ಒಗಟಿನ ಪ್ರಶ್ನೋತ್ತರ
ಒಗಟಿನ ಪ್ರಶ್ನೆಗಳು :
೧. ಆತಿಥ್ಯ ಸ್ವೀಕರಿಸಿ ದಾಕ್ಷಿಣ್ಯಕೆ ಸಾರಥಿಯಾದವನ ; ಅಳಿಯನ ; ತಂದೆಯ; ಹಿರಿ ಮಡದಿಯ; ಹಿರಿ ಮಗನ ಆಶ್ರಯವಿತ್ತವನ ತಾಯಿಯ; ಸಹೋದರನ; ಸಂಹರಿಸಿದವನ ಮಾತೆ ಯಾರು ?
ಉತ್ತರ ; ಆತಿಥ್ಯ ಸ್ವೀಕರಿಸಿ ದಾಕ್ಷಿಣ್ಯಕೆ ಸಾರಥಿಯಾದವನ = ಶಲ್ಯನ ಅಳಿಯನ = ನಕುಲನ ತಂದೆಯ = ಪಾಂಡುವಿನ; ಹಿರಿ ಮಡದಿಯ =ಕುಂತಿಯ ಹಿರಿ ಮಗನ= ಕರ್ಣನ; ಆಶ್ರಯವಿತ್ತವನ = ದುರ್ಯೋಧನನ ; ತಾಯಿಯ = ಗಾಂಧಾರಿಯ ಸಹೋದರನಾದ = ಶಕುನಿಯ; ಸಂಹರಿಸಿದವನ – ಸಹದೇವನ ಮಾತೆ – ಮಾದ್ರಿ
*ಉತ್ತರ – ಮಾದ್ರಿ*
************
2. ಗಂಡನ ರಥವ ಓಡಿಸಿ ರಕ್ಷಿಸಿದವಳ ತಂದೆಯ ಅಳಿಯನ ಹಿರಿಮಗನ ಪತ್ನಿಯ ತಂದೆಯ ಸಹೋದರನ ಅಳಿಯನ ಅಪ್ಪನ ಕಿರಿಪತ್ನಿಯ ಸೂಸೆ ಯಾರು ?
ಉತ್ತರ :
ದಶರಥನ ಯುದ್ಧದಲ್ಲಿ ಅವನಿಗೆ ಸಹಾಯಮಾಡಿ ರಥವನ್ನು ಓಡಿಸಿದ್ದ – ಕೈಕೇಯಿಯ; ತಂದೆ – ಅಶ್ವಪತಿಯ ಅಳಿಯ – ದಶರಥನ ; ಹಿರಿಮಗ – ರಾಮನ ; ಪತ್ನಿ – ಸೀತೆಯ ತಂದೆ – ಸೀರಧ್ವಜ; ಅವನ ಸಹೋದರ – ಕುಶಧ್ವಜ ಅವನ ಅಳಿಯ – ಭರತನ; ಅವನ ತಂದೆ – ದಶರಥನ ಕಿರಿಪತ್ನಿ – ಕೈಕೇಯಿಯ ಸೊಸೆ – ಮಾಂಡವಿ.
*ಉತ್ತರ – ಮಾಂಡವಿ*
#####################
3. ಕಾಲಿಗೆ ಅಭಿಮಾನಿ ದೇವತೆಯ ರೂಪದ ವಾಯಸಕ್ಕೆ ಶಿಕ್ಷಿಸಿದವನ ಪತ್ನಿಯ ಮೈದುನನ ಮಾವನ ಸಹೋದರನ ಮಗಳ ಮಾವನ ಮೊಮ್ಮಕ್ಕಳಿಗೆ ಆಶ್ರಯ ನೀಡಿದವರು ಯಾರು ?
ಉತ್ತರ -. ಕಾಲಿಗೆ ಅಭಿಮಾನಿ ದೇವತೆ – ಜಯಂತ.; ಇವನು ವಾಯಸ ರೂಪದಲ್ಲಿದ್ದ (ಕಾಗೆ) ಅವನ ತಪ್ಪಿಗಾಗಿ ವಾಯಸಕ್ಕ (ಕಾಗೆಗೆ) ಒಂದು ಕಣ್ಣು ತೆಗೆದ – ರಾಮ. ಅವನ ಪತ್ನಿ – ಸೀತಾ ಅವಳ ಮೈದುನ – ಲಕ್ಷ್ಮಣ; ಅವನ ಮಾವ – ಕುಶಧ್ವಜ; ಅವನ ಮಡದಿ – ಶೃತಕೀರ್ತಿ, ಅವಳ ಮಾವ – ದಶರಥ; ಅವನ ಮೊಮ್ಮಕ್ಕಳು – ಲವಕುಶ; ಅವರಿಗೆ ಆಶ್ರಯ ನೀಡಿದವರು – ವಾಲ್ಮೀಕಿ
*ಉತ್ತರ – ವಾಲ್ಮೀಕಿ*
#################
4. ರಥದ ಚಕ್ರ ಹಿಡಿದು ಹೋರಾಡಿದವನ ಮಗನ ತಾಯಿಯ ತಂದೆಯ ಬಂಧಿಸಿದ್ದವನಿಂದ ಬಿಡಿಸಿದವನ ತಮ್ಮನ ಮಗ ಯಾರು ?
ಉತ್ತರ : ರಥದ ಚಕ್ರ ಹಿಡಿದು ಹೋರಾಡಿದ್ದು – ನಿರಾಯುಧನಾಗಿದ್ದ ಅಭಿಮನ್ಯು; ಅವನ ಮಗ – ಪರೀಕ್ಷಿತ ;. ಅವನ ತಾಯಿ – ಉತ್ತರೆ ; ಅವಳ ತಂದೆ – ವಿರಾಟರಾಜ ; ಅವನನ್ನು ಬಂಧಿಸಿದ್ದು – ಸುಶರ್ಮ ದುರ್ಯೋಧನನಿಗಾಗಿ ; ಅವನಿಂದ ಬಿಡಿಸಿದ್ದು – ಭೀಮ; ಅವನ ತಮ್ಮ – ಅರ್ಜುನ ; ಅವನ ಮಗ – *ಅಭಿಮನ್ಯು*
ಉತ್ತರ – ಅಭಿಮನ್ಯು
±+++++++++
5 : ದೊನ್ನೆಯಲ್ಲಿ ಸಂರಕ್ಷಿಸಲ್ಪಟ್ಟು ಜನಿಸಿದವನ ಹೆಂಡತಿಯ ಸಹೋದರನ ಸಲಹಿದವನ ಪತ್ನಿಯಲ್ಲಿ ಜನಿಸಿದವನ ಕೊಲ್ಲಲೆಂದೇ ಹುಟ್ಟಿದವನ ಸಹೋದರಿಯ ತಂದೆಯ ಅಳಿಯ ಯಾರು ?
ಉತ್ತರ :
ದೊನ್ನೆಯಲ್ಲಿ ಸಂರಕ್ಷಿಸಲ್ಪಟ್ಟು ಜನಿಸಿದವನ = *ದ್ರೋಣನ* ; ಹೆಂಡತಿಯ = *ಕೃಪಿ* ಯ; ಸಹೋದರನ = *ಕೃಪಾಚಾರ್ಯ* ; ಸಲಹಿದವನ = *ಶಂತನು*; ಪತ್ನಿಯಲ್ಲಿ = *ಗಂಗೆ* ಯಲ್ಲಿ , ಜನಿಸಿದವನ = *ಭೀಷ್ಮನ ; ಕೊಲ್ಲಲೆಂದೇ ಹುಟ್ಟಿದವನ = *ಶಿಖಂಡಿ* ಯ ; ಸಹೋದರಿಯ = *ದ್ರೌಪದಿಯ* ; ತಂದೆಯ = *ದ್ರುಪದನ* ; ಅಳಿಯ = *ಅರ್ಜುನ* (ಅಥವಾ ಪಾಂಡವರು )
=====================================
6. ಕುರುಕ್ಷೇತ್ರ ಯುದ್ದದ ಮುಹೂರ್ತ ಇಟ್ಟವನ – ತಂದೆಯ: ಸಹೋದರನ – ಅಳಿಯನ; ಹೆಂಡತಿಯ ; ಪಾಂಡವರ ಪರ ಮಾತಾಡಿದ್ದ ಸಹೋದರನ; ಕೊಂದವನ; ಮಗನ ; ಕೊಂದವನ ; ಸಾರಥಿಯ ; ತಂಗಿಯ ; ಮಕ್ಕಳು ಯಾರು ?
ಉತ್ತರ – ಕುರುಕ್ಷೇತ್ರ ಮುಹೂರ್ತ ಇಟ್ಟಿದ್ದು – ಸಹದೇವ (as sought by Duryodhana ); ಅವನ ತಂದೆ – ಪಾಂಡು ; ಅವನ ಸಹೋದರ – ದೃತರಾಷ್ಟ್ರ ಅವನ ಅಳಿಯ – ಜಯದ್ರಥ; ಅವನ ಹೆಂಡತಿ – ದುಶ್ಹಲೆ ; ಅವಳ ಸಹೋದರ (ಪಾಂಡವರ ಪರ ಮಾತಾಡಿದ್ದ ಸಹೋದರ) – ವಿಕರ್ಣ; ಅವನ ಕೊಂದವನ – ಭೀಮ; ಅವನ ಮಗ – ಘಟೋತ್ಕಚನ ; ಕೊಂದಿದ್ದು – ಕರ್ಣ ; ಅವನ ಸಾರಥಿ – ಶಲ್ಯ; ಅವನ ತಂಗಿ – ಮಾದ್ರಿ; ಅವಳ ಮಕ್ಕಳು – *ನಕುಲ ಸಹದೇವ*
======================================
7 : ಗಜರಿಪುವದನನ ಕಂಡಿಹನ ಪಿತನ ಪಿತನ ಪಿತನ ಪಿತನ ಶಪಿಸಿದವನ ಮಡದಿಯ ಗರ್ಭದಿಂದ ಬಿದ್ದವನಾರು ?
ಗಜರಿಪು ವದನನ – *ಆನೆಯ ಶತ್ರುವಾದ ಸಿಂಹಮುಖ*; ಸಿಂಹ ಮುಖ – *ನರಸಿಂಹನ*; ಕಂಡಿಹನ – *ಪ್ರಹಲ್ಲಾದನ*; ಪಿತನ – *ಹಿರಣಕಶಿಪು*; ಪಿತನ – *ಕಾಶ್ಶಪ*; ಪಿತನ – *ಮರೀಚಿ* ; ಪಿತನ – *ಬ್ರಹ್ಮ* ನಿಗೆ; ಶಪಿಸಿದವನ – ಭೃಗು ಮುನಿ; ಮಡದಿ – ಪುಲೋಮೆ; ಗಭ೯ದಿಂದ ಬಿದ್ದವನು – *ಚ್ಯವನ ಋಷಿ*
ಅಥವಾ
ಗಜರಿಪು ವದನನ – *ಆನೆಯ ಶತ್ರುವಾದ ಸಿಂಹಮುಖ*; ಸಿಂಹ ಮುಖ – *ನರಸಿಂಹನ*; ಕಂಡಿಹನ – *ಹಿರಣ್ಯಕಶಿಪು*; ಪಿತನ – *ಕಶ್ಯಪನ*; ಪಿತನ – *ಮರೀಚಿ*; ಪಿತನ – *ಬ್ರಹ್ಮ* ; ಪಿತನ – *ಶ್ರೀಹರಿ* ಗೆ; ಶಪಿಸಿದವನ – *ಭೃಗು ಮುನಿ*; ಮಡದಿ – *ಪುಲೋಮೆ*; ಗಭ೯ದಿಂದ ಬಿದ್ದವನು – *ಚ್ಯವನ ಋಷಿ*.
ಪುಲೋಮೆಯು ಗರ್ಭವತಿಯಾಗಿದ್ದಾಗ ಪುಲೋಮೆಯನ್ನು ಒಬ್ಬ ರಾಕ್ಷಸ ಅಪಹರಿಸುತ್ತಾನೆ. ಭಯಗ್ರಸ್ತೆಯಾದ ಪುಲೋಮೆಯ ಗರ್ಭದಿಂದ ಶಿಶುಚ್ಯುತವಾಗುತ್ತದೆ. ಹೀಗೆ ಗರ್ಭಚ್ಯುತನಾಗಿ ಜನಿಸಿದ ಆ ಮಗುವಿಗೆ *ಚ್ಯವನ* ನೆಂದೇ ಹೆಸರಾಯಿತು.
**********************
8.
ಮಾಸ ಎರಡಾರು: ಇಹೆನೆಂದು ಬಂದ ಗಜಪುರದರಸನ : ರಾಣಿಯ ; ಕಾಮಿಸಿದವಗಾಗಿ; ಕಾಮಿನಿಯಾದವನ ; ನಿಜಪತ್ಯಿಯಿಂದ; ಕೇಶ ಶೃಂಗರಿಸಿಕೊಂಡವಳ ; ಮಗಗೆ; ವಿಜಯ ನೀಡಿದವನ; ಶಿಷ್ಯೆಯಪುತ್ರನ ; ಮಗನ ; ಮಗನಾರು?
ಉತ್ತರ : ಮಾಸ ಎರಡಾರು – *12 ತಿಂಗಳು*, *1 ವರ್ಷ ಅಜ್ಞಾತ ವಾಸಕ್ಕೆ*, ; ಇಹೆನೆಂದು ಬಂದ ಗಜಪುರದರಸನ – *ಹಸ್ತಿನಾಪುರದರಸ ಧರ್ಮರಾಜ*; ಅವನ ರಾಣಿಯ – *ದ್ರೌಪದಿಯ* ; ಕಾಮಿಸಿದವಗಾಗಿ ; *ಕೀಚಕ* ಗಾಗಿ;
ಕಾಮಿನಿಯಾದವನ – *ಭೀಮನ*; ನಿಜಪತ್ನಿಯಿಂದ – *ಪಾಂಚಾಲಿಯಿಂದ*; ಕೇಶ ಶೃಂಗರಿಸಿಕೊಂಡವಳ – *ಸುದೇಷ್ಣೆ*; ಮಗಗೆ – *ಉತ್ತರಕುಮಾರನಿಗೆ*; ವಿಜಯ ನೀಡಿದವನ; *ಅರ್ಜುನ* (ಬೃಹನ್ನಳೆ); ಶಿಷ್ಯೆಯ ಪುತ್ರನ – *ಉತ್ತರೆಯ ಪುತ್ರನ – *ಪರೀಕ್ಷಿತನ ; ಮಗ – *ಜನಮೇಜಯ* ಪುತ್ರ – *ಶತಾನೀಕ*
————————————————-
9. ತನ್ನ ಭಾವನ ಕೊಂದ ಪಾಂಡವನ ಮಡದಿಯ ಅತ್ತೆಯ ಸೋದರಳಿಯನ ಅಣ್ಣನ ತಾಯಿಯ ಮಗಳ ಮೊಮ್ಮಗನ ಮಗ ಮಾಡಿದ ಯಾಗ ಯಾವುದು ?
ಉತ್ತರ : ತನ್ನ ಭಾವನ ಕೊಂದ ಪಾಂಡವನ – *ಹಿಡಿಂಬನ ಕೊಂದ ಭೀಮನ*; ಮಡದಿಯ – *ಹಿಡಿಂಬೆಯ*; ಅತ್ತೆಯ – *ಕುಂತಿಯ*; ಸೋದರಳಿಯನ – *ಕೃಷ್ಣನ*; ಅಣ್ಣನ – *ಬಲರಾಮನ*; ತಾಯಿಯ – *ರೋಹಿಣಿಯ*; ಮಗಳ – *ಸುಭದ್ರೆಯ*; ಮೊಮ್ಮಗನ – *ಪರೀಕ್ಷಿತನ*; ಮಗ – *ಜನಮೇಜಯ*; ಮಾಡಿದ ಯಾಗ – *ಸರ್ಪಯಾಗ*
ತನ್ನ ಭಾವನ ಕೊಂದ ಪಾಂಡವನ – *ಜಯದ್ರತನ ಕೊಂದ ಅರ್ಜುನನ*; ಮಡದಿಯ – *ದ್ರೌಪದಿಯ*; ಅತ್ತೆಯ – *ಕುಂತಿಯ*; ಸೋದರಳಿಯನ – *ಕೃಷ್ಣನ*; ಅಣ್ಣನ – *ಬಲರಾಮನ*; ತಾಯಿಯ – *ರೋಹಿಣಿಯ*; ಮಗಳ – *ಸುಭದ್ರೆಯ* ; ಮೊಮ್ಮಗನ – *ಪರೀಕ್ಷಿತನ*’ ಮಗ – *ಜನಮೇಜಯ*; ಮಾಡಿದ ಯಾಗ – – *ಸರ್ಪಯಾಗ*
==================================================
10 ಪಾರ್ಥಸಾರಥಿಯ ಸೋದರಮಾವನ ಹೆಂಡತಿಯ ತಂದೆಯ ಕೊಂದವನ ಅಗ್ರಜನ ದೊಡ್ಡಪ್ಪನ ಮಡದಿಯ ಸಹೋದರನ ಕೊಂದವನಾರು ?
ಉತ್ತರ :
ಪಾರ್ಥಸಾರಥಿಯ – ಕೃಷ್ಣನ ಸೋದರಮಾವನ – ಕಂಸನ ; ಹೆಂಡತಿಯ – ಆಸ್ತಿಪಾಸ್ತಿಯ ತಂದೆಯ – ಜರಾಸಂಧನ; ಕೊಂದವನ – ಭೀಮನ ಅಗ್ರಜನ – ಧರ್ಮರಾಜನ
ದೊಡ್ಡಪ್ಪನ – ಧೃತರಾಷ್ಟ್ರನ ಮಡದಿಯ – ಗಾಂಧಾರಿಯ ; ಸೋದರ – ಶಕುನಿಯ ಕೊಂದವ – ಸಹದೇವ
***************************
ಪ್ರಶ್ನೆ 11
ಸೂತಪುತ್ರನ ಸಾರಥಿಯ ಸೋದರಳಿಯನ ದೊಡ್ಡಮ್ಮನ ಸಹೋದರನ ಪತ್ನಿಯ ಸಹೋದರನ I ಕೊಂದವನ ಸಹೋದರಿಯ ಮಗನ ತಂದೆಯ ತಾಯಿಯ ವಿವಾಹಪೂರ್ವ ಜನಿಸಿದ ಮಗನಾರು?
ಉತ್ತರ –
ಸೂತಪುತ್ರನ – ಕರ್ಣನ ಸಾರಥಿಯ – ಶಲ್ಯನ; ಸೋದರಳಿಯನ – ನಕುಲಸಹದೇವರ; ದೊಡ್ಡಮ್ಮನ – ಕುಂತಿಯ; ಸಹೋದರನ – ವಸುದೇವನ ಪತ್ನಿಯ – ದೇವಕಿಯ; ಸಹೋದರನ – ಕಂಸನ ಕೊಂದವನ – ಕೃಷ್ಣನ; ಸಹೋದರಿಯ – ಸುಭದ್ರೆಯ ಮಗನ – ಅಭಿಮನ್ಯುವಿನ; ತಂದೆಯ – ಅರ್ಜುನನ ತಾಯಿಯ – ಕುಂತಿಯ; ವಿವಾಹಪೂರ್ವ ಜನಿಸಿದ ಮಗ = ಸೂರ್ಯಾನುಗ್ರಹದಿಂದ ಜನಿಸಿದ ಕರ್ಣ
—————————————————————————————-
ಪ್ರಶ್ನೆ 12
ಅಂಧಕನನುಜನ ಮಡದಿಯ ವಾರಗಿತ್ತಿಯ ಅಳಿಯನ ಕೊಂದವನ ಅಗ್ರಜನ ಮಾತೆಯ ಅಳಿಯನ ಮಡದಿಯ ಅಗ್ರಜನ ಅಳಿಯನಾರು ?
ಉತ್ತರ :
ಅಂಧಕನ – ಧೃತರಾಷ್ಟ್ರನ; ಅನುಜನ – ಪಾಂಡುವಿನ; ಮಡದಿಯ – ಕುಂತಿಯ ; ವಾರಗಿತ್ತಿಯ – ಗಾಂಧಾರಿಯ; ಅಳಿಯನ – ಜಯದ್ರತನ ; ಕೊಂದವನ – ಅರ್ಜುನನ; ಅಗ್ರಜನ – ಧರ್ಮರಾಜನ ; ಮಾತೆಯ – ಕುಂತಿಯ; ಅಳಿಯನ – ಕೃಷ್ಣನ ; ಮಡದಿಯ – ರುಕ್ಮಿಣಿಯ; ಅಗ್ರಜನ – ರುಕ್ಮನ ; ಅಳಿಯ – ಪ್ರದ್ಯುಮ್ನ
&&&&&&&&&&&&&&&&&&&&&&&&&&&&&&&&&&&&&&&&&&&&
ಪ್ರಶ್ನೆ 13
ನಳಿನಸಹೋದರನ ಪತ್ನಿಯ ನೆರಳ ಮಗನ ಮಲಸಹೋದರನ ತಾಯಿಯ ಅವಳಿಮಕ್ಕಳ ಪಿತನ ಪತ್ನಿಯ ಮಾವನ ಪಿತನ ಪಿತನಾರು?
ಉತ್ತರ :
ನಳಿನಸಹೋದರನ – ಸೂರ್ಯನ; ಪತ್ನಿಯ – ಸಂಜ್ಞಾದೇವಿಯ; ನೆರಳ – ಛಾಯಾ ದೇವಿಯ : ಮಗನ – ಶನಿಯ; ಮಲ ಸಹೋದರನ – ಯಮನ; ತಾಯಿಯ – ಸಂಜ್ಞಾದೇವಿಯ; ಅವಳಿ ಮಕ್ಕಳ – ಅಶ್ವಿನಿ ದೇವತೆಗಳ ; ಪಿತನ – ಸೂರ್ಯನ
ಪತ್ನಿಯ – ಕುದುರೆರೂಪದ ಸಂಜ್ಞಾದೇವಿಯ; ಮಾವನ – ಕಶ್ಯಪರ ; ಪಿತನ – ಮರೀಚಿ ; ಪಿತನಾರು – ಬ್ರಹ್ಮ
@@@@@@@@@@@@@@@@@@@@@@@@@@@@@
ಪ್ರಶ್ನೆ 14
ಕಪಿದ್ವಜನ ಸಾರಥಿಯ ಸೋದರಳಿಯನ ಭಾವಮೈದುನನ ಪಿತನ ಮಡದಿಯ ಸಹೋದರನ ಚೆಂಡಾಡಿದವನ ಅಗ್ರಜನ ದೊಡ್ಡಪ್ಪನ ಕಿರಿಸಹೋದರನ ಆತಿಥ್ಯ ಸ್ವೀಕರಿಸಿದವನ ಶಂಖ ಯಾವುದು ?
ಉತ್ತರ : ಕಪಿದ್ವಜನ – ಅರ್ಜುನನ; ಸಾರಥಿಯ – ಶ್ರೀ ಕೃಷ್ಣನ; ಸೋದರಳಿಯನ – ಅಭಿಮನ್ಯುವಿನ; ಭಾವಮೈದುನನ – ಉತ್ತರ ಕುಮಾರನ; ಪಿತನ – ವಿರಾಟರಾಜನ ; ಮಡದಿಯ – ಸುದೇಷ್ಣೆಯ; ಸಹೋದರನ – ಕೀಚಕನ ; ಚೆಂಡಾಡಿದವನ – ಭೀಮಸೇನನ; ಅಗ್ರಜನ – ಧರ್ಮರಾಜನ ; ದೊಡ್ಡಪ್ಪನ – ಧೃತರಾಷ್ಟ್ರನ; ಕಿರಿಸಹೋದರನ – ವಿದುರನ ; ಆತಿಥ್ಯ ಸ್ವೀಕರಿಸಿದವನ – ಶ್ರೀ ಕೃಷ್ಣನ; ಶಂಖ ಯಾವುದು ? – ಪಾಂಚಜನ್ಯ
####################################################
ಪ್ರಶ್ನೆ 15
ಮೇಷವಾಹನನ ( ಅಗ್ನಿಯ) ; ದ್ವಾಪರಯುಗದ ಅವತಾರದ ; ಅವನ ಭಾವನ ; ಮಡದಿಯ ಅತ್ತೆಯ; ಭಾವನ ಮಗನ ಭಾವನ ಕೊಂದವನ ಭಾವಮೈದುನನ ಭಾವಮೈದುನನ ಕೊಂದವನ ಭಾವನಾರು ?
