BUDDHA JAYANTHI

बुद्धावतार –

तत: कलौ संप्रवृत्ते संमोहाय सुरद्विषां ।
बुद्धो नाम्नाजिनसुत: कीकटेषु भविष्यति ॥
ಕಲಿಯುಗವು ಪ್ರವೃತ್ತವಾಗಿ, ಅಯೋಗ್ಯರೂ, ವೇದಮಾರ್ಗದಲ್ಲಿ ಪ್ರವೃತ್ತರಾದ ತ್ರಿಪುರವಾಸಿಗಳಾದ ದೈತ್ಯರನ್ನು ಸಂಪೂರ್‍ಣವಾಗಿ ಮೋಹಗೊಳಿಸಿ, ಅವರ ಪತ್ನಿಯರ ಪಾತಿವ್ರತ್ಯವನ್ನು, ಭಂಗಗೊಳಿಸಲೆಂದು “ಬುದ್ಧ” ಎಂಬ ಹೆಸರಿನಿಂದ ಗಯಾ ಕ್ಷೇತ್ರದಲ್ಲಿ ಜಿನನ ಮಗನಾಗಿ ಎಂದರೆ ಶಿಶುರೂಪಿಯಾಗಿ ದಾರಿಯಲ್ಲಿ ಕಾಣಿಸಿಕೊಂಡಾಗ ಜಿನನು ತನ್ನ ಮಗನೆಂದು ಭಾವಿಸಿ ಮನೆಗೆ ತಂದಾಗ ಶಿಶುರೂಪದಿಂದಲೇ ವೇದವಿರುದ್ಧ ಮಾತುಗಳಿಂದ ಅಸುರರನ್ನು ಮೋಹಗೊಳಿಸಿದನು

ಬುದ್ಧರೂಪದಿಂದ ದೈತ್ಯರನ್ನು ವಂಚಿಸಿ, ನಾಶಪಡಿಸಿ, ದೇವತೆಗಳಿಗೆ ಮೋಕ್ಷದಾಯಕವಾದ ನಿರ್ಮಲ ಜ್ಞಾನವಿತ್ತವನೇ ಬುದ್ಧರೂಪಿ ಪರಮಾತ್ಮ.

ಬುದ್ಧಾವತಾರವೆತ್ತಿ ಅಸುರರಲ್ಲಿ ಕುಮತಿ ಪ್ರೇರೇಪಿಸಿದ ಪರಮಾತ್ಮ.  ಇದು ಅಸುರುಜನ ಮೋಹನವಾದ ರೂಪ.
“ಗೌತಮಬುದ್ಧ”ನೆಂದು ಪ್ರಸಿದ್ಧನಾದ ಸಿದ್ಧಾರ್ಥನು ಪರಮಾತ್ಮನ ಅವತಾರನಲ್ಲ.  ಅವನು ತ್ರಿಪುರಾಸುರರಲ್ಲಿ ಮೊದಲಿಗನಾದ ದೈತ್ಯ.

ಭಗವಂತನು ಬುದ್ಧನಾಗಿ ಅವತರಿಸಿ ಕ್ಷಣಿಕ, ಅಸತ್, ಶೂನ್ಯ, ಅಭಾವ, ಇತ್ಯಾದಿಗಳನ್ನು ಬೋದಿಸಿದನು.  ಅವರಾದರೂ ವೈದಿಕಮತವನ್ನು ಬಿಟ್ಟು ಬೌದ್ಧಮತವನ್ನು ಹಿಡಿದರು.  ಬುದ್ಧನ ಮಾತಿನ ಅರ್ಥವಾದರೂ ಹೀಗೆ.

ವೇದ: ಅಪ್ರಮಾಣಂ – ವೇದವು ಆಕಾರವಾಚ್ಯನಾದ ಭಗವಂತನ ವಿಷಯದಲ್ಲಿ ಪ್ರಮಾಣವು.  ಭಗವಂತನು ಶಾಸ್ತ್ರೈಕಸಮಧಿಗಮನ್ಯು ಎಂದರ್ಥ.
ಶೂನ್ಯಂ =  ಶಂ- ಸುಖ, ಉ-ಎಂದರೆ ಉಚ್ಚವಾದದ್ದು ಇನ್ನೊಂದು ಉಕಾರಕ್ಕೆ ಸ್ವಭಾವ ಎಂದು ಹಾಗಾದರೆ, ಯಾರ ಸುಖವು ಸ್ವಭಾವವಾಗಿದ್ದು, ಉಚ್ಚರಾದದ್ದು ಅವನು, ಶೂ – ಅವನಿಂದ, ನೀಯತೇ – ನಿಯಮ್ಯತೇ – ಇತಿ ಶೂನ್ಯಂ – ಭಗವಂತನಿಂದ ನಿಯಮಿತವಾದದ್ದು ಈ ಜಗತ್ತು ಎಂದರ್ಥ.

ಅಭಾವ _ ಆಕಾರ ವಾಚ್ಯ ಭಗವಂತನಿಂದ ಉತ್ಪತ್ತಿ ಹೊಂದುವುದು.
ಅಸತ್ – ಆಕಾರವಾಚ್ಯನಾದ ಭಗವಂತನಿಂದ ನಾಶ ಹೊಂದುವಂತದ್ದು.
ಕ್ಷಣಿಕ – ಅಶಾಶ್ವತವಾದದ್ದು ಹೀಗೆ ಪರಮಾತ್ಮನ ಅಭಿಪ್ರಾಯವಾದ್ದರಿಂದ ಭಗವಂತನ ಮಾತು ಎಂದೂ ಸುಳ್ಳಾಗುವುದಿಲ್ಲ. ಪ್ರಮೇಯಸಿದ್ಧವಾಗುತ್ತದೆ.

Updated: May 8, 2009 — 9:22 am
Sumadhwa Seva © 2022