*ಹಡೆದಾ ತಾಯಿಯ ಶಿರವಾ ಕಡಿದ ಪರಶುರಾಮ*
ಪರಮಾತ್ಮನ ದಶಾವತಾರಗಳಲ್ಲಿ ಗುರುತಿಸಲ್ಪಟ್ಟ ಶ್ರೀ ಪರಶುರಾಮ ದೇವರ ಅವತಾರ ಆಗಿದ್ದು ವೈಶಾಖ ಶುದ್ಧ ತೃತೀಯ ಅಕ್ಷಯ ತೃತೀಯ ದಿನದಂದು.
ಜಮದಗ್ನಿ ರೇಣುಕಾ ದಂಪತಿಗಳ ಮಗನಾಗಿ ಅವತರಿಸಿದ ರೂಪ ಪರಶುರಾಮ. ಪರಶುರಾಮನ ಮಡದಿಯ ಹೆಸರು ಹರಿಣಿ.
ಜಮದಗ್ನಿ ಮುನಿಗಳ ಪುತ್ರನಾಗಿ ಅವತರಿಸಿದ ಶ್ರೀಹರಿಯ ಹೆಸರು *ರಾಮ*. ಆದರೆ ಅವನ ಆಯುಧ ಪರಶು ಅಂದರೆ ಕೊಡಲಿ. ಯಾವಾಗಲೂ ಪರಶು ಒಂದಿಗೆ ಸುತ್ತಾಡುತ್ತಿದ್ದರಿಂದ ಅವನು *ಪರಶುರಾಮ* ಎಂದು ಪ್ರಸಿದ್ಧನಾದ.
ಭೃಗು ಮಹರ್ಷಿಗಳ ವಂಶದಲ್ಲಿ ಬಂದಿರುವುದರಿಂದ ಅವನನ್ನು *ಭಾರ್ಗವ ರಾಮ* ಎನ್ನುತ್ತಾರೆ.
*ಹಡೆದಾ ತಾಯಿಯ ಶಿರವಾ ಕಡಿದ* :
ಒಮ್ಮೆ ಪರಶುರಾಮನ ತಾಯಿ ರೇಣುಕಾದೇವಿ ನೀರು ತರಲು ನದಿಗೆ ಹೋಗಿದ್ದಾಗ, ಗಂಧರ್ವ ರಾಜ ಚಿತ್ರರಥನು ಅಪ್ಸರೆಯರೊಂದಿಗೆ ಅಲ್ಲಿ ಇರುತ್ತಾನೆ. ಒಂದು ಕ್ಷಣ ಮೈಮರೆತು ತನಗೂ ಆ ವೈಭೋಗ ಇದ್ದಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುತ್ತಾರೆ. ಅದು ಜಮದಗ್ನಿಗಳ ದಿವ್ಯದೃಷ್ಟಿಗೆ ತಿಳಿದು ಅವರು ಕೋಪಗೊಳ್ಳುತ್ತಾರೆ. ತಮ್ಮ ಮಕ್ಕಳನ್ನು ಕರೆದು ನಿಮ್ಮ ತಾಯಿಯನ್ನು ಕೊಲ್ಲಿ’ ಎಂದು ಆದೇಶಿಸುತ್ತಾರೆ. ಮಾತೃ ಹತ್ಯೆ ಮಾಡುವುದೇ? ಅಂತಹ ಪಾಪ ಮಾಡಲಾರೆ’ ಎಂದು ಎಲ್ಲ ಮಕ್ಕಳೂ ಹೇಳಲು, ಜಮದಗ್ನಿಯು ಆಗ ತನ್ನ ಆಜ್ಞೆಯನ್ನು ಉಲ್ಲಂಘಿಸಿದ ತನ್ನ ಮಕ್ಕಳನ್ನು ಮತ್ತು ಹೆಂಡತಿಯನ್ನು ಕೊಲ್ಲಲು ತನ್ನ ಕೊನೆಯ ಮಗನಾದ ಪರಶುರಾಮನಿಗೆ ಆದೇಶಿಸುತ್ತಾರೆ. ತನ್ನ ತಂದೆಯ ಶಕ್ತಿಯನ್ನು ಅರಿತ ಪರಶುರಾಮನು ತನ್ನ ತಾಯಿ ಮತ್ತು ತನ್ನ ಅಣ್ಣಂದಿರನ್ನು ತತ್‌ಕ್ಷಣ ಕೊಲ್ಲುತ್ತಾನೆ. ಜಮದಗ್ನಿಯು ಸಂತಸಗೊಂಡು, ಮಗನಿಗೆ ವರವನ್ನು ಕೇಳು ನೀಡುವೆ ಎನ್ನುತ್ತಾರೆ. ಪರಶುರಾಮನು ತನ್ನ ತಾಯಿ ಮತ್ತು ಸಹೋದರರು ಮತ್ತೆ ಬದುಕಲಿ ಮತ್ತು ನನ್ನಿಂದ ಹತರಾಗಿರುವುದು ಅವರ ಸ್ಮರಣೆಗೆ ಬಾರದಿರಲಿ ಎಂದು ವರವನ್ನು ಕೇಳಿದನು. ಆಗ ಪರಶುರಾಮನ ತಾಯಿ ಮತ್ತು ಸಹೋದರರು ಗಾಢ ನಿದ್ರೆಯಿಂದ ಎದ್ದಂತೆ ಆನಂದದಿಂದ ಎದ್ದು ನಿಂತರು.ಇದರಿಂದ ಪಿತೃವಾಕ್ಯ ಪರಿಪಾಲಕನಾದ..
*ಜಮದಗ್ನಿ ಮುನಿಗಳ ಕಾಮಧೇನು* :
ಒಮ್ಮೆ ರಾಜ ಕಾರ್ತವೀರ್ಯಾರ್ಜುನ ತನ್ನ ಪರಿವಾರದೊಂದಿಗೆ ಜಮದಗ್ನಿ ಆಶ್ರಮಕ್ಕೆ ಬಂದಾಗ, ಮಹಾ ಋಷಿಯು ತನ್ನ ಅತಿಥಿಗಳನ್ನು ಸತ್ಕರಿಸುತ್ತಾರೆ. ಇಷ್ಟೆಲ್ಲಾ ಮಾಡಲು ಹೇಗೆ ಸಾಧ್ಯವಾಯಿತು ಎಂದು ವಿಚಾರಿಸಿದಾಗ, ಜಮದಗ್ನಿಗಳ ಬಳಿ ಇರುವ ಕಾಮಧೇನುವೇ ಕಾರಣ ಎಂದು ತಿಳಿಯಿತು. ಕಾರ್ತವೀರ್ಯಾರ್ಜುನ ತನಗೇ ಆ ಕಾಮಧೇನುವನ್ನು ಕೊಡಲು ಕೇಳಿದಾಗ, ಜಮದಗ್ನಿಯು ಸಾಧ್ಯವಿಲ್ಲವೆನ್ನುತ್ತಾರೆ. ಆಗ ಕಾರ್ತವೀರ್ಯಾರ್ಜುನ ಕಾಮಧೇನುವನ್ನು ಕದ್ದು ಒಯ್ಯುತ್ತಾನೆ. ಒಯ್ದ ವಿಷಯ ಪರಶುರಾಮನಿಗೆ ತಿಳಿಯುತ್ತದೆ. ಕಾಮಧೇನುವನ್ನು ರಕ್ಷಿಸುವೆ’ ಎಂದು ತನ್ನ ಕೊಡಲಿ, ಬಿಲ್ಲು ಬಾಣ ಹಿಡಿದು ದೊರೆಯ ಬೆನ್ನಟ್ಟುತ್ತಾನೆ. ರಾಜ ಮತ್ತು ಪರಶುರಾಮನ ಮಧ್ಯೆ ಭೀಕರ ಕಾಳಗ ನಡೆಯುತ್ತದೆ. ಸಾವಿರ ಬಾಹುಗಳುಳ್ಳ ಕಾರ್ತವೀರ್ಯನನ್ನು ಕೊಂದು ಪರಶುರಾಮನು ಕಾಮಧೇನುವನ್ನು ಆಶ್ರಮಕ್ಕೆ ವಾಪಸು ತರುತ್ತಾನೆ. ಅಂತೂ ಕಾಮಧೇನು ವಾಪಸಾದಳು. ಜಮದಗ್ನಿಯು ಪರಶುರಾಮನ ಕೃತ್ಯ ಸರಿಯಲ್ಲ ಎಂದು ವಿವರಿಸುತ್ತಾರೆ. ಬ್ರಾಹ್ಮಣರು ಕ್ಷಮಾ ಗುಣ ಹೊಂದಿರಬೇಕು’ ಎಂದು ಹೇಳುತ್ತಾರೆ. ಪಾಪ ಪರಿಹಾರಕ್ಕೆ ತೀರ್ಥಯಾತ್ರೆಗೆ ಹೋಗು’ ಎನ್ನುತ್ತಾರೆ. ತಂದೆಯ ಸೂಚನೆಯಂತೆ ಪರಶುರಾಮ ಯಾತ್ರೆ ಹೊರಡುತ್ತಾನೆ.