(Note : ಭಾವ – ತಂಗಿಯ/ಅಕ್ಕನ ಗಂಡ ;. ಅಥವಾ ಗಂಡನ ಅಣ್ಣ ; ಭಾವ ಮೈದುನ – ಹೆಂಡತಿಯ ಅಣ್ಣ)
ಉತ್ತರ : ಮೇಷವಾಹನನ – ಅಗ್ನಿಯ; ದ್ವಾಪರಯುಗದ ಅವತಾರದ – ದೃಷ್ಟದ್ಯುಮ್ನನ ; ಭಾವನ – ಅರ್ಜುನನ; ಮಡದಿಯ – ದ್ರೌಪದಿಯ; ಅತ್ತೆಯ – ಕುಂತಿಯ; ಭಾವನ – ಧೃತರಾಷ್ಟ್ರನ; ಮಗನ – ದುರ್ಯೋಧನನ ಭಾವನ – ಜಯದ್ರತನ; ಕೊಂದವನ – ಅರ್ಜುನನ ಭಾವಮೈದುನನ – ಕೃಷ್ಣನ; ಭಾವಮೈದುನನ – ರುಕ್ಮಿಯ ಕೊಂದವನ – ಬಲರಾಮನ; ಭಾವನಾರು – ಅರ್ಜುನ.
*ಉತ್ತರ – ಅರ್ಜುನ*
₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹$$$$$$$$$$$$$$
ಪ್ರಶ್ನೆ 16. ಅವನು ಇವನು
ಅವನು ಗ್ರಂಥರಚಕನ ಮಗ ! ಇವನು ಮಹಾ ಗುರುವಿನ ಮಗ !
ಅವನು ಗೃಹಸ್ಥ ಇವನು ಬ್ರಹ್ಮಚಾರಿ ! ಅವನು ಶಾಸ್ತ್ರ ಅಧ್ಯಯನ ಮಾಡಿದ !
ಇವನು ಶಸ್ತ್ರ ಅಧ್ಯಯನ ಮಾಡಿದ ! ಅವನು ಭಾಗವತ ಉಪದೇಶಿಸಿದ
ಇವನು ಉಪಪಾಂಡವರ ಕೊಂದವ! *ಅವನ ಇವನ ಕಕ್ಷ್ಯ. ಯಾವುದು* ?
ಉತ್ತರ :.
ಅವನು ವೇದವ್ಯಾಸರ ಮಗ – ಶುಕಾಚಾರ್ಯ ; ಇವನು ದ್ರೋಣಾಚಾರ್ಯರ ಮಗ
ಶುಕ ಗೃಹಸ್ಥ (ಶುಕರ ಪತ್ನಿ ಪಿವಾರಿ); ಅಶ್ವತ್ಥಾಮ ಬ್ರಹ್ಮಚಾರಿ ;
ಶುಕರು ವೇದವ್ಯಾಸರಲ್ಲಿ ಶಾಸ್ತ್ರ ಅಧ್ಯಯನ ಮಾಡಿದರು
ಅಶ್ವತ್ಥಾಮರು ದ್ರೋಣರಲ್ಲಿ ಶಸ್ತ್ರ ಕಲಿತರು
ಶುಕರು ಪರೀಕ್ಷಿತಗೆ ಭಾಗವತ ಉಪದೇಶಿಸಿದರು
ಅಶ್ವತ್ಥಾಮರು ಉಪಪಾಂಡವರ ಕೊಂದರು
ಇಬ್ಬರೂ ಶಿವನ ಅವತಾರ
=======================================
ಪ್ರಶ್ನೆ 17
ನಖದಿಂದ ಸಂಹರಿಸಲ್ಪಟ್ಟವನ ಸಹೋದರನ ಸಂಹರಿಸಿದವನ ಮಗನ ಸಂಹರಿಸಿದವನ ಭಾವನ ತಾತನ ಮಾತೆಯ ಪತಿಯ ಮಗನ ಗುರುವಿನ ಉದರದಲ್ಲಿದ್ದ ದೈತ್ಯನ ಕೊಂದವನಿಂದ ಸಂಹರಿಸಲ್ಪಟ್ಟವನನ್ನು ಪಾತಾಳ ಲೋಕದಲ್ಲಿ ಎಡಗಾಲಿಂದ ಒದ್ದವನಿಂದ ಸಂರಕ್ಷಿಸಲ್ಪಟ್ಟ ದೈತ್ಯನ ದೇವದಾನವ ಯುದ್ಧದಿ ಪರ್ವತವನೆತ್ತಿದವನು ಹಿಂದೆ ಹಯಗ್ರೀವಾಸುರನ ಕೊಂದು ಮುಂದೆ ಹಯವನೇರಿದನು . ಯಾರು?
ಉತ್ತರ :
ನಖದಿಂದ ಸಂಹರಿಸಲ್ಪಟ್ಟವನ – *ಹಿರಣ್ಯ ಕಶ್ಯಪುವಿನ* ; ಸಹೋದರನ – *ಹಿರಣ್ಯಾಕ್ಷನ* ; ಸಂಹರಿಸಿದವನ – *ವರಾಹನ* ; ಮಗನ – *ನರಕಾಸುರನ* ; ಸಂಹರಿಸಿದವನ – *ಶ್ರೀಕೃಷ್ಣನ* ; ಭಾವನ – *ಅರ್ಜುನನ* ; ತಾತನ – *ವೇದವ್ಯಾಸರ* ; ಮಾತೆಯ – *ಸತ್ಯವತಿಯ* ; ಪತಿಯ – *ಶಂತನುವಿನ* ; ಮಗನ – *ಭೀಷ್ಮನ* ಗುರುವಿನ; – *ಪರಶುರಾಮನ* ; ಉದರದೊಳಿದ್ದ ದೈತ್ಯನ – *ಅತುಳನ* ; ಕೊಂದವನಿಂದ – *ರಾಮನಿಂದ* ; ಕೊಲ್ಲಲ್ಪಟ್ಟವನನ್ನ –*ರಾವಣನನ್ನು* ಪಾತಾಳಲೋಕದಿ ಎಡಗಾಲಿನಿಂದ ಒದ್ದವನಿಂದ – *ವಾಮನಾವತಾರ* ; ಸಂರಕ್ಷಿಸಲ್ಪಟ್ಟ ದೈತ್ಯನ – *ಬಲಿ ಚಕ್ರವರ್ತಿ*; ದಾನವ ಯುದ್ಧದಿ ಪರ್ವತವನ್ನೆತ್ತಿದವನ – ಕೂರ್ಮರೂಪಿಯ; ಹಿಂದೆ ಹಯಗಗ್ರೀವ ಅಸುರನ ಕೊಂದು – *ಮತ್ಸ್ಯಾವತಾರ* , ಮುಂದೆ ಹಯವನೇರಿ – ಕಲ್ಕ್ಯಾವತಾರ* ತ್ರಿಪುರ ಸ್ತ್ರೀಯರ ವೃತವ ಕೆಡಿಸಿದವಗೆ – *ಬುದ್ಧಾವತಾರಿಗೆ* ನಮೋ ನಮೋ.
ಈ ಒಗಟಿನಲ್ಲಿ ದಶಾವತಾರ ಚಿಂತನೆ ಆಗುತ್ತದೆ. ದಶಾವತಾರ ಎತ್ತಿದ ಶ್ರೀಮನ್ಮಹಾವಿಷ್ಣುವಿಗೆ ನಮಃ: !!
##############################
ಪ್ರಶ್ನೆ 18
ಧೂಳಿನಿಂದ ಮಗನ ಮಾಡಿದವಳ ಪತಿಯ ಶಿರದಲ್ಲಿಹನ ಮಗನ ಮಗನ ಮೊಮ್ಮಗ ಯಾರು ?
ಉತ್ತರ :
ಧೂಳಿನಿಂದ ಮಗನ.. *ಗಣಪತಿಯ* ಮಾಡಿದವಳ.. *ಪಾರ್ವತಿಯ*.. ಪತಿಯ.. *ರುದ್ರದೇವರ* ಶಿರದಲ್ಲಿಹನ.. *ಚಂದ್ರನ*; ಮಗನ *ಬುಧನ*; ಮಗನ *ಪುರೂರವನ*.. ಮೊಮ್ಮಗ – *ನಹುಷ*
(ಪುರೂರವನ ಮಗ. *ಆಯು* ಅವನ ಮಗ – *ನಹುಷ)
##########################
ಒಗಟಿನ ಪ್ರಶ್ನೆ 19
ಕಮಲಜನ ನಾಸಿಕಾಗ್ರದಿ ಬಂದಿಹನ ಮಡದಿಯ ಕೊಂಡೊಯ್ದವನ ಪಿತನ ಸುರಪತ್ನಿಯಲಿ ಬಂದಿಹನ ಬೆಳೆದ ಪಾದ ಸ್ಪರ್ಶದಿಂದ ಬಂದವಳ ಶಿರದಲಿ ಧರಿಸಿಹನ ವಾಹನ ಯಾವುದು?
ಉತ್ತರ:
ಕಮಲಜ- *ಕಮಲದಲ್ಲಿ ಜನಿಸಿದ ಬ್ರಹ್ಮ* ನಾಸಿಕಾಗ್ರದಿ ಬಂದಿಹನ :-*ಬ್ರಹ್ಮನ ಮೂಗಿನ ತುದಿಯಲ್ಲಿ ಅವತಾರ ಮಾಡಿದ ವರಾಹ ದೇವರು* ; ಮಡದಿಯ :- *ಭೂದೇವಿ* ಯ;. ಕೊಂಡೊಯ್ದವನ:- *ಹಿರಣ್ಯಾಕ್ಷನ* ಪಿತನ – *ಕಶ್ಯಪರ* ; ಸುರಪತ್ನಿಯಲಿ :- *ಅದಿತಿಯಲಿ* ; ಬಂದಿಹನ – *ವಾಮನ* ನಾಗಿ ಬಂದಿಹನ ; ಬೆಳೆದ ಪಾದ – *ತ್ರಿವಿಕ್ರಮನ ಪಾದ* ; ಸ್ಪರ್ಶದಿಂದ ಬಂದವಳ – *ಗಂಗೆಯ* ; ಶಿರದಲಿ ಧರಿಸಿಹನ – *ಶಿವನ*; ವಾಹನ ಯಾವುದು? – *ವೃಷಭ* (ನಂದಿ)
@@@@@@@@@@@@@@@@@@@@@@@@@@@@@
ಪ್ರಶ್ನೆ 20
ಧರ್ಮಜನಿಗೆ ಅಕ್ಷಯಪಾತ್ರೆ ನೀಡಿದವನ ಪುತ್ರನ ಜನ್ಮದಾತೆಯ ಸಹೋದರನ ಮಗನ ಉಪನಯನ ಮಾಡಿಸಿದವನ ಮಗನ ದೃಷ್ಟಿಸಿ ಕೊಂದವರಾರು ?
ಉತ್ತರ :-
ಧರ್ಮಜನಿಗೆ ಅಕ್ಷಯಪಾತ್ರೆ ನೀಡಿದವನ – *ಸೂರ್ಯನ* ; ಪುತ್ರನ – *ಕರ್ಣನ* ; ಜನ್ಮದಾತೆಯ : *ಕುಂತಿ*; ಸಹೋದರನ : *ವಸುದೇವನ* ; ಮಗನ : *ಬಲರಾಮ ಕೃಷ್ಣನ* ಉಪನಯನ ಮಾಡಿಸಿದವನ – *ಗರ್ಗ್ಯಾಚಾರ್ಯರ* ಮಗನ : *ಕಾಲಯವನ* : ದೃಷ್ಟಿಸಿ ಕೊಂದವರಾರು- *ಮುಚುಕುಂದ*
ಮುಚುಕುಂದ ಮಹಾರಾಜ ದೇವ-ದಾನವ ಯುದ್ದದಲ್ಲಿ ದೇವತೆಗಳಿಗೆ ಸಹಾಯ ಮಾಡಿರುತ್ತಾನೆ. ಆ ದೇವತೆಗಳು ಇವನಿಗೆ ನಿದ್ರಾ ವಾರ ಕೊಟ್ಟಿರುತ್ತಾರೆ ಮತ್ತು ಯಾರನ್ನು ಅವನ ನಿದ್ರೆಯಿಂದ ನಿದ್ರೆಯಿಂದ ಎದ್ದಾಗ ದರ್ಶಿಸುತ್ತಾನೋ ಅವರು ಸುಟ್ಟು ಭಸ್ಮಲಾಗಲಿ ಎಂಬ ವರವಿರುತ್ತೆ. ಆ ದುಷ್ಟ ಕಾಲಯವನ ಕೃಷ್ಣನ ಕೊಲ್ಲಲು ಉದ್ಯುಕ್ತನಾದಾಗ ಕೃಷ್ಣ ಹೆದರಿದವನಂತೆ ಓಡಿ ಓಡಿ ಹೋಗಿ ಒಂದು ಗುಹೆಗೆ ಹೋಗಿ ಸೇರುತ್ತಾನೆ. ಪರಮಾತ್ಮನ ಇಚ್ಛೆ ಮುಚುಕುಂದನ ಬಹುದೀರ್ಘ ನಿದ್ರೆಯಿಂದ ಎಬ್ಬಿಸಬೇಕು ಮತ್ತು ಕಾಲಯವನನ ಸಂಹಾರ. ಕೃಷ್ಣ ತಾನು ಹೊದ್ದಿದ್ದ ವಸ್ತ್ರವನ್ನು ಮಲಗಿದ್ದ ಮುಚುಕುಂದನ ಮೇಲೆ ಹೊದಿಸುತ್ತಾನೆ. ಕೃಷ್ಣನ ಅಟ್ಟಿಸಿಕೊಂಡು ಬಂದ ಕಾಲಯವನ ಕೃಷ್ಣನೇ ಮಲಗಿರಬಹುದೆಂದು ಅವನ ಒದೆಯುತ್ತಾನೆ. ತಕ್ಷಣ ಎದ್ದು ಮುಚುಕುಂದನಿಗೆ ಕಂಡದ್ದು ಕಾಲಯವನ. ಕೂಡಲೇ ಅವನು ಭಸ್ಮವಾಗುತ್ತಾನೆ. ಈರೀತಿ ದುಷ್ಟ ಕಾಲಯವನನ ಸಂಹಾರ ಮತ್ತು ಮುಚುಕುಂದನ ನಿದ್ರಾವಸ್ಥೆಯಿಂದ ಎಬ್ಬಿಸಿ ಅವನಿಗೆ ತನ್ನ ದರ್ಶನ ನೀಡಿ ಅನುಗ್ರಹಿಸುತ್ತಾನೆ. *ಮುಚುಕುಂದ ವರದ ಗೋವಿಂದಾಯ ನಮಃ:*
&&&&&&&&&&&&&&&&&&&&&&&&&&&&&&&&&&&&&&&&&&&&
ಒಗಟಿನ ಕ್ವಿಜ್ 21
ಸಿರಿಯು ಕುಲಸತಿ ಸುತನು ಕಮಲಜ; ಹಿರಿಯ ಸೊಸೆ ಶಾರದೆ ಸಹೋದರಿ; ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು; ನಿರುತ ಮಾಯೆಯು ದಾಸಿ ನಿಜಮಂ-
ದಿರವಜಾಂಡವು ಜಂಗಮಸ್ಥಾವರ ಕುಟುಂಬಿಗ ನೀನು ರಕ್ಷಿಸು ನಮ್ಮನನವರತ |
*ಉತ್ತರ* : ಪರಮಾತ್ಮನ ಸಂಸಾರ
ಸಿರಿಯು – ಲಕ್ಷ್ಮೀದೇವಿ ; ಕುಲಸತಿ – ಧರ್ಮಪತ್ನಿ; ಕಮಲಜ – ಕಮಲಸಂಭವನಾದ ಬ್ರಹ್ಮನು ಪುತ್ರನು; ಹಿರಿಯ ಸೊಸೆ – ಸೊಸೆ ಸರಸ್ವತಿಯು; ಸಹೋದರಿ ಗಿರಿಜೆ – ಕೃಷ್ಣನ ತಂಗಿಯಾಗಿ ಅವತರಿಸಿದ ದುರ್ಗೆ ಮಹಾಲಕ್ಷ್ಮಿಯಾದರೂ, ಅವಳ ವಿಶೇಷ ಸನ್ನಿಧಾನ ಪಾರ್ವತಿ ದುರ್ಗೆಯಲ್ಲಿದೆ. ಆದ್ದರಿಂದ ಗಿರಿಜೆ ಸಹೋದರಿ. ಅಲ್ಲದೆ ಕೃಷ್ನನ ತಂಗಿ ಸುಭದ್ರೆಯಲ್ಲೂ ಗಿರಿಜೆಯ ಆವೇಶ. ಆದ್ದರಿಂದ ಗಿರಿಜೆ ಸಹೋದರಿ.
ಮೈದುನ ಶಂಕರ – ದುರ್ಗೆಯ ಪತಿ ಶಂಕರನಾದ್ದರಿಂದ ಮೈದುನ. ಅಲ್ಲದೆ ಅರ್ಜುನ ಸುಭದ್ರೆಯ ಗಂಡ. ಅರ್ಜುನ ಇಂದ್ರನ ಅವತಾರ. ಬ್ರಹ್ಮಾಂಡ ಪುರಾಣದಂತೆ ಗರುಡ, ಶೇಷ, ರುದ್ರ ಮತ್ತು ಇಂದ್ರರು ವಾಯು-ಭಾರತೀದೇವಿಯರ ಪುತ್ರರು. ಆದ್ದರಿಂದ ಶಿವನು ಇಂದ್ರನ ಸಹೋದರ. ಆದ್ದರಿಂದ ಶಿವನೂ ಮೈದುನ.
ಸುರರು – ಇತರ ದೇವತೆಗಳು ಕಿಂಕರರು. ಮಾಯೆಯು ನಿರುತ ದಾಸಿ – ಮಾಯಾಶಕ್ತಿಯು ನಿನ್ನ ದಾಸಿ. ಮಂದಿರವಜಾಂಡವು – ಬ್ರಹ್ಮಾಂಡವೇ ನಿನ್ನ ಗೃಹ
ಜಂಗಮಸ್ಥಾವರ – ಜಡ ಚೇತನಗಳನ್ನು ಕೂಡಿದ ; ಕುಟುಂಬಿಗ ನೀನು – ಕುಟುಂಬವರ್ಗವನ್ನು ಹೊಂದಿರುವ ಶ್ರೀಹರಿ
ಆಧಾರ : ಕನಕದಾಸರ ಹರಿಭಕ್ತಿಸಾರ
ಅನುವಾದ – ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯ
&&&&&&&&&&&&&&&&&&&&&&&&&&&&&&&&&&&&&&&&&&&&
ಒಗಟಿನ ಪ್ರಶ್ನೆ 22
ಅತಿಹಿರಿಯನೆಂಬ ಗೌರವ ಹೊಂದಿದವನ ; ಪಿತನ ; ಮಡದಿಯ ಮಹರ್ಷಿಪುತ್ರನ ; ಅಂಧ ಪುತ್ರನ ; ಸಹೋದರನ ಮಧ್ಯಮಪುತ್ರನ ; ಬಾಣದಿಂದ ಹತನಾದವನ ; ನೆನಪಿನಲ್ಲಿ ಮಾಘ ಶುದ್ಧ ಅಷ್ಟಮಿ ಏನು ಆಚರಿಸುತ್ತಾರೆ?
ಉತ್ತರ – ಅತಿಹಿರಿಯನೆಂಬ ಗೌರವ ಹೊಂದಿದವನ – ಭೀಷ್ಮನ; ಪಿತನ – ಶಂತನುವಿನ ; ಮಡದಿಯ – ಸತ್ಯವತಿಯ ಮಹರ್ಷಿಪುತ್ರನ – ವೇದವ್ಯಾಸರ ; ಅಂಧ ಪುತ್ರನ – ಧೃತರಾಷ್ಟ್ರನ, ಸಹೋದರನ – ಪಾಂಡುವಿನ; ಮಧ್ಯಮಪುತ್ರನ – ಅರ್ಜುನನ; ಬಾಣದಿಂದ ಹತನಾದವನ – ಭೀಷ್ಮನ ; ನೆನಪಿನಲ್ಲಿ ಮಾಘ ಶುದ್ಧ ಅಷ್ಟಮಿ = ಭೀಷ್ಮಾಷ್ಟಮಿ ಆಚರಿಸುತ್ತಾರೆ
@@@@@@@@@@@@@@@@@@@@@@@@@@@@@
*ಒಗಟಿನ Quiz 23* :
ಜಿಂಕೆವಾಹನನ ; ಮಡದಿಯ ಅವತಾರದಿ ; ಸಹೋದರನ ; ಪಿತನ ; ಅಳಿಯನ ;ಭೀಗರ ; ಮೊಮ್ಮಗನ ; ಸಂರಕ್ಷಿಸಿದವನ ; ಸಹೋದರಿಯ ; ಅತ್ತೆ ಯಾರು ?
ಉತ್ತರ : ಜಿಂಕೆವಾಹನನ – ವಾಯುದೇವರ ; ಮಡದಿಯ ಅವತಾರದಿ – ಭಾರತಿದೇವಿ – ದ್ರೌಪದಿಯ ; ಸಹೋದರ – ದೃಷ್ಟದೃಮ್ಯನ; ಪಿತನ – ದೃಪದನ ; ಅಳಿಯನ – ಅರ್ಜುನನ; ಭೀಗರು – ವಿರಾಟನ; ಮೊಮ್ಮಗನ – ಪರೀಕ್ಷಿತನ; ಸಂರಕ್ಷಿಸಿದವನ – ಕೃಷ್ಣನ ; ಸಹೋದರಿ – ಸುಭದ್ರಳ ; ಅತ್ತೆ – ಕುಂತಿ.
&&&&&&&&&&&&&&&&&&&&&&&&&&&&&&&&&&&&&&&&&&&&
ಒಗಟಿನ ಪ್ರಶ್ನೆ 24*
ಕರ್ಣನಂತೆ ಹುಟ್ಟಿದ್ದು ಕ್ಷತ್ರಿಯ ; ಜನ್ಮನಾಮ ಶತ್ರುಜ್ಞ ; ಜನ್ಮತಂದೆ ದೇವಶ್ರವಸ್ ; ಸಾಕು ತಂದೆ ಹಿರಣ್ಯಧನು; ಬೆಳೆದಿದ್ದು ವ್ಯಾಧನಾಗಿ ; ಕಲಿತಿದ್ದು ಸ್ವಯಂ ಗುರುವಿಲ್ಲದೆ ; ಜರಾಸಂಧನ ಸೈನ್ಯಾಧಿಕಾರಿಯಾಗಿದ್ದ ತನ್ನ ಜನ್ಮಬಂಧುವಿನಿಂದ ಹತನಾದ. ಯಾರವನು?
ಉತ್ತರ : ಏಕಲವ್ಯ –
ಏಕಲವ್ಯ ವಸುದೇವನ ಸಹೋದರ ದೇವಶ್ರವಸ್ಸಿನ ಪುತ್ರನಾಗಿ ಜನಿಸಿದರೂ ತಂದೆ ತಾಯಿಯಿಂದ ಬೇರ್ಪಟ್ಟು ಹಿರಣ್ಯಧನು ಎಂಬ ವ್ಯಾಧನಿಂದ ಸಾಕಲ್ಪಟ್ಟು ವಿದ್ಯೆ ಕಲಿಯಲು ದ್ರೋಣರಿಂದ ನಿರಾಕೃತನಾಗಿ ದ್ರೋಣರನ್ನೇ ತನ್ನ ಗುರುವೆಂದು ಭಾವಿಸಿ ಪ್ರಾವೀಣ್ಯತೆ ಹೊಂದಿ, ಜರಾಸಂಧನ ಸೈನ್ಯಾಧಿಕಾರಿಯಾಗಿದ್ದು, ಯಾದವರ ಮೇಲೆ ಆಕ್ರಮಣಕ್ಕೆ ಹೋಗಿ ತನ್ನ ಜನ್ಮಬಂಧು – ದೊಡ್ಡಪ್ಪ ವಾಸುದೇವ ಪುತ್ರ ಕೃಷ್ಣನಿಂದ ಹತನಾದ.
&&&&&&&&&&&&&&&&&&&&&&&&
ಪ್ರಶ್ನೆ : 25
ಮಡಕೆಯಲ್ಲಿ ಸಂರಕ್ಷಿಸಲ್ಪಟ್ಟ ಅವನು ತನ್ನ ಕಮಂಡಲದಲ್ಲೇ ನದಿಯ ಹಿಡಿದಿಟ್ಟು ನಂತರ ಇಂದ್ರಪದವಿ ಅಪೇಕ್ಷೆ ಉಳ್ಳವನಿಂದ ಕಾಲಿನಿಂದ ಒದೆಸಿಕೊಂಡವ ಯಾರು ? ಒದ್ದವ ಯಾರು ? ಕಮಂಡಲದಲ್ಲಿ ಬಂಧಿಯಾದ ನದಿ ಯಾವುದು? ಆ ನದಿಯ ತಂದೆ ಯಾರು?
