ ಪ್ರತಿಮೆಯನ್ನು ಇಟ್ಟು ಶ್ರೀ ಸೂಕ್ತ ಹಾಗೂ ಪುರುಷ ಸೂಕ್ತದ ಒಂದೊಂದಾದರೂ ಋಕ್ಕನ್ನು ಪಠಿಸಿ, ಆವಾಹನಾದಿ ಷೋಡಚೋಪಚಾರಗಳನ್ನು ಮಾಡಬೇಕು. ಸುವಾಸಿನಿಯರಿಗೆ ಮರದ ಬಾಗಿಣವನ್ನು ಕೊಟ್ಟು, ಮಂಗಲದ್ರವ್ಯಗಳನ್ನು ದಾನ ನೀಡಬೇಕು. ಬ್ರಾಹ್ಮಣ-ಸುವಾಸಿನಿಯರಿಗೆ ಭೋಜನ ಮಾಡಿಸಬೇಕು.
ವಿಷ್ಣುಗೌರಿವ್ರತಾಚರಣೆಯಿಂದ ಶ್ರೀಲಕ್ಷ್ಮೀ ನಾರಾಯಣರು ಸಂತುಷ್ಠರಾಗಿ ಸಕಲ ಸೌಭಾಗ್ಯಗಳನ್ನೂ ನೀಡುವರು.
It is celebrated on Kartika Shukla Triteeya
We have to perform the pooja of Saakshaat Lakshmi devi in the name of Gauri. Gauri, here means it is not the wife of Shankara, it is saakshaat Lakshmidevi.