ಇತ್ತ ರಾಜನ ಮಕ್ಕಳು ಕುಪಿತರಾಗಿ, ಅವರೆಲ್ಲ ಜಮದಗ್ನಿ ಆಶ್ರಮಕ್ಕೆ ಬಂದು ಜಮದಗ್ನಿಯ ಕೊಂದು ಅವರ ಶಿರವನ್ನು ಒಯ್ಯುತ್ತಾರೆ. ತೀರ್ಥಯಾತ್ರೆಯಿಂದ ಹಿಂತಿರುಗಿದ ಪರಶುರಾಮನಿಗೆ ತನ್ನ ತಂದೆಯನ್ನು ಕೊಂದಿರುವುದು ತಿಳಿಯುತ್ತದೆ. ಇದರಿಂದ ಅವನಿಗೆ ತುಂಬ ಕೋಪ ಉಂಟಾಗಿ ಕ್ಷತ್ರಿಯರನ್ನೆಲ್ಲಾ ಕೊಲ್ಲುವೆ’ ಎಂದು ವೀರಾವೇಶದಿಂದ ಹೊರಡುತ್ತಾನೆ. ಇಪ್ಪತ್ತೊಂದು ಬಾರಿ ಭೂಮಿಯಲ್ಲಿ ಸಂಚರಿಸಿ ಕ್ಷತ್ರಿಯರನ್ನು ಸಂಹರಿಸುತ್ತ ಹೋಗುತ್ತಾನೆ.
*ಸಮಂತ ಪಂಚಕ* – ಪರಶುರಾಮ ೨೧ ಬಾರಿ ಭೂ ಪ್ರದಕ್ಷಿಣೆ ಮಾಡಿ ಸಮಸ್ತ ದುಷ್ಟ ಕ್ಷತ್ರಿಯರ ಕೊಂದು ಅವರ ರಕ್ತವನ್ನು ತುಂಬಿದ ಐದು ಕೊಳಗಳೇ ಸಮಂತಪಂಚಕ.
*ಪರಶುರಾಮ ತೀರ್ಥ* –
ಪರಶುರಾಮನು ತಂದೆಯ ಶಿರ ತಂದು ದೇಹದೊಂದಿಗೆ ಜೋಡಿಸುತ್ತಾನೆ . ಜಮದಗ್ನಿಗೆ ಪುನಃ ಜೀವ ಬರುತ್ತದೆ.