ಉತ್ತರ :
ಮಡಕೆಯಲ್ಲಿ ಸಂರಕ್ಷಿಸಲ್ಪಟ್ಟ ಅವನು – ಅಗಸ್ತ್ಯರು; ಕಮಂಡಲದಲ್ಲಿ ನದಿಯ ಹಿಡಿದಿಟ್ಟು – ಕಾವೇರಿಯ; ಇಂದ್ರಪದವಿ ಅಪೇಕ್ಷಿತ – ನಹುಷನಿಂದ; ಕಾಲಿನಿಂದ ಒದೆಸಿಕೊಂಡವ – ಅಗಸ್ತ್ಯರು; ಒದ್ದವ – ನಹುಷ; ಆ ನದಿಯ ತಂದೆ – ಕವೇರ
@@@@@@@@@@@@@@@@@@@@@@@@@@@@@
*ಒಗಟಿನ ಪ್ರಶ್ನೆ 26*
ಸರ್ಪಶಯನನ ವಾಹನನ ಆಹಾರವ ಕೊರಳಲಿ ಧರಿಸಿಹನ ಮಡದಿಯ ಪುತ್ರನು ಹೊಟ್ಟೆಗೆ ಸುತ್ತಿಕೊಂಡವನ ಯಾಗ ಮಾಡಿದವನ ಅಪ್ಪನ ಕೊಂದವನ ಹೆಸರೇನು ?
Answer for *ಒಗಟಿನ ಪ್ರಶ್ನೆ 26*
ಸರ್ಪಶಯನನ – ಪರಮಾತ್ಮನ; ವಾಹನನ – ಗರುಡನ; ಆಹಾರವ – ಸರ್ಪವ;
ಕೊರಳಲಿ ಧರಿಸಿಹನ – ಶಿವನ; ಮಡದಿಯ – ಪಾರ್ವತಿಯ; ಪುತ್ರನು – ಗಣಪತಿಯ;
ಹೊಟ್ಟೆಗೆ ಸುತ್ತಿಕೊಂಡ – ಹಾವು; ಹಾಗೂ ಅವನ ಸಹೋದರನ ಆರಾಧಿಪ ರೂಪದ (ಸುಬ್ರಹ್ಮಣ್ಯನ ಆರಾಧಿಪ ರೂಪ ಹಾವು); ಯಾಗ ಮಾಡಿದವನ – ಜನಮೇಜಯನ
ಅಪ್ಪನ – ಪರೀಕ್ಷಿತನ; ಕೊಂದವನು – *ತಕ್ಷಕ*
ಮೇಷ ಶಿರ ಪಡೆದವನ ಅಳಿಯನ ಅವತಾರದಲಿ ಭಾಗವತೋಪದೇಶ ಆಲಿಸಿದವನ ಗರ್ಭದಿ ಕೊಲ್ಲಬಯಸಿದವನ ಪಿತನ ಪಿತನ ಪಿತನ ಮಗನು ಮೃತಸಂಜೀವಿನಿ ಕಲಿಯಲು ಹೋದದ್ದು ಯಾರಲ್ಲಿ?
ಉತ್ತರ : *ಒಗಟಿನ ಪ್ರಶ್ನೆ 27*
ಮೇಷ ಶಿರ ಪಡೆದವ – *ದಕ್ಷಪ್ರಜಾಪತಿ*; ಅವನ ಅಳಿಯ *ಶಿವ*; ಶಿವನ ಅವತಾರ –*ಶುಕಾಚಾರ್ಯರು* ; ಅವರ ಭಾಗವತ ಉಪದೇಶ ಆಲಿಸಿದವರು. ….*ಪರೀಕ್ಷಿತ್*
ಅವನು ಗರ್ಭದಲ್ಲಿದ್ದಾಗ ಕೊಲ್ಲಬಯಸಿದವರು – *ಅಶ್ವತ್ಥಾಮಾಚಾರ್ಯರು*;
ಅವರ ಪಿತ.. *ದ್ರೋಣಾಚಾರ್ಯರು*; ಅವರ ಪಿತ – *ಭಾರಧ್ವಾಜರು*;
ಅವರ ಪಿತ – *ಬೃಹಸ್ಪತ್ಯಾಚಾರ್ಯರು*; ಅವರ ಮಗ – *ಕಚ*;
ಮೃತಸಂಜೀವಿನಿ ವಿದ್ಯೆ ಕಲಿಯಲು ಹೋದದ್ದು – *ದೈತ್ಯಗುರು ಶುಕ್ರಾಚಾರ್ಯರಲ್ಲಿ*.
==============================================
ಒಗಟಿನ ಪ್ರಶ್ನೆ 28
ಅಂಧಕನ ಮಡದಿಯ ಹೆಮ್ಮಗನ ಮಾತುಳನ ಸೋದರಸೊಸೆಯ ಭರ್ತೃವಿನ ಕೊಂದವನ ಅನುಜನ ಮಾತುಳನ ಸಹೋದರಿಯ ಪತಿಯ ಹಿರಿಮಡದಿಯ ಹೆಮ್ಮಗನಾರು ?
ಅಂಧಕನ – *ಧೃತರಾಷ್ಟ್ರನ*; ಮಡದಿಯ – *ಗಾಂಧಾರಿಯ*; ಹೆಮ್ಮಗ – *ದುರ್ಯೋಧನನ*; ಮಾತುಳನ – *ಶಕುನಿಯ*; ಸೋದರಸೊಸೆಯ – *ದುಶ್ಶಲೆಯ*; ಭತ್ರೃವಿನ – *ಜಯದ್ರತನ*; ಕೊಂದವನ – *ಅರ್ಜುನನ*; ಅನುಜನ – *ನಕುಲ ಸಹದೇವರ*; ಮಾತುಳನ – *ಮದ್ರರಾಜ ಶಲ್ಯನ*; ಸಹೋದರಿಯ – *ಮಾದ್ರಿಯ*; ಪತಿಯ – *ಪಾಂಡುರಾಜನ*; ಹಿರಿಯ ಮಡದಿ – *ಕುಂತಿಯ*; ಹೆಮ್ಮಗ – *ಧರ್ಮರಾಜ*
================================================
*ಒಗಟಿನ ಪ್ರಶ್ನೆ 29*
ಮಿಥಿಲಾಧಿಪನ ಪುತ್ರಿಯ ಪತಿಯ ಕನಿಷ್ಠ ಭ್ರಾತೃವಿಗೆ ಕನ್ಯಾದಾನ ಮಾಡಿದವನ ಭೀಗರಿಗೆ ಶಪಿಸಿದವನ ಮಗನಾರು ?
ಉತ್ತರ : ಮಿಥಿಲಾಧಿಪನ – *ಜನಕರಾಜನ*; ಪುತ್ರಿಯ ಪತಿಯ – *ರಾಮಚಂದ್ರನ*; ಕನಿಷ್ಠ ಭ್ರಾತೃವಿಗೆ. – *ಶತ್ರುಜ್ಞನಿಗೆ*; ಕನ್ಯಾದಾನ ಮಾಡಿದವನ *ಕುಶಧ್ವಜನ*; ಭೀಗರಿಗೆ – *ದಶರಥನಿಗೆ*; ಶಪಿಸಿದವನ – *ಕುರುಡ ದಂಪತಿಗಳ*;
ಮಗ – *ಶ್ರವಣಕುಮಾರ*
==================================================
ಒಗಟಿನ ಪ್ರಶ್ನೆ 30
ಕಂಬವೇ ತಂದೇತಾಯಿಯಾಗಿ ಬಂದವನಿಂದ ಹತನಾದವನ ಪಿತನ ಮಾತೆಯ ಪಿತನ ಮಗನಿಂದ ಉಪದೇಶ ಪಡೆದವರಾರು ?
Answer : ಕಂಬಸುತನಿಂದ – *ನರಸಿಂಹ ದೇವರಿಂದ*; ಹತನಾದವನ – *ಹಿರಣ್ಯಶಿಶುವಿನ*; ಪಿತನ – *ಕಶ್ಯಪನ*; ಮಾತೆಯ – *ಕಲೆಯ*; ಪಿತನ – *ಕರ್ದಮನ*; ಮಗನಿಂದ – *ಕಪಿಲ ಋಷಿಯಿಂದ*; ಉಪದೇಶ ಪಡೆದವರು – *ದೇವಹೂತಿ*. *ಉತ್ತರ : ದೇಶಹೂತಿ*
=============================================
ಒಗಟಿನ ಪ್ರಶ್ನೆ 31*
ಹೊಸ್ತಿಲಲ್ಲಿ ಸತ್ತವನ ಪೌತ್ರನ ಕೊಂದವನ ಪಿತನ ಪಿತನ ಪಿತನ ಪಿತನ ಮಡದಿಯ ದೇವಸ್ಥಾನ ಎಲ್ಲಿದೆ? (ಅತಿ ಪ್ರಸಿದ್ಧ ದೇವಸ್ಥಾನ)
Answer :
ಹೊಸ್ತಿಲಲ್ಲಿ ಸತ್ತವನ – *ಹಿರಣ್ಯಕಶಿಪುವಿನ*; ಪೌತ್ರನ – *ವಿರೋಚನನ*; ಕೊಂದವನ – *ಇಂದ್ರನ*; ಪಿತನ – *ಕಶ್ಯಪರ*; ಪಿತನ – *ಮರೀಚಿಯ*; ಪಿತನ – *ಬ್ರಹ್ಮನ*; ಪಿತನ – *ಪರಮಾತ್ಮನ*; ಮಡದಿ – *ಲಕ್ಷ್ಮೀದೇವಿಯ*;
ದೇವಸ್ಥಾನ – *ಕೊಲ್ಹಾಪುರದಲ್ಲಿದೆ*
==================================================
ಒಗಟಿನ ಪ್ರಶ್ನೆ 32
ಹಂಸವಾಹನನ ನಾಸಿಕಾಗ್ರದಿ – ಜನಿಸಿಹನಿಂದ ಆಶ್ರಿತನಾದವನ ವಿವಾಹಕ್ಕಾಗಿ ಸಾಲನೀಡಿದವನ ಕುಬೇರನ ಪಿತಾಮಹನ ಶ್ವಶುರನ ಪುತ್ರಿಗಾಗಿ ಪ್ರಕಟವಾದ ರೂಪ ಯಾವುದು ?
Answer for ಒಗಟಿನ ಪ್ರಶ್ನೆ 32
ಹಂಸವಾಹನನ – ಬ್ರಹ್ಮನ; ನಾಸಿಕಾಗ್ರದಿ – ಮೂಗಿನ ತುದಿಯಲ್ಲಿ ; ಜನಿಸಿಹನಿಂದ – ವರಾಹನಿಂದ; ಆಶ್ರಿತನಾದವನ – ಶ್ರೀನಿವಾಸನ; ವಿವಾಹಕ್ಕಾಗಿ ಸಾಲನೀಡಿದವನ – ಕುಬೇರನ ; ಪಿತಾಮಹನ – ಪೌಲಸ್ತ್ಯನ ; ಶ್ವಶುರನ – ಕರ್ದಮನ
(ಕರ್ದಮನ ಮಗಳು ಹವಿರ್ಭುಕ್ ಪುಲಸ್ತ್ಯನ ಪತ್ನಿ) (ಅನುಸೂಯ ಕೂಡ ಕರ್ದಮನ ಮಗಳು, ಅತ್ರಿ ಪತ್ನಿ) ಪುತ್ರಿಗಾಗಿ – ಅನುಸೂಯಗಾಗಿ ಪ್ರಕಟವಾದ ರೂಪ – ದತ್ತ ರೂಪ.
( ಇಲ್ಲಿ ಗಮನಿಸಿ : ದತ್ತ ರೂಪ ಶ್ರೀಹರಿಯ ರೂಪ. ಬ್ರಹ್ಮನ ಅಂಶದೊಂದಿಗೆ ಚಂದ್ರನೂ, ಶಿವನು ದುರ್ವಾಸನಾಗಿಯೂ ಅವತರಿಸುತ್ತಾರೆ. ಈ ಮೂವರೂ ಪ್ರತ್ಯೇಕ . ದತ್ತಾತ್ರೇಯ ಅಂದರೆ ಅತ್ರಿ ಋಷಿಗಳ ಮಗನಾಗಿದ್ದರಿಂದ ದತ್ತಾತ್ರೇಯನೇ ಹೊರತು ಒಂದೇ ರೂಪದಲ್ಲಿ ಮೂವರೂ ಇದ್ದಾರೆಂದು ತಿಳಿಯಬಾರದು – ಆಚಾರ್ಯ ಮಧ್ವರು)
++++++++++++++++++++++++++++++++++++++++++++++++++
ಒಗಟಿನ ಪ್ರಶ್ನೆ 33 :
ಬಲರಾಮನ ಮಗಳ ಪತಿಯ ಪಿತನ ಮಾತೆಯ ಸಹೋದರನ ಬಂಧಿಸಿದವನ ಸಹೋದರಿಯ ಮಗಳ ಸುತನ ಸುತನ ಮಾತುಳನ ಪಿತನ ಸತಿಯ ಸಹೋದರನ ಕೊಂದವನಾರು? –
—————————————————————————————-
ಐರಾವತ ವಾಹನನ ಸತಿಯ ಸುತನ ತ್ರೇತಾಯುಗ ಅವತಾರನ ನಿಗ್ರಹಿಸಿದವನ ಭಾರ್ಯೆಯ ಹೊತ್ತೊಯ್ದವನ ಮಡದಿಯ ಪಿತನ ಮಾತೆಯ ಪಿತ ಯಾರು?
*Answer for ಒಗಟಿನ ಪ್ರಶ್ನೆ 34*
ಐರಾವತ ವಾಹನನ: *ಇಂದ್ರನ*; ಸತಿಯ – *ಶಚೀದೇವಿಯ*; ಸುತನ: – *ಜಯಂತನ* ತ್ರೇತಾಯುಗ ಅವತಾರನ: – *ಕಾಕಾಸುರ (ಕಾಗೆಯ ರೂಪ)* ನಿಗೃಹಿಸಿದವನ: *ಶ್ರೀ ರಾಮ* ; ಭಾರ್ಯೆಯ – *ಸೀತೆಯ*; ಹೊತ್ತೊಯ್ದವನ: *ರಾವಣನ* ; ಮಡದಿಯ – *ಮಂಡೋದರಿಯ*; ಪಿತನ – *ಮಯಾಸುರನ* ಮಾತೆಯ – *ದಿತಿಯ* ; ಪಿತ – *ದಕ್ಷ ಪ್ರಜಾಪತಿ*
=========================================
*ಒಗಟಿನ ಪ್ರಶ್ನೆ 35* ಪ್ರತಿಯೊಂದು ರೂಪವನ್ನೂ ಬಿಡಿಸಿ ಹೇಳಿ
ಸತ್ಯವ್ರತಗೆ ಪ್ರಳಯ ತೋರ್ದೆ | ಅಮೃತನೀಡಲು ಭಾರವ ಹೊತ್ತೆ |
ಸಜ್ಜನ ದುರ್ಜನಗೆ ತಕ್ಕಮತ ನೀಡ್ದೆ| ಕೋರೆಯಿಂ ವಸುಧೆಯನೆತ್ತ್ದೆ |
ಭಿಕ್ಷಾಟಿಸಿ ಬಾಗಿಲ ಕಾಯ್ದೆ | ಕೋಪ ತಣಿಸಿ ಕಾಲೊತ್ತ್ದೆ |
ವಸ್ತ್ರವನಿತ್ತು ಎಂಜಲು ಬಳ್ದೆ | ಕಲ್ಲು ತುಳಿದು ಎಂಜಲು ತಿಂದೆ |
ಮಾತೆಯಕಡಿದೆ ಕೊಡಲಿ ಹಿಡ್ದೆ | ಭೂಲೋಕದಿ ಹುತ್ತದಿ ವಾಸಿಸಿದೆ |
ಭಕುತನಿಗಾಗಿ ಕಂಬಸುತನಾದೆ| ಯುಗಸಮಾಪ್ತಿಗೆ ಹಯವನೇರ್ವೆ|
ನರಹರಿವಿಠಲಗೆ ಅನುಗ್ರಹಿಸಿದೆ |
Answer for ಒಗಟಿನ ಪ್ರಶ್ನೆ 35 :
ಸತ್ಯವ್ರತಗೆ ಪ್ರಳಯ ತೋರ್ದೆ- *ಮತ್ಸ್ಯಾವತಾರ*
ಅಮೃತನೀಡಲು ಭಾರವ ಹೊತ್ತೆ – *ಕೂರ್ಮಾವತಾರ*
ಸಜ್ಜನ ದುರ್ಜನಗೆ ತಕ್ಕಮತ ನೀಡ್ದೆ – *ಬುದ್ಧಾವತಾರ*
ಕೋರೆಯಿಂ ವಸುಧೆಯನೆತ್ತ್ದೆ – *ವರಾಹಾವತಾರ*
ಭಿಕ್ಷಾಟಿಸಿ ಬಾಗಿಲ ಕಾಯ್ದೆ – *ವಾಮನಾವತಾರ*
ಕೋಪ ತಣಿಸಿ ಕಾಲೊತ್ತ್ದೆ – *ಶ್ರೀಹರಿ* (ಭೃಗು ಋಷಿಗಳು ಎದೆಗೆ ಒದ್ದಾಗ)
ವಸ್ತ್ರವನಿತ್ತು ಎಂಜಲು ಬಳ್ದೆ – *ಕೃಷ್ಣಾವತಾರ*
(ದ್ರೌಪದಿ ವಸ್ತ್ರಾಪಹರಣ ಸಂದರ್ಭ ವಸ್ತ್ರವಿತ್ತ ಮತ್ತು ಪಾಂಡವರ ರಾಜಸೂಯ ಯಾಗದಲ್ಲಿ ಎಂಜಲು ಬಳಿದ)
ಕಲ್ಲು ತುಳಿದು ಎಂಜಲು ತಿಂದೆ – *ರಾಮಾವತಾರ* (ಅಹಲ್ಯಾ ಶಾಪ ವಿಮೋಚನೆ ಮತ್ತು ಶಬರಿ ಪ್ರಸಂಗ)
ಮಾತೆಯಕಡಿದೆ ಕೊಡಲಿ ಹಿಡ್ದೆ – *ಪರಶುರಾಮಾವತಾರ* (ತಂದೆಯ ಮಾತಿನಂತೆ ತಾಯಿಯ ಶಿರವ ಕಡಿದ)
ಭೂಲೋಕದಿ ಹುತ್ತದಿ ವಾಸಿಸಿದೆ – *ಶ್ರೀನಿವಾಸ* ರೂಪದಿ ಹುತ್ತದಿ ವಾಸ
ಭಕುತನಿಗಾಗಿ ಕಂಬಸುತನಾದೆ – *ನರಸಿಂಹಾವತಾರ*
ಯುಗಸಮಾಪ್ತಿಗೆ ಹಯವನೇರ್ವೆ – *ಕಲ್ಕ್ಯಾವತಾರ*
ನರಹರಿವಿಠಲಗೆ ಅನುಗ್ರಹಿಸಿದೆ
————————————————————-
ಸ್ತಂಭಾರ್ಭಕನ ಭಕುತನ ಪಿತಾಮಹನ ಪಿತಾಮಹನ ಜನಕನ ಮಡದಿಯ ವಾಸಸ್ಥಾನವ ಸ್ಪರ್ಶಿಸಿದವನ ಪ್ರಪೌತ್ರನ ಹೆಸರಿನಲ್ಲಿರುವ ಪುರಾಣ ಯಾವುದು ?
—————————————————————————-
ಕಾಲಲಿ ಒದ್ದು ಕೊಂದವನು ಮಲಗಿದವನಿಂದ ಕೊಲ್ಲಿಸಿದ ! ತಾನೊಂದಗಳನುಂಡು ಕೋಪದ ಋಷಿಯ ಹೊಟ್ಟೆ ತುಂಬಿಸಿದ ! ಶಿರ ಬಳಿಯಿದ್ದ ದುರುಳನ ನೋಡದೆ ಕಾಲ ಬಳಿಯಿದ್ದವನ ಮಿತ್ರನ ಕಂಡ ! ದಿವಾಕರನ ಮರೆಮಾಡಿ ವಂಚಕನ ಹೊರತಂದ ! ತಾ ಶಸ್ತ್ರ ಹಿಡೀಯದೇ ಎಲ್ಲರಲಿ ನಿಂತು ತಾನೇ ಮಾಡ್ದ!
Answer for ಒಗಟಿನ ಪ್ರಶ್ನೆ 37 :
ಕಾಲಲಿ ಒದ್ದು ಕೊಂದವನು -. *ಶಕಟಾಸುರ ಸಂಹಾರ*;
ಮಲಗಿದವನಿಂದ ಕೊಲ್ಲಿಸಿದ – ದೇವತೆಗಳಿಗೆ ದೈತ್ಯರೊಂದಿಗೆ ಸಹಾಯ ಮಾಡಿ ನಿದ್ರಾ ವರ ಪಡೆದು ಯಾರು ಮುಚುಕುಂದನನ್ನು ಎಬ್ಬಿಸುವರೋ ಅವರು ಭಸ್ಮವಾಗಿ ಎಂಬ ವರ ಸತ್ಯ ಮಾಡಲು ಕೃಷ್ಣನು ಕಾಲಯವನನನ್ನು ಮುಚಕುಂದನಿಂದ ಕೊಲ್ಲಿಸಿದ.
*ತಾನೊಂದಗಳನುಂಡು*- ದುರ್ಯೋಧನನಿಂದ ಪ್ರೇರಿತರಾಗಿ ಬಂದ ದುರ್ವಾಸ ಋಷಿಗಳು 1೦ ಸಹಸ್ರ ಮುನಿಗಳಿಂದ ಕೂಡಿ ಪಾಂಡವರು ವನವಾಸದಲ್ಲಿದ್ದಾಗ ಭಿಕ್ಷೆಗೆ ಬರಲು, ಶ್ರೀಕೃಷ್ಣನು ಅಕ್ಷಯ ಪಾತ್ರೆಯಲಿ ಒಂದಗಳ ಸೃಷ್ಟಿಸಿ ಉಂಡು, ಅವರೆಲ್ಲರಿಗೂ ಹೊಟ್ಟೆ ತುಂಬುವ ಹಾಗೆ ಮಾಡಿದ.॥
*ಶಿರ ಬಳಿಯಿದ್ದ ದುರುಳನ ನೋಡದೆ*- ಯುದ್ಧಕ್ಕೆ ಸಹಾಯಕೇಳಲು ಹೋಗಿ, ಶಿರ ಬಳಿಯಲ್ಲಿದ್ದ ದುರ್ಯೋಧನನನ್ನು ಲೆಕ್ಕಿಸದೆ, ಕಾಲಬಳಿಯಿದ್ದ ಅರ್ಜುನನಿಗೆ ಸಹಾಯ ಹಸ್ತ ನೀಡಿದ
*ದಿವಾಕರನ ಮರೆಮಾಚಿ* – ಅರ್ಜುನನ ಶಪಥ ಪೂರೈಸಲು ಸೂರ್ಯನನ್ನು ಮರೆಮಾಡಿ
*ವಂಚಕನ ಹೊರತಂದ* – ಸೂರ್ಯ ಮುಳುಗಿದನೆಂದು ಭಾವಿಸಿ ಹೊರಬಂದ ಜಯದ್ರಥನನ್ನು ಕೊಲ್ಲಲು ಅನುವು ಮಾಡಿದೆ.
ತಾ ಶಸ್ತ್ರ ಹಿಡೀಯದೇ ಎಲ್ಲರಲಿ ನಿಂತು ತಾನೇ ಮಾಡ್ದ! – ಮಹಾಭಾರತದ ಯುದ್ಧದಿ ತಾನು ಶಸ್ತ್ರಾಸ್ತ್ರಗಳನ್ನು ಹಿಡಯದೇ ಎಲ್ಲವನ್ನೂ ತಾನೇ ಮಾಡಿ ಮಾಡಿಸಿ ತನ್ನ ಸರ್ವ ನಿಯಾಮಕತ್ವ ಸರ್ವ ಪ್ರೇರಕತ್ವ ಪ್ರತಿಪಾದಿಸಿದ
==================================================
*ಒಗಟಿನ ಪ್ರಶ್ನೆ 38*
ಸರ್ಪಯಾಗ ಕರ್ತೃವಿನ ಪಿತನ ಮಾತುಳನ ಭಾವನ ಪಿತಾಮಹನ ಅಗ್ರಜನ ಪುತ್ರಿಯ ಚಿಕ್ಕಪ್ಪನ ಹಿರಿಮಗನ ರಕ್ತ ನೆಲಕ್ಕೆ ಬೀಳದಂತೆ ತಡೆದವರಾರು ?
