VAISHAKA SHUDDA SAPTAMI / Jahnu Saptami
VaishaKa shukla saptamyaam jahnunaa jaahnavI puraa: |
krOdhaat pItaa puna: tyaktaa karNaraMdraastu dakShinaat ||
When Ganga came to earth after being released from Manoniyamaka Rudravaru, her speedy waters wreaked havoc with Jahnu Rishi’s fields and penance. Angered by this, the great sage drank up all of Ganga’s waters to punish her. Seeing this, the Gods prayed to the sage to release Ganga, so that she could proceed on her mission to release the souls of the ancestors of Bhagiratha. Jahnu Rishigalu agreed and he released Ganga from his ear. Because of this, the Ganga river is also known as Jahnvi, Janhavi or Jahnavi, meaning “daughter of Jahnu”
On this day the Ganga is worshipped and many people make offerings to the forefathers, and bathe in the Ganga. On this day, if possible, one should worship the Ganges and bathe in her waters. Even if you can’t go to Ganga Snana, wherever u are doing snaana, you can do the same with the sankalpa and anusandhana of Ganga
ವೈಶಾಖ ಶುಕ್ಲ ಸಪ್ತಮ್ಯಾಂ ಜಹ್ನುನಾ ಜಾಹ್ನವೀ ಪುರಾ |
ಕ್ರೋಧಾತ್ ಪೀತಾ ಪುನ: ತ್ಯಕ್ತಾ ಕರ್ಣರಂದ್ರಾಸ್ತು ದಕ್ಷಿಣಾತ್ |
ವೈಶಾಖ ಶುದ್ಧ ಸಪ್ತಮಿಯಂದು ಗಂಗೆಯು ಭಗೀರಥ ಪ್ರಯತ್ನದಿಂದ ಭೂಮಿಗಿಳಿದು ಬರುತ್ತಿದ್ದಾಗ, ರಭಸದಿಂದ ಬಂದು ಜಹ್ನು ಋಷಿಗಳ ತಪೋವನ ಪ್ರವೇಶಿಸಿ ಅವರ ತಪಸ್ಸಿಗೆ ಭಗ್ನಗೊಂಡಿದ್ದರಿಂದ ಕೋಪಗೊಂಡ ಜಹ್ನು ಋಷಿಗಳು ಇಡೀ ಗಂಗೆಯನ್ನು ಸ್ವೀಕರಿಸಿ ಹಿಡಿದಿಟ್ಟಿದ್ದರು. ಅನಂತರ ಋಷಿಮುನಿಗಳು ಪ್ರಾರ್ಥನೆಯಂತೆ ಮತ್ತು ದೇವಾನುದೇವತೆಗಳ ಅನುಜ್ಞೆಯಂತೆ ಗಂಗಾದೇವಿಯನ್ನು ತಮ್ಮ ಕಿವಿಯಿಂದ ಹೊರಬಿಟ್ಟ ದಿನವೇ ವೈಶಾಖ ಶುದ್ದ ಸಪ್ತಮಿ. ಆದ್ದರಿಂದ ಈ ದಿನವನ್ನು “ಗಂಗೋತ್ಪತ್ತಿ ದಿನ” ಅಥವಾ “ಜಹ್ನು ಸಪ್ತಮಿ” ಎಂದು ಕರೆಯುತ್ತಾರೆ. ಅದೇ ಕಾರಣದಿಂದ ಗಂಗಾದೇವಿಗೆ ಜಾಹ್ನವಿ, ಎಂಬ ಹೆಸರಿರುವುದು. ಈ ದಿನ ಗಂಗೆಯನ್ನು ಷೋಡಚೋಪಚಾರಗಳಿಂದ ಪೂಜಿಸಬೇಕು. ಮನೆಯಲ್ಲಿರುವ ಗಂಗಾಥಾಲಿಗೆ ಅರಿಷಿಣ, ಕುಂಕುಮ, ಗೆಜ್ಜೆ ವಸ್ತ್ರ, ತಂಬಿಟ್ಟು ನೈವೇದ್ಯ ಮಾಡಿ ದೀಪಗಳನ್ನು ಅರ್ಪಿಸಬೇಕು.