ಪರಶುರಾಮನ ಧ್ಯೇಯವು ಭಕ್ತರನ್ನು ಕಾಪಾಡುವುದು. ಪಾಪಿಷ್ಠರನ್ನು ನಾಶ ಪಡಿಸುವುದು. ಆದರೆ ಯಾವ ಕ್ಷತ್ರಿಯ ರಾಜನು ಬ್ರಾಹ್ಮಣರಿಗೆ ವಿಧೇಯರಾಗಿರುತ್ತಾರೋ ಅವರನ್ನು ಕೊಲ್ಲುತ್ತಿರಲಿಲ್ಲ. . ಅವನು ಬ್ರಾಹ್ಮಣ ವರ್ಣಕ್ಕೆ ಸೇರಿದ್ದರೂ ಸನ್ನಿವೇಶ ಕಾರಣ ಕ್ಷತ್ರಿಯನಂತೆ ಕೆಲಸ ಮಾಡಬೇಕಾಗುತ್ತದೆ. ದುಷ್ಟ ಕ್ಷತ್ರಿಯರ ಕೊಂದ ಕೊಡಲಿಯಲ್ಲಿ ಮೆತ್ತಿದ್ದ ರಕ್ತದ ಕಲೆಯನ್ನು ತೊಳೆಯಲು ಎಲ್ಲೂ ಸಾಧ್ಯವಾಗಿದೆ ಕೊನೆಗೆ ತೀರ್ಥಹಳ್ಳಿ ಗ್ರಾಮದಲ್ಲಿ ತುಂಗಾನದಿಯಲ್ಲಿ ತೊಳೆದಾಗ ಆ ರಕ್ತದ ಕಲೆ ಹೋಯಿತಂತೆ. ಅದು *ಪರಶುರಾಮ ತೀರ್ಥ* ಎಂದು ಪ್ರಸಿದ್ಧಿಯಾಗಿದೆ
ಪರಶುರಾಮರ ಬಳಿ ಪಿತಾಮಹ ಭೀಷ್ಮಾಚಾರ್ಯರು 425 ವರ್ಷಗಳ ಕಾಲ ವಿದ್ಯಾರ್ಜನೆ ಮಾಡಿದರು.
ದ್ರೋಣಾಚಾರ್ಯರಿಗೆ ಎಲ್ಲಾ ಆಯುಧ ಪ್ರದಾನ: ದ್ರೋಣಾಚಾರ್ಯರು ಯಾರಲ್ಲೂ ಏನನ್ನೂ ಕೇಳುತ್ತಿರಲಿಲ್ಲ. ಆದರೆ ತನ್ನ ಮಗ ಅಶ್ವತ್ಥಾಮನಿಗಾಗಿ ಕುಡಿಯಲು ಹಾಲಿಗೂ ಪರದಾಡುತ್ತಿದ್ದಾಗ ಪರಮಾತ್ಮನಲ್ಲಿ ಬೇಡಿದರೆ ತಪ್ಪಿಲ್ಲವೆಂದು ಪರಶುರಾಮನಲ್ಲಿ ಕೋರುತ್ತಾನೆ. ಅಷ್ಟರಲ್ಲಿ ಪರಶುರಾಮ ತನ್ನಲ್ಲಿರುವ ಸಮಸ್ತವನ್ನೂ ಬ್ರಾಹ್ಮಣರಿಗೆ ದಾನ ಕೊಟ್ಟಿದ್ದ. ತನ್ನ ಬಳಿಯಿದ್ದ ಆಯುಧಗಳನ್ನೆಲ್ಲಾ ದ್ರೋಣಾಚಾರ್ಯರಿಗೆ ನೀಡಿದನು. ಅದೇ ಆಯುಧದಿಂದ ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಿದರು ದ್ರೋಣಾಚಾರ್ಯರು.