==================================================
ಮದುವೆ ದಿನದಿ ವರ ಕನ್ಯೆ ದರ್ಶಿಸುವ ಕ್ಷತ್ರದ ಪತಿಯ ಪುತ್ರನ ಪುತ್ರನ ಪುತ್ರನ ಪುತ್ರನಿಂದ ಭೋಜನ ಸ್ವೀಕರಿಸಿ ಎಲ್ಲಾ ಬ್ರಾಹ್ಮಣರಿಗೆ ಭೋಜನ ಸುಖ ನೀಡಿದವನಾರು?
==================================================
ಒಗಟಿನ ಪ್ರಶ್ನೆ 40*
ಸಕಲ ಭೂಮಂಡಲವ ದಾನ ಮಾಡಿದವನ ಮಡದಿಯ ಮಾವನ ಪಿತನ ಮಾತೆಯ ಗರ್ಭದಲ್ಲಿರುವ ಮಗುವಿಗೆ ಉಪದೇಶಿಸಿದವರ ಹೆಸರಿನಲ್ಲಿರುವ ಪುರಾಣದ ಹೆಸರೇನು?
ಉತ್ತರ : – ಸಕಲಭೂಮಂಡಲವ ದಾನ ಮಾಡಿದವ – ಬಲಿಚಕ್ರವರ್ತಿ, ಆತನ ಪತ್ನಿ- ವಿಂಧ್ಯಾವಳಿ , ಆಕೆಯ ಮಾವ – ವಿರೋಚನ, ಆತನ ತಂದೆ – ಪ್ರಹ್ಲಾದ, ಆತನ ತಾಯಿ – ಕಯಾದು ಆಕೆಯ ಗರ್ಭದಲ್ಲಿ ಪ್ರಹ್ಲಾದನಿದ್ದಾಗ ಉಪದೇಶ ಮಾಡಿದ ವ್ಯಕ್ತಿ – ನಾರದರು , ಅವರ ಹೆಸರಿನ ಪುರಾಣ – ನಾರದೀಯ ಪುರಾಣ.
—————————————————————————————-
ಒಗಟಿನ ಪ್ರಶ್ನೆ 41
ಭೂದೇವಿಯ ಒಯ್ದವನ ಕೊಂದವನ ಮಡದಿಯ ದ್ವಾಪರಯುಗ ಸುತನ ಕೊಂದವನ ಪತ್ನಿಯ ನಾದಿನಿಯ ಪತಿಯ ಪಿತನ ಪಿತನಾರು?
ಉತ್ತರ :
ಭೂದೇವಿಯ ಒಯ್ದವನ – *ಹಿರಣ್ಯಾಕ್ಷನ*; ಕೊಂದವನ – *ವರಾಹದೇವರ*; ಮಡದಿಯ – *ಭೂದೇವಿಯ*; ದ್ವಾಪರಯುಗ ಸುತನ – *ನರಕಾಸುರನ* ; ಕೊಂದವನ – *ಕೃಷ್ಣನ* ಪತ್ನಿಯ – *ರುಕ್ಮಿಣಿಯ*; ನಾದಿನಿಯ – *ಸುಭದ್ರೆಯ*; ಪತಿಯ – *ಅರ್ಜುನನ*; ಪಿತನ – *ಪಾಂಡುರಾಜನ*; ಪಿತನಾರು? – *ವೇದವ್ಯಾಸರು*
^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^
ಒಗಟಿನ ಪ್ರಶ್ನೆ 42-
ಸುಳ್ಳು ಹೇಳದವನ ಮಾತು ನಂಬಿ ನಾರಾಯಣಾಸ್ತ್ರ ಪ್ರಯೋಗಿಸಿದರೂ ಹೆದರದವನಿಗಾಗಿ ವಾರುಣಾಸ್ತ್ರ ಪ್ರಯೋಗಿಸಿದವನ ಗುರುವಿನ ಪುತ್ರನ ಸೋದರಮಾವ ಯಾರು?
*ಉತ್ತರ*:
ಸುಳ್ಳು ಹೇಳದವನ – *ಧರ್ಮರಾಜರ* ಮಾತು ನಂಬಿ – *ಅಶ್ವತ್ಥಾಮ ಹೆಸರಿನ ಆನೆ ಸತ್ತ ವಿಷಯ ಮಗ ಸತ್ತನೆಂದು ನಂಬಿದಾಗ*; ನಾರಾಯಣಾಸ್ತ್ರಕ್ಕೂ – *ಅಶ್ವತ್ಥಾಮ ಪ್ರಯೋಗಿಸಿದ ನಾರಾಯಣಾಸ್ತ್ರಕ್ಕೂ* ; ಹೆದರದ *ಭೀಮಸೇನದೇವರಿಗಾಗಿ*
ವಾರುಣಾಸ್ತ್ರ – *ಅದರ ಪ್ರಖರತೆ ತಡೆಯಲು ಪ್ರಯೋಗಮಾಡಿದ*- ಅರ್ಜುನರ ಗುರುಗಳ – *ದ್ರೋಣಾಚಾರ್ಯರ* ಪುತ್ರರ – *ಅಶ್ವತ್ಥಾಮಚಾರ್ಯರ* ಅವರ ಸೋದರ ಮಾವ – *ಕೃಪಾಚಾರ್ಯರು*
***************************************************************************
*ಒಗಟಿನ ಪ್ರಶ್ನೆ 43*:
ಇಬ್ಬರು ತಾಯಿಯರ ಅರ್ಧರ್ಧ ದೇಹ ಸಂಧಿಸಿದವಳನ್ನು ಗದೆಯ ಎಸೆದು ಕೊಂದವನ, ಕೊಂದವನ, ಅನುಜನ ಯಾದವ ಮಡದಿಯ, ಕಿರಿ ಅಣ್ಣನ ಹಿರಿ ಮಡದಿಯ ಸಹೋದರನ ಅಳಿಯನ ತಂದೆ ಯಾರು?
*ಉತ್ತರ* :
ಇಬ್ಬರು ತಾಯಿಯರಿಂದ – *ಬೃಹದ್ರತನ ಅವಳಿ ಜವಳಿ ಮಡದಿಯರಿಂದ*; ಅರ್ಧರ್ಧ ದೇಹ – *ಮಗುವಿನ ದೇಹ*; ಸಂಧಿಸಿದವಳ- *ಜರಾ ಎಂಬ ರಾಕ್ಷಸಿ*; ಕೊಂದವನ – *ಜರಾಸಂಧನ*; ಕೊಂದವನ – *ಭೀಮಸೇನನ*; ಅನುಜನ – *ಅರ್ಜುನನ*; ಯಾದವ ಮಡದಿಯ – *ಸುಭದ್ರೆಯ*; ಕಿರಿ ಅಣ್ಣನ – *ಕೃಷ್ಣನ*; ಹಿರಿಮಡದಿಯ – *ರುಕ್ಮಿಣಿಯ*; ಸಹೋದರನ – *ರುಕ್ಮಿಯ* ಅಳಿಯನ – *ಪ್ರದ್ಯುಮ್ನನ*; ತಂದೆ ಯಾರು? – *ಕೃಷ್ಣ*
ಬೃಹದ್ರಥ ಮಹಾರಾಜನ ಇಬ್ಬರು ರಾಣಿಯರು (ಅವಳಿ ಸಹೋದರಿ) ಮಕ್ಕಳಿಲ್ಲದಿದ್ದರಿಂದ ಚಂದ್ರಕೌಶಿಕನೆಂಬ ಋಷಿಯಿಂದ ಮಂತ್ರಿಸಲ್ಪಟ್ಪ ಹಣ್ಣನ್ನು ಇಬ್ಬರಿಗೂ ಸಮಪಾಲು ಮಾಡಿದ್ದರಿಂದ ಇಬ್ಬರಿಗೂ ಅರ್ಧರ್ಧ ದೇಹವುಳ್ಳ ಮಗುವು ಜನಿಸಲು ಆ ಮಗುವನ್ನು ಬಿಸಾಡಿರಲು *ಜರಾ* ಎಂಬ ರಾಕ್ಷಸಿಯಿಂದ ಜೋಡಿಸಲ್ಪಟ್ಟಿದ್ದರಿಂದ *ಜರಾಸಂಧ* ಅಂತ ಅವನ ಹೆಸರು.
***************************************************************************
ಒಗಟಿನ ಪ್ರಶ್ನೆ 44*
ಭೂದೇವಿಯಪಹರಿಸಿದವನ ಅಗ್ರಜನ ಪಿತನ ಪುತ್ರನಿಂದ ಪಾತಾಳಕ್ಕೆ ತಳ್ಳಲ್ಪಟ್ಟವನ ಗುರುವಿನ ಪಿತನ ಮಡದಿಯ ಗರ್ಭಚ್ಯುತಿಯಾಗಿ ಜನಿಸಿದವನಾರು?
ಉತ್ತರ : ಭೂದೇವಿಯಪಹರಿಸಿದವನ – ಹಿರಣ್ಯಾಕ್ಷನ; ಅಗ್ರಜನ – ಹಿರಣ್ಯಕಶಿಪುವಿನ ; ಪಿತನ – ಕಶ್ಯಪರ; ಪುತ್ರನಿಂದ – ವಾಮನನಿಂದ; ಪಾತಾಳಕ್ಕೆ ತಳ್ಳಲ್ಪಟ್ಟವನ – ಬಲಿಚಕ್ರವರ್ತಿಯ; ಗುರುವಿನ – ಶುಕ್ರಾಚಾರ್ಯರ; ಪಿತನ – ಭೃಗುವಿನ; ಮಡದಿಯ – ಪುಲೋಮಳ; ಗರ್ಭಚ್ಯುತಿಯಾಗಿ ಜನಿಸಿದವರು – ಚ್ಯವನ ಋಷಿ
==================================================
*ಒಗಟಿನ ಪ್ರಶ್ನೆ 45*
13 ಮಡದಿಯರ ಹೊಂದಿದವನ ; ಪಿತನ ; ಬೀಗರ ; 27 ಮಕ್ಕಳ ವಿವಾಹವಾದವನಿಗೆ ; ಶಪಿಸಿದವನ ; ತಾಯಿಯ ; ಪಿತನಾರು ?
Answer for *ಒಗಟಿನ ಪ್ರಶ್ನೆ 45*
13 ಮಡದಿಯರ ಹೊಂದಿದವನ – ಕಶ್ಯಪನ; ಪಿತನ – ಮರೀಚಿ ಮುನಿಯ; ಬೀಗರ – ದಕ್ಷಪ್ರಜಾಪತಿಯ; 27 ಮಕ್ಕಳ ವಿವಾಹವಾದವನಿಗೆ – ಚಂದ್ರನ; ಶಪಿಸಿದವನ – ಗಣಪತಿಯ; ತಾಯಿಯ – ಪಾರ್ವತಿಯ; ಪಿತ – ಪರ್ವತರಾಜ ಹಿಮವಂತ
####################################################
*ಒಗಟಿನ ಪ್ರಶ್ನೆ 46*
ಅಷ್ಟಮ ಗರ್ಭಸಂಜಾತನಿಂದ ; ಪುಷ್ಪ ಯಾಚಿಸಿದ ಭಾರ್ಯೆಯ ; ಪಿತನ ; ಸಹೋದರನ : ಕೊಂದವನ ; ಕೊಂದವನ ; ಪುತ್ರಿಯ ; ಪುತ್ರನ ; ಮಡದಿಯ ; ಪಿತನ ; ಪಿತನ ಅಳಿಯನಾರು ?.
*ಉತ್ತರ Answer for *ಒಗಟಿನ ಪ್ರಶ್ನೆ 46*
ಅಷ್ಟಮ ಗರ್ಭಸಂಜಾತನಿಂದ – *ಕೃಷ್ಣನಿಂದ* ; ಪುಷ್ಪ ಯಾಚಿಸಿದ ಭಾರ್ಯೆ – *ಸತ್ಯಭಾಮೆಯ*; ಪಿತನ – *ಸತ್ರಾಜಿತನ*; ಸಹೋದರನ – *ಪ್ರಸೇನನ*; ಕೊಂದವನ – *ಸಿಂಹವ* ; ಕೊಂದವನ – *ಜಾಂಬುವಂತನ*; ಪುತ್ರಿಯ – *ಜಾಂಬುವತಿಯ*; ಪುತ್ರನ – *ಸಾಂಬನ*; ಮಡದಿಯ – *ಲಕ್ಷಣಾಳ* ; ಪಿತನ – *ದುರ್ಯೋಧನನ*; ಪಿತನ – *ಧೃತರಾಷ್ಟ್ರನ* ಅಳಿಯ – *ಜಯದ್ರತ*
==================================================
*ಒಗಟಿನ ಪ್ರಶ್ನೆ 47*
ವಕ್ರಳಿತ್ತ ಗಂಧ ಸ್ವೀಕರಿಸಿದವನ; ಪುತ್ರನ ಸಾರಥಿಯಾಗಿ ಹೊಂದಿದವನ ; ಪತ್ನಿಯ ಮಗನ ಕೊಂದವನ; ಸಾರಥಿಯ ಸಹೋದರಿಯ ಪುತ್ರನ; ಪಿತನ ; ಪಿತನಾರು ?
*ಉತ್ತರ – ಒಗಟಿನ ಪ್ರಶ್ನೆ 47*
ವಕ್ರೆಯಿತ್ತ – *ತ್ರಿವಕ್ರೆ (ಕುಬ್ಜೆ) ಯಿತ್ತ* ಗಂಧ ಸ್ವೀಕರಿಸಿದವನ – *ಕೃಷ್ಣನ*; ಪುತ್ರನನ್ನು. – *ವಿಶೋಕನನ್ನು*; (ಕೃಷ್ಣ ಕುಬ್ಜೆಯ ಮಗ ವಿಶೋಕ); ಸಾರಥಿಯಾಗಿ ಹೊಂದಿದವನ ; *ಭೀಮಸೇನ ದೇವರ*; ಪತ್ನಿಯ – *ಹಿಡಿಂಬೆಯ*; ಮಗನ – *ಘಟೋತ್ಕಚನ* ಕೊಂದವನ – *ಕರ್ಣನ*; ಸಾರಥಿಯ – *ಶಲ್ಯನ*; ಸಹೋದರಿಯ – *ಮಾದ್ರಿಯ*; ಪುತ್ರನ – *ನಕುಲ/ಸಹದೇವನ*; ಪಿತನ – *ಪಾಂಡುವಿನ*;
ಪಿತನಾರು ? *ವೇದವ್ಯಾಸ ದೇವರು*
@@@@@@@@@@
ಒಗಟಿನ ಪ್ರಶ್ನೆ 48*
ಶ್ರೀನಿವಾಸ ಕಲ್ಯಾಣ ಜನಕರಾಜನಿಗೆ ಹೇಳಿದವರ ; ಮಾತೆಯ ; ಪತಿಯ ; ಶಾಪಕ್ಕೊಳಗಾದವನ ; ಪತ್ನಿಯ ಮೋಹಿಸಿದವನಿಗೆ ; ಶಪಿಸಿದವನ ಪಿತನ ; ಪಿತನ ; ಪಿತನ ; ಪಿತನ ; ವಾಹನ ಯಾರು?
ಉತ್ತರ – ಶ್ರೀನಿವಾಸ ಕಲ್ಯಾಣ ಜನಕರಾಜನಿಗೆ ಹೇಳಿದವರ – ಶತಾನಂದರ; ಮಾತೆಯ. – ಅಹಲ್ಯೆಯ; ಪತಿಯ. – ಗೌತಮರ; ಶಾಪಕ್ಕೊಳಗಾದವನ – ಇಂದ್ರನ : ಪತ್ನಿಯ – ಶಚೀ ದೇವಿಯ; ಮೋಹಿಸಿದವನಿಗೆ – ನಹುಷನಿಗೆ ; ಶಪಿಸಿದವರ – ಅಗಸ್ತ್ಯರ ; ಪಿತನ – ಮಿತ್ರಾವರುಣರ ; ಪಿತನ – ಕಶ್ಯಪರ; ಪಿತನ – ಮರೀಚಿಯ ; ಪಿತನ – ಬ್ರಹ್ಮನ : ವಾಹನ – ಹಂಸ
***************************
*ಒಗಟಿನ ಪ್ರಶ್ನೆ 49*
ಸಹೋದರಿಯ ; ಪತಿಯ ; ಅಜಾಗ್ರತೆಯಿಂದ ಕೊಂದವನ ; ಪತ್ನಿಯ ; ಅತ್ತೆಯ ; ಮಾವನ ; ಹಿರಿಯ ಮಗನ ; ಮಕ್ಕಳು ; ಯಾರ ಶಾಪದಿಂದ ಮರವಾದರು?
*: ಉತ್ತರ Answer for ಒಗಟಿನ ಪ್ರಶ್ನೆ 49*
ಸಹೋದರಿಯ – *ಶೂರ್ಪನಖಿಯ*; ಪತಿಯ – *ವಿದ್ವಜ್ಜಿಹ್ವನ*; ಅಜಾಗ್ರತೆಯಿಂದ ಕೊಂದವನ – *ರಾವಣನ*; ಪತ್ನಿಯ – *ಮಂಡೋದರಿಯ*; ಅತ್ತೆಯ – *ಕೈಕಸಿಯ*; ಮಾವನ – *ಪುಲಸ್ತ್ಯನ*; ಹಿರಿಯ ಮಗನ – *ಕುಬೇರನ*
ಮಕ್ಕಳು – *ನಲಕೂಬರಮಣಿಗ್ರೀವ*; ಯಾರ ಶಾಪದಿಂದ – *ನಾರದರ ಶಾಪದಿಂದ* ಮರವಾಗಿದ್ದರು.
₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹
ಒಗಟಿನ ಪ್ರಶ್ನೆ 50.
ಅಸೂಯೆ ರಹಿತಳ ; ಪತಿಯ ಮಾವನ ಮಡದಿಯ ; ಉಪದೇಶಿಸಿದ ಮಗನ ;. ಹೆಸರಿನಲ್ಲಿರುವ ಸುಳಾದಿ ಯಾವುದು?
Answer – ಅಸೂಯೆ ರಹಿತಳ – *ಅನಸೂಯಳ*; ಪತಿಯ – *ಅತ್ರಿಯ*; ಮಾವನ – *ಕರ್ದಮನ*; ಮಡದಿಯ – *ದೇವಹೂತಿಯ*; ಉಪದೇಶಿಸಿದ ಮಗನ – *ಕಪಿಲನ*; ಹೆಸರಿನಲ್ಲಿರುವ ಸುಳಾದಿ – *ಕಪಿಲ ಸುಳಾದಿ*
**************************************
*ಒಗಟಿನ ಪ್ರಶ್ನೆ 51*
ಘೋರ ತಪಗೈಯುತ್ತಿದ್ದ ಋಷಿಯ ; ತಪಭಂಗಕ್ಕೆ ಬಂದವಳ ; ಬಸಿರಲಿ ಜನಿಸಿದವಳ ; ಪತಿಯ ; ಪುತ್ರನು ಯಾವ ರಾಜ್ಯದ ರಾಜ ?
ಉತ್ತರ – ಘೋರ ತಪಗೈಯುತ್ತಿದ್ದ ಋಷಿಯ – *ವಿಶ್ವಾಮಿತ್ರನ*; ತಪಭಂಗಕ್ಕೆ ಬಂದವಳ – *ಮೇನಕೆಯ*; ಬಸಿರಲಿ ಜನಿಸಿದವಳ – *ಶಕುಂತಲೆಯ*; ಪತಿಯ – *ದುಶ್ಯಂತನ* ; ಪುತ್ರನು – *ಭರತನು*; ಯಾವ ರಾಜ್ಯದ ರಾಜ – *ಹಸ್ತಿನಾಪುರ*
@@@@@@@@@@@@@#
*ಒಗಟಿನ ಪ್ರಶ್ನೆ 52*
ರಾಘವೇಂದ್ರ ತೀರ್ಥರ ಗೋತ್ರ ಪ್ರವರ್ತಕ ಋಷಿಯ ; ಪುತ್ರನ ; ಅವಳೀ ಮಕ್ಕಳ ಕುರುವಂಶದ ದೊರೆ ಸಾಕಿದ; ಆ ಅವಳಿಯಲ್ಲಿ ಹೆಣ್ಣು ಮಗವ ಭಾರದ್ವಾಜರ ಪುತ್ರನ ಮಡದಿಯಾಗಿ ಅವಳ ಪುತ್ರನಿಂದ ಬ್ರಹ್ಮಾಸ್ತ್ರ ಪ್ರಯೋಗಿಸಲು ; ಗರ್ಭದಲ್ಲೇ ರಕ್ಷಿತ ಮಗುವಿನ ತಾಯಿ ಯಾರು?
*Answer – ರಾಘವೇಂದ್ರ ತೀರ್ಥರ ಗೋತ್ರ ಪ್ರವರ್ತಕ ಋಷಿಯ – *ಗೌತಮ ಋಷಿಗಳ*; ಪುತ್ರನ – *ಶರದ್ವಾನ್* ; ಅವನ ಅವಳೀ ಮಕ್ಕಳ – *ಕೃಪಾ ಮತ್ತು ಕೃಪಿಯನ್ನು* ; ಕುರು ವಂಶದ ದೊರೆ ಸಾಕಿದ – *ಶಂತನು ಸಾಕಿದ*; ಆ ಅವಳಿಯಲ್ಲಿ ಹೆಣ್ಣು ಮಗುವ – *ಕೃಪಿಯನ್ನು* ; ಭಾರದ್ವಾಜರ ಪುತ್ರನ – *ದ್ರೋಣಾಚಾರ್ಯರ* ; ಮಡದಿಯಾಗಿ ಅವಳ ಪುತ್ರನಿಂದ – *ಅಶ್ವತ್ಥಾಮನಿಂದ*; ಬ್ರಹ್ಮಾಸ್ತ್ರ ಪ್ರಯೋಗಿಸಲು ಗರ್ಭದಲ್ಲೇ ರಕ್ಷಿತ ಮಗುವಿನ – *ಪರೀಕ್ಷಿತ*; ಕೃಷ್ಣ ಪರಮಾತ್ಮನಿಂದ ರಕ್ಷಿತಾ ಮಗು ತಾಯಿ ಯಾರು? – *ಉತ್ತರೆ*
#########################
*ಒಗಟಿನ ಪ್ರಶ್ನೆ 53*
ದೇವಲ ಋಷಿಯ ಛೇಡಿಸಿದವರು ಕರಿನಕ್ರನಾಗೆಂದು ಶಪಿಸಲ್ಪಟ್ಟು; ಮುಂದೆ; ದೇವಪೂಜೆ ಗೈಯುತ್ತಿದ್ದವನ ನೋಡಲು ಬಂದ ಕುಂಭಸಂಭವನಿಂದ ಶಪಿತನಾಗಿ ; ಕರಿಯ ಕಾಲನ್ನೆಳೆದ ನಕ್ರನ ಕಡಿಯಲು ಮಡದಿಗೆ ಪೇಳದೆ ದುಡುದುಡು ಬಂದವನಾರು ?
Answer –
ದೇವಲ ಋಷಿಯ ಛೇಡಿಸಿದವರು – *ಹಾಹಾ ಹೂಹೂ ಗಂಧರ್ವರು*; ಕರಿನಕ್ರನಾಗೆಂದು ಶಪಿಸಲ್ಪಟ್ಟು ; *ಆನೆ ಮೊಸಳೆಯರಾಗೆಂದು* ಶಪಿಸಲ್ಪಟ್ಟು; ಮುಂದೆ ದೇವಪೂಜೆ ಗೈಯುತ್ತಿದ್ದವನ – *ಇಂದ್ರದ್ಯುಮ್ನನ* ಅರಮನೆಗೆ ಬಂದ ಕುಂಭಸಂಭವನಿಂದ – *ಅಗಸ್ತ್ಯನಿಂದ* ಶಪಿತನಾಗಿ ; ಕರಿಯ – *ಗಜೇಂದ್ರನ* ; ಕಾಲನ್ನೆಳೆದವನ – *ನಕ್ರನ* (ಮೊಸಳೆಯ) ಕಡಿಯಲು; ಮಡದಿಗೆ- *ಮಹಾಲಕ್ಷ್ಮಿಗೆ* ಪೇಳದೆ ದುಡುದುಡು ಬಂದವನು – *ಶ್ರೀಮನ್ನಾರಾಯಣ* ??
@@@@@@@@@@@@@@
ಒಗಟಿನ ಪ್ರಶ್ನೆ 54.