ಬ್ರಾಹ್ಮಣರು ಬಲಗಿವಿಯಲ್ಲಿ ಜನಿವಾರವನ್ನು ಹಾಕಿಕೊಂಡು ಮಲಮೂತ್ರ ವಿಸರ್ಜಿಸುವುದು ಏಕೆ?
ಜಹ್ನು ಋಷಿಗಳ ಕಿವಿಯಿಂದ, ಗಂಗೆಯು ಹೊರಬಂದ ನಿಮಿತ್ತ, ಅವರ ಅನುಗ್ರಹದಿಂದ, ಗಂಗೆಯು ಕೇವಲ ಜಹ್ನು ಋಷಿಯ ಕಿವಿಯಲ್ಲಿ ಮಾತ್ರವಲ್ಲ ಸಮಸ್ತ ಬ್ರಾಹ್ಮಣರ ಕಿವಿಯಲ್ಲೂ ಇರುವಳು. ಆದ್ದರಿಂದಲೇ ಮಲಮೂತ್ರ ವಿಸರ್ಜಿಸುವಾಗ ಬಲಗಿವಿಗೆ ಜನಿವರಾವನ್ನು ಸುತ್ತಿಕೊಳ್ಳುವ ಸಂಪ್ರದಾಯವಿರುವುದು. ಆಕಳಿಸುವಾಗ, ಸೀನುವಾಗ, ವಸ್ತ್ರವನ್ನುಡುವಾಗ, ಆಚಮನದ ಬದಲಾಗಿ ಬಲಗಿವಿಯ ಸ್ಪರ್ಷವನ್ನು ವಿಧಿಸಿದ್ದಾರೆ. ಏಕೆಂದರೆ ಪ್ರಭಾಸಾದಿ ತೀರ್ಥಗಳು, ಗಂಗಾದಿ ನದಿಗಳೂ ಬ್ರಾಹ್ಮಣನ ಬಲಗಿವಿಯಲ್ಲಿರುತ್ತದೆ.
ಅಷ್ಟೇ ಅಲ್ಲ, ಕೆಲವು ಸಾರಿ ನಾವು ನೀರು ಸಿಗದಿದ್ದಾಗ ಮೂತ್ರ ವಿಸರ್ಜನ ನಂತರ, ಬಲಗಿವಿಯನ್ನು ಸ್ಪರ್ಷ ಮಾಡುವುದರಿಂದ ತಾತ್ಕಾಲಿಕವಾಗಿ ಕೈಕಾಲು ತೊಳೆದುಕೊಂಡಂತೆ. ಆದರೆ ನೀರು ಸಿಕ್ಕಿದ ಮೇಲೆ ಮತ್ತೆ ಕೈಕಾಲು ತೊಳೆದುಕೊಂಡು ಮತ್ತೆ ಶುದ್ಧರಾಗಬೇಕು.
ಗಂಗೆಯಲ್ಲಿ ಸ್ನಾನಮಾಡಿ ಗಂಗೆಯನ್ನು ತದಂತರ್ಯಾಮಿ ಸೇತುಮಾಧವನನ್ನು ಪೂಜಿಸಬೇಕು. ವಿಧಿವತ್ತಾಗಿ ಸ್ನಾನ ಮಾಡಿ ಗಂಗೆಯನ್ನು ಪೂಜಿಸಿದವನ ಜನ್ಮವು ಧನ್ಯವಾಗುವುದು.
ಈ ದಿನ ಜಲಕುಂಭದಾನಕ್ಕೆ ಪ್ರಶಸ್ತವಾಗಿರುತ್ತದೆ. ಇದನ್ನೇ “ಗಂಗಾವೃತ” ಎನ್ನುವರು. ಇದರಿಂದ ಏಳು ತಲೆಮಾರಿನ ಪಿತೃಗಳೂ ಸ್ವರ್ಗಕ್ಕೆ ತೆರಳುವರು.