*ಕರ್ಣನಿಗೆ ವಿದ್ಯಾದಾನ ಮತ್ತು ಶಾಪ* :
ಪರಶುರಾಮ ಮೊದಲು ಕ್ಷತ್ರಿಯರಿಗೆ ವಿದ್ಯಾದಾನ ಮಾಡಿದ್ದರೂ, ಕ್ಷತ್ರಿಯ ರಾಜ ತನ್ನ ತಂದೆಯ ಶಿರ ಕುಡಿದು ನಂತರದಲ್ಲಿ ಯಾವ ಕ್ಷತ್ರಿಯರಿಗೂ ವಿದ್ಯಾದಾನ ಮಾಡುವುದಿಲ್ಲವೆಂದು ತೀರ್ಮಾನಿಸಿದ್ದ. ಕರ್ಣ ಸೂತಪುತ್ರನಾದ್ದರಿಂದ ದ್ರೋಣಾಚಾರ್ಯರಿಂದ ನಿರಾಕರಿಸಲ್ಪಟ್ಟು ಪರಶುರಾಮರ ಬಳಿ ಬಂದು ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ವಿದ್ಯಾರ್ಜನೆ ಮಾಡಿದ್ದ. ಒಮ್ಮೆ ಪರಶುರಾಮರು ಕರ್ಣನ ತೊಡೆಯಲ್ಲಿ ವಿರಮಿಸಿದ್ದಾಗ ಒಂದು ಕೀಟವು ಕರ್ಣನ ತೊಡೆಯ ಭಾಗದಲ್ಲಿ ಕಡಿಯಿತು. ಆ ನೋವು ಎಷ್ಟೇ ತೀವ್ರವಿದ್ದರೂ ನೋವು ತಡೆದುಕೊಂಡ ಕರ್ಣ. ಆದರೆ ರಕ್ತಸ್ರಾವ ಹರಿದು ಪರಶುರಾಮನ ಸ್ಪರ್ಶಿಸಲು ಎಚ್ಚರಗೊಂಡು ಕರ್ಣನಿಗೆ ಹೇಳುತ್ತಾನೆ – ಇಷ್ಟು ನೋವು ತಡೆದುಕೊಳ್ಳಲು ಬ್ರಾಹ್ಮಣರಿಗೆ ಸಾಧ್ಯವಿಲ್ಲ. ನೀನು ಯಾವ ಜಾತಿ ಎಂದಾಗ, ತನ್ನ ಜನ್ಮಜಾತಿ ಗೊತ್ತಿಲ್ಲ ಎನ್ನುತ್ತಾನೆ ಕರ್ಣ. ನೀನೊಬ್ಬ ಕ್ಷತ್ರಿಯನೇ ಎಂದು ನಿರ್ಧರಿಸಿದ ಪರಶುರಾಮ “ನಿನಗೆ ಒಳ್ಳೆಯ ಸಂದರ್ಭದಲ್ಲಿ ಬಾಣ ಪ್ರಯೋಗ ಸಮಯದಲ್ಲಿ ಮಂತ್ರ ಫ” ಎಂದು ಶಪಿಸಿದರು. ಅದೇ ಕಾರಣಕ್ಕೆ ಕುರುಕ್ಷೇತ್ರದಲ್ಲಿ ತನ್ನ ರಥ ಹೂತುಹೋದಾಗ ಅರ್ಜುನನ ಬಾಣಕ್ಕೆ ಉತ್ತರವಾಗಿ ಬ್ರಹ್ಮಾಸ್ತ್ರ ಉಪಯೋಗಿಸಲಾಗದೆ ಪ್ರಾಣತೆತ್ತ ಕರ್ಣ.
*ಪರಶುರಾಮ ಕ್ಷೇತ್ರ* – ಪರಶುರಾಮ ಎಲ್ಲಾ ದುಷ್ಟ ಕ್ಷತ್ರಿಯರ ಕೊಂದ ನಂತರ ಸಮಸ್ತ ಭೂಮಂಡಲವನ್ನು ಬ್ರಾಹ್ಮಣರಿಗೆ ದಾನ ಮಾಡಿದನು. ನಂತರ ತನ್ನ ವಾಸಕ್ಕಾಗಿ ತನ್ನ ಕೊಡಲಿಯನ್ನು ಎಸೆದ (ಅಥವಾ ಬಾಣವನ್ನು ಹೊಡೆದ) ಸ್ಥಳವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬಾಗ್ಲಾನ್ ತಾಲೂಕಿನ ಸಲ್ಹೇರ್ ಕೋಟೆಯಲ್ಲಿದೆ (ಮಹಾರಾಷ್ಟ್ರದ ಎರಡನೇ ಅತಿ ಎತ್ತರದ ಶಿಖರ ಮತ್ತು ಅತಿ ಎತ್ತರದ ಕೋಟೆ). ಈ ಕೋಟೆಯ ಶಿಖರದ ಮೇಲೆ ಪರಶುರಾಮನಿಗೆ ಸಮರ್ಪಿತವಾದ ದೇವಾಲಯವಿದೆ ಮತ್ತು ಬಂಡೆಯಲ್ಲಿ ಸಾಮಾನ್ಯ ಮಾನವರ 4 ಪಟ್ಟು ಗಾತ್ರದ ಹೆಜ್ಜೆಗುರುತುಗಳಿವೆ.