ಯಾದವರಲ್ಲಿ ಉಳಿದ ಏಕೈಕನೂ, ಪರಮಾತ್ಮನ ದ್ವಾಪರ ಅವತಾರ ಆಪ್ತನೂ, ಬಾಲ್ಯದಿಂದಲೂ ಪರಮಾತ್ಮನ ನಿತ್ಯ ಪೂಜಕನೂ, ಪರಮಾತ್ಮನಿಂದ ಉಪದೇಶ ಪಡೆದವ ಯಾರು? ಅವನು ಪಡೆದ ಉಪದೇಶ ಏನೆಂದು ಪ್ರಸಿದ್ಧಿ?
Answer – *ಉದ್ಧವ* ಮತ್ತು *ಉದ್ಧವಗೀತ*
ಉದ್ದವ ತನ್ನ ಚಿಕ್ಕ ವಯಸ್ಸಿನಿಂದಲೂ ಕೃಷ್ಣ ಭಕ್ತ. ಅವನ ತಾಯಿ ಮಗನನ್ನು ಮಧ್ಯಾಹ್ನ ಭೋಜನಕ್ಕೆ ಕರೆದರೆ ಇನ್ನೂ ದೇವರ ಪೂಜೆ ಮುಗಿದಿಲ್ಲ ತಾಳಮ್ಮ ಎನ್ನುತ್ತಿದ್ದ ಐದು ವರ್ಷದ ಉದ್ಧವ. ಅಂತಹ ಉದ್ಧವನೂ ಕೃಷ್ಣನ ಸಂಬಂಧಿ ಮತ್ತು ಯಾದವ. ದೂರ್ವಾಸ ಋಷಿಗಳ ಶಾಪ ನಿಜ ಮಾಡಲು ಮತ್ತು ತನ್ನ ಅವತಾರ ಸಮಾಪ್ತಿಗೆ ಸನ್ನದ್ದನಾದ ಕೃಷ್ಣ ಉದ್ಧವನ ಕರೆದು ನೀನು ದ್ವಾರಕೆಯಲ್ಲಿರಬೇಡ ತೀರ್ಥಯಾತ್ರೆಗೆ ಹೋಗಿ ಮುಂದೆ ಸಜ್ಜನರಿಗೆ ನನ್ನ ಉಪದೇಶ ತಿಳಿಸು ಎಂದು ಅರ್ಜುನನಿಗೆ ಉಪದೇಶಿಸಿದಂತೇ ಹಲವು ಧರ್ಮೋಪದೇಶ ನೀಡಿದನು. ಅದೇ *ಉದ್ಧವಗೀತ* ಈ ರೀತಿ ಎಲ್ಲಾ ಯಾದವರೂ ಪರಸ್ಪರ ಬಡಿದಾಡಿ ಸತ್ತರೂ, ಯಾದವ ಮಾತ್ರ ಸಾಯಲಿಲ್ಲ.
*ಉದ್ಧವ ವರದಾಯ ನಮಃ:*
$$$$$$$$$$$$$$$$$$$$$$_
ಒಗಟಿನ ಪ್ರಶ್ನೆ 55*
ಯಾದವ ಚಕ್ರವರ್ತಿಯ ; ಮಗಳ ; ದತ್ತುಪಡೆದವನ ;ಅರಮನೆಗೆ ಬಂದಿದ್ದ ಮುನಿಯ; ಸೇವಿಸಿದ್ದವಳ ; ಹಿರಿ ಪುತ್ರನಿಗೆ ; ರಾಜ್ಯವಿತ್ತು ಅಭಿಷೇಚಿಸಿದವನ ;ಮಾತೆಯ ; ಸಹೋದರನ ರಾಜ್ಯ ಯಾವುದು ?
ಉತ್ತರ Answer – ಯಾದವ ಚಕ್ರವರ್ತಿಯ – *ಶೂರಸೇನನ* ಮಗಳ – *ಪೃಥೆಯ*; ದತ್ತುಪಡೆದವನ – *ಕುಂತಿಭೋಜನ*; ಅರಮನೆಗೆ ಬಂದಿದ್ದ ಮುನಿಯ – – *ದುರ್ವಾಸರ*; ಸೇವಿಸಿದ್ದವಳ – *ಕುಂತಿಯ*; ಹಿರಿ ಪುತ್ರನಿಗೆ – *ಕರ್ಣನ*; ರಾಜ್ಯವಿತ್ತು ಅಭಿಷೇಚಿಸಿದವನ – *ದುರ್ಯೋಧನನ* ; ಮಾತೆಯ – *ಗಾಂಧಾರಿಯ*; ಸಹೋದರನ – *ಶಕುನಿಯ* ರಾಜ್ಯ – *ಗಾಂಧಾರ*
######################
*ಒಗಟಿನ ಪ್ರಶ್ನೆ 56*
ಆಕಾಶಾಭಿಮಾನಿಯ ಶಿರಕಡಿದವನಿಂದ ವರಪಡೆದ ದಶಮುಖನ ತೊಟ್ಟಿಲಿನಲ್ಲಿ ಕಟ್ಟಿದವನ ಸಹೋದರನ ಆಜ್ಞೆಗೆ ಏನೆನ್ನುತ್ತಾರೆ?
ಉತ್ತರ Answer
ಆಕಾಶಾಭಿಮಾನಿಯ – *ಗಣಪತಿಯ* ಶಿರ ಕಡಿದವನಿಂದ — *ಶಿವನಿಂದ* ವರಪಡೆದ ದಶಮುಖನ- *ರಾವಣನ*; ತೊಟ್ಟಿಲಿನಲ್ಲಿ ಕಟ್ಟಿದವನ- *ವಾಲಿಯ* ಸಹೋದರನ – *ಸುಗ್ರೀವನ*; ಆಜ್ಞೆಗೆ ಏನೆನ್ನುತ್ತಾರೆ?– *ಸುಗ್ರೀವಾಜ್ಞೆ*
ಸುಗ್ರೀವ ವರದಾಯ ನಮಃ
———————————.
ಒಗಟಿನ ಪ್ರಶ್ನೆ 57*
ಯಮಳರ ಮಾತೆಯ ಅಗ್ರಜನ ರಥಿಕನ ಮಾತೆಗೆ ಪುತ್ರನ ಅನುಗ್ರಹಿಸಿದವನ ಮಡದಿಯ ನೆರಳ ಪುತ್ರನ ವಾಹನ ಯಾವುದು ?
Answer: ಯಮಳರ – *ನಕುಲ, ಸಹದೇವರ* ಮಾತೆಯ – *ಮಾದ್ರಿಯ*, ಅಗ್ರಜನ – *ಶಲ್ಯನ*, ರಥಿಕನ – *ಕರ್ಣನ* ಮಾತೆಗೆ – *ಕುಂತಿಗೆ*, ಪುತ್ರನ = *ಕರ್ಣನ* ಅನುಗ್ರಹಿಸಿದವನ – *ಸೂರ್ಯನ*, ಮಡದಿಯ – *ಸಂಜ್ಞಾ ದೇವಿಯ* ನೆರಳ – *ಛಾಯಾ* ಪುತ್ರನ- *ಶನಿಯ*, ವಾಹನ – *ಕಾಗೆ*
+++++++++++++++++++++++++++++++++
;ಒಗಟಿನ ಪ್ರಶ್ನೆ 58*
ಪಂಕಜೋದ್ಭವನ ಸುತನ ಸುತನ ಸತಿಯ ಪಯೋವ್ರತ ಫಲನ ; ಪಾದಾಂಗುಷ್ಟದಿ ಬಂದಿಹರ ; ಶಿರದಿ ಪೊತ್ತಿಹನ ; ವರಪರೀಕ್ಷಕನ ; ವಟುರೂಪದಿ ; ದಹಿಸಿದವಗೆ ನಮೋನಮಃ;
Answer for *ಒಗಟಿನ ಪ್ರಶ್ನೆ 58*
ಪಂಕಜೋದ್ಭವನ – *ಬ್ರಹ್ಮದೇವರ*; ಸುತನ – *ಮರೀಚಿ ಮಷರ್ಷಿಯ* ಸುತನ- *ಕಶ್ಯಪ ಋಷಿಯ* ಸತಿಯ – *ಅದಿತಿಯ*; ಪಯೋವ್ರತ ಫಲನ – *ವಾಮನನ*
(ಪಯೋವ್ರತ ಮಾಡಿ ಪಡೆದ ಮಗ); ಪಾದಾಂಗುಷ್ಟದಿ ಬಂದಿಹರ – *ತ್ರಿವಿಕ್ರಮ ರೂಪದ ಅಂಗುಷ್ಟದ ಸ್ಪರ್ಶದಿಂದ ಬಂದ ಗಂಗೆಯ* ಶಿರದಿಪೊತ್ತಿಹನ – *ಈಶ್ವರನ* ವರಪರೀಕ್ಷಕನ – *ವೃಕಾಸುರನ*; (ವೃಕಾಸುರ ತನಗೆ ಶಿವ ನೀಡಿದ ವಾರ ಪರೀಕ್ಷೆ ಮಾಡಲು ಶಿವನ ತಲೆಯ ಮೇಲೇ ಪರೀಕ್ಷಿಸಲು ಹೊರಟ ಅದಕ್ಕೆ ಭಸ್ಮಾಸುರ ಎನ್ನುವುದು)
ವಟುರೂಪದಿ – *ಬ್ರಹ್ಮಚಾರಿ ರೂಪದಿ*; ದಹಿಸಿದವಗೆ – *ಭಸ್ಮಮಾಡಿದ ಶ್ರೀಹರಿಗೆ* ನಮೋನಮಃ; (ಭಾಗವತ ರೀತ್ಯಾ)
(ಕೆಲವು ಪುರಾಣಗಳಲ್ಲಿ, ದಾಸರ ಕೀರ್ತನೆಗಳಲ್ಲಿ ವಟುವಿನ ರೂಪದ ಬದಲು ಮೋಹಿನೀ ರೂಪವೆಂದಿದ್ದಾರೆ. ಎರಡೂ ಸರಿ. ಇದನ್ನು ಕಲ್ಪಭೇದದಿಂದ ಹೇಳಬೇಕಾಗುತ್ತದೆ)
+++++++++++++++++++++++++++++++
*ಒಗಟಿನ ಪ್ರಶ್ನೆ 59*
ಸೋಮಶೇಖರ ಭಾರ್ಯೆಗೆ ಪೇಳಿದ ಮಂತ್ರಪ್ರತಿಪಾದಕನ ಪಿತನ ಪಿತನ ಪಿತನ ಪಿತನ ಪೂರ್ವವೃತ್ತಾಂತವನ್ನು ಹೇಳಿ ಸರಿಪಡಿಸಿದವರು ಯಾರು ?
*Answer for* *ಒಗಟಿನ ಪ್ರಶ್ನೆ 59*
ಸೋಮಶೇಖರ – ಶಿವ; ಭಾರ್ಯೆಗೆ – ಪಾರ್ವತಿಗೆ ; ಪೇಳಿದ ಮಂತ್ರಪ್ರತಿಪಾದಕನ – ರಾಮನ; ಪಿತನ – ದಶರಥನ ; ಪಿತನ – ಅಜನ; ಪಿತನ – ರಘುವಿನ ;ಪಿತನ- ದಿಲೀಪನ; ಪೂರ್ವವೃತ್ತಾಂತವನ್ನು ಹೇಳಿ ಸರಿಪಡಿಸಿದವರು – ವಸಿಷ್ಠರು. (ಹಿಂದೆ ದೇವತೆಗಳ ಪರವಾಗಿ ಯುದ್ಧ ಮಾಡುವಾಗ ದಿಲೀಪ ಕಾಮಧೇನು ಹಸುವಿಗೆ ಗೌರವ ತೋರದಿದ್ದುದುರಿಂದ ಅವನಿಗೆ ಮಕ್ಕಳಾಗಿಲ್ಲ ಎಂದು ವಸಿಷ್ಠರು ನೆನಪಿಸಿದಾಗ, ದಿಲೀಪನು ಕಾಮಧೇನುವಿನ ಮಗಳಾದ ನಂದಿನಿಯನ್ನು 21ದಿನ ಸೇವಿಸಿ, ಪುತ್ರ ಪ್ರಾಪ್ತಿಯಾಗುತ್ತದೆ.)
&&&&&&&&&&&&&&&&&&&&&&&&&&&&
ಒಗಟಿನ ಪ್ರಶ್ನೆ 60*
ಜರೆಯ ಸುತಗಂಜಿದನಂತೆ; ದ್ವಾರಾವತಿ ನಿರ್ಮಿಸಿಪನಂತೆ
ಮಲಗಿಪನೆಬ್ಬಿಸಿದನಂತೆ ; ವಸ್ತ್ರನೆಳೆಪನಂತೆ, ನೀಡಿಪನಂತೆ
ವದನದಿ ವಿಶ್ವ ತೋರಿಪನಂತೆ; ಅತ್ತೆ ಮಗಗೆ ವಿಶ್ವ ರೂಪಿಸಿಪನಂತೆ
ಪಿತಾಮಹಗಾಗಿ ಅಸ್ತ್ರ ಪಿಡಿದನಂತೆ ನರಹರಿವಿಠಲನ ಮೆಚ್ಚು ದೈವವಂತೆ !
ಜರೆಯ ಸುತ – *ಜರಾಸಂಧನಿಗೆ* ಅಂಜಿದಂತೆ ತೋರಿದ – *ಶ್ರೀ ಕೃಷ್ಣ* ದ್ವಾರಾವತಿ ನಿರ್ಮಿಸಿಪನಂತೆ – *ದ್ವಾರಕಾ ಪಟ್ಟಣ* ನಿರ್ಮಿಸಿದನು ; ಮಲಗಿಪನ ಎಬ್ಬಿಸಿದನಂತೆ – *ಮಲಗಿದ್ದ ಮುಚುಕುಂದನ*; ಕಾಲಯವನ ಮೂಲಕ ಎಬ್ಬಿಸಿದ ;
ವಸ್ತ್ರನೆಳೆಪನಂತೆ – *ಗೋಪಿಯರ ವಸ್ತ್ರವನೆಳೆಪ ಶ್ರೀ ಕೃಷ್ಣ* ; ವಸ್ತ್ರವ ನೀಡಿಪನಂತೆ – *ದ್ರೌಪದಿಗೆ ವಸ್ತ್ರ ನೀಡಿದನು*; ವದನದಿ ವಿಶ್ವ ತೋರಿಪನಂತೆ – *ತಾಯಿ ಯಶೋದೆಗೆ ಬಾಯಿಯಲ್ಲಿ ಜಗವ ತೋರಿಸಿದ ಶ್ರೀ ಕೃಷ್ಣ*; ಅತ್ತೆ ಮಗಗೆ ವಿಶ್ವ ರೂಪಿಸಿಪನಂತೆ; – *ಅರ್ಜುನನಿಗೆ ವಿಶ್ವ ರೂಪವ ತೋರಿಸಿದ ಶ್ರೀ ಕೃಷ್ಣ* ; ಪಿತಾಮಹಗಾಗಿ ಅಸ್ತ್ರ ಪಿಡಿದನಂತೆ – *ಪಿತಾಮಹ ಭೀಷ್ಮನ ಮಾತನ್ನು ನಿಜ ಮಾಡಲು ಕುರುಕ್ಷೇತ್ರದಲ್ಲಿ ಶಸ್ತ್ರವ ಹಿಡದ ಶ್ರೀ ಕೃಷ್ಣ*; ನರಹರಿವಿಠಲನ ಮೆಚ್ಚಿನ ದೇವರು *ಶ್ರೀ ಕೃಷ್ಣಾಯ ನಮ:*
+++++++++++++++++++
ಒಗಟಿನ ಪ್ರಶ್ನೆ 61*
ಪಿತನ ವಿವಾಹ ಮಾಡಿದವನು ; ಪಿತಗೆ ಆಯಸ್ಸು ನೀಡಿದವನು; ಪಿತಗಾಗಿ ಮಾತೆಯ ಕಡಿದವನು; ಪಿತನ ತಲೆ ಕಡಿದವನು; ಪಿತನ ಬಾವಮೈದುನನ ಕೊಂದವನು;
ಪಿತನ ಹೊತ್ತೊಯ್ದವನಿಂದ ಬಿಡಿಸಿದ; ಪಿತನ ವರ ಸತ್ಯಮಾಡಲು ವನಸೇರಿದ. ಇವರು ಯಾರ್ಯಾರು ತಿಳಿಸಿ.
*ಉತ್ತರ* :
ಪಿತನ ವಿವಾಹ ಮಾಡಿದವನು – *ಭೀಷ್ಮರು*; ಪಿತಗೆ ಆಯಸ್ಸು ನೀಡಿದವನು; – *ಪುರು ತನ್ನ ಆಯಸ್ಸು ತಂದೆ ಯಯಾತಿಗೆ ನೀಡಿದನು*; ಪಿತಗಾಗಿ ಮಾತೆಯ ಕಡಿದವನು – *ತನ್ನ ತಾಯಿ ರೇಣುಕಳ ಶಿರ ಕಡಿದ ಪರಶುರಾಮ*; ಪಿತನ ತಲೆ ಕಡಿದವನು – *ಬ್ರಹ್ಮನ ತಲೆ ಕಡಿದ ಶಿವ* ; ಪಿತನ ಭಾವಮೈದುನನ ಕೊಂದವ – *ಕಂಸನ ಕೊಂದ ಕೃಷ್ಣ*; ಪಿತನ ಹೊತ್ತೊಯ್ಯುವನಿಂದ ಬಿಡಿಸಿದ – – *ಅಕಾಲ ಸ್ನಾನಕ್ಕೆ ಹೋದ ವಸುದೇವನ ಹೊತ್ತೊಯ್ದ ವರುಣದೇವನಿಂದ ಬಿಡಿಸಿದ ಕೃಷ್ಣ*; ಪಿತನ ವರ ಸತ್ಯ ಮಾಡಲು ವನ ಸೇರಿದ – *ದಶರಥ ಕೈಕೇಯಿಗೆ ನೀಡಿದ ವರ ನಿಮಿತ್ತ ರಾಮ ಕಾಡಿಗೆ ಹೋದ*
————-
*ಒಗಟಿನ ಪ್ರಶ್ನೆ 62*
ಗಂಡನನುಸರಿಸಿ ಅಂಧತ್ವ ಸ್ವೀಕರಿಸಿದವಳ ; ಹೆಮ್ಮಗನ ಮಾತುಳನ ; ಕೊಂದವನ ಮಾತುಳನ ರಥಿಕನ ಕೊಂದವನ ಮಾತುಳನ ಮಗನ ಮಾತುಳನ ಮಡದಿಯ ಪಿತನ ಕೊಂದವನಾರು ?
*ಉತ್ತರ* : ಗಂಡನ – ಧೃತರಾಷ್ಟ್ರನ; ಅನುಸರಿಸಿ ಅಂಧತ್ವ ಸ್ವೀಕರಿಸಿದವಳ ; ಗಾಂಧಾರಿಯ; ಹೆಮ್ಮಗನ – ದುಯೊ೯ಧನನ ಮಾತುಳನ – ಶಕುನಿಯ ; ಕೊಂದವನ – ಸಹದೇವನ ಮಾತುಳನ – ಶಲ್ಯ ರಾಜನ; ರಥಿಕನ ಕೊಂದವನ – ಅರ್ಜುನನ ಮಾತುಳನ – ವಸುದೇವನ ; ಮಗನ – ಕೃಷ್ಣನ ಮಾತುಳನ – ಕಂಸನ; ಮಡದಿಯ – ಅಸ್ತಿ ಮತ್ತು ಪಾಸ್ತಿಯ; ಪಿತನ – ಜರಾಸಂಧನ ಕೊಂದವನಾರು – ಭೀಮಸೇನದೇವರು
@@@@@@@@@@@
*ಒಗಟಿನ ಪ್ರಶ್ನೆ 63*
ಶ್ರೇಷ್ಠ ವೀರನಿಂದ ; ಇನ್ನೊಬ್ಬರಿಗಾಗಿ ಅಪಹೃತಳಾದವಳನ್ನು ಅವಳು ವರಿಸಿದವನಿಂದ ತಿರಸ್ಕರಸಲ್ಪಡಲು ಅಪಹರಿಸಿದವನೂ ವಿವಾಹವಾಗೆನೆನಲು ಶಫಥಗೈದು ಅಗ್ನಿಗೆ ಆಹುತಿಯಾಗಿ ಮರುಜನ್ಮದಿ ಪುರುಷನಂತೆ ಶೌರ್ಯದಿ ಮೆರೆದವಳ ಪಿತನ ವೈರಿಯ ಶಿಷ್ಯನಿಂದ ಹೆಡೆಮುರಿ ಕಟ್ಟಿ ಎಳೆದೊಯ್ದುವನ ಸ್ವಯಂವರದಲ್ಲಿ ವರಿಸಿದವಳಾರು ?
ಉತ್ತರ : – ಶ್ರೇಷ್ಠ ವೀರನಿಂದ — ಭೀಷ್ಮನಿಂದ ; ಇನ್ನೊಬ್ಬರಿಗಾಗಿ — ವಿಚಿತ್ರ ವೀರ್ಯನಿಗಾಗಿ ಅಪಹೃತಳಾದವಳನ್ನು — *ಅಂಬಾ*; ಅವಳು ವರಿಸಿದವನಿಂದ — *ಸಾಲ್ವರಾಜನಿಂದ *; ತಿರಸ್ಕರಸಲ್ಪಡಲು ; ಅಪಹರಿಸಿದವನೂ *ಭೀಷ್ಮನೂ* ವಿವಾಹ- ವಾಗೆನೆನಲು ಶಫಥಗೈದು ಅಗ್ನಿಗೆ ಆಹುತಿಯಾಗಿ ;ಮರು ಜನ್ಮದಿ ಪುರುಷನಂತೆ ಶೌರ್ಯದಿ ಮೆರೆದವಳ —*ಶಿಖಂಡಿ*; ಪಿತನ — *ದ್ರುಪದನ* ವೈರಿಯ — *ದ್ರೋಣಾಚಾರ್ಯನ* ಶಿಷ್ಯನಿಂದ ಹೆಡೆಮುರಿ ಕಟ್ಟಿ ಎಳೆದೊಯ್ದುವನ — *ಅರ್ಜುನನ* ಸ್ವಯಂವರದಲ್ಲಿ ವರಿಸಿದವಳಾರು ? —ದ್ರೌಪದಿ
@@@@@@@@@
ಪ್ರಶ್ನೆ 64
ವಸ್ತ್ರ ಸೆಳೆದವನ ಅಗ್ರಜನ ತೊಡೆ ಮುರಿದವನ ಅನುಜನಿಂದ ನೃತ್ಯ ಕಲಿತವಳ ಪಿತನಿಂದ ದಾಳದಿಂದ ಪೆಟ್ಟುತಿಂದವನ ಪಿತನಿಗೆ ಶಪಿಸಿದವ ಯಾರು ?
ಉತ್ತರ – ವಸ್ತ್ರ ಸೆಳೆದವನ – *ದುಶ್ಯಾಸನನ*; ಅಗ್ರಜನ – *ದುರ್ಯೋಧನನ* ; ತೊಡೆ ಮುರಿದವನ – *ಭೀಮಸೇನನ*; ಅನುಜನಿಂದ – *ಅರ್ಜುನನಿಂದ*; ನೃತ್ಯ ಕಲಿತವಳ – *ಉತ್ತರೆಯ*; ಪಿತನಿಂದ – *ವಿರಾಟರಾಜನಿಂದ*; ಪೆಟ್ಟುತಿಂದವನ – *ಧರ್ಮರಾಜನ* ; ಪಿತನಿಗೆ – *ಪಾಂಡುರಾಜನಿಗೆ* ; ಶಪಿಸಿದವರು *ಕಿಂಡಮ ಋಷಿಗಳು*; ಕಿಂಡಮ ಋಷಿಗಳು – ಇವರು ಕಾಡಿನಲ್ಲಿ ವಾಸವಾಗಿದ್ದರು. ಒಮ್ಮೆ ತಮ್ಮ ಇವರು ಪತಿ ಪತ್ನಿಯರು ಜಿಂಕೆ ವೇಷ ಧರಿಸಿ ಜತೆ ಸರಸ ಸಲ್ಲಾಪದಲ್ಲಿ ಇದ್ದಾಗ ಜಿಂಕೆಯೆಂದು ತಿಳಿದು ಪಾಂಡು ಮಹಾರಾಜ ಬಾಣ ಹೂಡಲು, ಆ ಕಿಂಡಮ ಋಷಿ ದು:ಖದಿಂದ ಪಾಂಡುವಿಗೆ ಶಪಿಸುತ್ತಾನೆ. ” ನೀನು ಹೆಂಡತಿಯ ಕೂಡಿದರೆ ನಿನಗೂ ಸಾವು ಬರಲಿ” ಎಂದು. ಅದರಂತೆ ಒಮ್ಮೆ ಪಾಂಡು ತನ್ನ ಪತ್ನಿ ಮಾದ್ರಿಯ ಸೇರಲು ಪ್ರಯತ್ನಿಸಿದಾಗ ಸತ್ತನು.
,###############################
ಪ್ರಶ್ನೆ 65
ಕಬ್ಬಿಣ ತಿಂದು ತಪಗೈದವನ ; ಪುತ್ರನು ; ಅಷ್ಟಮಗರ್ಭದಿ ಜನಿಸಿದವನ ; ಅಟ್ಟಿಸಿಕೊಂಡು ಹೋದಾಗ, ಎಚ್ಚರಗೊಂಡು ದಹಿಸಿದವನ ; ಆಗ್ರಜನ ;ಪಿತನ ; ಗರ್ಭ ಧರಿಸಿದವರು ಯಾರು?
ಉತ್ತರ : ಕಬ್ಬಿಣ ತಿಂದು ತಪಗೈದವನ – *ಗಾರ್ಗ್ಯನ* ; ಪುತ್ರನು – *ಕಾಲಯವನನು*; ಅಷ್ಟಮಗರ್ಭದಿ ಜನಿಸಿದವನ – *ಕೃಷ್ಣನ*; ಅಟ್ಟಿಸಿಕೊಂಡು ಹೋದಾಗ; – *ಯುದ್ಧಕ್ಕೆ ಕರೆದಾಗ ಓಡಿ ಹೋಗುವನಂತೆ ಕೃಷ್ಣ ಹೋದಾಗ*; ಎಚ್ಚರಗೊಂಡು ದಹಿಸಿದವನ *ಮಲಗಿದ್ದವನೆದ್ದ ಮುಚಕುಂದನ* ; ಆಗ್ರಜನ – *ಅಂಬರೀಷನ*; ಪಿತನ – *ಮಾಂಧಾತನ*; ಗರ್ಭ ಧರಿಸಿದವರು – *ಯವನಾಶ್ವ*
ಯವನಾಶ್ವ ಪುತ್ರನ ಅಪೇಕ್ಷೆಯಿಂದ ಚ್ಯವನ ಋಷಿಗಳ ಮೂಲಕ ಯಜ್ಞ ಮಾಡುತ್ತಿದ್ದಾಗ, ಆ ಯಜ್ನದಲ್ಲಿ ತನ್ನ ಪತ್ನಿಗಾಗಿ ಸಿದ್ಧವಿದ್ದ ನೀರನ್ನು ಬಾಯಾರಿಕೆಯಿಂದ ತಾನೇ ಕುಡಿಯಲು ಯವನಾಶ್ವನೇ ಗರ್ಭ ಧರಿಸಿ ಪಡೆದ ಪುತ್ರನೇ ಮಾಂಧಾತಾ ಮಹಾರಾಜ
$$$$$$$$$$$$$$$$$$$$$$$$$$$$$$$$$$$$$$$$$$$$
*ಒಗಟಿನ ಪ್ರಶ್ನೆ 66*
ಯಜ್ಞದಲ್ಲಿ ಜನಿಸಿದವನ ; ಸಹೋದರಿಯ ; ವರಿಸಿದವನ ; ಮಾತೆಯ ; ಅಗ್ರಜನ ; ಪುತ್ರಿಯ ; ಸುತನ ; ಸತಿಯ ; ಮಾತುಳನಿಂದ ; ಕಾಮಪೀಡೆಗೆ ಒಳಪಟ್ಟವಳ ಪಾತ್ರದ ಹೆಸರೇನು ?
ಉತ್ತರ :
ಯಜ್ಞದಲ್ಲಿ ಜನಿಸಿದವನ – *ಧೃಷ್ಟದ್ಯುಮ್ನನ*; ಸಹೋದರಿಯ – *ದ್ರೌಪದಿಯ*; ವರಿಸಿದವನ – *ಅರ್ಜುನನ*; ಮಾತೆಯ – *ಕುಂತಿಯ*; ಅಗ್ರಜನ – *ವಸುದೇವನ*; ಪುತ್ರಿಯ – *ಸುಭದ್ರೆಯ*; ಸುತನ – *ಅಭಿಮನ್ಯುವಿನ*; ಸತಿಯ – *ಉತ್ತರೆಯ*; ಮಾತುಳನಿಂದ- *ಕೀಚಕನಿಂದ*; ಕಾಮಪೀಡೆಗೆ ಒಳಪಟ್ಟವಳ ಪಾತ್ರದ ಹೆಸರೇನು ? – *ಮಾಲಿನಿ*. ಸೈರಂಧ್ರಿಯಾಗಿ ಅಂದರೆ ರಾಣಿ ಸುಧೇಷ್ಣೆಯ ಜಾಸ್ತಿಯಾಗಿ ಕೇಶ ವಿನ್ಯಾಸಕಿಯಾಗಿದ್ದ ದ್ರೌಪದಿಯ ಪಾತ್ರದ ಹೆಸರು ಮಾಲಿನಿ
###################################
*ಒಗಟಿನ ಪ್ರಶ್ನೆ 67*
ನಖದಿಂದ ಸತ್ತವನ ಪುತ್ರನ ಚಿಕ್ಕಪ್ಪನ ಕೊಂದವನ ಮಡದಿಯ ಸುತನ ಕೊಂದವನ ಬಾಲ್ಯದ ಆಟಪಾಟವ ನೋಡಿದ ಮಾತೆಯ ಮರುಜನ್ಮದಿ ಮಾತೃಸ್ಥಾನವಿತ್ತು ವಿವಾಹವಾದವನ ಸತಿಯ ಪಿತನ ಸಹೋದರನಾರು ?
ಉತ್ತರ : *ಒಗಟಿನ ಪ್ರಶ್ನೆ 67*
ನಖದಿಂದ – *ನರಸಿಂಹದೇವರಿಂದ*; ಸತ್ತವನ – *ಹಿರಣ್ಯಕಶಿಪುವಿನ*; ಪುತ್ರನ – *ಪ್ರಹ್ಲಾದರಾಜರ*; ಚಿಕ್ಕಪ್ಪನ – *ಹಿರಣ್ಯಾಕ್ಷನ*; ಕೊಂದವನ –*ಶ್ರೀ ಭೂವರಾಹ ದೇವರ* ; ಮಡದಿಯ – *ಪೃಥ್ವೀದೇವಿಯ*; ಸುತನ – *ನರಕಾಸುರನ*; ಕೊಂದವನ- *ಶ್ರೀ ಕೃಷ್ಣಪರಮಾತ್ಮನ*; ಬಾಲ್ಯದ ಆಟಪಾಟವ ನೋಡಿದ ಮಾತೆಯ – *ಯಶೋದಾದೇವಿಯ*; ಮರುಜನ್ಮದಿ ಮಾತೃಸ್ಥಾನವಿತ್ತು — *ಬಕುಳಾದೇವಿಗಾಗಿ*
ವಿವಾಹವಾದವನ – *ಶ್ರೀನಿವಾಸದೇವರ*; ಸತಿಯ – *ಶ್ರೀ ಪದ್ಮಾವತೀದೇವಿಯ*; ಪಿತನ – *ಆಕಾಶರಾಜನ*; ಸಹೋದರನಾರು – *ತೋಂಡಮಾನ*
#############
ಒಗಟಿನ ಪ್ರಶ್ನೆ 68 :
ಪ್ರಮುಖ ಅಸ್ತ್ರ ಪಡೆಯಲು ಇಂದ್ರಕೀಲ ಪರ್ವತದಲ್ಲಿ ತಪವಗೈದವನ ಭಂಗಮಾಡಿದ ಕರಡಿರೂಪದಿ ಬಂದವನ ಕೊಂದವನಾರೆಂದು ನಿರ್ಣಯಿಸಲು ಮನೋನಿಯಾಮಕನ ವಿರುದ್ಧ ಹೋರಾಡಿ ಮೆಚ್ಚಿಸಿ ಪಡೆದ ಅಸ್ತ್ರ ಯಾವುದು? ಕೊಟ್ಟವರಾರು?
*Answer for ಒಗಟಿನ ಪ್ರಶ್ನೆ 68*
ಪ್ರಮುಖ ಅಸ್ತ್ರ ಪಡೆಯಲು ಇಂದ್ರಕೀಲ ಪರ್ವತದಲ್ಲಿ ತಪವಗೈದವನ – *ಅರ್ಜುನನ* ಭಂಗಮಾಡಿದ ಕರಡಿರೂಪದಿ ಬಂದವನ – *ಮೂಕಾಸುರನ*; ಕೊಂದವನಾರೆಂದು ನಿರ್ಣಯಿಸಲು ಮನೋನಿಯಾಮಕನ – *ರುದ್ರ ದೇವರ* ವಿರುದ್ಧ ಹೋರಾಡಿ ಮೆಚ್ಚಿಸಿ ಪಡೆದ ಅಸ್ತ್ರ – *ಪಾಶುಪತಾಸ್ತ್ರ*. ಕೊಟ್ಟವರು – ಪಾಶುಪಾಸ್ತ್ರವನ್ನು ಕೊಟ್ಟವರು – ರುದ್ರ ದೇವರು.
$$$$$$$$$$$$$$$
ಒಗಟಿನ ಪ್ರಶ್ನೆ 69
ಮಾವನ ಕೊಂದವನ ಭಾವನ ಮಾವನ ಮಾವನ ಸುತನ ಮಾವನ ಕೊಂದವನ ಅನುಜನ ಮಾವನಾರು ?
Answer : – ಮಾವನ – *ಕಂಸನ*; ಕೊಂದವನ – *ಕೃಷ್ಣನ*; ಭಾವನ – *ಅರ್ಜುನನ*; ಮಾವನ – *ವಸುದೇವನ*; ಮಾವನ – *ಉಗ್ರಸೇನನ*; ಸುತನ – *ಕಂಸನ*; ಮಾವನ – *ಜರಾಸಂಧನ*; ಕೊಂದವನ – *ಭೀಮಸೇನನ*; ಅನುಜನ -. *ಅರ್ಜುನನ*; ಮಾವ. – *ದ್ರುಪದ ರಾಜ*
*************************
*ಒಗಟಿನ ಪ್ರಶ್ನೆ 70*
ಸೋದರತ್ತೆಯ ಮಗನ ಕೊಂದವನ; ಸೋದರತ್ತೆಯ ; ಪುತ್ರನ ; ದೊಡ್ಡಪ್ಪನ ; ಸುತನ ; ಸೋದರಮಾವನ ; ಕೊಂದವನ ; ಸೋದರಮಾವನ; ಭಾವನ ಕಿರಿಮಡದಿ ಯಾರು ?
Answer – ಸೋದರತ್ತೆಯ – *ಶ್ರುತಶ್ರವೆಯ*; ಮಗನ – *ಶಿಶುಪಾಲನ್ನ*; ಕೊಂದವನ – *ಕೃಷ್ಣನ*; ಸೋದರತ್ತೆಯ – *ಕುಂತಿಯ*; ಪುತ್ರನ – *ಧರ್ಮ ರಾಯನ*; ದೊಡ್ಡಪ್ಪನ – *ಧೃತರಾಷ್ಟ್ರನ* ಸುತನ – *ದುರ್ಯೋಧನನ*; ಸೋದರಮಾವನ – *ಶಕುನಿಯ* ಕೊಂದವನ – *ಸಹದೇವನ*; ಸೋದರಮಾವನ – *ಶಲ್ಯನ* ; ಭಾವನ – *ಪಾಂಡುವಿನ*; ಕಿರಿಮಡದಿ – *ಮಾದ್ರಿ*
_____________________
ಒಗಟಿನ ಪ್ರಶ್ನೆ 71
ಸುರಾಧಿಪಗೆ ಶಪಿಸಿದವನ ಸತಿಯ ಸುತನಿಂದ ಶ್ರೀನಿವಾಸ ಕಲ್ಯಾಣ ಕೇಳಿದವನ ಪುತ್ರಿಯ ಪುತ್ರರ ಆಶ್ರಮದಲ್ಲಿ ಸಲಹಿದವರ ಪಿತನಾರು ?
ಉತ್ತರ : *ಒಗಟಿನ ಪ್ರಶ್ನೆ 71*
ಸುರಾಧಿಪಗೆ – *ಇಂದ್ರನಿಗೆ*; ಶಪಿಸಿದವನ – *ಗೌತಮನ*; ಸತಿಯ – *ಅಹಲ್ಯೆಯ*; ಸುತನಿಂದ – *ಶತಾನಂದನಿಂದ*; ಶ್ರೀನಿವಾಸ ಕಲ್ಯಾಣ ಕೇಳಿದವನ – *ಜನಕರಾಜನ*; ಪುತ್ರಿಯ – *ಸೀತಾದೇವಿಯ*; ಪುತ್ರರ – *ಕುಶ ಲವರನ್ನು*; ಆಶ್ರಮದಲ್ಲಿ ಸಲಹಿದವರ – *ವಾಲ್ಮೀಕಿ ಋಷಿಗಳ*; ಪಿತ – *ಪ್ರಾಚೇತಸ*
+++++++++++++++++
ಒಗಟಿನ ಪ್ರಶ್ನೆ 72
ಅಸೂಯೆಯಿಲ್ಲದಲಳ ಪುತ್ರ ; ಏಕಾದಶಿ ವ್ರತ ಪರೀಕ್ಷಿಸಿ; ಬಾಲಕಿಯ ಸೇವೆ ಮೆಚ್ಚಿ ಅನುಗ್ರಹಿಸಿ; ಕಲಿಯ ಅವತಾರಿಯಿಂದ ಸತ್ಕೃತನಾಗಿ; ಅಧರ್ಮ ಮಾಡದವನ ಭಿಕ್ಷೆ ಸ್ವೀಕಾರ; ನಿರ್ಮಾಲ್ಯಕ್ಕೆ ಅವಮರ್ಯಾದೆ ಮಾಡಿದವನನ್ನು ಶಪಿಸಿದವನಾರು ?
ಉತ್ತರ : ದೂರ್ವಾಸರು
₹₹₹₹₹₹₹₹₹₹₹₹₹₹₹₹₹₹₹
*ಒಗಟಿನ ಪ್ರಶ್ನೆ 73*
ನೇತ್ರವ ಸ್ವಯಂ ಬಂಧಿತಳ ಪಿತನಳಿಯನ ಭಾವಮೈದುನನ ಕಪಟಕ್ಕೆ ನಲುಗಿದವನ ಅನುಜನ ಮೂಲರೂಪದ ವಾಹನದ ಜಾತಿ ಪ್ರಾಣಿಯ ದಯೆತೋರಿ ಶುಶ್ರೂಷೆ ಮಾಡಿ ಮುಂದೆ ಅದೇ ಜನ್ಮ ಪಡೆದು ನಂತರ ಬ್ರಾಹ್ಮಣನಾಗಿ ಜನಿಸಿದವನಿಂದ ಉಪದೇಶ ಪಡೆದ ಮಹಾರಾಜನಾರು ?
*ಒಗಟಿನ ಪ್ರಶ್ನೆ 73* *ಉತ್ತರ*
ನೇತ್ರ ಸ್ವಯಂ ಬಂಧಿತಳ – *ಗಾಂಧಾರಿಯ*; ಪಿತನ – *ಸುಬಲನ*; ಅಳಿಯನ – *ಧೃತರಾಷ್ಟ್ರನ* ಭಾವಮೈದುನನ – *ಶಕುನಿಯ* ಕಪಟಕ್ಕೆ ನಲುಗಿದವನ – *ಧರ್ಮರಾಜನ* ; ಅನುಜನ – *ಭೀಮನ*; ಮೂಲರೂಪದ – *ವಾಯುದೇವರ* ವಾಹನದ – *ಹರಿಣದ*; ಜಾತಿ ಪ್ರಾಣಿಯ – *ಜಿಂಕೆಯ* ದಯೆತೋರಿ ಶುಶ್ರೂಷೆ ಮಾಡಿದ – *ಭರತ ಚಕ್ರವರ್ತಿಯು*; ಮುಂದೆ ಅದೇ ಪ್ರಾಣಿ ಜನ್ಮ ಪಡೆದು ನಂತರ ಬ್ರಾಹ್ಮಣನಾಗಿ ಜನಿಸಿದವನಿಂದ – *ಜಡ ಭರತನಿಂದ* ಉಪದೇಶ ಪಡೆದ ಮಹಾರಾಜನು *ರಹೋಗಣನು*
*ಒಗಟಿನ ಪ್ರಶ್ನೆ 74*
ಉದರವ ದಾಮದಿಂ ಬಂಧಿತನ : ಬಂಧಿಸಿದವಳ ; ಪತಿಯ ; ಜಲದಲಿ ಬಂಧಿಸಿದವನ ; ಅವತಾರದಲಿ ಸತಿಯಾಗಿಹಳ ; ಪುತ್ರನ ; ಮಲತಾಯಿಯಾದವಳ ; ಪುತ್ರನಾರು ?
*ಒಗಟಿನ ಪ್ರಶ್ನೆ 74ರ ಉತ್ತರ*
ಉದರವ ದಾಮದಿಂ ಬಂಧಿತನ – *ಕೃಷ್ಣನ ಉದರವನ್ನು ಹಗ್ಗದಿಂದ ಬಂಧಿಸಿದ್ದಳು. ಅದಕ್ಕೆ ಅವನಿಗೆ *ದಾಮೋದರ* ಎನ್ನುತ್ತಾರೆ ಕೃಷ್ಣನಿಗೆ.
ಬಂಧಿಸಿದವಳ – *ಯಶೋದೆಯ*; ಪತಿಯ – *ನಂದಗೋಪನ*; ಜಲದಲಿ ಬಂಧಿಸಿದವನ – *ಅಕಾಲದಲ್ಲಿ ಸ್ನಾನ ಗೈಯಲು ಹೋಗಿದ್ದರಿಂದ ಬಂಧಿಸಿದ ವರುಣನ*
ಅವತಾರದಲಿ – *ಶಂತನು ಅವತಾರದಲ್ಲಿ*; ಸತಿಯಾಗಿಹಳ – *ಗಂಗೆಯ*; ಪುತ್ರನ – *ಭೀಷ್ಮನ*; ಮಲತಾಯಿಯ – *ಸತ್ಯವತಿಯ* ಪುತ್ರನಾರು ? – *ವಿಚಿತ್ರವೀರ್ಯ, ಚಿತ್ರಾಂಗದ* ಮತ್ತು *ವೇದವ್ಯಾಸ*
***************************************************************************
*ಒಗಟಿನ ಪ್ರಶ್ನೆ 75*
ಮಧ್ವಾಂತರ್ಗತನುದರದಿ ಜನಿಸಿಹ ಯಮಾವತಾರಿಯ ಉಪಚಾರ ಪಡೆದವನಿಗೆ ಅವಮಾನಿಸಿದವನ ಊರುಭಂಗ ಮಾಡಿದವನ ಪ್ರಥಮ ಸತಿಯ ಸುತನ ಮಾತುಳ ವಾಸವಿದ್ದ ಕಾನನ ಯಾವುದು ?
*ಉತ್ತರ* – ಮಧ್ವಾಂತರ್ಗತ – *ವೇದವ್ಯಾಸರು*; ಉದರದಿ ಜನಿಸಿಹ ಯಮಾವತಾರಿಯ- *ವಿದುರನ*; ಉಪಚಾರ ಪಡೆದವ – *ಶ್ರೀ ಕೃಷ್ಣ*; ಅವಮಾನಿಸಿದವ – *ದುರ್ಯೋಧನನ*; ಊರುಭಂಗಮಾಡಿದವ – *ತೊಡೆ ಮುರಿದ ಭೀಮಸೇನನ*; ಪ್ರಥಮ ಸತಿ – *ಹಿಡಿಂಬೆಯ*; ಸುತನ – *ಘಟೋತ್ಕಚ*; ಮಾತುಳ – *ಹಿಡಿಂಬಾಸುರ*; ವಾಸವಿದ್ದ ಕಾನನ – *ಕಾಮ್ಯಕ ವನ*
*ಉತ್ತರ: ಕಾಮ್ಯಕ ವನ*
¢¢¢¢¢¢¢¢¢¢¢¢¢¢¢¢¢¢¢¢¢¢¢¢¢¢
*ಒಗಟಿನ ಪ್ರಶ್ನೆ 76*
ಯಜ್ಞದಲ್ಲಿ ಅಗ್ನಿ ಸೃಷ್ಠಿಸಿ ಪ್ರವೇಶಿಸಿದವಳ ; ಪತಿಯ ; ಮಾವನ ; ಸತಿಯ ; ಪಿತನ ; ಮಡದಿಯರಲ್ಲಿ ಮೊಮ್ಮಗನಾಗಿ ಬಂದ ಭಗವಂತನ ರೂಪಗಳಾವುವು ?
*ಉತ್ತರ ಒಗಟಿನ ಪ್ರಶ್ನೆ 76*
ಯಜ್ಞದಲ್ಲಿ ಅಗ್ನಿ ಸೃಷ್ಠಿಸಿ ಪ್ರವೇಶಿಸಿದವಳ – *ಸತೀದೇವಿಯ* ; ಪತಿಯ – *ಶಿವನ*; ಮಾವನ – *ದಕ್ಷನ*; ಸತಿಯ – *ಪ್ರಸೂತಿಯ*; ಪಿತನ – *ಸ್ವಾಯಂಭುವ ಮನುವಿನ*; ಮಡದಿಯ – *ಶತರೂಪಾದೇವಿಯ*; ಪುತ್ರಿಯರಿಂದ – *ಪ್ರಸೂತಿ ಮತ್ತು ದೇವಹೂತಿಯರಿಂದ* ; ಜನಿಸಿದ ಭಗವಂತನ ಎರಡು ರೂಪಗಳು – ಪ್ರಸೂತಿಯಿಂದ *ಯಜ್ಞ* ಮತ್ತು ದೇವಹೂತಿಯಿಂದ *ಕಪಿಲ*
πππππππππππππππππππ
ಒಗಟಿನ ಪ್ರಶ್ನೆ 77
ಪಯೋವ್ರತ ಮಾಡಿ ಸುತನ ಹಡೆದಿಹಳ; ಪತಿಯ ಅನ್ಯಸತಿಯಲಿ ಜನಿಸಿಹನ; ಸುತನ ಸುತನ ಸುತನ; ಬಾಗಿಲ ಕಾಯ್ದವನಿಂದ; ಒದೆಸಿಕೊಂಡ ಅಸುರನಿಗೆ; ಮುಷ್ಟಿ ಪ್ರಹಾರ ಮಾಡಿದವನಾರು ?
ಉತ್ತರ :-
ಪಯೋವ್ರತ ಮಾಡಿ ಸುತನ ಹಡೆದಿಹಳ – ಅದಿತಿಯ; ಪತಿಯ – ಕಶ್ಯಪರ; ಅನ್ಯಸತಿಯಲಿ – ದಿತಿಯಲಿ; ಜನಿಸಿಹನ – ಹಿರಣ್ಯಕಶಿಪುವಿನ; ಸುತನ – ಪ್ರಹ್ಲಾದನ; ಸುತನ – ವಿರೋಚನನ; ಸುತನ – ಬಲಿಯ; ಬಾಗಿಲ ಕಾಯ್ದವನಿಂದ – ವಾಮನನಿಂದ; ಒದೆಸಿಕೊಂಡ ಅಸುರನಿಗೆ – ರಾವಣನಿಗೆ; ಮುಷ್ಟಿ ಪ್ರಹಾರ ಮಾಡಿದವರು – ಹನುಮಂತ
¶¶¶¶¶¶¶¶¶¶¶¶¶
*ಒಗಟಿನ ಪ್ರಶ್ನೆ 78*
ಕೌಂತೇಯನಿಂದ ಹತನಾದ ರಾಧೇಯನಿಂದ ಹತನಾದವನ ಸೋದರ ಮಾವನ ಹತ್ಯೆ ಮಾಡಿದವನ ಅನುಜನ ಭಾವಮೈದುನನಿಂದ ಹತನಾದವನ ಸುತನಿಂದ ಹತ್ಯೆಗೊಳಗಾದ ಮಕ್ಕಳುಗಳ ಮಾತೆ ಯಾರು ?