ಗೋಕರ್ಣದಿಂದ ಕನ್ಯಾಕುಮಾರಿವರೆಗಿನ ಭಾರತದ ಪಶ್ಚಿಮ ಕರಾವಳಿಯ ಪ್ರದೇಶವನ್ನು ಪರಶುರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ.
ಉಡುಪಿ ಕ್ಷೇತ್ರ, ಗೋಕರ್ಣ ಇವೆಲ್ಲ ಪರಶುರಾಮ ಕ್ಷೇತ್ರಗಳು
ಆ ಕರ್ತವ್ಯ ಮುಗಿದ ಮೇಲೆ ಅವನು ಪುನಃ ಬ್ರಾಹ್ಮಣನಾಗಿ ಮಹೇಂದ್ರಗಿರಿಗೆ ಹೋಗಿ ತಪಸ್ಸಿನಲ್ಲಿ ತೊಡಗುತ್ತಾನೆ. ಪರಶುರಾಮನು ಪ್ರಾಜ್ಞ ಬ್ರಾಹ್ಮಣನಾಗಿ ಈಗಲೂ ಮಹೇಂದ್ರ ಗಿರಿಯಲ್ಲಿ ತಪಸ್ಸು ಮಾಡುತ್ತಿದ್ದಾನೆಂದು ಹೇಳುತ್ತಾರೆ.
*ಪರಶುರಾಮನ ಹಲವಾರು ಹೆಸರುಗಳಿಂದ ಕರೆಯುತ್ತಾರೆ*.
*ಭಾರ್ಗವರಾಮ* – ಭೃಗುವಂಶದಲ್ಲಿ ಜನಿಸಿದ್ದರಿಂದ.
ಭೃಗು – ಚ್ಯವನ – ಔರ್ವ – ಋಚೀಕ – ಜಮದಗ್ನಿ – ಪರಶುರಾಮ.
*ರೇಣುಕೇಯ*- ರೇಣುಕಾದೇವಿಯ ಮಗನಾದ್ದರಿಂದ
*ಜಾಮದಗ್ಯ* – ಜಮದಗ್ನಿ ಋಷಿಗಳ ಮಗನಾದ್ದರಿಂದ
*ಪರಶುಧರ / ಪರಶುರಾಮ* – ಪರಶುವನ್ನು ಹೋಗುತ್ತಿರುವುದರಿಂದ
*ಮಾತೃಕಾಚ್ಛಿದ* – ತಾಯಿಯ ತಲೆಯನ್ನು ಕಡಿದುದರಿಂದ
*ಮಾತೃಪ್ರನಾದ* – ತಲೆ ಕಡಿದ ತಾಯಿಗೆ ಮತ್ತೆ ಜೀವವನ್ನು ತಂದೆಯ ವರಮೂಲಕ ಪಡೆದಿದ್ದರಿಂದ
*ಕಾರ್ತವೀರ್ಯಾರಿ* – ತನ್ನ ತಂದೆಯ ಶಿರವ ಕಡಿದ ಕಾರ್ತವೀರ್ಯನ ಕೊಂದದ್ದರಿಂದ
*ಕ್ಷತ್ರಾಂತಕ* – 21 ಬಾರಿ ಭೂಪ್ರದಕ್ಷಿಣೆ ಮಾಡಿ ಸಮಸ್ತ ದುಷ್ಟ ಕ್ಷತ್ರಿಯರ ಕೊಂದಿದ್ದರಿಂದ
*ಸಹ್ಯಾದ್ರಿವಾಸಿ* – ಈಗಲೂ ಸಹ್ಯಾದ್ರಿಯಲ್ಲಿ ಪರಶುರಾಮ ಕ್ಷೇತ್ರ ಸೃಷ್ಟಿಸಿ ನೆಲೆಸಿದ್ದರಿಂದ
*ಚಿರಂಜೀವಿ* – ಸಪ್ತ ಚಿರಂಜೀವಿಗಳಲ್ಲಿ ಇವನೂ ಒಬ್ಬನಾದ್ದರಿಂದ