Answer *ಒಗಟಿನ ಪ್ರಶ್ನೆ 78*
ಕೌಂತೇಯನಿಂದ – ಅರ್ಜುನನಿಂದ; ಹತನಾದ ರಾಧೇಯನಿಂದ – ಕರ್ಣನಿಂದ; ಹತನಾದವನ- ಘಟತ್ಕಚನ; ಸೋದರ ಮಾವನ – ಹಿಡಿಂಬನ ; ಹತ್ಯೆ ಮಾಡಿದವನ – ಭೀಮನ: ಅನುಜನ – ಅರ್ಜುನನ ; ಭಾವಮೈದುನನಿಂದ – ಧೃಷ್ಟದ್ಯುಮ್ನನಿಂದ ; ಹತನಾದವನ – ದ್ರೋಣಾಚಾರ್ಯರ ; ಸುತನಿಂದ – ಅಶ್ವತ್ಥಾಮನಿಂದ : ಹತ್ಯೆಗೊಳಗಾದ ಮಕ್ಕಳುಗಳ ಮಾತೆ ಯಾರು – ದ್ರೌಪದಿ
€€€€€€€€€€€€€
ಒಗಟಿನ ಪ್ರಶ್ನೆ 79
ಮಾತೆಯ ಶಿರ ಕಡಿದವನಿಂದ ಬಹುಕಾಲ ವಿದ್ಯಾರ್ಜನೆ ಮಾಡಿದವನ ಪಿತನ ಸತಿಯ ಸವತಿಯ ಹಿರಿ ಸುತನ ಪಿತನ ಪಿತನ ಪಿತನ ಬದ್ದವೈರಿ ಮುನಿ ಯಾರು ?
Answer – ಒಗಟಿನ ಪ್ರಶ್ನೆ 79
ಮಾತೆಯ ಶಿರ ಕಡಿದವನಿಂದ – *ಪರಶುರಾಮರಿಂದ*; ಬಹುಕಾಲ ವಿದ್ಯಾರ್ಜನೆ ಮಾಡಿದವನ – *ಭೀಷ್ಮನ* ; ಪಿತನ – *ಶಂತನುವಿನ*; ಸತಿಯ – *ಗಂಗೆಯ*: ಸವತಿಯ – *ಸತ್ಯವತಿಯ* ; ಹಿರಿ ಸುತನ – –*ಕೃಷ್ಣದ್ವೈಪಾಯನ (ವೇದವ್ಯಾಸ)ರ*; – ಪಿತನ –*ಪರಾಶರರ* – ಪಿತನ – *ಶಕ್ತಿ ಮುನಿಯ* ; ಪಿತನ – *ಬ್ರಹ್ಮರ್ಷಿ ವಸಿಷ್ಠರ* ; ಬದ್ದವೈರಿ ಮುನಿ – *ವಿಶ್ವಾಮಿತ್ರರು*.
~~~~~~~~~~~~~~
ಒಗಟಿನ ಪ್ರಶ್ನೆ 80
ಜಗದೊಡೆಯನ ಪುತ್ರನ ಸತಿಯ ಅತ್ತೆಯ ಶಯನದ ಸಮಕಕ್ಷದವನ ಸತಿಯ ಆಕಾಶಾಭಿಮಾನಿ ಸುತನ ಅವಮಾನಿಸಿದವನ ಗುರುಪತ್ನಿಯ ಸುತನಾರು ?
Answer – ಒಗಟಿನ ಪ್ರಶ್ನೆ 80
ಜಗದೊಡೆಯನ – ಪರಮಾತ್ಮ ಶ್ರೀ ವಿಷ್ಣುವಿನ; ಪುತ್ರನ – ಬ್ರಹ್ಮದೇವರ ; ಸತಿಯ – ಸರಸ್ವತಿ ದೇವಿಯ; ಅತ್ತೆಯ- ಲಕ್ಷ್ಮಿ ದೇವಿಯ ; ಶಯನದ- ಶೇಷದೇವರ ; ಸಮಕಕ್ಷದವನ – ರುದ್ರದೇವರ ; ಸತಿಯ – ಪಾರ್ವತಿಯ ; ಆಕಾಶಾಭಿಮಾನಿ ಸುತನ – ಗಣಪತಿಯ : ಅವಮಾನಿಸಿದವನ – ಚಂದ್ರನ; ಗುರುಪತ್ನಿಯ – ಬೃಹಸ್ಪತಿಯ ಪತ್ನಿ – ತಾರಾಳ ಸುತನಾರು – ಬುಧ.
@@@@@@@@@@@@@@@@@@@@@@@@@@@@
*ಒಗಟಿನ ಪ್ರಶ್ನೆ 81*
ಅವ ಒದ್ದ; ಅವಳು ಹೊರಟಳು; ವಲ್ಮೀಕದಿ ಇವಗೆ ಗೋಕ್ಷೀರಧಾರೆ; ಶಿರಕೆ ಕೊಡಲಿಪೆಟ್ಟು ; ರಾಜಗೆ ಶಾಪ; ಹಂದಿಯ ಸೇವಕಿಯ ಶುಶ್ರೂಷೆ;
ಹಯವೇರಿಹ ಅವ ಕಂಡ ಕನ್ಯೆಯ; ಸಹೋದರನ ಭಾವನ ಹಿರಿಸುತನಾರು?
ಉತ್ತರ : ಅವ ಒದ್ದ – *ಭೃಗುಮುನಿ ವಿಷ್ಣುವಿಗೆ ಒದ್ದ*; ಅವಳು ಹೊರಟಳು – *ಮಹಾಲಕ್ಷ್ಮೀ ಕೊಲ್ಹಾಪುರಕ್ಕೆ ಹೊರಟಳು*; ವಲ್ಮೀಕದಿ ಇವಗೆ – *ಭೂಲೋಕದಲ್ಲಿ ಶ್ರೀನಿವಾಸನಿಗೆ*; ಗೋಕ್ಷೀರಧಾರೆ – *ಗೋವು ಕ್ಷೀರಧಾರೆಯ ಅಭಿಷೇಕಿಸಲು*
ಶಿರಕೆ ಕೊಡಲಿಪೆಟ್ಟು – *ರಾಜನ ಚಾರನಿಂದ ಹಸುವಿಗೆ ಹೊಡೆದ ಕೊಡಲಿಯೇಟು* – ಶ್ರೀನಿವಾಸನ ತಲೆಗೆ ಕೊಡಲಿಯೇಟು; ರಾಜಗೆ ಶಾಪ – ಚೋಳರಾಜನಿಗೆ ಶಾಪ; ಹಂದಿಯ – *ವರಾಹದೇವರ*; ಸೇವಕಿಯ ಶುಶ್ರೂಷೆ – ಬಕುಳದೇವಿಯ ಶುಶ್ರೂಷೆ; ಹಯವೇರಿಹ ಅವ – *ಕುದುರೆಯೇರಿ ಬೇಟೆಗೆ ಹೊರಟ ಶ್ರೀನಿವಾಸ*; ಕಂಡ ಕನ್ಯೆಯ – *ಪದ್ಮಾವತಿಯ*; ಸಹೋದರನ – *ವಸುದಾನನ*; ಭಾವನ – *ಶ್ರೀನಿವಾಸನ*
ಹಿರಿಸುತನಾರು? – *ಬ್ರಹ್ಮದೇವ*
********************************************************
*ಒಗಟಿನ ಪ್ರಶ್ನೆ 82*
ಮಹಾಭಾರತ ಕರ್ತೃವಿನ ಜನ್ಮದಾತನ ಪಿತನ ನುಂಗಿದವನ ಪಿತನ ಕುಲಗುರುವಿನ ಪತ್ನಿಯ ಪಿತನಾರು ?
*ಉತ್ತರ* : ಮಹಾಭಾರತ ಕರ್ತೃವಿನ – *ವೇದವ್ಯಾಸರು*; ಜನ್ಮದಾತನ – *ಪರಾಶರ ಮುನಿಯ*; ಪಿತನ – *ಶಕ್ತಿ ಮುನಿಯ*; ನುಂಗಿದವನ – *ಕಲ್ಮಾಶಪಾದನ*; ಪಿತನ – *ಸುದಾಸನ*; ಕುಲಗುರುವಿನ – *ವಸಿಷ್ಠರ*; ಪತ್ನಿಯ- *ಅರುಂಧತಿ* ; ಪಿತನಾರು ? – *ಕರ್ದಮ ಮುನಿ*
===========================
ಒಗಟಿನ ಪ್ರಶ್ನೆ 83
ಜಲಜಾಪತಿಯ ಶಯನವೇ; ಹಾರವಾಗಿಹನ ಸತಿಯ ಷಾಣ್ಮಾತುರ ಸುತನ ವಾಹನ ಯಾವುದು?
========================================
ಒಗಟಿನ ಪ್ರಶ್ನೆ 84 :
ಹೊಸ್ತಿಲಲಿ ಸತ್ತವನ ಮಾತೆಯ ಪೆತ್ತವನ ಅದೇ ಹೆಸರಿನವನ ಪುತ್ರಿಯ ಪತಿಯ ಶಪಿಸಿದವನಿಂದ ವಕ್ಷಸ್ಥಳದಿ ಒದಿಸಿಕೊಂಡವನ ಕಾವಲುಗಾರನ ಶಪಿಸಿದವರಾರು ?
*ಉತ್ತರ* : ಹೊಸ್ತಿಲಲಿ ಸತ್ತವನ – *ಹಿರಣ್ಯ ಕಶಿಪುವಿನ*; ಮಾತೆಯ – *ದಿತಿ ದೇವಿಯ* ; ಪೆತ್ತವನ – *ದಕ್ಷನ*; ಅದೇ ಹೆಸರಿನ – *ದಕ್ಷ ಪ್ರಜಾಪತಿಯ*;
ಪುತ್ರಿಯ – *ಸತೀದೇವಿಯ*; ಪತಿಯ – *ಶಿವನನ್ನು*; ಶಪಿಸಿದವನಿಂದ – *ಭೃಗು ಋಷಿಯಿಂದ*; ವಕ್ಷಸ್ಥಳದಿ ಒದಿಸಿಕೊಂಡವನ – *ಶ್ರೀಮನ್ನಾನಾರಾಯಣನ*
ಕಾವಲುಗಾರನ – *ಜಯವಿಜಯರ* ; ಶಪಿಸಿದವರಾರು – *ಸನಕ, ಸನಂದನ, ಸನಾತನ, ಸನತ್ಕುಮಾರರು*.
======================================
*ಒಗಟಿನ ಪ್ರಶ್ನೆ 85*
ಸೋದರತ್ತೆಯ ಸುತನಿಂದ ನಿಂದಿಸಲ್ಪಟ್ಟವನ ಸೋದರತ್ತೆಯ ಹಿರಿಸುತನ ಅನುಜನ ಹಿರಿಸತಿಯ ಸುತನ ಕೊಂದವನ ಕೊಂದವನ ಸೋದರಮಾವನ ಮಗಳ ಮಗನ ಭಾವಮೈದುನನ ಯುದ್ದದಲ್ಲಿ ಕೊಂದವನಾರು ?
ಉತ್ತರ :
ಸೋದರತ್ತೆಯ –ಶ್ರುತಶ್ರವಳ; ಸುತನಿಂದ – ಶಿಶುಪಾಲನಿಂದ; ನಿಂದಿಸಲ್ಪಟ್ಟವನ – ಕೃಷ್ಣನ; ಸೋದರತ್ತೆಯ – ಕುಂತಿಯ; ಹಿರಿಸುತನ – ಧಮ೯ರಾಜನ; ಅನುಜನ – ಭೀಮನ; ಹಿರಿಸತಿಯ – ಹಿಡಂಬಿಯ; ಸುತನ – ಘಟೋತ್ಕಜನ; ಕೊಂದವನ – ಕರ್ಣನ;
ಕೊಂದವನ – ಅಜು೯ನನ; ಸೋದರಮಾವನ – ವಸುದೇವನ; ಮಗಳ – ಸುಭದ್ರೆಯ;
ಮಗನ – ಅಭಿಮನ್ಯವಿನ; ಭಾವಮೈದುನನ – ಉತ್ತರ ಕುಮಾರನ; ಯುದ್ದದಲ್ಲಿ ಕೊಂದವನು – *ಶಲ್ಯ ಮಹರಾಜ*
*ಒಗಟಿನ ಪ್ರಶ್ನೆ 86*
ಕಪಿಧ್ವಜನ ಸಾರಥಿಯೊಂದಿಗೆ ಕರಡಿರೂಪದಿ ಸೆಣಸಿದವನ ಪುತ್ರಿಯ ಪುತ್ರನ ಸತಿಯ ಪಿತನ ಸಹೋದರಿಯ ಭರ್ತೃವನು ಕೊಂದವನು ಯಾರು ?
*ಉತ್ತರ* :
=========================================
*ಒಗಟಿನ ಪ್ರಶ್ನೆ 87*
ಆರು ಮುಖದವನ ಜನ್ಮದಾತನ ಸೃಷ್ಟಿಸಿದವನ ಸಮಕಕ್ಷನ ಭಾರ್ಯೆಯ ದ್ವಾಪರಯುಗಾವತಾರದಿ ಮಾನಕಾಪಾಡಿದವನ ಮಾತೆಯ ಅಳಿಯನ ಮೊಮ್ಮಗನ ಶಪಿಸಿದವನಾರು ?
*ಉತ್ತರ* : ಆರು ಮುಖದವನ–ಷಣ್ಮುಖನ; ಜನ್ಮದಾತನ–ಶಿವನ;
ಸೃಷ್ಟಿಸಿದವನ–ಬ್ರಹ್ಮದೇವನ; ಸಮಕಕ್ಷನ–ವಾಯುದೇವನ; ಭಾರ್ಯೆಯ–ಭಾರತಿದೇವಿಯ; ದ್ವಾಪರಯುಗಾವತಾರಿ–ದ್ರೌಪದಿಯ; ಮಾನಕಾಪಾಡಿದವ–ಶ್ರೀಕೃಷ್ಣನ
ಮಾತೆಯ–ದೇವಕಿಯ; ಅಳಿಯನ–ಅರ್ಜುನನ; ಮೊಮ್ಮಗನ—ಪರೀಕ್ಷಿತನ;
ಶಪಿಸಿದ ಮುನಿ—ಶೃಂಗಿ
============================
*ಒಗಟಿನ ಪ್ರಶ್ನೆ 88*
ತನ್ನ ಮಡದಿಯ ಅಗ್ರಜನ ಮಗಳ ತನ್ನ ಮಗಗೆ ಮಡದಿಯಾಗಿ ತಂದವನು ಅಪವಾದ ಪರಿಹಾರಕೆ ಹೋಗಿ ಅಲ್ಲೊಬ್ಬಳ ವರಿಸಿ ನಂತರ ಶ್ರೇಷ್ಠ ಮಣಿಯೊಂದ ತಂದೊಪ್ಪಿಸಿ ಇನ್ನೊಬ್ಬ ಮಡದಿಯ ಪಡೆದನು, ಅವಳ ಪಿತನ ಕೊಂದವನಾರು ?
ಉತ್ತರ : ತನ್ನ ಮಡದಿಯ –*ರುಗ್ಮಿಣಿಯ*; ಅಗ್ರಜನ – *ರುಗ್ಮಿಯ*; ಮಗಳ – *ರುಗ್ಮವತಿಯ*; ತನ್ನ ಮಗಗೆ – *ಪ್ರದ್ಯುಮ್ನನಿಗೆ*; ಮಡದಿಯಾಗಿ ತಂದವನು – *ಶ್ರೀ ಕೃಷ್ಣನು* ; ಅಪವಾದ ಪರಿಹಾರಕೆ – *ಸ್ಯಮಂತಕ ಮಣಿಯನು ಹುಡುಕಿ*;
ಹೋಗಿ ಅಲ್ಲೊಬ್ಬಳ ವರಿಸಿ – *ಜಾಂಬವತೀಯ ವರಿಸಿ*; ನಂತರ ಶ್ರೇಷ್ಠ ಮಣಿಯೊಂದ ತಂದೊಪ್ಪಿಸಿ – *ಸ್ಯಮಂತಕಮಣಿಯ ಸತ್ರಾಜಿತನಿಗೆ ಒಪ್ಪಿಸಿ*; ಇನ್ನೊಬ್ಬ ಮಡದಿಯ ಪಡೆದನು – *ಸತ್ಯಭಾಮೆಯ ಪಡೆದನು* ಅವಳ ಪಿತನ – *ಸತ್ರಾಜಿತನ*; ಕೊಂದವ – *ಶತಧನ್ವ*
===========================
ಅರ್ಧ ರಥಿಕನೆನಿಸಿಕೊಂಡವನ ಸಾರಥಿಯಿಂದ ಹತನಾದವನಿಗೆ ಮಾರುವೇಷದಲ್ಲಿದ್ದಾಗ ಸಾರಥಿಯಾದವನ ಸೊಸೆಯ ಮಾತೆಯ ಸೇವಕಿಯ ಕೆಣಕಿದವನ ಚೆಂಡಾಡಿದವನಿಗೆ ಕುರುಕ್ಷೇತ್ರದಿ ಸಾರಥಿಯಾಗಿದ್ದವನ ಮಾತೆ ಯಾರು ?
======================================
*ಒಗಟಿನ ಪ್ರಶ್ನೆ 90*
ಅಶರೀರವಾಣಿಯಿಂದ ಕಂಪಿಸಿದವನ ಭೃತ್ಯೆಯ ಮೊಲೆಯುಂಡು, ಗಾಳಿಯಲಿ ಒಯ್ದೊವನ ಎತ್ತರದಿಂದ ಬೀಳಿಸಿ, ಒರಳುಕಲ್ಲನೊಯ್ದು ಮರ ಉರಳಿಸಿ ಅವಲಕ್ಕಿ ನೀಡಿದಗೆ ಎಲ್ಲವನಿತ್ತನ, ಒಬ್ಬನಿಗೆ ಹೆದರಿದವನಂತೆ ಓಡಿದನ, ಮತ್ತೊಂದು ನಗರ ನಿರ್ಮಿತನ, ಶತನಿಂದಿಸಿದವನ ಶಿರತೆಗೆದವನ, ಅತಿಹಿರಿಯನಿಗಾಗಿ ಶಪಥ ಮುರಿದನ,
ಅವನ ಲೀಲೆಗೇ ಹೆಚ್ಚು ಪ್ರಾಶಸ್ತ್ಯವಿರುವ ವಾದಿರಾಜರ ಗ್ರಂಥ ಯಾವುದು ?
ಉತ್ತರ : ಅಶರೀರವಾಣಿಯಿಂದ ಕಂಪಿಸಿದವನ – ಕಂಸನ ; ಭೃತ್ಯೆಯ ಮೊಲೆಯುಂಡು – ಪೂತನಿ ಮೊಲೆಯುಂಡು ; ಗಾಳಿಯಲಿ ಒಯ್ದೊವನ ಎತ್ತರದಿಂದ ಬೀಳಿಸಿ ತೃಣಾವರ್ತನ ವಧೆ ಮಾಡುವುದು; ಒರಳುಕಲ್ಲನೊಯ್ದು ಮರ ಉರಳಿಸಿ – ಒರಲುಕಲ್ಲಿಗೆ ಕಟ್ಟಿದ್ದಾಗ ಮರದ ರೂಪದಲ್ಲಿದ್ದ ನಳಕೂಬರ ಹಾಗೂ ಮಣಿಗ್ರೀವರ ಶಾಪ ವಿಮೋಚನೆ ; ಅವಲಕ್ಕಿ ನೀಡಿದಗೆ ಎಲ್ಲವನಿತ್ತನ – ಗೆಳೆಯ ಸುಧಾಮನ ವೃದ್ಧಿ ಮಾಡುವುದು ; ಒಬ್ಬನಿಗೆ ಹೆದರಿದವನಂತೆ ಓಡಿದನ – ಕಾಲಯವನನ ಕಥೆ; ಮತ್ತೊಂದು ನಗರ ನಿರ್ಮಿತನ – ದ್ವಾರಕಾನಗರ ನಿರ್ಮಿತನ; ಶತನಿಂದಿಸಿದವನ – ನೂರು ಸಲ ನಿಂದಿಸಿದವನ; ಶಿರ ತೆಗೆದವನ: ಶಿಶುಪಾಲನ ವಧೆ; ಅತಿಹಿರಿಯನಿಗಾಗಿ ಶಪಥ ಮುರಿದನ:- ಆಯುಧ ಎತ್ತುವುದಿಲ್ಲವೆಂದು ಶಪಥ ಮಾಡಿದ್ದರೂ ಭೀಷ್ಮನ ಮುಂದೆ ಚಕ್ರ ಹಿಡಿಯುವ ಕೃಷ್ಣ ; ಅವನ ಲೀಲೆಗೇ ಹೆಚ್ಚು ಪ್ರಾಶಸ್ತ್ಯವಿರುವ ವಾದಿರಾಜರ ಗ್ರಂಥ ಯಾವುದು ?
================================================
ಒಗಟಿನ ಪ್ರಶ್ನೆ 91
ತ್ರೇತಾಯುಗದವಳಿಗೆ ಕೊಟ್ಟ ಮಾತಿನಂತೆ ದ್ವಾಪರಯುಗದ ತಾಯಿಗೆ ಕಲಿಯುಗದಲ್ಲಿ ಮಾತೃಸ್ಥಾನದಿ ನೆರವೇರಿಸಿದ ಕಾರ್ಯವೇನು?
*ಒಗಟಿನ ಪ್ರಶ್ನೆ 92*
ಅಂಬೆಗಾಲ ಕೃಷ್ಣನ ಊರಿನಿಂದ ಹೊರಟು, ಕಡಗೋಲು ಕೃಷ್ಣನೂರ ತಲುಪಿ, ಸೊಂಟದ ಮೇಲೆ ಕೈಯನ್ನಿಟ್ಟವನೂರ ಧಾಟಿ, ರಾಸಕ್ರೀಡೆಯಾಡಿದೂರು ತಲುಪಿ ನಂತರ ಜಗನ್ನಾಥನೂರ ಧಾಟಿ, ಮುಂದೆ ವಸುಧಾನನ ಅಗ್ರಜೆಯ ವರಿಸಿದವನಾರು ?
======================================
*ಒಗಟಿನ ಪ್ರಶ್ನೆ 93*
ಸಹೋದರಿಯ ಮಗಗೆ ಮಗಳ ನೀಡಿದವನ ; ಮಡದಿಯ ಸಹೋದರನ ಕೊಂದವನ; ಸಹೋದರಿಯ ಮಗನ ; ಮಡದಿಯ ಸಹೋದರನ ಕೊಂದವನ ; ಸೋದರಿಯ ಪತಿಯ ಸಹೋದರನ ; ಮಡದಿಯ ಸೋದರನ ಕೊಂದವನಾರು ?
ಸಹೋದರಿಯ – *ಕುಂತಿಯ*; ಮಗಗೆ – *ಅರ್ಜುನನಿಗೆ*; ಮಗಳ – *ಸುಭದ್ರೆಯ*;
ನೀಡಿದವನ – *ವಸುದೇವನ*; ಮಡದಿಯ – *ದೇವಕಿಯ*; ಸಹೋದರನ – *ಕಂಸನ*;
ಕೊಂದವನ – *ಶ್ರೀಕೃಷ್ಣನ*; ಸಹೋದರಿಯ – *ಸುಭದ್ರೆಯ*; ಮಗನ – *ಅಭಿಮನ್ಯುವಿನ*; ಮಡದಿಯ – *ಉತ್ತರೆಯ*; ಸಹೋದರನ – *ಉತ್ತರಕುಮಾರನ*;
ಕೊಂದವನ – *ಶಲ್ಯನ*; ಸೋದರಿಯ – *ಮಾದ್ರಿಯ*; ಪತಿಯ – *ಪಾಂಡುವಿನ*;
ಸಹೋದರನ – *ಧೃತರಾಷ್ಟ್ರನ*; ಮಡದಿಯ – *ಗಾಂಧಾರಿಯ*; ಸೋದರನ – *ಶಕನಿಯ*; ಕೊಂದವ – *ಸಹದೇವ*
==============================================
*ಒಗಟಿನ ಪ್ರಶ್ನೆ 94*
ಅಂಧನ ಜನ್ಮದಾತನ ಜನ್ಮದಾತೆಯ; ಅವಳಿ ಸಹೋದರನ ಮೊಮ್ಮಗನ;
ಮಗನ ಮಹಾಯಾಗದಲ್ಲಿ; ಮಹಾಭಾರತ ಕಥೆಯನ್ನು ಹೇಳಿದ ಋಷಿ ಯಾರು ?
ಉತ್ತರ :
ಅಂಧನ – *ಧೃತರಾಷ್ಟ್ರನ*; ಜನ್ಮದಾತನ – *ವೇದವ್ಯಾಸರ*; ಜನ್ಮದಾತೆಯ – *ಸತ್ಯವತಿಯ*; ಅವಳಿ ಸೋದರನ- *ವಿರಾಟರಾಜನ*; ಮೊಮ್ಮಗನ – *ಪರೀಕ್ಷಿತನ*;
ಮಗನ – *ಜನಮೇಜಯನ*; ಮಹಾಯಾಗದಲ್ಲಿ – *ಸರ್ಪಯಾಗದಲ್ಲಿ*; ಮಹಾಭಾರತ ಕಥೆಯನ್ನು ಹೇಳಿದವರು – *ವೈಶಂಪಾಯನರು*
ವೈಶಂಪಾಯನರು ವೇದವ್ಯಾಸರಿಂದ ಮಹಾಭಾರತ ಕೇಳಿ ಅದನ್ನು ಜನಮೇಜಯನು ಸರ್ಪಯಾಗದಲ್ಲಿ ಪ್ರವಚನ ಮಾಡಿದವರು. ಜೊತೆಗೆ ಹರಿವಂಶವನ್ನೂ ಪ್ರವಚನ ಮಾಡುತ್ತಿದ್ದರು.
=============================================
*ಒಗಟಿನ ಪ್ರಶ್ನೆ 95*
“*ಮಹತಿ*” ವೀಣೆಯ ನುಡಿಸುವವನ ದರೋಡೆಗೆ ಹೋದವನು ತಪಗೈವಾಗ ಬೆಳೆದ ಹುತ್ತದಿಂದಲೇ ಹೆಸರು ಪಡೆದು ನಂತರ ಭಜಿಸುತ ಸುತ್ತಾಡುವವನಿಂದ ಉಪದೇಶ ಪಡೆದ ಜಗತ್ತಿಗೇ ಒಡೆಯನ ಕಥೆಯ ಬರೆದವರಾರು ?
ದರೋಡೆಗಾರನಾಗಿದ್ದವನ – *ರತ್ನಾಕರ*; *ಮಹತಿ* ವೀಣೆಯ ನುಡಿಸುವ – *ನಾರದರ* ಮಾತಿನಂತೆ ತಪಗೈವಾಗ ಹುತ್ತ ಬೆಳೆದರೂ ದೀರ್ಘ ತಪಸ್ಸನ್ನು ಮಾಡುತ್ತಿದ್ದವನು *ಹುತ್ತ* ಎಂದರೆ ವಲ್ಮೀಕದಿಂದಲೇ *ವಾಲ್ಮೀಕಿ* ಎಂಬ ಹೆಸರು ಪಡೆದು ಸದಾ ಭಜಿಸುತ ಸುತ್ತಾಡುವ *ನಾರದರಿಂದ* ರಾಮಾವತಾರದ ಕಥೆಯ ಉಪದೇಶ ಪಡೆದು *ರಾಮಾಯಣ* ಪುರಾಣ ಬರೆದವರು *ವಾಲ್ಮೀಕಿ ಋಷಿಗಳು*.
===========================================
*ಒಗಟಿನ ಪ್ರಶ್ನೆ 96*
ಕೊಡಲಿ ಹಿಡಿದವನ ; ಉದರದಲ್ಲಿದ್ದವನ ಕೊಂದವನ ; ಸೇವಿಸುತ ಕಿಂಪುರುಷದಲ್ಲಿಹನ ;
ದ್ವಾಪರಾವತಾರಿ ಪಿತಾಮಹನ ; ಪೌತ್ರನ ಸಾರಥ್ಯ ಮಾಡಿಹನಿಗೆ;
ಮುಂದೆ ತಿರುಮಲದಿ ಭೂ ನೀಡಿಹನಿಂದ; ಹತನಾದವನ ಅಗ್ರಜನ ಕೊಂದವನ ;
ಎಲ್ಲೆಲ್ಲೂ ಇಹನೆಂದವನ ಪೌತ್ರನ ; ಪಾತಾಳಕ್ಕೆ ತಳ್ಳಿದವನ ; ಮಾತಾಪಿತರಾರು ?
================================
*ಒಗಟಿನ ಪ್ರಶ್ನೆ 97*
ಮಾಯಾಜಿಂಕೆ ಅಪೇಕ್ಷಿಸಿದವಳ; ಅಪಹರಿಸಿದವನ ಪಿತನ; ಹಿರಿ ಮಡದಿಯ ಪಿತನಿಂದ ದೊನ್ನೆಯಲ್ಲಿ ಸಂರಕ್ಷಿಸಲ್ಪಟ್ಟು; ಜನಿಸಿದ ಪುತ್ರನ ಪುತ್ರನಾರು ?
==========================
*ಒಗಟಿನ ಪ್ರಶ್ನೆ 98*
Sumadhwa Seva
ಚತುರವದನನರಸಿಯ ಪಾಣಿಯಲಿ ಮಿಡಿವ ವಾದ್ಯವ ನುಡಿಸಿದ ಯತಿಯ ಸ್ಥಳದಿ ಹರಿವಳ ಸಂಗಮ ಯಾರೊಂದಿಗೆ ಎಲ್ಲಿ?
*ಒಗಟಿನ ಪ್ರಶ್ನೆ 99*
ತ್ರೇತಾಯುಗದಿ ಉರಗಾಸ್ತ್ರ ಬಂಧನ ಬಿಡಿಸಿದ ಪಕ್ಷಿಗೆ ಶಪಿಸಿದ ಋಷಿಯ ಮಾವನ ಪುತ್ರನಿಂದ ಹತನಾದ ಅಸುರ ಯಾರು ?
ಉತ್ತರ : ತ್ರೇತಾಯುಗದಿ ಉರಗಾಸ್ತ್ರ – *ಇಂದ್ರಜಿತ್ ಪ್ರಯೋಗಿಸಿದ ನಾಗಾಸ್ತ್ರ* ;
ಬಂಧನ ಬಿಡಿಸಿದ ಪಕ್ಷಿಗೆ – *ಪಕ್ಷಿರಾಜ ಗರುಡ* ನಿಗೆ ; ಶಪಿಸಿದ ಋಷಿಯ – *ಸೌಭರಿ*
ಮಾವನ – *ಮಾಂಧಾತನ*; ಪುತ್ರನಿಂದ – *ಮುಚಕುಂದನಿಂದ*;
ಹತನಾದ ಅಸುರ – *ಕಾಲಯವನ*
(ಮಲಗಿದ್ದ ಮುಚುಕುಂದನ ಎಬ್ಬಿಸಿದ ಕಾಲಯವನ ಭಸ್ಮವಾದ)
—————————————————————————-
– ದುಷ್ಟ ರಾಜನು ಋಷಿಗಳ ಹೂಂಕಾರಕ್ಕೆ ಮೃತನಾಗಲು ಮಥಿಸಿದ ತೊಡೆಯಿಂದ ಜನಿಸಿದವನಿಂದ ಆ ಹೆಸರು ಪಡೆದವಳ ಹೊತ್ತು ನೀರಿನಲ್ಲಿ ಮುಳಗಿಸಿದವನ ಸಂಹರಿಸಿದವನ ಜಾಗದಲ್ಲಿ ವಲ್ಮೀಕದಲ್ಲಿ ನೆಲೆಸಿದ್ದವನ ವರಿಸಿದವಳ ಪಿತನಾರು ?
ದುಷ್ಟ ರಾಜನು – *ವೇನ*; ಋಷಿಗಳ ಹೂಂಕಾರಕ್ಕೆ ಮೃತನಾಗಲು ಮಥಿಸಿದ ತೊಡೆಯಿಂದ ಜನಿಸಿದವನಿಂದ – *ಪೃಥು ಚಕ್ರವರ್ತಿಯಿಂದ*
ಆ ಹೆಸರು – *ಪೃಥ್ವಿ* ಎಂಬ ಹೆಸರು ಪಡೆದವಳ; ಹೊತ್ತು ನೀರಿನಲ್ಲಿ ಮುಳಗಿಸಿದವನ ಸಂಹರಿಸಿದವನ – *ಭೂದೇವಿಯ ಹೊತ್ತು ಹೋದ ಹಿರಣ್ಯಾಕ್ಷನ*
ಕೊಂದ – *ವರಾಹದೇವರ*
ಜಾಗದಲ್ಲಿ ವಲ್ಮೀಕದಲ್ಲಿ ನೆಲೆಸಿದ್ದವನ … *ಹುತ್ತದಲ್ಲಿ ಇದ್ದ ಶ್ರೀನಿವಾಸನ* ವರಿಸಿದವಳ – *ಪದ್ಮಾವತಿಯ*’ ಪಿತ – *ಆಕಾಶರಾಜ*
*Sumadhwa Seva*
ತೊಡೆಯಿಂದ ಕೆಳಗಿಳಿಸಲ್ಪಟ್ಟು ಸದಾ ಭಜಿಸುವನಿಂದ ಉಪದೇಶ ಪಡೆದು ತಪಗೈದು, ಸಾಕ್ಷಾತ್ಕರಿಸಿ, ಮುಂದೆ ಯತಿಯಾದಾಗ ಪಡೆದ ಶಿಷ್ಯನಿಂದ ದಾಸ್ಯತ್ವ ಪಡೆದವರನ್ನು ………….(ಯಾವ) ಪಿತಾಮಹನೆನ್ನುತ್ತಾರೆ
*ಉತ್ತರ : – ತೊಡೆಯಿಂದ ಕೆಳಗಿಳಿಸಲ್ಪಟ್ಟವ – *ಧೃವರಾಜ*
ಸದಾ ಭಜಿಸುವನಿಂದ – *ನಾರದರಿಂದ*
– “ಓಂ ನಮೋ ವಾಸುದೇವಾಯ ನಮಃ:” ಎಂಬ ಉಪದೇಶ ಪಡೆದು
ತಪಗೈದು – ತಪಸ್ಸು ಮಾಡಿ *ಪರಮಾತ್ಮನ* ಸಾಕ್ಷಾತ್ಕರಿಸಿ
ಮುಂದೆ ಯತಿಯಾದಾಗ —*ಶ್ರೀಪಾದರಾಜರಾದಾಗ*
ಪಡೆದ ಶಿಷ್ಯರಿಂದ— *ವ್ಯಾಸರಾಜರಿಂದ*
ದಾಸ್ಯತ್ವ ಪಡೆದ- *ಪುರಂದರದಾಸರು*
*ಕರ್ನಾಟಕ ಸಂಗೀತ ಪಿತಾಮಹ* ಎಂದು ಪ್ರಸಿದ್ಧರಾದರು
————————————————————————————
*ಒಗಟಿನ ಪ್ರಶ್ನೆ 102*
ಜಲಚರನು ಜಲಾವಾಸದಿ; ಜಗವತೋರಿ ಜಗವಳೆದು; ಧರಣಿಯನೆತ್ತಿ ಕಾಡಲಿದ್ದು;
ಸ್ಥಂಭದಿ ಹಯವೇರಿ ಕುಲನಾಶಿಸಿ; ಸನ್ಮಡದಿಯರ ವ್ರತಭಂಗಿಸಿ; ನೃಹರಿವಿಠಲಗೆ ಅನುಗ್ರಹಿಸಿದೆ.
*ಉತ್ತರ* :
ಜಲಚರನು – ಮತ್ಸ್ಯಾವತಾರ
ಜಲಾವಾಸದಿ – ಕೂರ್ಮಾವತಾರ
ಜಗವತೋರಿ – ಯಶೋಧೆಗೆ ಜಗವತೋರಿದ ಕೃಷ್ಣಾವತಾರ
ಜಗವಳೆದು – ವಾಮನಾವತಾರದಿಂದ ತ್ರಿವಿಕ್ರಮನಾಗಿ ಜಗವನಳೆದ ರೂಪ
ಧರಣಿಯನೆತ್ತಿ – ವರಾಹಾವತಾರದಿಂದ ಭೂಮಿಯನ್ನು ಹಿರಣ್ಯಾಕ್ಷನಿಂದ ರಕ್ಷಿಸಿದ ರೂಪ
ಕಾಡಲಿದ್ದು – ರಾಮಾವತಾರ
ಸ್ಥಂಭದಿ – ನರಸಿಂಹನ ಅವತಾರ, ಭಕ್ತನಾದ ಪ್ರಹ್ಲಾದನ ಮಾತು ಸತ್ಯ ಮಾಡಲು
ಹಯವೇರಿ – ಕಲ್ಕಿ ಅವತಾರದಿಂದ ಹಯವೇರಿದ
ಕುಲನಾಶಿಸಿ – ದುಷ್ಟ ಕ್ಷತ್ರಿಯ ನಾಶಕ ಪರಶುರಾಮಾವತಾರ
ಸನ್ಮಡದಿಯರ ವ್ರತಭಂಗಿಸಿ – ಬೌದ್ಧಾವತಾರ
ನೃಹರಿವಿಠಲಗೆ – ನರಹರಿ ವಿಠ್ಠಲ ದಾಸರಿಗೆ ಅನುಗ್ರಹಿಸಿದೆ
(ಹೀಗೆ ದಶಾವತಾರ ಚಿಂತನೆ ಮಾಡಲಾಗಿದೆ ಕೆಲವು ಪದಗಳಿಂದ)
=======================================
*ಒಗಟಿನ ಪ್ರಶ್ನೆ 103*
ಸಂಜ್ಞಾರಮಣನ : ಕಾಟ ಕೊಡುವ ಸುತನ ; ಅಗ್ರಜನಿಗೆ ದಾನವಾಗಿ ಕೊಡಲ್ಪಟ್ಟವನಿಂದ ; ಪ್ರಸಿದ್ಧಿ ಪಡೆದ ಉಪನಿಷತ್ ಯಾರ ಯಾರ ಸಂಭಾಷಣೆಯ ಸಾರ ?
*ಉತ್ತರ* : – ಸಂಜ್ಞಾರಮಣ—ಸೂರ್ಯನ ; ಕಾಟ ಕೊಡುವ ಪುತ್ರ—ಶನಿದೇವನ ; ಅಗ್ರಜ— ಯಮರಾಜ; ಅವನಿಗೆ ದಾನ ಕೊಡಲ್ಪಟ್ಟವ— ನಚಿಕೇತ; ಅವನಿಂದ ಪ್ರಸಿದ್ದಿ ಪಡೆದ ಉಪನಿಷತ್—ಕಾಠಕೋಪನಿಷತ್ತು . ಇದು ಯಮ ಹಾಗೂ ನಚಿಕೇತನ ಸಂಭಾಷಣೆಯ ಸಾರ
================================================
*ಒಗಟಿನ ಪ್ರಶ್ನೆ 104*
ದೇವಮಾತೆಯ ಆಭರಣ ಕದ್ದವನ ಮಾತೆಯ ಪತಿಯ ವಾಹನವೇರಿ ಚತುರ್ಮುಖನ ವರ ನಿಜ ಮಾಡಿದವಳ ಪತಿಯ ಹಿರಿಮಡದಿಯ ಪಿತನ ರಾಜ್ಯ ಯಾವುದು ?
*ಉತ್ತರ* : ದೇವ ಮಾತೆಯ – ಅದಿತಿಯ ; ಆಭರಣ ಕದ್ದವನ —ನರಕಾಸುರನ; ಮಾತೆಯ —ಭೂದೇವಿಯ; ಪತಿಯ —ವರಾಹ ರೂಪಿ ಪರಮಾತ್ಮನ; ವಾಹನವೇರಿ — ಗರುಡನೇರಿ; ಚತುರ್ಮುಖನ ವರ ನಿಜ ಮಾಡಿದವಳ – ಸತ್ಯಭಾಮಾಳ ; ಪತಿಯ – ಶ್ರೀ ಕೃಷ್ಣನ ; ಹಿರಿಯ ಮಡದಿ—ರುಕ್ಮೀಣಿ ದೇವಿಯ ; ಪಿತನ – ಭೀಷ್ಮಕ ರಾಜನ; ರಾಜ್ಯ— ವಿದರ್ಭ
==================================
*ಒಗಟಿನ ಪ್ರಶ್ನೆ 105*
ಶಚೀಪತಿಯ ಸ್ಥಾನಕ್ಕೆ ಚ್ಯುತಿ ತರಲು ನೂರು ಅಶ್ವಮೇಧ ಮಾಡುತ್ತಿದ್ದವನ ಮಣಿಸಲು ಬಂದವನ ಮಾತೆಯ ಸಹೋದರಿಯ ಸುತನ ಪ್ರಪೌತ್ರನ ಮಡದಿ ಯಾರು ?
*ಉತ್ತರ* : ಶಚೀಪತಿಯ – ದೇವೇಂದ್ರನ; ಸ್ಥಾನಕ್ಕೆ ಚ್ಯುತಿ ತರಲು ನೂರು ಅಶ್ವಮೇಧ ಮಾಡುತ್ತಿದ್ದವನ – ಬಲಿಚಕ್ರವರ್ತಿಯ; ಮಣಿಸಲು ಬಂದವನ – ವಾಮನ ರೂಪಿ ಪರಮಾತ್ಮನ ; ಮಾತೆಯ – ಅದಿತಿಯ; ಸಹೋದರಿಯ – ದಿತಿಯ;
ಸುತನ – ಹಿರಣ್ಯಕಶಿಪುವಿನ; ಪ್ರಪೌತ್ರನ – ಬಲಿಚಕ್ರವರ್ತಿಯ; ಮಡದಿ – ವಿಂಧ್ಯಾವಳಿ
========================================================================================================
*ಒಗಟಿನ ಪ್ರಶ್ನೆ 106*
ವೈವಸ್ವತ ಮನುವಿನ ದ್ವಿತೀಯ ಪುತ್ರನ ಯುವ ಪುತ್ರಿಯು ಹುಡುಗಾಟಿಕೆಯಿಂದಾಗಿ ವಿವಾಹವಾದ ಮುದಿಯ ಋಷಿಯ ಮುದಿತನವ ಹೋಗಿಸಲು ನೆರವಾದ ಉಷಾಪತಿಗಳಿಗೆ ಯಾಗದಲ್ಲಿ ಹವಿಸ್ಸು ನೀಡುವಾಗ ತಡೆಯಲು ಬಂದ ಐರಾವತದೊಡೆಯ ತನ್ನ ಆಯುಧ ಎತ್ತಿದ ಕೈಯನ್ನು ಅಲುಗಾಡಿಸದಂತೆ ತಡೆದವರಾರು ? ಯುವ ಪುತ್ರಿ ಯಾರು ?
*ಉತ್ತರ* : ವೈವಸ್ವತ ಮನುವಿನ ದ್ವಿತೀಯ ಪುತ್ರನ – ಶರ್ಯಾತಿಯ; ಯುವ ಪುತ್ರಿಯು – ಸುಕನ್ಯೆಯು ; ಹುಡುಗಾಟಿಕೆಯಿಂದಾಗಿ – ಹುತ್ತದಲ್ಲಿ ತಪಗೈಯುತ್ತಿದ್ದವನ ಚುಚಿದ್ದಕ್ಕಾಗಿ ; ವಿವಾಹವಾದ ಮುದಿಯ ಋಷಿಯ – ಚ್ಯವನ ಋಷಿಯ ಮುದಿತನವ ಹೋಗಿಸಲು ನೆರವಾದ ಉಷಾಪತಿಗಳಿಗೆ – ಅಶ್ವಿನೀ ದೇವತೆಗಳಿಗೆ; ಯಾಗದಲ್ಲಿ ಹವಿಸ್ಸು ನೀಡುವಾಗ ತಡೆಯಲು ಬಂದ ಐರಾವತದೊಡೆಯ – ಇಂದ್ರನ ; ತನ್ನ ಆಯುಧ ಎತ್ತಿದ ಕೈಯನ್ನು ಅಲುಗಾಡಿಸದಂತೆ ತಡೆದವರಾರು – ಚ್ಯವನ ಋಷಿಗಳು ಮತ್ತು ಆ ಯುವ ಪುತ್ರಿ ಸತಿ ಸುಕನ್ಯ
——————————————————
*ಒಗಟಿನ ಪ್ರಶ್ನೆ 107*
ಹೊಸ್ತಿಲಲ್ಲಿ ಕೊಲ್ಲಲ್ಪಟ್ಟವನ ಸಹೋದರನ ನೀರಿನಲ್ಲಿ ಕೊಂದವನಿಂದ ಜನಿಸಿದವನಿಂದ
ಮುಚ್ಚಿಡಲ್ಪಟ್ಟ ಸಾವಿರಾರು ಮಂದಿಗೆ ಪತಿಯಾದವನಿಂದ ತನ್ನ ಭಾಮೆಗಾಗಿ ದೇವೇಂದ್ರನೊಡನೆ ಸೆಣಸಿ ತಂದ ವಸ್ತು ಯಾವುದು ?
*ಉತ್ತರ* : –
ಹೊಸ್ತಿಲಲ್ಲಿ ಕೊಲ್ಲಲ್ಪಟ್ಟವನ – ಹಿರಣ್ಯಕಶಿಪುವಿನ; ಸಹೋದರನ – ಹಿರಣ್ಯಾಕ್ಷನ; ನೀರಿನಲ್ಲಿ ಕೊಂದವನಿಂದ – ವರಾಹದೇವರಿಂದ; ಜನಿಸಿದವನಿಂದ – ನರಕಾಸುರನಿಂದ;
ಮುಚ್ಚಿಡಲ್ಪಟ್ಟ ಸಾವಿರಾರು ಮಂದಿಗೆ – 16000 ಅಗ್ನಿಪುತ್ರರಿಗೆ ; ಪತಿಯಾದವನಿಂದ – ಶ್ರೀಕೃಷ್ಣನಿಂದ ; ತನ್ನ ಭಾಮೆಗಾಗಿ – ಸತ್ಯಭಾಮೆಗಾಗಿ; ದೇವೇಂದ್ರನೊಡನೆ ಸೆಣಸಿ ತಂದ ವಸ್ತು – ಪಾರಿಜಾತ
=============================
*ಒಗಟಿನ ಪ್ರಶ್ನೆ 108*
ನೇಗಿಲಧಾರಿಯ ಭಾವನ ; ಭಾವಮೈದುನನ ; ಜಗಜಟ್ಟಿ ಭಾವನ; ರಕ್ಕಸ ಭಾವಮೈದುನನ ; ಸೋದರಳಿಯನ ; ಮಾತೆಯ ; ಭಾವನ ; ಚಿಕ್ಕಮ್ಮನ ; ಅಗ್ರಜನ ; ರಥಿಕನಾರು ?
Answer : ನೇಗಿಲಧಾರಿಯ – ಪರಶುರಾಮನ; ಭಾವನ – ಅರ್ಜುನನ ; ಭಾವಮೈದುನನ – ದೃಷ್ಟದ್ಯುಮ್ನನ ; ಜಗಜಟ್ಟಿ ಭಾವನ – ಶ್ರೀ ಭೀಮಸೇನದೇವರ ; ರಕ್ಕಸ ಭಾವಮೈದುನನ – ಹಿಡಿಂಬಾಸುರನ; ಸೋದರಳಿಯನ – ಘಟೋತ್ಕಚನ ; ಮಾತೆಯ – ಹಿಡಿಂಬೆಯ ; ಭಾವನ – ಯುಧಿಷ್ಠಿರನ ; ಚಿಕ್ಕಮ್ಮನ – ಮಾದ್ರೀದೇವಿಯ ; ಅಗ್ರಜನ – ಶಲ್ಯ ಮಹಾರಾಜನ ; ರಥಿಕ – ಕರ್ಣ.
============================
*ಒಗಟಿನ ಪ್ರಶ್ನೆ 108*
ಪ್ರಶ್ನೆ ;.
ಗಾಳಿಯ ನುಡಿ ಆಲಿಸಿ ಸೋದರಿಯ ಕೊಲ್ಲ ಹೊರಟವನ ಪಿತನ ಅಳಿಯನ ಪಿತನ ಅನ್ಯಮಡದಿಯ ಸುತನ ಮಡದಿ ಯಾರು ?
ಉತ್ತರ ;
ಗಾಳಿಯಲ್ಲಿ ನುಡಿ – *ಅಶರೀರವಾಣಿ*
ಆಲಿಸಿದವ – *ಕಂಸ*
ಸೋದರಿಯ – *ದೇವಕಿಯ*
ಕೊಲ್ಲ ಹೊರಟವನು – *ಕಂಸ*
ಅವನ ಪಿತ – *ಉಗ್ರಸೇನ*
ಅವನ ಅಳಿಯ – *ವಸುದೇವ*
ಅವನ ಪಿತ – *ಶೂರಸೇನ*
ಅನ್ಯ ಮಡದಿ – *ವೈಶ್ಯ ಸ್ತ್ರೀ*
ಅವಳ ಸುತ – *ನಂದಗೋಪ*
ನಂದಗೋಪನ ಮಡದಿ – *ಯಶೋದ*
ಉತ್ತರ – *ಯಶೋಧ*
(ಬಹಳ ಜನ ಶೂರಸೇನನ ಅನ್ಯ ಮಡದಿ ಮಾರೀಶ ಎಂದಿದ್ದಾರೆ. ಆದರೆ ಮಾರೀಶಳ ಮಗ – ವಸುದೇವ.
ಅನ್ಯ ಸ್ತ್ರೀ – ಶೂರಸೇನನು ಒಬ್ಬ ವೈಶ್ಯ ಸ್ತ್ರೀಯನ್ನೂ ವಿವಾಹವಾಗಿದ್ದ. ಅವಳ ಮಗನೇ ನಂದಗೋಪ)